Safe Sex : ಗರ್ಭಧಾರಣೆಯಾಗಬಾರದೇ ? ಈ ಸಮಯದಲ್ಲಿ ಸೆಕ್ಸ್ ಮಾಡಲೇಬೇಡಿ
ಆರೋಗ್ಯಕರ ಸೆಕ್ಸ್ ಬಯಸುವವರು ಅದ್ರ ಬಗ್ಗೆ ತಿಳಿದಿರಬೇಕಾಗುತ್ತದೆ. ಸರಿಯಾದ ಮಾಹಿತಿ ಇಲ್ಲದೆ ಸಂಭೋಗ ಬೆಳೆಸಿದ್ರೆ ಗರ್ಭ ಧರಿಸುವ ಅಪಾಯವಿರುತ್ತದೆ. ಸೆಫ್ ಸೆಕ್ಸ್ ಬಯಸುವವರಿಗೆ ಸೇಫ್ ಟೈಮ್ ಗೊತ್ತಿರಬೇಕು.
ಮದುವೆ(Marriage) ನಂತರ ಕೆಲ ವರ್ಷ ಮಕ್ಕಳ(Children)ನ್ನು ಪಡೆಯಲು ಅನೇಕ ಮಹಿಳೆಯರು ಬಯಸುವುದಿಲ್ಲ. ಈಗಾಗಲೇ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ಇನ್ನೊಂದು ಮಗುವಿನ ಹೊಣೆ ಹೊರಲು ಇಷ್ಟವಿರುವುದಿಲ್ಲ. ಗರ್ಭಧರಿಸದೆ ಸೆಕ್ಸ್ (Sex) ಜೀವನ ಆನಂದಿಸುವುದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಯಾವುದೇ ಸುರಕ್ಷತೆ ಬಳಸದೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಆತಂಕ ಎದುರಾಗುತ್ತದೆ. ಮುಟ್ಟು ಮೂರು ದಿನ ಮುಂದೆ ಹೋದ್ರೂ ಭಯ ಶುರುವಾಗುತ್ತದೆ. ಅನೇಕ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ವೈದ್ಯರ ಬಳಿ ಹೋಗದೆ ಮಾತ್ರೆ ನುಂಗುವವರಿದ್ದಾರೆ. ಅನಗತ್ಯ ಗರ್ಭಧಾರಣೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪದೇ ಪದೇ ಗರ್ಭಪಾತ (Abortion )ಮಾಡಿಸಿಕೊಳ್ಳುವುದು ಒಳ್ಳೆಯದಲ್ಲ. ಹಾಗಾಗಿ ಅನಗತ್ಯ ಗರ್ಭಧಾರಣೆ (Pregnancy) ತಡೆಯಲು ಸುರಕ್ಷಿತ ಸೆಕ್ಸ್ ಮುಖ್ಯವಾಗುತ್ತದೆ. ಅನಗತ್ಯ ಗರ್ಭಧಾರಣೆ ತಡೆಯಲು ಅನೇಕ ವಿಧಾನಗಳಿವೆ. ನೈಸರ್ಗಿಕ ವಿಧಾನದ ಮೂಲಕ ಗರ್ಭಧಾರಣೆ ತಡೆಯಬಹುದು.
ಮುಟ್ಟಿ(Period )ನ ಲೆಕ್ಕಾಚಾರ : ಇದು ಒಳ್ಳೆಯ ಮಾರ್ಗವಾಗಿದೆ. ಆದ್ರೆ ಎಲ್ಲರಿಗೂ ಒಂದೇ ಮಾದರಿ ಅನುಸರಿಸುವಂತೆ ಸಲಹೆ ನೀಡುವುದು ಕಷ್ಟವಾಗುತ್ತದೆ. ಯಾಕೆಂದ್ರೆ ಮಹಿಳೆಯರ ಋತುಚಕ್ರವು ವಿಭಿನ್ನವಾಗಿರುತ್ತದೆ. ತಪ್ಪು ಲೆಕ್ಕಾಚಾರಗಳಿಂದ ಗರ್ಭಧರಿಸುವ ಸಾಧ್ಯತೆಗಳಿರುತ್ತವೆ.
