Real Story: ಗಂಡನಿಗೆ ಅಡುಗೆ ಮಾಡಿ ಬಡಿಸ್ತಿಲ್ಲ, ಹಾಗಾದ್ರೆ ಆ ಹೆಣ್ಣು ಕೆಟ್ಟವಳಾ?
ಮನೆ ನೋಡಿಕೊಳ್ಬೇಕು, ಮಕ್ಕಳ ಜವಾಬ್ದಾರಿ ವಹಿಸಿಕೊಳ್ಬೇಕು, ಅಡುಗೆ ಮಾಡ್ಬೇಕು…ಇದೆಲ್ಲ ಮಹಿಳೆಯ ಜವಾಬ್ದಾರಿ. ಭಾರತದಲ್ಲಿ ಇದು ಅಲಿಖಿತ ನಿಯಮ. ಇದನ್ನು ಮೀರಿದ್ರೆ ಆಡೋರ ಬಾಯಿಗೆ ಮಹಿಳೆಯರು ಆಹಾರವಾಗೋದು ಮಾತ್ರವಲ್ಲ ತಮಗೆ ತಾವೇ ಗಿಲ್ಟಿ ಫೀಲ್ ಮಾಡ್ತಾರೆ.
ವೈವಾಹಿಕ ಜೀವನದಲ್ಲಿ ಎಷ್ಟೇ ಪ್ರೀತಿ (Love) ಯಿದ್ದರೂ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ದಾಂಪತ್ಯದಲ್ಲಾಗುವ ಜಗಳ – ಮುನಿಸು, ಸಮಸ್ಯೆಗಳನ್ನು ಅವರೇ ನಿಭಾಯಿಸಿಕೊಳ್ಳಬೇಕು. ಈ ಜಗಳ – ಗಲಾಟೆ ಎಂದಿಗೂ ಬೀದಿಗೆ ಬರಬಾರದು. ಭಾರತೀಯ ಸಂಪ್ರದಾಯ (Indian Tradition) ದಲ್ಲಿ ಮಹಿಳೆ (Woman) ಗೆ ಒಂದು ಕೆಲಸ (Work), ಪುರುಷನಿಗೆ ಒಂದು ಕೆಲಸವೆಂದು ವಿಂಗಡನೆ ಮಾಡಲಾಗಿದೆ. ಮಹಿಳೆ ಕೆಲಸವನ್ನು ಪುರುಷ ಮಾಡಿದ್ರೆ ಹಾಗೂ ಪುರುಷನ ಕೆಲಸವನ್ನು ಮಹಿಳೆ ಮಾಡಿದ್ರೆ ಅದನ್ನು ಜನರು ಬೇಗ ಸ್ವೀಕರಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಆಗ್ತಿದ್ದು, ಬದಲಾವಣೆ ಬಯಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಗಂಡನಿಗೆ ಅಡುಗೆ (Cooking) ಮಾಡದಿರುವುದೇ ದೊಡ್ಡ ತಪ್ಪಾಗಿದೆ. ಅದಕ್ಕೆ ಏನು ಮಾಡ್ಲಿ ಎಂದು ಆಕೆ ಪ್ರಶ್ನೆ ಕೇಳಿದ್ದಾಳೆ.
ಗಂಡನಿಗಾಗಿ ಅಡುಗೆ ಮಾಡದ ಪತ್ನಿ : ಪತಿ – ಪತ್ನಿ ಮಧ್ಯೆ ಪ್ರೀತಿ ಅಗಾಧವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡ್ತಾರೆ. ಆದ್ರೆ ಒಂದು ಕೊರತೆ ಇವರನ್ನು ಕಾಡ್ತಿದೆ. ಅದೇನೆಂದ್ರೆ ಅಡುಗೆ. ಮಹಿಳೆಗೆ ಅಡುಗೆ ಮಾಡಲು ಬರೋದಿಲ್ಲವಂತೆ. ಅಡುಗೆ ಮೇಲೆ ಆಸಕ್ತಿಯೂ ಇಲ್ಲವಂತೆ. ಆದ್ರೆ ಪತಿ ಚೆನ್ನಾಗಿ ಅಡುಗೆ ಮಾಡ್ತಾನಂತೆ. ಪ್ರತಿ ದಿನ ಮನೆಯಲ್ಲಿ ಅಡುಗೆ ಮಾಡುವ ಜವಾಬ್ದಾರಿ ಪತಿಯದ್ದು.
ಪುರುಷರ ಈ ವಿಚಾರಗಳು ಹುಡುಗಿಯರಿಗೆ ತುಂಬಾ ಸೆಕ್ಸೀ ಅನಿಸುತ್ತಂತೆ !
ಆರಂಭದಲ್ಲಿದ್ದ ಖುಷಿ ಈಗಿಲ್ಲ : ಮದುವೆಗೆ ಮುನ್ನವೇ ಪತ್ನಿಯಾಗುವವಳಿಗೆ ಅಡುಗೆ ಬರೋದಿಲ್ಲ ಎಂಬ ಸತ್ಯ ಆತನಿಗೆ ತಿಳಿದಿತ್ತಂತೆ. ಮದುವೆಯಾದ ಮೊದ ಮೊದಲು ಅಡುಗೆ ಮಾಡುವುದನ್ನು ತುಂಬಾ ಎಂಜಾಯ್ ಮಾಡ್ತಿದ್ದನಂತೆ ಪತಿ. ಹಾಗೆ ಪತ್ನಿಗೆ ಬರದ ಕೆಲಸ ತನಗೆ ಬರುತ್ತದೆ ಎಂದು ಹೆಮ್ಮೆಪಟ್ಟುಕೊಳ್ತಿದ್ದನಂತೆ. ಆದ್ರೀಗ ಅಡುಗೆ ವಿಷ್ಯಕ್ಕೆ ಗಲಾಟೆ ಮಾಡ್ತಿದ್ದಾನೆ ಪತಿ ಎನ್ನುತ್ತಾಳೆ ಮಹಿಳೆ.
