ಸೆಕ್ಸ್ ಮಾಡೋದೆ ಇಲ್ಲಿ ಪಾಪ, ಲೈಂಗಿಕ ಕ್ರಿಯೆ ಮಾಡೋವಾಗ್ಲೂ ಬಟ್ಟೆ ತೆಗೆಯೋ ಹಾಗಿಲ್ಲ!

ಸೆಕ್ಸ್ ಅನ್ನೋದು ದಾಂಪತ್ಯ ಜೀವನದ ಒಂದು ಭಾಗ. ಸಂಸಾರ ನಡೆಸಲು ಇಬ್ಬರ ನಡುವೆ ಲೈಂಗಿಕ ಸಂಪರ್ಕ ಇರಬೇಕಾದುದು ಅಗತ್ಯ. ಆದರೆ ಇಲ್ಲೊಂದೆಡೆ ಲೈಂಗಿಕ ಕ್ರಿಯೆಯಲ್ಲಿ ತೊಡಗೋದನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಅರೆ, ಇದೆಂಥಾ ವಿಚಿತ್ರ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

Sex considered a sin, people make physical relations in full clothes just to have a child Vin

ದಾಂಪತ್ಯ ಜೀವನದಲ್ಲಿ ದೈಹಿಕ ಸಂಬಂಧವನ್ನು ಅತೀ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸಕ್ಸ್‌ನಿಂದ ಗಂಡ-ಹೆಂಡತಿ ಅನ್ಯೋನ್ಯತೆ ಬೆಳೆಸಿಕೊಳ್ಳುತ್ತಾರೆ. ಕುಟುಂಬ ಬೆಳೆಯುತ್ತದೆ. ಆದರೆ ಲೈಂಗಿಕ ಕ್ರಿಯೆಯನ್ನು ಪಾಪವೆಂದು ಪರಿಗಣಿಸುವ ಸ್ಥಳವಿದೆ. ಗಂಡ-ಹೆಂಡತಿ ಒಟ್ಟಿಗೆ ಸೇರುವುದೇ ಇಲ್ಲಿನವರ ಪ್ರಕಾರ ಅಪರಾದ. ಇಲ್ಲಿ ಹೆಂಗಸರು ಮತ್ತು ಗಂಡಸರು ಮದುವೆಯ ನಂತರ ಸಂಸಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದಾಗ ಮಾತ್ರ ಸಂಬಂಧ ಬೆಳೆಸುತ್ತಾರೆ. ಉಳಿದಂತೆ ಅವರಿಬ್ಬರೂ ಪರಸ್ಪರ ಹತ್ತಿರವೂ ಸುಳಿಯುವುದಿಲ್ಲ.

ಐರ್ಲೆಂಡ್ ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಒಂದಾಗಿದೆ, ಇದು ವಾಯುವ್ಯ ಯುರೋಪ್‌ನಲ್ಲಿದೆ. ಇದರ ಬಹುತೇಕ ಭಾಗಗಳು ಸಮುದ್ರದ ಮಧ್ಯದಲ್ಲಿವೆ. ಅನೇಕ ರೀತಿಯ ಬುಡಕಟ್ಟು ಜನಾಂಗದವರು (Tribal people)ಇಲ್ಲಿ ವಾಸಿಸುತ್ತಾರೆ. ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ಅದರಲ್ಲಿ ಒಂದು ಬುಡಕಟ್ಟು ಜನಾಂಗದಲ್ಲಿ ಲೈಂಗಿಕತೆ (Sex) ಅಂದರೆ ದೈಹಿಕ ಸಂಬಂಧವನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಕುಟುಂಬವನ್ನು ಸಾಕಬೇಕಾದಾಗ ಮಾತ್ರ ಅವರು ದೈಹಿಕ ಸಂಬಂಧ ಬೆಳೆಸಿಕೊಳ್ಳುತ್ತಾರೆ. 

ಟೆಸ್ಟೋಸ್ಟೆರಾನ್ ಕಡಿಮೆಯಾದ್ರೆ ಕಾಮಾಸಕ್ತಿ ಕುಸಿಯುತ್ತೆ, ಹೀಗ್ ಮಾಡಿದ್ರೆ ಸಿಗುತ್ತೆ ಪರಿಹಾರ!

ದೈಹಿಕ ಸಂಬಂಧದ ಬಗ್ಗೆ ವಿಚಿತ್ರವಾದ ಚಿಂತನೆ: ಐರ್ಲೆಂಡ್‌ನ 'ಇನಿಸ್ ಬೇಗ್' ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ವಿಚಿತ್ರವಾದ ನಿಯಮಗಳನ್ನು ಹೊಂದಿದ್ದಾರೆ. ಇಲ್ಲಿ ವಾಸಿಸುವ ಜನರು ತಮ್ಮ ಸಂಪ್ರದಾಯಗಳ ಬಗ್ಗೆ ತುಂಬಾ ಸಂಪ್ರದಾಯವಾದಿಗಳು. ಇನಿಸ್ ಬೇಗ್‌ನಲ್ಲಿ ವಾಸಿಸುವ ಜನರು ದೈಹಿಕ ಸಂಬಂಧವನ್ನು ಕೆಟ್ಟದ್ದೆಂದು ಪರಿಗಣಿಸುತ್ತಾರೆ. ಇಲ್ಲಿ ವಿವಾಹಿತ ದಂಪತಿಗಳು (Couple) ಮಗುವನ್ನು ಹೊಂದಲು ಬಯಸಿದಾಗ ಮಾತ್ರ ದೈಹಿಕವಾಗಿ ಒಂದಾಗುತ್ತಾರೆ. ಅಷ್ಟೇ ಅಲ್ಲ, ಅವರು ಪೂರ್ಣ ಬಟ್ಟೆಯಲ್ಲಿ ಅಂದರೆ ಬೆತ್ತಲೆಯಾಗದೆ ದೈಹಿಕವಾಗಿರುತ್ತಾರೆ. ಮಗುವಾದ ನಂತರ ದೈಹಿಕವಾಗಿರುವುದನ್ನು ಪಾಪವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಮಹಿಳೆಯರೊಂದಿಗೆ ದೈಹಿಕ ಸಂಬಂಧವನ್ನು ದಬ್ಬಾಳಿಕೆಯಂತೆ ನಂಬುತ್ತಾರೆ.

