ಭಾರತದಲ್ಲಿ, ಲೈಂಗಿಕ ಕಾರ್ಯಕರ್ತೆಯೊಬ್ಬಳು ಚಿಕ್ಕಪ್ಪನಿಂದ ಮಾರಾಟವಾಗಿ, ಕಷ್ಟದ ಜೀವನ ನಡೆಸಿದಳು. ಸರ್ಕಾರದ ಸಹಾಯದಿಂದ ಮುಕ್ತಿ ಪಡೆದರೂ, ತನ್ನ ಕುಟುಂಬವನ್ನು ನೋಡುವ ಹಂಬಲ ಅವಳಿಗಿತ್ತು. ಅನೀಶ್ ಭಗತ್ ಎಂಬ ಯುವಕ ಆಕೆಯನ್ನು ಭೇಟಿಯಾಗಿ, ಊರಿಗೆ ಕರೆದೊಯ್ಯಲು ಸಹಾಯ ಮಾಡಿದನು. ಆದರೆ, ಆಕೆಯ ಕುಟುಂಬ ಸಮಾಜದ ಭಯದಿಂದ ಆಕೆಯನ್ನು ಸ್ವೀಕರಿಸಲು ನಿರಾಕರಿಸಿತು. ಇದರಿಂದ ಆಕೆ ತೀವ್ರ ದುಃಖಿತಳಾದಳು.

ಕೇವಲ 15 ವರ್ಷಕ್ಕೆ ಚಿಕ್ಕಪ್ಪನ ಜೊತೆಗೆ ಪೇಟೆಗೆ ಹೋದ ಹುಡುಗಿ ವೇಶ್ಯಾವಾಟಿಕೆ ವ್ಯಾಪರಿಯೊಬ್ಬರಿಗೆ ಮಾರಾಟ ಆಗುತ್ತಾರೆ. ಅಲ್ಲಿಂದ 10 ವರ್ಷ ನರಕ ಅನುಭವಿಸಿ ಮುಕ್ತಿ ಪಡೆದು, ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ಒಬ್ಬನಿಂದ ಮನೆಗೆ ಹೋಗುತ್ತಾಳೆ. ಮುಂದೆ ಏನಾಗುತ್ತದೆ ನೀವೇ ನೋಡಿ...

ಭಾರತದಲ್ಲಿ ಮಹಿಳೆಯರನ್ನು, ಮಕ್ಕಳನ್ನು ನಂಬಿಸಿ ವೇಶ್ಯಾವಾಟಿಕೆ ತಳ್ಳುವ ಹಲವು ಪ್ರಕರಣಗಳನ್ನು ನಾವು ಕಣ್ಣಾರೆ ಕಂಡಿರುತ್ತೇವೆ. ಇನ್ನು ಕೆಲವರು ನೋಡಿಲ್ಲವೆಂದರೂ ಸಿನಿಮಾ ಅಥವಾ ಮಾಧ್ಯಮದ ವರದಿಗಳಲ್ಲಿ ಓದಿರುತ್ತಾರೆ. ಆದರೆ, ಇಲ್ಲೊಬ್ಬ ಲೈಂಗಿಕ ಕಾರ್ಯಕರ್ತೆ ಮಹಿಳೆ ತಾನು ಸ್ವಂತ ಚಿಕ್ಕಪ್ಪನಿಂದಲೇ 15 ವರ್ಷಕ್ಕೆ ಮಾರಾಟವಾಗುತ್ತಾಳೆ. ನಂತರ, ಆಕೆಯನ್ನು ತೀರಾ ಕೆಟ್ಟದಾಗಿ ದುರ್ಬಳಕೆ ಮಾಡಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಸಿಕೊಂಡ ವ್ಯಕ್ತಿ ಸರ್ಕಾರದ ಬಿಗಿ ಕ್ರಮದಿಂದಾಗಿ ಮುಕ್ತಿ ಹೊಂದಿ ಸ್ವಂತವಾಗಿ ಹೊಸ ಜೀವನ ಕಟ್ಟಿಕೊಂಡಿದ್ದಾಳೆ. ಈಗ ಆಕೆಗೆ ಸುಮಾರು 28ರಿಂದ 30 ವರ್ಷ. ಆದರೆ, ಇನ್ನೂ ತನ್ನ ಹಳ್ಳಿ, ಅಮ್ಮ, ಅಣ್ಣ ಹಾಗೂ ಕುಟುಂಬವನ್ನು ಮಾತ್ರ ಮರೆತಿಲ್ಲ. ಆಕೆಯ ಮನಸ್ಸು ತನ್ನವರು ಹೇಗಿದ್ದಾರೆ ಎಂಬುದನ್ನು ನೋಡುವುದಕ್ಕೆ ಅವರೊಂದಿಗೆ ಸೇರುವುದಕ್ಕೆ ಹಾತೊರೆಯುತ್ತಲೇ ಇತ್ತು. ಆದರೆ, ಸಮಾಜಕ್ಕೆ ಹೆದರಿ ಮನೆ ಇರುವ ದಿಕ್ಕಿಗೆ ಕಾಲು ಹಾಕಿಯೂ ಮಲಗಿರಲಿಲ್ಲ.

