Asianet Suvarna News Asianet Suvarna News

ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ ಲೈಫ್‌ಲ್ಲೂ ಸೀತಮ್ಮ-ಸಿಹಿ ಬಾಂಡಿಂಗ್‌ ಸಖತ್ ಕ್ಯೂಟ್‌

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ಸಿಹಿ ಪಾತ್ರದಲ್ಲಿ ರಿತು ಸಿಂಗ್ ಅಭಿನಯ ಎಲ್ಲರಿಗೂ ಇಷ್ಟವಾಗುತ್ತಿದೆ. ಆದರೆ ಕೇವಲ ರೀಲ್‌ನಲ್ಲಿ ಮಾತ್ರವಲ್ಲ, ವಾಸ್ತವದಲ್ಲಿಯೂ ಸಿಹಿ-ಸೀತಮ್ಮ ಸಖತ್‌ ಕ್ಲೋಸ್ ಅನ್ನೋದು ನಿಮ್ಗೊತ್ತಾ?

Seetharama serial, Seethamma-Sihi bonding is cute not only in reel but also in real life Vin
Author
First Published Sep 25, 2023, 2:29 PM IST

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್‌ 'ಸೀತಾರಾಮ'. ಮುದ್ದು ಸಿಹಿ ಪುಟಾಣಿಯಿದ್ದಾಳೆ ಅನ್ನೋ ಕಾರಣಕ್ಕೆ ಇದು ಹಲವರ ಪಾಲಿಗೆ ಅಚ್ಚುಮೆಚ್ಚಿನ ಧಾರಾವಾಹಿ. ಪಟಪಟ ಮಾತನಾಡುವ, ಜಗಳವಾಡುವ, ಸಿಟ್ಟು ಮಾಡಿಕೊಳ್ಳುವ, ವಾದ ಮಾಡುವ, ಹಲವಾರು ಪ್ರಶ್ನೆಗಳನ್ನು ಕೇಳುವ, ಅತ್ತು ರಂಪಾಟ ಮಾಡುವ ಸಿಹಿಯ ವರ್ತನೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗುತ್ತದೆ. ಇದೆಲ್ಲದರ ಜೊತೆಗೆ ಹೆಚ್ಚು ದಯೆ, ಕರುಣೆಯುಳ್ಳ, ಪ್ರೀತಿಯ ಮಳೆಯನ್ನೇ ಸುರಿಸುವ, ಆಗಾಗ ಗದರುವ ಸೀತಾ ಪಾತ್ರವೂ ಜನರ ಮನಗೆದ್ದಿದೆ. ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ಸಿಹಿ ಪಾತ್ರದಲ್ಲಿ ರಿತು ಸಿಂಗ್ ಪ್ರೇಕ್ಷಕರ ಮನಗೆದ್ದಿದ್ದಾರೆ. ರೀಲ್‌ನಲ್ಲಿ ತಾಯಿ-ಮಗಳ ಬಾಂಡಿಂಗ್‌ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ವಾಸ್ತವದಲ್ಲಿಯೂ ಸಿಹಿ-ಸೀತಮ್ಮ ಪಾತ್ರಧಾರಿಗಳು ಸಖತ್‌ ಕ್ಲೋಸ್ ಅನ್ನೋದು ನಿಮ್ಗೊತ್ತಾ?