ಸುರಕ್ಷಿತ (Safe) ಅವಧಿ : ಮುಟ್ಟಿನ ದಿನಗಳನ್ನು ಹೊರತುಪಡಿಸಿ,ಸುರಕ್ಷಿತ ಸೆಕ್ಸ್ ಗೆ ಯಾವ ದಿನ ಬೆಸ್ಟ್ ಎಂಬುದನ್ನು ತಿಳಿದಿರಬೇಕಾಗುತ್ತದೆ. ಮುಟ್ಟಾದ ಮೊದಲ ದಿನದಿಂದ ಮುಂದಿನ ತಿಂಗಳ ಮುಟ್ಟಿನ ಮೊದಲ ದಿನದವರೆಗೆ ಲೆಕ್ಕಹಾಕಬೇಕಾಗುತ್ತದೆ. ಸಾಮಾನ್ಯವಾಗಿ 28 ದಿನಗಳ ಚಕ್ರವಿರುತ್ತದೆ. 14 ನೇ ದಿನದಂದು ಅಂಡೋತ್ಪತ್ತಿಯಾಗುತ್ತದೆ. ಇಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ವೀರ್ಯವು ಸ್ತ್ರೀ ದೇಹದಲ್ಲಿ ಮೂರರಿಂದ ಐದು ದಿನಗಳವರೆಗೆ ಇರುತ್ತದೆ ಮತ್ತು ಮೊಟ್ಟೆಯು 12 ರಿಂದ 24 ಗಂಟೆಗಳವರೆಗೆ ಜೀವಿಸುತ್ತದೆ. ಆದ್ದರಿಂದ, ಅಂಡೋತ್ಪತ್ತಿಗೆ ಐದು ದಿನಗಳ ಮೊದಲು ಮತ್ತು ಅಂಡೋತ್ಪತ್ತಿ ದಿನದಂದು ಯಾವುದೇ ಸಮಯದಲ್ಲಿ ದೈಹಿಕ ಸಂಬಂಧ ಬೆಳೆಸಬಾರದು. ಅಂದರೆ ಮುಟ್ಟಿನ ಪ್ರಾರಂಭದ ನಂತರ 10-20 ದಿನಗಳ ನಡುವೆ ನೀವು ರಕ್ಷಣೆಯಿಲ್ಲದೆ ಲೈಂಗಿಕತೆಯನ್ನು ಹೊಂದಬಾರದು. ಈ ಸಮಯದಲ್ಲಿ ಗರ್ಭಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಮುಟ್ಟು ಪ್ರಾರಂಭದ ನಂತರ 1-7 ದಿನಗಳ ನಡುವೆ ಮತ್ತು 20 ನೇ ದಿನದ ನಂತರ ಮತ್ತೆ ಮುಟ್ಟು ಶುರುವಾಗುವವರೆಗೆ ಲೈಂಗಿಕತೆಯನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ಯಾವುದೇ ತೊಂದರೆ ಮತ್ತು ಚಿಂತೆಯಿಲ್ಲದೆ ಸಂಭೋಗ ಬೆಳೆಸಬಹುದು. ಆದ್ರೆ ಲೆಕ್ಕ ಹೆಚ್ಚುಕಮ್ಮಿಯಾದ್ರೆ ಗರ್ಭಧರಿಸುವ ಸಾಧ್ಯತೆಗಳಿರುತ್ತವೆ.
ಪೋರ್ನ್ ನೋಡಿ ಸಂಭೋಗಿಸೋ ಮೊದಲು ಈ ಸತ್ಯ ಗೊತ್ತಿರಲಿ
ಒಂದು ತಿಂಗಳ ಋತುಚಕ್ರವನ್ನು ಲೆಕ್ಕಹಾಕಿ ಈ ಪ್ರಯೋಗಕ್ಕೆ ಇಳಿಯುವುದು ಸೂಕ್ತವಲ್ಲ. ನಾಲ್ಕೈದು ತಿಂಗಳು ನಿಮ್ಮ ಋತುಚಕ್ರವನ್ನು ಲೆಕ್ಕ ಮಾಡಬೇಕಾಗುತ್ತದೆ. ಈ ನೈಸರ್ಗಿಕ ಗರ್ಭನಿರೋಧಕ ವಿಧಾನಕ್ಕೆ ಖರ್ಚಾಗುವುದಿಲ್ಲ. ಆದರೆ ಇದು ಸಂಪೂರ್ಣ ಸುರಕ್ಷಿತವಲ್ಲ. ಈ ವಿಧಾನಗಳಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೆ ಗರ್ಭಧಾರಣೆ ಸಾಧ್ಯತೆಗಳಿರುತ್ತವೆ. ಹಾಗೆಯೇ ಇವುಗಳಲ್ಲಿ ಲೈಂಗಿಕ ರೋಗದ ಅಪಾಯವಿರುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವು ಕಾರಣ ಸೋಂಕುಗಳು ಕಾಡುತ್ತವೆ.
ಆತ ನಿಮ್ಮನ್ನು ಪ್ರೀತಿಸ್ತಿದ್ದಾನಾ ? ಅಲ್ಲ ಟೈಂ ಪಾಸಾ ? ಮೊದಲು ತಿಳ್ಕೊಳ್ಳಿ
ಗರ್ಭಾವಸ್ಥೆಯನ್ನು ತಪ್ಪಿಸಲು, ಸಂಭೋಗದ ವೇಳೆ ಕಾಂಡೋಮ್ (Condom) ಬಳಕೆ ಉತ್ತಮ ಆಯ್ಕೆಯಾಗಿದೆ. ಮುಟ್ಟಿನ ದಿನಗಳನ್ನು ಲೆಕ್ಕ ಹಾಕಿ ನೈಸರ್ಗಿಕ ಸಂಭೋಗ ಬೆಳೆಸುವವರು,ಅಂಡೋತ್ಪತ್ತಿ ಸಂದರ್ಭದಲ್ಲಿ ಕಾಂಡೋಮ್ ಬಳಕೆ ಮಾಡುವುದು ಸೂಕ್ತ. ಇದು ಲೈಂಗಿಕ ಖಾಯಿಲೆಗಳಿಂದಲೂ ದೂರವಿಡುತ್ತದೆ. ಕಾಂಡೋಮ್ ಹೊರತುಪಡಿಸಿ ಗರ್ಭಧಾರಣೆ ತಡೆಯಲು ಕಾಪರ್ಟಿ (Cooperative )ಬಳಕೆ,ಮಾತ್ರೆಗಳ ಸೇವನೆ ಸೇರಿದಂತೆ ಅನೇಕ ವಿಧಾನಗಳಿವೆ. ಅವುಗಳಲ್ಲಿ ಒಂದನ್ನು ಪಾಲಿಸಬಹುದು. ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸಲು ಇಚ್ಛಿಸುತ್ತಿದ್ದರೆ ಸಂಭೋಗದ 24 ಗಂಟೆಗಳ ಒಳಗೆ ಗರ್ಭನಿರೋಧಕ (Contraception) ಔಷಧವನ್ನು ತೆಗೆದುಕೊಳ್ಳಿ.