Love Sex Dhokha: ಆತ ನಿಮ್ಮನ್ನು ಪ್ರೀತಿಸ್ತಿದ್ದಾನಾ ? ಅಲ್ಲ ಟೈಂ ಪಾಸಾ ? ಮೊದಲು ತಿಳ್ಕೊಳ್ಳಿ

ಪ್ರೀತಿಯಲ್ಲಿ ಹೀಗೂ ಆಗುತ್ತದೆ. ನೀವು ಪ್ರೀತಿ (Love) ಅಂದುಕೊಂಡದ್ದು ಪ್ರೀತಿಯೇ ಆಗಿರುವುದಿಲ್ಲ. ನಿಮ್ಮಲ್ಲಿರುವ ಭಾವನೆ (Feelings)ಗಳೇ ನೀವು ಪ್ರೀತಿಸುವವರಲ್ಲೂ ಇರಬೇಕೆಂದಿಲ್ಲ. ಹೀಗಾಗಿ ಪ್ರೀತಿಸುವ ಮುನ್ನ, ಪ್ರೀತಿಸಿದ ಬಳಿಕ ವಿಚಾರ ಮಾಡಿ. ಅವನು ನಿಮ್ಮನ್ನು ಪ್ರೀತಿಸುತ್ತಿದ್ದಾನ ಇಲ್ಲ ಟೈಮ್‌ಪಾಸ್ (Timepass) ಮಾಡುತ್ತಿದ್ದಾನ ತಿಳಿದುಕೊಳ್ಳಿ.
 

Clear Signs He is Taking Advantage Of You

ದುಬಾರಿಯಾಗಿರುವ ಪ್ರಪಂಚದಲ್ಲಿ ಪ್ರೀತಿಯೊಂದು ಎಲ್ಲೆಡೆ ಬಿಟ್ಟಿಯಾಗಿ ಸಿಗುತ್ತಿದೆ. ಮೊದಲಿನ ಹಾಗೇ ಈಗ ಪ್ರೀತಿಗೆ ಹೆಚ್ಚು ವ್ಯಾಲಿಡಿಟಿಯೂ ಇಲ್ಲದ ಕಾರಣ ದಿನಕ್ಕೊಂದು ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್‌ಗಳಿರುತ್ತಾರೆ. ಹೀಗಾಗಿಯೇ ನಿಜವಾಗಿಯೂ ಪ್ರೀತಿಸುವವರು ಕನ್‌ಫ್ಯೂಸ್ ಆಗುವ ಪರಿಸ್ಥಿತಿ. ಪ್ರೀತಿ ನಿಜಾನ, ಸುಳ್ಳಾ ಎಂದು ಟೆಸ್ಟ್ ಮಾಡೋ ಫೆಸಿಲಿಟಿ ಇದ್ದಿದ್ರೆ ಖಂಡಿತಾ ಎಲ್ರೂ ಆ ಟೆಸ್ಟ್ ಮಾಡಿಕೊಳ್ಳುತ್ತಿದ್ರು. ಆದ್ರೆ ಹಾಗಿಲ್ವಲ್ಲಾ..ಹಾಗಾಗಿಯೇ ಪ್ರೀತಿಸಿ ಮೋಸ ಹೋಗೋರು, ಲವ್ ಮಾಡಿ ಸುಸೈಡ್ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವನು ಅಂಥವನು ಅಂತ ಗೊತ್ತಿರ್ಲಿಲ್ಲ. ಅವಳು ಇಂಥವಳು ಅಂತ ದೇವ್ರಾಣೆಗೂ ಗೊತ್ತಿರಲ್ಲಿಲ್ಲ ಅನ್ನೋ ಮಾತುಗಳು ಕೇಳಿ ಬರ್ತವೆ.

ಪ್ರೀತಿಯಲ್ಲಿ ಬಿದ್ದು ಮೋಸ ಹೋಗುವ ಉಸಾಬರಿ ಬೇಡ ಅಂದ್ರೆ ಅವನು ಅಥವಾ ಅವಳು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತಿದ್ದಾರ ಇಲ್ಲ ಟೈಮ್ ಪಾಸ್ ಮಾಡುತ್ತಿದ್ದಾರ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಇದನ್ನು ತಿಳಿದುಕೊಳ್ಳುವುದು ಹೇಗೆ ?

Long Distance Relationship: ಲವರ್‌ಗೆ ಕೊಡುವ ಒಲವಿನ ಉಡುಗೊರೆ ಹೀಗಿರಲಿ

ಬ್ರೇಕಪ್ ಆದವರನ್ನು ಪ್ರೀತಿಸುತ್ತಿದ್ದೀರಾ ?