ಹೌದು, ಕೇವಲ ರೀಲ್‌ನಲ್ಲಿ ಸಿಹಿ-ಸೀತಮ್ಮ ಆಗಿ ಮಾತ್ರವಲ್ಲ ರಿಯಲ್‌ ಲೈಫ್‌ನಲ್ಲಿಯೂ ವೈಷ್ಣವಿ ಗೌಡ-ರಿತು ಸಿಂಗ್‌ ತುಂಬಾ ಆಪ್ತರಾಗಿದ್ದಾರೆ. ಧಾರಾವಾಹಿಯ (Serial) ಸೆಟ್‌ನಲ್ಲಿ ಯಾವುದೋ ಕಾರಣಕ್ಕೆ ಬೇಸರಗೊಂಡಿರೋ ರಿತು ಸಿಂಗ್‌ನ್ನು ವೈಷ್ಣವಿ ಗೌಡ ಸಮಾಧಾನಿಸುವ ವಿಡಿಯೋ ವೈರಲ್ ಆಗಿದೆ. ವೈಷ್ಣವಿ ಗೌಡರನ್ನು ತಬ್ಬಿಕೊಂದು ರಿತು ಸಿಂಗ್‌ ಅಳುತ್ತಾಳೆ. ವೈಷ್ಣವಿ ಆಕೆಯನ್ನು ತಬ್ಬಿಕೊಂಡು ಸಮಾಧಾನ ಹೇಳುತ್ತಾಳೆ. ವೈರಲ್ ಆಗಿರೋ ಈ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ರೀಲ್‌ನಲ್ಲಿ ತಾಯಿ-ಮಗಳಾಗಿ (Mother-Daughter) ಮಾತ್ರವಲ್ಲ ರಿಯಲ್‌ ಲೈಫ್‌ನಲ್ಲೂ ನಿಮ್ ಬಾಂಡಿಂಗ್‌ ಸೂಪರ್ ಅಂತಿದ್ದಾರೆ.

ಸೀತಾರಾಮದ ಸಿಹಿ ಪುಟ್ಟಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೊವಿಂಗ್! ನಾಯಕಿಯನ್ನೇ ಮೀರಿಸ್ತಾಳೆ!

ವೈಷ್ಣವಿಯನ್ನು ತಬ್ಬಿಕೊಂಡು ಅತ್ತ ರಿತು ಸಿಂಗ್‌
ಸೀತಾರಾಮ, ಮೇಲ್ನೋಟಕ್ಕೆ ಇದೊಂದು ನಾರ್ಮಲ್ ಕಥೆ ಇರೋ ಸೀರಿಯಲ್. ಆದರೆ ಇದರ ನಿರೂಪಣೆ ಬಹಳ ಚೆನ್ನಾಗಿರೋ ಕಾರಣಕ್ಕೆ ಹೆಚ್ಚು ಜನರಿಗೆ ಇಷ್ಟವಾಗ್ತಿದೆ. ಇದರಲ್ಲಿ ರಾಮ್ ಬಿಲಿಯನೇರ್. ದೊಡ್ಡ ಕಂಪನಿಯ ಮಾಲಿಕ. ವಿದೇಶದಲ್ಲಿದ್ದು ಇಂಡಿಯಾಗೆ ವಾಪಾಸಾಗಿದ್ದಾನೆ. ಕಂಪನಿಯಲ್ಲಿ ಏನು ನಡೀತಿದೆ ಅಂತ ತಿಳಿದುಕೊಳ್ಳೋ ಉದ್ದೇಶದಿಂದ ಆತ ಕಂಪನಿ ಉದ್ಯೋಗಿ (Employee) ಥರ, ಮಧ್ಯಮ ವರ್ಗದ ಹುಡುಗನ ಥರ ಇರೋದಕ್ಕೆ ಶುರು ಮಾಡಿದ್ದಾನೆ. ಆತನ ಕಂಪನಿಯಲ್ಲಿ ಕೆಲಸ ಮಾಡೋ ಹುಡುಗಿ ಸೀತಾ. ಇವಳು ಸಿಂಗಲ್ ಪೇರೆಂಟ್. 

