ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ

ಈಗ ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ಹುಟ್ಟಿ ಬೆಳೆದಿದ್ದೆಲ್ಲಾ ತಮಿಳುನಾಡಿನ ಚೆನ್ನೈನಲ್ಲಿ. ಗೂಗಲ್‌ನ ಉನ್ನತ ಅಧಿಕಾರಿ ಆಗಿರುವ ಅವರು ನಂತರದಲ್ಲಿ ಅಮೆರಿಕಾಗೆ ವಲಸೆ ಹೋದವರು ಈಗ ಅವರು ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ.

CEO of Google Sundar Pichai Once waited 5 years for a phone at home remebered his childhood akb

ಈಗ ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ಹುಟ್ಟಿ ಬೆಳೆದಿದ್ದೆಲ್ಲಾ ತಮಿಳುನಾಡಿನ ಚೆನ್ನೈನಲ್ಲಿ. ಗೂಗಲ್‌ನ ಉನ್ನತ ಅಧಿಕಾರಿ ಆಗಿರುವ ಅವರು ನಂತರದಲ್ಲಿ ಅಮೆರಿಕಾಗೆ ವಲಸೆ ಹೋದವರು ಈಗ ಅವರು ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದು, ತಾವು ಕಳೆದ ಬಾಲ್ಯವು ತನ್ನ ಬದುಕಿನುದ್ದಕ್ಕೂ ದೊಡ್ಡ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ಅಂದು ಕಲಿತ ಕೆಲ ವಿಚಾರಗಳು ಇಂದು ನಾನು ಮಾಡುತ್ತಿರುವ ಕೆಲಸದ ಮೇಲೆಯೂ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. 

2015ರಿಂದಲೂ ಗೂಗಲ್ ಸಿಇಒ ಆಗಿರುವ ಪಿಚೈ, ನನ್ನ ಪೋಷಕರು ಯಾವಾಗಲೂ ಕಲಿಯುವಿಕೆ ಹಾಗೂ ಜ್ಞಾನಕ್ಕೆ ಯಾವಾಗಲೂ ಮಹತ್ವ ನೀಡುತ್ತಿದ್ದರು. ಅದು ಕೆಲವು ರೀತಿಯಲ್ಲಿ ಅವರ ಉದ್ದೇಶವಾಗಿದ್ದರೂ ಅವರ ಈ ನಿಲುವು ನನ್ನೊಳಗೆ ಆಳವಾದ ಪರಿಣಾಮ ಬೀರಿದ್ದು, ಈಗಲೂ ಪ್ರತಿಧ್ವನಿಸುತ್ತಿದೆ. ಕಲಿಕೆ ಮತ್ತು ಜ್ಞಾನಕ್ಕಾಗಿ ನಾನು ಹುಡುಕಲಾರಂಭಿಸಿದೆ. ಇದು ನಾನು ಈಗಿರುವ ಕಂಪನಿಯಲ್ಲಿಯೂ ಮುಂದುವರೆದಿದೆ ಎಂದು ಪಿಚೈ ಹೇಳಿದ್ದಾರೆ. 

ಗೂಗಲ್ ಸಿಇಒ ಸುಂದರ್ ಪಿಚೈ ಬೆಸ್ಟ್ ವರ್ಕ್ ಪಾರ್ಟ್ನರ್ ಇವರೇ ನೋಡಿ!

ಇದೇ ವೇಳೆ ತಮ್ಮ ಶಾಲಾ ದಿನದ ಬಗ್ಗೆ ಮಾತನಾಡಿದ ಪಿಚೈ, ತಾವು ಮೊದಲ ಬಾರಿ ಫೋನ್‌ ಪ್ರಭಾವವನ್ನು ಅನುಭವಿಸಿದ ಬಗೆಯನ್ನು ಹೇಳಿಕೊಂಡಿದ್ದಾರೆ. ಮನೆಗೊಂದು ಫೋನ್ ಬರುವುದಕ್ಕಾಗಿ ತಾನು ಸುಮಾರು 5 ವರ್ಷಗಳವರೆಗೆ ಕಾದಿದ್ದೆ ಎಂದ ಪಿಚೈ ತಾನು ತಂತ್ರಜ್ಞಾನವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದೆ. ನಾವು ಟೆಲಿಫೋನ್‌ಗಾಗಿ ಐದು ವರ್ಷ ಕಾದಿದ್ದೆವು ಅದು ರೋಟರಿ ಫೋನ್ ಆಗಿತ್ತು. ಆದರೆ ಅದು ನಮ್ಮ ಮನೆಗೆ ಬಂದಾಗ, ಅದು ನಮ್ಮ ಜೀವನವನ್ನು ಬದಲಾಯಿಸಿತು. ನಾನು ಅದೇ ವೇಳೆ ನಮ್ಮ ಮೊದಲ ಟಿವಿಯನ್ನು ನೋಡಿದೆ ಮತ್ತು ಇದ್ದಕ್ಕಿದ್ದಂತೆ ಟಿವಿಯಲ್ಲಿ ಕ್ರೀಡೆಯನ್ನು ವೀಕ್ಷಿಸಲು ಸಾಧ್ಯವಾಯಿತು ಎಂಬುದು ನನಗೆ ನೆನಪಿದೆ ಎಂದು ಪಿಚೈ ತಮ್ಮ ಬಾಲ್ಯವನ್ನು ನೆನೆದಿದ್ದಾರೆ. 