ಈಗ ಯಾರದ್ದೂ ಗರ್ಲ್‌ಫ್ರೆಂಡ್ (Girlfriend), ಫ್ಯೂಚರ್‌ನಲ್ಲಿ ಇನ್ಯಾರದ್ದೋ ಪತ್ನಿ (Wife). ಸದ್ಯ ಪ್ರೀತಿಯ ಜಮಾನದಲ್ಲಿ ಚಾಲ್ತಿಯಲ್ಲಿರುವುದೇ ಇದೇ, ಪ್ರೀತಿಸಿದವರಲ್ಲಿ ಶೇಕಡಾ 50ರಷ್ಟು ಜನರು ತಾವು ಪ್ರೀತಿಸಿದವರನ್ನು ಬಿಟ್ಟು ಇನ್ಯಾರನ್ನೋ ಮದುವೆಯಾಗುತ್ತಾರೆ. ಹೀಗಾಗಿ ಲವ್‌ನಲ್ಲಿ ಬ್ರೇಕಪ್ ಸಾಮಾನ್ಯ. ಆದ್ರೆ ನೀವು ಸದ್ಯದಲ್ಲೇ ಬ್ರೇಕಪ್ ಆದವರನ್ನು ಪ್ರೀತಿಸುತ್ತಿದ್ದೀರಾ ತಿಳಿದುಕೊಳ್ಳಿ. ಯಾಕೆಂದರೆ ಆಗಷ್ಟೇ ಬ್ರೇಕ್ ಅಪ್ ಆದವರು ಆ ನೋವಿನಿಂದ  ಹೊರಬರಲು ಯತ್ನಿಸುತ್ತಿರುತ್ತಾರೆ. ಹೀಗಾಗಿಯೇ ನಿಮ್ಮೊಂದಿಗೆ ಸಲುಗೆಯಲ್ಲಿರಲು ಬಯಸುತ್ತಾರೆ. 

ನಿಮ್ಮ ಬಾಯ್ ಫ್ರೆಂಡ್ ಆಗಿಂದಾಗೆ ತನ್ನ ಮಾಜಿ ಪ್ರೇಯಸಿಯ ಬಗ್ಗೆ ಮಾತನಾಡುತ್ತಿದ್ದಾರೆ ಆತ ಜಸ್ಟ್ ಆ ಬ್ರೇಕಪ್‌ನಿಂದ ಹೊರಬರಲ್ಲಷ್ಟೇ ನಿಮ್ಮ ಜತೆಗಿದ್ದಾನೆ. ಯಾವಾಗ ಬೇಕಿದ್ರೂ ನಿಮ್ಮನ್ನು ತೊರೆದು ಹೋಗಬಹುದು ಎಂದರ್ಥ. ಅಥವಾ ಆತನ ಹಳೆ ಪ್ರೇಯಸಿ ಮರೆತು ಹೋಗುವ ವರೆಗೆ ಮಾತ್ರ ನೀವು ಅವರಿಗೆ ಇಂಪಾರ್ಟೆಂಟ್ ಆಗಿರುತ್ತೀರಿ. 

ಮೈಂಡ್ ಡೈವರ್ಟ್ ಮಾಡಿಕೊಳ್ಳಲು ಪ್ರೀತಿಸುತ್ತಾರೆ

ಹೆಚ್ಚಾಗಿ ಹುಡುಗರು ಹಾಗೂ ಹುಡುಗಿಯರು ಬ್ರೇಕ್ಅಪ್ (Breakup) ಆದ ತಕ್ಷಣ ಅದರಿಂದ ಹೊರಬರಲು ಮತ್ತೊಬ್ಬರ ಜತೆ ಚಾಟ್ ಮಾಡುವುದು, ಸಲುಗೆಯಿಂದ ವರ್ತಿಸುವುದು ಮಾಡುತ್ತಾರೆ. ಇದು ಲವ್ (Love) ಅಲ್ಲ. ಅಟ್ರ್ಯಾಕ್ಷನ್ ಕೂಡಾ ಅಲ್ಲ. ನೋವಿನಿಂದ ತಮ್ಮ ಮೈಂಡ್‌ನ್ನು ಡೈವರ್ಟ್ ಮಾಡಿಕೊಳ್ಳಲು ಕಂಡುಕೊಳ್ಳುವ ದಾರಿ. ಆತ ಅಥವಾ ಆಕೆ ತನ್ನ ಮಾಜಿ ಗರ್ಲ್‌ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಸ್ಥಳಗಳಲ್ಲಿ ಕರೆದೊಯ್ಯಲು ಬಯಸುತ್ತಾನೆ. ಆಕೆ, ಆತನ ಎದುರು ನಿಮ್ಮ ಜತೆ ಹೆಚ್ಚು ಕ್ಲೋಸ್ ಇರುವಂತೆ ವರ್ತಿಸುತ್ತಿದ್ದರೆ ಆತ ನಿಮ್ಮನ್ನು ಪ್ರೀತಿಸುತ್ತಿಲ್ಲ ಬಳಸಿಕೊಳ್ಳುತ್ತಿದ್ದಾನೆ ಎಂದರ್ಥ.