ಹೀಗಿರುವಾಗ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ಅನೀಶ್ ಭಗತ್ ಎನ್ನುವ ಯುವಕ ಲೈಂಗಿಕ ಕಾರ್ಯಕರ್ತೆಯನ್ನು ಮಾತನಾಡಿಸಿ ಆಕೆಯ ಪೂರ್ವಾಪರ ತಿಳಿದುಕೊಳ್ಳುತ್ತಾನೆ. ಆಕೆ ತನ್ನ ಚಿಕ್ಕಪ್ಪನಿಂದಲೇ ವೇಶ್ಯಾವಾಟಿಕೆ ವೃತ್ತಿ ಮಾಡುತ್ತಿದ್ದವರಿಗೆ ಮಾರಾಟವಾಗಿ ಇದೀಗ ಅದರಿಂದ ಮುಕ್ತಿ ಹೊಂದಿದ್ದಾಗಿ ತಿಳಿಸಿದ್ದಾಳೆ. ಊರಿಗೆ ಹೋಗಬೇಕು ಎಂಬ ಬಯಕೆಯನ್ನೂ ತೆರೆದಿಟ್ಟಿದ್ದಾಳೆ. ಮಹಿಳೆಯ ಎಲ್ಲ ವಿಚಾರ ಕೇಳಿ ಮನಸ್ಸಿಗೆ ತುಂಬಾ ಘಾಸಿ ಮಾಡಿಕೊಂಡ ಯುವಕ ಆಕೆಯನ್ನು ಒಂದು ವಾರದ ನಂತರ ನಿಮ್ಮ ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆಯನ್ನು ನೀಡುತ್ತಾನೆ. ಆಗ ಮಹಿಳೆ ಇದ್ದ ವಾಸ ಸ್ಥಳಕ್ಕೆ ಬಿಟ್ಟು ಮನೆಗೆ ಹೋಗಿ, ವಾಪಸ್ ಒಂದು ವಾರದ ನಂತರ ಆಕೆಯ ಮನೆಯ ಬಳಿಗೆ ಬರುತ್ತಾನೆ.

ಇದನ್ನೂ ಓದಿ: 180 ರೂಪಾಯಿ ಟೋಲ್‌ ಉಳಿಸಲು ಹೋಗಿ ಪ್ರಾಣಬಿಟ್ಟ ಒಂದೇ ಕುಟುಂಬದ ನಾಲ್ವರು!

ಕೇವಲ 15 ವರ್ಷದ ಬಾಲಕಿಯಾಗಿದ್ದಾಗ ಮನೆಯನ್ನು ಚಿಕ್ಕಪ್ಪನ ಮೋಸಕ್ಕೆ ಬಲಿಯಾಗಿ ಲೈಂಗಿಕ ಕಾರ್ಯಕರ್ತೆಯಾಗಿ ಜೀವನ ಸವೆಸಿದ ಮಹಿಳೆಗೆ ಇದೀಗ ತವರಿಗೆ ಹೋಗುವ ಸಂತಸ ನೂರ್ಮಡಿ ಆಗುತ್ತದೆ. ಮನಸ್ಸಿನಲ್ಲಿ ತನ್ನನ್ನು ಮನೆಯವರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವಿದ್ದರೂ ಅದನ್ನು ಮುಚ್ಚಿಟ್ಟು ತನ್ನ ಇತರ ಸಹಚರ ಲೈಂಗಿಕ ಕಾರ್ಯಕರ್ತೆಯರಿಗೆ ಊರಿಗೆ ಹೋಗುವುದಾಗಿ ತಿಳಿಸುತ್ತಾಳೆ. ಆಕೆಯ ಸ್ನೇಹಿತರು ಒಂದಷ್ಟು ಉಡುಗೊರೆಗಳನ್ನು ಕೊಡುತ್ತಾರೆ. ನಂತರ ಮನೆಯಲ್ಲಿದ್ದ ಅಮ್ಮನಿಗೆ ಒಂದು ಸೀರೆ, ಅಣ್ಣ ಏನು ಮಾಡುತ್ತಿದ್ದಾನೆಂದು ಗೊತ್ತಿಲ್ಲದಿದ್ದರೂ ಆತನಿಗೊಂದು ಕೈಗಡಿಯಾರ ತೆಗೆದುಕೊಂಡು ಯುವಕನ ಕಾರು ಹತ್ತಿಕೊಂಡು ಊರಿಗೆ ಹೋಗುತ್ತಾಳೆ.