ಮದುವೆಗೂ ಮುನ್ನ ರೋಮ್ಯಾನ್ಸ್ ಮಾಡುವುದು ತಪ್ಪು: ಈ ದ್ವೀಪದಲ್ಲಿ ಮದುವೆಗೂ ಮುನ್ನ ರೊಮ್ಯಾನ್ಸ್ ಮಾಡುವುದು ತಪ್ಪು. ಹಸ್ತಮೈಥುನ, ಚುಂಬನ (Kiss) ಮತ್ತು ಸಲಿಂಗಕಾಮವನ್ನು ಇಲ್ಲಿ ನಿಷೇಧಿಸಲಾಗಿದೆ. ಯಾರಾದರೂ ಹಾಗೆ ಮಾಡುತ್ತಿರುವುದು ಕಂಡು ಬಂದರೆ ಅವರಿಗೆ ಶಿಕ್ಷೆಯಾಗುತ್ತದೆ. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದನ್ನು ನಿಷೇಧಿಸಲಾಗಿದೆ.

ಸೆಕ್ಸ್ ಲೈಫಲ್ಲಿ ಈ ಬದಲಾವಣೆ ಮಾಡಿದ್ರೆ ವೈವಾಹಿಕ ಜೀವನವೇ ಸಖತ್ತಾಗಿರುತ್ತೆ

ಸ್ನಾನ ಮಾಡಲ್ಲ ಇಲ್ಲಿರುವ ಮಂದಿ: ಕೃಷಿ, ಪಶುಪಾಲನೆ ಮತ್ತು ಸಮುದ್ರ ಮೀನುಗಳನ್ನು ನಂಬಿ ಬದುಕುವ ಇಲ್ಲಿನ ಜನರು ಎಂದಿಗೂ ಬೆತ್ತಲೆಯಾಗಿರುವುದಿಲ್ಲ. ಬಟ್ಟೆ ಬಿಚ್ಚಬೇಕು ಎನ್ನುವ ಕಾರಣಕ್ಕೆ ಈ ಜನ ಸ್ನಾನ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಈ ಜನರು ತಮ್ಮ ಕೈ, ಕಾಲು ಮತ್ತು ಮುಖವನ್ನು ನೀರಿನಿಂದ ಮಾತ್ರ ತೊಳೆಯುತ್ತಾರೆ. ಉಳಿದಂತೆ ಪ್ರತಿ ನಿತ್ಯ ಸ್ನಾನ ಮಾಡುವ ಯಾವುದೇ ಅಭ್ಯಾಸವನ್ನು ಹೊಂದಿಲ್ಲ.

ಕೆಲಸದಂತೆ ಮುಗಿಯುತ್ತೆ ಲೈಂಗಿಕ ಕ್ರಿಯೆ: ಮುಟ್ಟಿನ ಸಮಯದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರುವುದಿಲ್ಲ. ಅಷ್ಟೇ ಅಲ್ಲ, ಪತಿಯೊಂದಿಗೆ ದೈಹಿಕ ಸಂಪರ್ಕದ ಸಂದರ್ಭದಲ್ಲೂ ಆಕೆ ನಿಷ್ಕ್ರಿಯಳಾಗುತ್ತಾಳೆ. ಪತಿ ಮಾತ್ರ ಉಪಕ್ರಮವನ್ನು ತೆಗೆದುಕೊಳ್ಳುತ್ತಾನೆ. ಆ ಸಮಯದಲ್ಲಿ ಇಬ್ಬರ ನಡುವೆ ರೊಮ್ಯಾನ್ಸ್ ಇಲ್ಲ. ಕೇವಲ ಒಂದು ಕೆಲಸದಂತೆ ಮಾಡಿ ಮುಗಿಸುತ್ತಾರೆ. ಇದಾದ ನಂತರ ಪತಿ ಬೇರೆಡೆ ಹೋಗಿ ಮಲಗುತ್ತಾನೆ. ಈ ಬುಡಕಟ್ಟಿನ ಮಕ್ಕಳ ಚಟುವಟಿಕೆಗಳೂ ಲಿಂಗದ ಆಧಾರದ ಮೇಲೆಯೇ ಇರುತ್ತವೆ. ಕೆಲವು ಚಟುವಟಿಕೆಗಳನ್ನು ಹುಡುಗರು ಮಾಡುತ್ತಾರೆ. ಹೆಣ್ಣು ಮಕ್ಕಳು ಇದರಲ್ಲಿ ಭಾಗವಹಿಸುವಂತಿಲ್ಲ. ಕೆಲವು ಹುಡುಗಿಯರ ಚಟುವಟಿಕೆಗಳಲ್ಲಿ ಹುಡುಗರು ಭಾಗಿಯಾಗಿಲ್ಲ

Latest Videos
Follow Us:
Download App:
  • android
  • ios