ಶಾಲೆಯಲ್ಲಿ ಶಿಕ್ಷಕರು-ಮಕ್ಕಳ ಮಧ್ಯೆ ನಾಲಿಗೆ ನೆಕ್ಕುವ ಆಟ, ರೊಚ್ಚಿಗೆದ್ದ ಪೋಷಕರು
ಪ್ರಪಂಚದಾದ್ಯಂತದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸ್ಪರ್ಧಾತ್ಮಕ ತೊಡಗಿಸಿಕೊಳ್ಳುವಿಕೆಗಳು ಮತ್ತು ಚಮತ್ಕಾರಿ ಚಟುವಟಿಕೆಗಳು ಸಾಮಾನ್ಯವಾಗಿದೆ. ಆದರೆ, ಉಹುಂ, ನಿಜವಾದ ನೆಕ್ಕುವಿಕೆಯನ್ನು ಒಳಗೊಂಡಿರುವ ನೆಕ್ಕುವ ಸ್ಪರ್ಧೆಯ ಬಗ್ಗೆ ಎಂದಾದರೂ ಕೇಳಿದ್ದೀರಾ?
ಗುರು ದೇವೋಭವ ಅನ್ನುತ್ತಾರೆ. ವಿದ್ಯೆ ಕಲಿಸುವ ಗುರುಗಳಿಗೆ ಜೀವನದಲ್ಲಿ ಅಷ್ಟು ಮಹತ್ತರವಾದ ಸ್ಥಾನವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಕೂಲಿನಲ್ಲೂ ಅನಾಚಾರಗಳು ನಡೆಯುತ್ತವೆ. ಟೀಚರ್ಸ್ ತಮ್ಮ ವಿದ್ಯಾರ್ಥಿಗಳ ಮೇಲೆಯೇ ಕೆಟ್ಟ ಕಣ್ಣು ಹಾಕುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಓಡಿ ಹೋಗುತ್ತಾರೆ. ಇಂಥಾ ಹಲವು ಘಟನೆಗಳಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ತನ್ನ ನಿಜವಾದ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಹಾಗೆಯೇ ಇಲ್ಲೊಂದೆಡೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ವಿಚಿತ್ರ ಆಟ ಎಲ್ಲರ ಹುಬ್ಬೇರುವಂತೆ ಮಾಡಿದೆ. ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮತ್ತ ಟೀಚರ್ಸ್ ಮಧ್ಯೆ ನಾಲಿಗೆ ನೆಕ್ಕುವ ಸ್ಪರ್ಧೆಯನ್ನು (Tongue licking) ಏರ್ಪಡಿಸಲಾಗಿತ್ತು. ಮಾರ್ಚ್ 31ರಂದು ಕೆನ್ನೆವಿಕ್‌ನ ಡೆಸರ್ಟ್ ಹಿಲ್ಸ್ ಮಿಡಲ್ ಸ್ಕೂಲ್‌ನಲ್ಲಿ ಈ ವಿಚಿತ್ರ ಸ್ಪರ್ಧೆ ನಡೆದಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಆಟದ ಸಮಯದಲ್ಲಿ, ವಿದ್ಯಾರ್ಥಿಗಳು (Students) ಮತ್ತು ಅವರ ವಯಸ್ಕ ಶಿಕ್ಷಕರಿಗೆ ಒಂದೇ ಸಮಯದಲ್ಲಿ ಪ್ಲೆಕ್ಸಿಗ್ಲಾಸ್ ಪೇನ್‌ನ ಎರಡೂ ಬದಿಗಳಿಂದ ಮಾರ್ಷ್‌ಮ್ಯಾಲೋ ಕ್ರೀಮ್ ಅನ್ನು ನೆಕ್ಕುವ ಕೆಲಸವನ್ನು ವಹಿಸಲಾಯಿತು. ದೂರದಿಂದಲೇ ಈ ಆಟ (Game) ನೋಡುತ್ತಿದ್ದ ವಿದ್ಯಾರ್ಥಿಗಳು ಅಸಹ್ಯಗೊಂಡಿದ್ದು, ಕೆಲವರು ಅಯ್ಯೋ, ಏನಪ್ಪಾ ಇದು, ಎಂದು ಕೂಗಿದ್ದು ವಿಡಿಯೊದಲ್ಲಿ ಕೇಳಬಹುದು.
ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸೇ ಇಲ್ಲ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು
ಶಿಕ್ಷಕರು ಮತ್ತು ಮಕ್ಕಳ (Children) ನಡುವೆ ನಡೆದ ಈ ವಿಚಿತ್ರ ಆಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿ, ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಪೋಷಕರಲ್ಲಿ ಒಬ್ಬರಾದ ಮೇಗನ್ ಸಾ ಅವರು, ಸ್ಪರ್ಧೆಯ ಬಗ್ಗೆ ವಿವರಣೆಯನ್ನು ಕೇಳಲು ಸೂಪರಿಂಟೆಂಡೆಂಟ್, ಶಾಲಾ ಮಂಡಳಿ ಮತ್ತು ಮಾನವ ಸಂಪನ್ಮೂಲ ಇಲಾಖೆಗೆ ಇಮೇಲ್ ಮಾಡಿರುವುದಾಗಿ ತಿಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಶಾಲೆಯ ಪ್ರಾಂಶುಪಾಲರು ಈ ಆಟವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದಾಗಿದೆ.
'ವಯಸ್ಕರಿಂದ ಲೈಂಗಿಕ ವರ್ತನೆಗೆ ಒಡ್ಡಿಕೊಳ್ಳುವುದಕ್ಕಾಗಿ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ' ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಬೇಸಿಗೆ ರಜೆಗೆ (Summer holidays) ಹೊರಡುವ ಮೊದಲು ಆಯೋಜಿಸಲಾದ ಪೆಪ್ ರ್ಯಾಲಿಯ ಭಾಗವಾಗಿ ಆಟವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಬ್ಬ ಪೋಷಕರು ಮಾತನಾಡಿ, 'ಶಿಕ್ಷಕರು ಆಯೋಜಿಸಿರುವ ಆಟ ನಿಜಕ್ಕೂ ವಿಲಕ್ಷಣವಾಗಿದೆ. ಯಾಕೆ ಹೀಗೆ ಮಾಡಿದರು ಎಂದು ಅರ್ಥವಾಗುತ್ತಿಲ್ಲ' ಎಂದು ಹೇಳಿದರು. ಆಕ್ರೋಶದ ನಂತರ, ಶಾಲೆಯ ಅಧೀಕ್ಷಕ ಡಾ.ಟ್ರಾಸಿ ಪಿಯರ್ಸ್ ಶಾಲೆಯ ಕುಟುಂಬಗಳಿಗೆ ಪತ್ರವನ್ನು ಕಳುಹಿಸಿದ್ದಾರೆ.
ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನ: ಮಕ್ಕಳಿಗೆ ಅತ್ತ ಪಾಠವೂ ಇಲ್ಲ ಇತ್ತ ಬಿಸಿ ಊಟವೂ ಇಲ್ಲ!
'ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹೆಚ್ಚು ಗಂಭೀರವಾಗಿರುವ ವಿಷಯವಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಜಿಲ್ಲಾಡಳಿತದಿಂದ ತನಿಖೆ ಮಾಡಲಾಗುತ್ತಿದೆ ' ಎಂದು ಬರೆದಿದ್ದಾರೆ, ಪರಿಸ್ಥಿತಿಯನ್ನು ಪರಿಹರಿಸಲು ಶಾಲಾ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು ಪೋಷಕರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.