ಮನೆಗೆಲಸದವನಿಗೆ ಕೋಟ್ಯಾಂತರ ಮೌಲ್ಯದ ಆಸ್ತಿ ಬರೆದ ಮಾಲೀಕ, ಛೇ ಇಂಥ ಲಕ್ ನಮಗಿಲ್ವಲ್ಲಾ?
ಅದೃಷ್ಟವಿದ್ರೆ ರಾತ್ರೋರಾತ್ರಿ ಜನರು ಶ್ರೀಮಂತರಾಗ್ತಾರೆ, ಪ್ರಸಿದ್ಧಿ ಪಡೆಯುತ್ತಾರೆ. ಆದ್ರೆ ಈತನಿಗೆ ಅದೃಷ್ಟ ಮಾತ್ರ ಕೈ ಹಿಡಿಯಲಿಲ್ಲ. ಮಾಡಿದ ಕೆಲಸಕ್ಕೆ ಫಲ ಸಿಕ್ಕಿದೆ. ಕೋಟ್ಯಾಧಿಪತಿ ತನ್ನ ಆಸ್ತಿಯನ್ನು ಸೇವಕನಿಗೆ ನೀಡಿದ್ದಾನೆ.
ಪ್ರಾಮಾಣಿಕವಾಗಿರುವ ವ್ಯಕ್ತಿಗೆ ಒಂದಲ್ಲ ಒಂದು ಕಾಲದಲ್ಲಿ ಅದೃಷ್ಟ ಬದಲಾಗುತ್ತದೆ. ಅವರು ಬಯಸಿದ್ದಕ್ಕಿಂತ ಹೆಚ್ಚು ಹಣ, ಆಸ್ತಿ, ಸಂತೋಷ ಸಿಗುವ ಸಾಧ್ಯತೆ ಇದೆ. ಅದಕ್ಕೆ ಲಿಯು ಎಂಬ ವ್ಯಕ್ತಿ ಉತ್ತಮ ನಿದರ್ಶನ. ಯಾವುದೇ ನಿರೀಕ್ಷೆ ಇಲ್ಲದೆ, ಪ್ರಾಮಾಣಿಕವಾಗಿ ವೃದ್ಧ ವ್ಯಕ್ತಿಯ ಸೇವೆಯನ್ನು ಲಿಯು ಮಾಡಿದ್ದಾನೆ. ಆತನ ಕೆಲಸಕ್ಕೆ ತಕ್ಕ ಫಲ ಸಿಕ್ಕಿದೆ. ಮನೆ ಕೆಲ ಮಾಡಿಕೊಂಡಿದ್ದ ವ್ಯಕ್ತಿ ಈಗ ಕೋಟ್ಯಾಂತರ ರೂಪಾಯಿ ಮೌಲ್ಯದ ಐದು ಅಪಾರ್ಟ್ಮೆಂಟ್ ಒಡೆಯನಾಗಿದ್ದಾನೆ. ಅಷ್ಟಕ್ಕೂ ಆತ ಇಷ್ಟೊಂದು ಆಸ್ತಿಯ ಒಡೆಯನಾಗಿದ್ದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಲಿಯು ಶ್ರೀಮಂತನಾಗಲು ರುವಾನ್ ಕಾರಣ. ರುವಾನ್ ಚೀನಾ (China)ದ ನಿವಾಸಿ. ಆತ 1930ರಲ್ಲಿ ಜನಿಸಿದ್ದ. ಆತ ಯಾವುದೇ ವ್ಯಕ್ತಿಯನ್ನು ಮದುವೆ (Wedding) ಆಗಿಲ್ಲ. ಮಕ್ಕಳನ್ನು ದತ್ತು ಕೂಡ ಪಡೆದಿರಲಿಲ್ಲ. ಆತನಿಗೆ ರಕ್ತ ಸಂಬಂಧಿ (Relative) ಗಳಿದ್ದಾರೆ. ಆದ್ರೆ ಯಾರೂ ರುವಾನ್ ಜೊತೆ ನಿಕಟ ಸಂಬಂಧ ಹೊಂದಿರಲಿಲ್ಲ. ರುವಾನ್ ತಾಯಿ – ತಂದೆ ಕೂಡ ಹೆಚ್ಚು ವರ್ಷ ಆತನ ಜೊತೆ ಇರಲಿಲ್ಲ. ರುವಾನ್ ಚಿಕ್ಕವನಿರುವಾಗ್ಲೇ ಪಾಲಕರನ್ನು ಕಳೆದುಕೊಂಡಿದ್ದ. ಅಲ್ಲಿಂದ ರುವಾನ್ ಏಕಾಂಗಿ ವಾಸ ಶುರು ಮಾಡಿದ್ದ.
ಡಿಯರ್ ಲೇಡೀಸ್, ನಿಮ್ಮವನೊಂದಿಗೆ ಈ 3 ತಪ್ಪು ಎಂದಿಗೂ ಮಾಡ್ಬೇಡಿ!
ಮಕ್ಕಳು, ಸಂಬಂಧಿಕರು ತಮ್ಮ ಕೊನೆಗಾಲದಲ್ಲಿ ನೋಡಿಕೊಳ್ತಾರೆ ಎನ್ನುವ ಭರವಸೆಯಲ್ಲೇ ಜನರಿರ್ತಾರೆ. ಆದ್ರೆ ನಡೆಯೋದೇ ಬೇರೆ. ಪತ್ನಿ, ಸ್ವಂತ ಮಕ್ಕಳನ್ನು ಹೊಂದಿರದ ರುವಾನ್ ಗೆ ಯೌವನದಲ್ಲಿ ಸಮಸ್ಯೆ ಆಗ್ಲಿಲ್ಲ. ಕೆಲಸದಲ್ಲಿ ಬ್ಯುಸಿ ಇರ್ತಿದ್ದ ಕಾರಣ ಆತನಿಗೆ ಒಂಟಿತನ (Loneliness) ಕಾಡಲಿಲ್ಲ. ಆದರೆ ವಯಸ್ಸಾಗ್ತಿದ್ದಂತೆ ತನ್ನನ್ನು ನೋಡಿಕೊಳ್ಳಲು ಇನ್ನೊಬ್ಬರ ಅಗತ್ಯವಿದೆ ಎಂದು ರುವಾನ್ ಭಾವಿಸಿದ್ದ.