ಇಬ್ಬರೇ ಇದ್ದಾಗ ಮುನಿಸು : ಎಲ್ಲರ ಎದುರಿಗೆ ಸಾಮಾನ್ಯರಂತೆ ಇರುವ ವ್ಯಕ್ತಿ ಪತಿ – ಪತ್ನಿ ಇಬ್ಬರೇ ಇದ್ದಾಗ ಕೋಪ ಮಾಡಿಕೊಳ್ತಾನಂತೆ. ನೀನು ಏಕೆ ಅಡುಗೆ ಕಲಿಯುತ್ತಿಲ್ಲ. ನಾನೊಬ್ಬನೇ ಅಡುಗೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾನಂತೆ, ಅಡುಗೆ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿದೆ. ಇದು ನನಗೆ ಹಿಂಸೆಯಾಗ್ತಿದೆ. ಹುಡುಗಿಯಾಗಿ ಹುಟ್ಟಿದ್ಮೇಲೆ ಹೆಣ್ಮಕ್ಕಳು ಅಡುಗೆ ಮಾಡ್ಲೇಬೇಕಾ? ನನಗೆ ಅದ್ರಲ್ಲಿ ಆಸಕ್ತಿಯಿಲ್ಲ. ಹಾಗಾಗಿಯೇ ನನಗೆ ಅಡುಗೆ ಮಾಡಲು ಬರ್ತಿಲ್ಲವೆಂದಿದ್ದಾಳೆ ಮಹಿಳೆ.
Kids Care : ಮಗನನ್ನು ಪ್ರೀತಿ ಮಾಡ್ತಿದ್ದಾಳೆ 11 ವರ್ಷದ ಹುಡುಗಿ..! ಏನ್ ಮಾಡ್ಬೇಕು ಕೇಳ್ತಿದ್ದಾಳೆ ಅಮ್ಮ
ತಜ್ಞರ ಸಲಹೆ : ಭಾರತೀಯ ಪದ್ಧತಿಯಲ್ಲಿ ಹೆಣ್ಮಕ್ಕಳು ಅಡುಗೆ ಕಲಿತಿರಬೇಕೆಂಬ ಅಲಿಖಿತ ನಿಯಮವಿದೆ. ಅದ್ರಲ್ಲಿ ನಿಮ್ಮದಾಗ್ಲಿ ಇಲ್ಲ ನಿಮ್ಮ ಮನೆಯವರದ್ದಾಗ್ಲಿ ತಪ್ಪಿಲ್ಲ ಎನ್ನುತ್ತಾರೆ ತಜ್ಞರು. ಮೊದಲು ನಿಮಗಾಗಿ ಅಡುಗೆ ಮಾಡ್ತಿದ್ದವರು ಯಾಕೆ ಈಗ ಬದಲಾಗಿದ್ದಾರೆ ಎಂಬುದನ್ನು ತಿಳಿಯುವ ಅಗತ್ಯವಿದೆ. ನೀವಿಬ್ಬರೇ ಇದ್ದಾಗ ಜಗಳ ಮಾಡಲು ಬರೀ ಅಡುಗೆಯೇ ಕಾರಣವೇ ಎಂಬುದನ್ನು ತಿಳಿಯುವ ಅಗತ್ಯವಿದೆ ಎನ್ನುತಾರೆ ತಜ್ಞರು.
ಮಾತುಕತೆ : ಇದನ್ನು ಮಾತುಕತೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು. ಮೊದಲು ನಿಮ್ಮ ಪತಿ ಬಳಿ ಕುಳಿತು ಮಾತನಾಡಿ. ಪತಿ ಈ ವರ್ತನೆಗೆ ಬೇರೆ ಕಾರಣವಿದೆಯೇ ಎಂಬುದನ್ನು ತಿಳಿಯಿರಿ. ನೀವೂ ಅಡುಗೆ ಕಲಿಯಬೇಕು, ನಿಮಗೂ ಅಡುಗೆ ಬರಬೇಕು ಎಂಬ ಉದ್ದೇಶ ಮಾತ್ರವಿದ್ದರೆ ನೀವು ಖುಷಿಯಾಗಿ. ನಿಮ್ಮ ಸಂಗಾತಿ ಉದ್ದೇಶ ಸರಿಯಾಗಿಯೇ ಇದೆ. ಅಡುಗೆ ಕಲಿತರೆ ನಿಮಗೆ ಮುಂದೆ ನೆರವಾಗಬಹುದು. ಹಾಗಾಗಿ ಮೊದಲು ನಿಮಗಾಗಿ ಸಣ್ಣಪುಟ್ಟ ಅಡುಗೆ ಮಾಡಿ. ಅಡುಗೆ ಮಾಡೋದು ತುಂಬಾ ಕಠಿಣ ಕೆಲಸವಲ್ಲ. ಮೊದಲು ಅದನ್ನು ಪ್ರೀತಿಸಲು ಶುರು ಮಾಡಿ. ಆಗ ತಾನಾಗಿಯೇ ಬರುತ್ತದೆ. ಒಂದ್ವೇಳೆ ಕಾರಣ ಇದಲ್ಲವೆಂದ್ರೆ ಬೇರೆ ಯಾವ ಕಾರಣಕ್ಕೆ ಪತಿ ಮುನಿಸಿಕೊಂಡಿದ್ದಾನೆ ಅದನ್ನು ಪರಿಹರಿಸುವ ಪ್ರಯತ್ನ ಮಾಡಿ.