ಎಲ್ಲರ ಜೊತೆ ಬೆರೆಯೋ ಮುದ್ದಿನ ಮಗು ಸಿಹಿ ಕಾರಣಕ್ಕೆ ರಾಮ ಸಿಹಿಯ ಬೆಸ್ಟ್ ಫ್ರೆಂಡ್ ಆಗಿದ್ದಾನೆ. ಹಾಗೇ ಸೀತಾಗೂ ಫ್ರೆಂಡ್ ಆಗಿದ್ದಾನೆ. ಸ್ವಲ್ಪ ಸಮಯದಲ್ಲೇ ಇವರ ನಡುವೆ ಸ್ನೇಹ (Friendship) ಶುರುವಾಗಿದೆ. ಈಗ ರಾಮ್ ಟೈಮ್ ಇದ್ದಾಗಲೆಲ್ಲ ಸಿಹಿಯನ್ನು ಹುಡುಕಿಕೊಂಡು ಬರುತ್ತಾನೆ. ಅವಳ ಜೊತೆ ಆಟ ಆಡ್ತಾ, ಅವಳ ತುಂಟಾಟಗಳನ್ನು ನೋಡ್ತಾ ಅವನಿಗೆ ಜಗತ್ತು ಸುಂದರವಾಗಿದೆ ಅನಿಸಲಾರಂಭಿಸಿದೆ. ರಾಮ ಹಾಗೂ ಸೀತಾ ನಡುವೆ ಶುರುವಲ್ಲಿ ಬರೀ ಕೊಲೀಗ್ ಗಳ ನಡುವೆ ಇರುವ ಸಂಬಂಧ (Relationship) ಮಾತ್ರ ಇತ್ತು. ಈಗ ಸಿಹಿ ಕಾರಣಕ್ಕೆ ಇದು ಸ್ನೇಹಕ್ಕೆ ತಿರುಗಿದೆ. 

'ನಾನು ನಂದಿನಿ, ಬೆಂಗ್ಳೂರು ಬಂದೀನಿ' ಸಾಂಗ್ ಹಾಡಿದ ಸಿಹಿ, ಮುದ್ದು ಪುಟಾಣಿ ವಿಡಿಯೋ ಸಖತ್ ಕ್ಯೂಟು!

ಸದ್ಯಕ್ಕೆ ಸೀತಾ ಲೈಫು ಕಷ್ಟದಲ್ಲಿದೆ. ಸಾಲ ತೀರಿಸಲಾಗದೇ ಅವಳ ಪುಟ್ಟ ಮನೆಯನ್ನು ಇನ್ನೇನು ಹರಾಜು ಹಾಕುತ್ತಾರೆ. ಇನ್ನೊಂದು ಕಡೆ ಅವಳ ಮೇಲೆ ಕಣ್ಣು ಹಾಕಿರುವ ಲಾಯರ್ ಕುತಂತ್ರವೂ ಇದರ ಹಿಂದೆ ಕೆಲಸ ಮಾಡ್ತಾ ಇದೆ. ಮತ್ತೊಂದು ಕಡೆ ರಾಮ್ ತನ್ನ ಆಫೀಸಿನ ಅಡ್ವಾನ್ಸ್ ಸಾಲರಿ ನೆವದಲ್ಲಿ ಸೀತಾಗೆ ಸಹಾಯ ಮಾಡೋದಕ್ಕೆ ಮುಂದಾಗ್ತಾನೆ. ಆದರೆ ಅಲ್ಲಿಯೂ ಎಡವಟ್ಟಾಗಿದೆ. ದುಡ್ಡು ಸೀತಾಳ ಅಕೌಂಟ್ ಸೇರೋ ಬದ್ಲು ಪ್ರಿಯಾ ಅಕೌಂಟ್‌ಗೆ ಕ್ರೆಡಿಟ್ ಆಗಿದೆ. ಇದೆಲ್ಲದರ ಮಧ್ಯೆ ಸಿಹಿ ಗಣೇಶ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾಳೆ. ಉಪವಾಸ ಮಾಡೋಕೆ ಹೋಗಿ ತಲೆಸುತ್ತಿ ಬಿದ್ದಿದ್ದಳೆ. ರಾಮ್‌ ಆಕೆಯನ್ನು ಎತ್ತಿಕೊಂಡು ಹೋಗಿ ಉಪಚರಿಸುತ್ತಾನೆ. ಧಾರಾವಾಹಿಯಲ್ಲಿ ಮುಂದೇನಾಗುತ್ತೆ ಕಾದು ನೋಡ್ಬೇಕಾಗಿದೆ.

Follow Us:
Download App:
  • android
  • ios