ಮನೆಯಲ್ಲಿ ಕೆಲಸಕ್ಕೆ ಒಬ್ಬರನ್ನು ಇಟ್ಟುಕೊಳ್ಳುವ ನಿರ್ಧಾರಕ್ಕೆ ಬಂದ. ತನ್ನ ಊರಿನಿಂದ ಲಿಯು ಎಂಬಾತನನ್ನು ರುವಾನ್ ಕರೆತಂದಿದ್ದ. ಅಲ್ಲಿಂದ ರುವಾನ್ ಮತ್ತು ಲಿಯು ಸಂಬಂಧ ಗಟ್ಟಿಯಾಯ್ತು. ರುವಾನ್ ಆರೈಕೆಯನ್ನು ಲಿಯು ಪ್ರೀತಿಯಿಂದ ಮಾಡ್ತಿದ್ದ. ರುವಾನ್ ಅವರನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳುವ ಆಲೋಚನೆಯಲ್ಲಿ ತನ್ನ ಕುಟುಂಬವನ್ನೂ ಲಿಯು, ರುವಾನ್ ಮನೆಗೆ ಕರೆದುಕೊಂಡು ಬಂದಿದ್ದ.
ರುವಾನ್ ವೃದ್ಧಾಪ್ಯದಲ್ಲಿ (Age Old) ಸ್ವಲ್ಪವೂ ಬೇಸರಿಸಿಕೊಳ್ಳದೆ ಲಿಯು ಕೆಲಸ ಮಾಡಿದ್ದಾನೆ. ಲಿಯು ಈ ಕೆಲಸವನ್ನು ರುವಾನ್ ಸಂಪೂರ್ಣ ಮೆಚ್ಚಿದ್ದ. ಸಂಬಂಧಿಕರಿಗಿಂತ ಕೆಲಸದವನ ಪ್ರೀತಿ ರುವಾನ್ ಗೆ ಪ್ರಿಯವಾಗಿತ್ತು. ಇದೇ ಕಾರಣಕ್ಕೆ ರುವಾನ್ ಮಹತ್ವದ ನಿರ್ಧಾರಕ್ಕೆ ಬಂದಿದ್ದ.
2011ರಲ್ಲಿ ಲಿಯು ಅವರನ್ನು ಕರೆತಂದಿದ್ದ ರುವಾನ್, ಅಲ್ಲಿಂದ ಲಿಯುವನ್ನು ತನ್ನ ಮನೆಯವರಂತೆ ನೋಡಿಕೊಂಡಿದ್ದ. ಆದ್ರೆ ಲಿಯು ಯಾವುದೇ ಫಲ ಅಪೇಕ್ಷಿಸಿರಲಿಲ್ಲ. ಆದ್ರೆ ರುವಾನ್, ಲಿಯುವಿಗೆ ದೊಡ್ಡ ಉಡುಗೊರೆ ನೀಡಿದ್ದಾನೆ. ತನ್ನೆಲ್ಲ ಆಸ್ತಿಯನ್ನು ಸಂಬಂಧಿಕರು, ಸಹೋದರಿ ಹೆಸರಿಗೆ ಮಾಡುವ ಬದಲು ಲಿಯು ಹೆಸರಿಗೆ ಮಾಡಿದ್ದಾನೆ.
ಲಿಯು ಬಳಿ 800 ಚದರ ಮೀಟರ್ ವಿಸ್ತಾರದಲ್ಲಿ ಮನೆಯಿತ್ತು. ಆ ಮನೆಯಲ್ಲಿ ಕೆಡವಿ ಈಗ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗಿದೆ. ಈ ಅಪಾರ್ಟ್ಮೆಂಟ್ ನಲ್ಲಿ ಐದು ಮನೆಯನ್ನು ಲಿಯು ಹೆಸರಿಗೆ ವರ್ಗಾಯಿಸಲಾಗಿದೆ. ಮಾಹಿತಿ ಪ್ರಕಾರ, ಲಿಯುಗೆ ಸಿಕ್ಕಿರುವ ಈ ಅಪಾರ್ಟ್ಮೆಂಟ್ ಮೌಲ್ಯ ಕೋಟ್ಯಾಂತರ ರೂಪಾಯಿ.
ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ
ರುವಾನ್ ಜೀವಂತ ಇರುವಾಗ ಆತನನ್ನು ನೋಡಲು ಬರದ ಸಂಬಂಧಿಕರು ಸತ್ತ ಮೇಲೆ ಬಂದಿದ್ದಾರೆ. ರುವಾನ್ ಆಸ್ತಿ ತಮಗೆ ಸೇರುತ್ತೆ ಎಂಬ ನಿರೀಕ್ಷೆಯಲ್ಲಿ ಅವರಿದ್ದರು. ಆದ್ರೆ ರುವಾನ್ ವಿಲ್ ದಂಗಾಗಿಸಿದೆ. ರುವಾನ್ ತನ್ನ ಸಹೋದರಿ ಹಾಗೂ ಸೋದರಳಿಯನಿಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ. ಇದನ್ನು ತಿಳಿದ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.