Relationship Tips: ಅವಳಿಗೆ ನಾನು ಇಷ್ಟವಿಲ್ಲ. ಆದ್ರೆ ಮರೆಯೋಕಾಗ್ತಿಲ್ಲ..ಏನ್ಮಾಡ್ಲಿ..?

ಸ್ನೇಹಿತರ ಮಧ್ಯೆಯಿರುವಾಗ ಮಾತ್ರ ನೀವು ಲವರ್ !

ಕೆಲವೊಬ್ಬರು ಸ್ನೇಹಿತರ ಬಳಗದಲ್ಲಿದ್ದಾಗ ಮಾತ್ರ ನಿಮ್ಮನ್ನು ಗರ್ಲ್‌ಫ್ರೆಂಡ್ ಎಂದು ಕರೆಯಲು, ಹಾಗೆ ಗುರುತಿಸಲು ಇಷ್ಟಪಡುತ್ತಾರೆ. ಇಬ್ಬರೇ ಇದ್ದಾಗ ನಿಮ್ಮ ಇಷ್ಟ, ಅಭ್ಯಾಸಗಳನ್ನು ಹೀಯಾಳಿಸುತ್ತಾರೆ. ಇಂಥಹಾ ವರ್ತನೆ ನಿಮ್ಮ ಬಾಯ್‌ಫ್ರೆಂಡ್‌ಗಿದ್ದರೆ ಆತ ತೋರ್ಪಡಿಕೆಗಷ್ಟೇ ನಿಮ್ಮನ್ನು ಗರ್ಲ್‌ಫ್ರೆಂಡ್ ಮಾಡಿಕೊಂಡಿದ್ದಾನೆ, ಫ್ಯೂಚರ್‌ (Future)ನಲ್ಲಿ ಬೇರ್ಯಾವ ಪ್ಲಾನ್‌ಗಳಿಲ್ಲ ಎಂದರ್ಥ. ಹೀಗಾಗಿಯೇ ಆತ ಅನುಚಿತವಾಗಿ ವರ್ತಿಸುವಾಗ ವಿರೋಧ ವ್ಯಕ್ತಪಡಿಸಿ, ಆತನ ಪ್ರತಿಕ್ರಿಯೆಯನ್ನು ಗಮನಿಸಿ. ಆ ಕ್ಷಣದಲ್ಲಿ ಆತನಿಗೆ ಸಿಟ್ಟು ಬರುವುದೇ ಆದರೆ ಆತ ನಿಮ್ಮನ್ನು ಟೈಮ್‌ಪಾಸ್‌ಗೆ ಬಳಸಿಕೊಳ್ಳುತ್ತಿದ್ದಾನೆ ಎಂದರ್ಥ.

ಸೆಕ್ಸ್‌ಗಾಗಿ ಪ್ರೀತಿಸುತ್ತಿರುವಂತೆ ನಟಿಸಬಹುದು

ಹೀಗೆಯೂ ಮಾಡುವವರಿದ್ದಾರೆ. ಸೆಕ್ಸ್‌ (Sex)ಗಾಗಿ ನಿಮ್ಮನ್ನು ಉಪಯೋಗಿಸಿಕೊಳ್ಳಲು ಯತ್ನಿಸುವವರು. ಇಂಥವರು ನಿಮ್ಮ ನಂಬಿಕೆ ಗಳಿಸಲು ಪ್ರೀತಿಸುವಂತೆ ನಾಟಕವಾಡುತ್ತಾರೆ. ನೀವು ನಿಮ್ಮ ಜತೆಗೆ ಲೈಂಗಿಕ ಕ್ರಿಯೆ ಅವಕಾಶ ಮಾಡಿಕೊಟ್ಟ ಬಳಿಕ ಸಹಜವಾಗಿ ಅವರಿಗೆ ನಿಮ್ಮಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಯಾಕೆಂದರೆ ಅವರಿಗೆ ನಿಮ್ಮ ಪ್ರೀತಿ ಬೇಕಿರುವುದಿಲ್ಲ. ಅವರಿಗೆ ಬೇಕಿರುವುದು ಸಿಕ್ಕಾಗ ನಿಮ್ಮಿಂದ ದೂರವಾಗಲು ಯತ್ನಿಸುತ್ತಾರೆ. ಹೀಗಾಗಿ ಯಾವತ್ತೂ ಎಷ್ಟೇ ನಂಬಿಕೆ (Trust)ಯಿದ್ದರೂ ಪ್ರೀತಿಸುವಾಗ ಲೈಂಗಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡಬೇಡಿ. ನಿಜವಾಗಿಯೂ ಪ್ರೀತಿಸುವವರು ನಿಮ್ಮ ಸ್ಪರ್ಶಕ್ಕೆ ಎಷ್ಟು ದಿನ ಬೇಕಾದರೂ ಕಾಯಲು ಸಿದ್ಧರಿರುತ್ತಾರೆ.

Latest Videos
Follow Us:
Download App:
  • android
  • ios