ಇನ್ನೇನು ಅವರ ಊರು ಕೂಡ ಬರುತ್ತದೆ. ಗ್ರಾಮದಲ್ಲಿ ಸಣ್ಣದೊಂದು ಸಾಲು ಮನೆಗಳಲ್ಲಿ ಸಣ್ಣನೆಯ ಬೆಳಕು ಉರಿಯುತ್ತಿದ್ದ ಮನೆಯನ್ನು ತೋರಿಸಿ ಇದೇ ನನ್ನ ಮನೆ ಎಂದು ಕುಣಿದು ಕುಪ್ಪಳಿ ದಶಕದ ನಿಟ್ಟುಸಿರು ಬಿಡುತ್ತಾಳೆ. ತಾನು ತಂದಿದ್ದ ಬಟ್ಟೆ-ಬರೆ, ಸಾಮಗ್ರಿ, ಉಡುಗೊರೆಗಳನ್ನು ತೆಗೆದುಕೊಂಡು ಹೋಗುತ್ತಾಳೆ. ಆಗ ನೀವು ಬರಬೇಡಿ, ನಾನು ಮೊದಲು ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿಕೊಂಡು ನಿಮ್ಮನ್ನು ಬರಲು ಹೇಳುತ್ತೇನೆ ಎನ್ನುತ್ತಾಳೆ. ಮನೆಯತ್ತ ಖುಷಿಯಿಂದ ಹೋದ ಮಹಿಳೆ ಸುಮಾರು ಹೊತ್ತು ಬರಲಿಲ್ಲ. ನಂತರ ಅಲ್ಲಿಂದ ಅಳುತ್ತಾ ಬಂದು ಕಾರಿನಲ್ಲಿ ಕೂರುತ್ತಾಳೆ. ಆಗ ಆಕೆಯ ಮನೆಯವರು ನಾವು ಬಡವರಾಗಿದ್ದರೂ ಸಮಾಜದಲ್ಲಿ ಮರ್ಯಾದೆಯಿಂದ ಬಾಳುತ್ತಿದ್ದೇವೆ. ನೀನು ಬಂದರೆ ನಮ್ಮ ಮರ್ಯಾದೆ ಹೋಗುತ್ತದೆ ಎಂದು ಮನೆಯಿಂದ ಹೊರಹಾಕಿದ್ದನ್ನು ಹೇಳಿಕೊಂಡು ಪುನಃ ಕಣ್ಣೀರು ಹಾಕುತ್ತಾರೆ.

ಇದನ್ನೂ ಓದಿ: ಗಗನ ಸಖಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಲು 82 ಕೆಜಿ ತೂಕ ಇಳಿಸಿಕೊಂಡ ಯುವಕ!

ಈ ವೇಳೆ ಮಹಿಳೆ 'ನಾನು ಈ ಜೀವನವನ್ನು ಆರಿಸಿಕೊಳ್ಳಲಿಲ್ಲ, ಆದರೆ ಅವರು ನನ್ನ ಮನೆಯವರು ಆಗಿದ್ದರೂ ಸಮಾಜ ನನ್ನನ್ನು ನಾನು ನೋಡುವಂತೆಯೇ ನೋಡಿದರು' ಹೇಳಿಕೊಂಡು ದುಃಖಿಸುತ್ತಾಳೆ. ಈ ವಿಡಿಯೋ 6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳಾಗಿವೆ. ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಮಹಿಳೆಯನ್ನು ಮನೆಗೆ ಸೇರಿಸಿದ ಮನೆವರ ನಡೆಯನ್ನು ಖಂಡಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ಹೀಗೆ ಶಿಕ್ಷೆ ಕೊಡುವುದು ತಪ್ಪು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಬಾಲಕಿ ಆಗಿದ್ದಾಗ ಇವರನ್ನು ಮಾರಾಟ ಮಾಡಿದ ಚಿಕ್ಕಪ್ಪ ಸಿಗಲಿಲ್ಲವೇ, ಅವನನ್ನು ಥಳಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

View post on Instagram