ಮೊದಲ ಪತ್ನಿ ಇರುವಾಗಲೇ 2ನೇ ಪತ್ನಿ ಪಿಂಚಣಿಗೆ ಅರ್ಹಳಲ್ಲ ಹಿಂದೂ ವಿವಾಹ ಕಾಯ್ದೆಯಲ್ಲಿ ಎರಡೆರಡು ಪತ್ನಿಯರಿಗೆ ಅವಕಾಶವಿಲ್ಲ ಗುವಹಾಟಿ ಹೈಕೋರ್ಟ್ ಮಹತ್ವದ ತೀರ್ಪು
ಗುವಾಹಟಿ(ಜೂ.06): ಪಿಂಚಣಿ ಕುರಿತು ಹಲವು ವ್ಯಾಜ್ಯಗಳ ಕಾನೂನು ಹೋರಾಟ ನಡೆಯುತ್ತಲೇ ಇದೆ. ಇದರ ನಡುವೆ ಗುವಹಾಟಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೊದಲ ಪತ್ನಿ ಇರುವಾಗಲೇ ಎರಡನೇ ಪತ್ನಿ ಕುಟುಂಬದ ಪಿಂಚಣಿ ಪಡೆಯಲು ಅರ್ಹಳಲ್ಲ ಎಂದು ಗುವಹಾಟಿ ಹೈಕೋರ್ಟ್ ಹೇಳಿದೆ.
ಹಿಂದೂ ವಿವಾಹ ಕಾಯ್ದೆಯಲ್ಲಿ ಮೊದಲ ಪತ್ನಿ ಇರುವಾಗ ಎರಡನೇ ಮದುವೆಯಾಗಲು ಅವಕಾಶವಿಲ್ಲ. ಹೀಗಾಗಿ ಎರಡನೇ ಪತ್ನಿಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಹೀಗಿರುವಾಗ ಎರಡನೇ ಪತ್ನಿ ಸರ್ಕಾರಿ ನೌಕರನ ಪಿಂಚಣಿ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ಹೇಳಿದೆ.
ಗಂಡನಿಗೆ ಅಡುಗೆ ಮಾಡಿ ಬಡಿಸ್ತಿಲ್ಲ, ಹಾಗಾದ್ರೆ ಆ ಹೆಣ್ಣು ಕೆಟ್ಟವಳಾ?
ಪ್ರತಿಮಾ ದೇಕಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ. ಪ್ರತಿಮಾ ದೇಕಾ ತಾನು ಬೆರೆನ್ ದೇಕಾ ಅವರ ಪತ್ನಿ. ನಿರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಬಿರೆನ್ ದೇಕಾ 2016ರಲ್ಲಿ ನಿಧನರಾಗಿದ್ದಾರೆ. ಆದರೆ ಅವರ ಪಿಂಚಣಿ ತನಗೆ ಸಿಗುತ್ತಿಲ್ಲ. ಹೀಗಾಗಿ ಪತಿಯ ಪಿಂಚಣಿ ದೊರಕಿಸಿಕೊಡಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಪ್ರತಿಮಾ ದೇಕಾ ಅವರ ವಾದವನ್ನು ಬೆರನ್ ದೇಕಾ ಅವರ ಮೊದಲ ಪತ್ನಿ ವಿರೋಧಿಸಿದ್ದರು. ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಹಿಂದೂ ಧರ್ಮದಲ್ಲಿ ಎರಡು ಪತ್ನಿಯರನ್ನು ಹೊಂದಲು ಅವಕಾಶವಿಲ್ಲ. ಹಿಂದೂ ವಿವಾಹ ಕಾಯ್ದೆಯಲ್ಲಿ ಮೊದಲ ಪತ್ನಿ ಇರುವಾಗ, ವಿಚ್ಚೇದನ ನೀಡದೆ ಎರಡನೇ ಮದುವೆಯಾಗಲು ಅವಕಾಶವಿಲ್ಲ. ಹೀಗಾಗಿ ಪ್ರತಿಮಾ ದೇಕಾ ಅವರ ವಿವಾಹವೇ ಮಾನ್ಯವಾಗಿಲ್ಲ. ಕಾಯ್ದೆ ಪ್ರಕಾರ ಇದು ಅಪರಾಧವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಡಿವೋರ್ಸ್ ಕೇಳಿದ್ದಕ್ಕೆ ಗಂಡ, ಅತ್ತೆ ಮೇಲೆ ಹೆಂಡತಿ ಮತ್ತು ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ!
ಪ್ರತಿಮಾ ದೇಕಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಮಾಡಿದೆ. ಇಲ್ಲಿ ಮೊದಲ ಪತ್ನಿಯಿಂದ ನಿಧನರಾಗಿರುವ ಪತಿ ವಿಚ್ಚೇದನ ಪಡೆದುಕೊಂಡಿಲ್ಲ. ಇಷ್ಟೇ ಅಲ್ಲ ಮೊದಲ ಪತ್ನಿಯ ಜೊತೆಗೆ ಪತಿ ವಾಸವಾಗಿದ್ದರು. ಹೀಗಾಗಿ ಎರಡನೇ ವಿವಾಹವಾಗಿದ್ದರೂ ಅದಕ್ಕೆ ಮಾನ್ಯತೆ ಇಲ್ಲ ಎಂದು ಕೋರ್ಟ್ ಹೇಳಿದೆ.
ಮಗನ ಸುಪರ್ದಿಗೆ ಅರ್ಜಿ ಸಲ್ಲಿಸಿದ ತಂದೆಗೆ ದಂಡ
ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮಗುವಿನ ಪಾಲನೆ ಪೋಷಣೆಯು ತಾಯಿ ಹಕ್ಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಗುವಿನ ಸುಪರ್ದಿಗೆ ಕೋರಿದ್ದ ತಂದೆಯೊಬ್ಬರಿಗೆ 50 ಸಾವಿರ ರು. ದಂಡ ವಿಧಿಸಿದೆ.
ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸಲು ಪತ್ನಿಗೆ ಆದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಜಿ.ಕೆ.ಮೊಹಮ್ಮದ್ ಮುಷ್ತಾಕ್ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ಆದೇಶ ನೀಡಿದರು.
ಅಲ್ಲದೆ, ನ್ಯಾಯಾಲಯದ ವಿಧಿಸಿರುವ ದಂಡ ಮೊತ್ತವನ್ನು ಒಂದು ತಿಂಗಳ ಒಳಗೆ ಪತ್ನಿಗೆ ನೀಡಬೇಕು. ತಪ್ಪಿದರೆ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ. ಹಾಗೆಯೇ, ಪತಿ-ಪತ್ನಿ ಪರಸ್ಪರ ದಾಖಲಿಸಿರುವ ಎಂಟು ಪ್ರಕರಣಗಳನ್ನು ಮುಂದಿನ 9 ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು. ಆ ಕುರಿತ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ತಲುಪಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶಿಸಿದೆ.