ನಾನು  ಶಾಲೆಗೆ ಬಹಳ ದೂರ ಬೈಕ್‌ನಲ್ಲಿ ಹೋಗುತ್ತಿದೆ. ಆದರೆ ನಾ ಓಡಿಸುವ ಬೈಕ್‌ಗೆ ಗೇರೇ ಇರಲಿಲ್ಲ, ಅಲ್ಲದೇ ಆ ಮಾರ್ಗದಲ್ಲಿ ನಾನು ಏರು ಮುಖವಾಗಿ ಸಾಗಬೇಕಿತ್ತು. ಆದರೆ ಹಲವು ವರ್ಷಗಳ ನಂತರ ನನಗೆ ಗೇರ್ ಇದ್ದ ಬೈಕ್ ಸಿಕ್ಕಿದಾಗ ನನಗೆ ವಾವ್ ಎನಿಸಿತ್ತು. ಅದು ಎಂತಹ ನಾಟಕೀಯ ಬದಲಾವಣೆ, ನಾನು ಎಂದಿಗೂ ತಂತ್ರಜ್ಞಾನವನ್ನು ಲಘುವಾಗಿ ತೆಗೆದುಕೊಂಡಿಲ್ಲ, ತಂತ್ರಜ್ಞಾನವು ಹೇಗೆ ಬದಲಾವಣೆಯನ್ನು ತರುತ್ತದೆ ಎಂಬುದರ ಕುರಿತು ನಾನು ಯಾವಾಗಲೂ ಆಶಾವಾದಿಯಾಗಿದ್ದೇನೆ ಎಂದು ಪಿಚೈ ಹೇಳಿದ್ದಾರೆ. 

ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಸುಂದರ್ ಪಿಚೈ, ಈ ಅವಧಿಯಲ್ಲಿ ಒಂದು ಮಾತ್ರ ಬದಲಾಗಿಲ್ಲ ಎಂದ ಸಿಇಒ!

ಇದೇ ವೇಳೆ ಕೃತಕ ಬುದ್ಧಿಮತ್ತೆ ಯುಗದಲ್ಲಿ ಗೂಗಲ್ ಹುಡುಕಾಟ ಹೇಗೆ ಪ್ರಸ್ತುತವಾಗಿದೆ ಎಂಬುದರ ಬಗ್ಗೆ ಮಾತನಾಡಿದ ಪಿಚೈ, ಜನರು ತಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಬಹಳಷ್ಟು ಉತ್ಪನ್ನಗಳು ನಮ್ಮ ಬಳಕೆದಾರರಿಗೆ ಮೌಲ್ಯವನ್ನು ಒದಗಿಸುವ ರೀತಿಯಲ್ಲಿ ಸಂಯೋಜಿಸಲ್ಪಟ್ಟಿವೆ. ಗೂಗಲ್ ಎಐನ್ನು ಸಮೀಪಿಸುತ್ತಿರುವ ವಿಧಾನವು ಹೊಸತನವನ್ನು ಹೆಚ್ಚಿಸುತ್ತದೆ, ಮಾರುಕಟ್ಟೆಯಲ್ಲಿ ಆಯ್ಕೆಯನ್ನು ಸೇರಿಸುತ್ತದೆ. ಇದು ಮುಂದಿನ ದಶಕದಲ್ಲಿ ಹುಡುಕಾಟವನ್ನು ವ್ಯಾಖ್ಯಾನಿಸುವುದರ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಪಿಚೈ ಹೇಳಿದ್ದಾರೆ.

Latest Videos
Follow Us:
Download App:
  • android
  • ios