ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸೇ ಇಲ್ಲ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು
ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಪೋಷಕರನ್ನು ಬುದ್ಧಿ ಹೇಳುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಪೋಷಕರೇ ಟೀಚರ್ಸ್‌ನ್ನು ಶಿಕ್ಷಿಸಿದ್ದಾರೆ. 4 ಗಂಟೆ ಶಿಕ್ಷಕರನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ್ದಾರೆ. ಇಷ್ಟೆಲ್ಲಾ ಮಾಡಿದ್ದು ಯಾಕಾಗಿ ?
ಕೋಲ್ಕತ್ತಾ: ಶಾಲೆಯೊಂದರಲ್ಲಿ ನೀಡಲಾಗಿದ್ದ ಮಧ್ಯಾಹ್ನದ ಊಟದಲ್ಲಿ ಚಿಕನ್ ಪೀಸ್‌ಗಳು ಇಲ್ಲವೆಂದು ಪೋಷಕರು-ಶಿಕ್ಷಕರು ಕಿತ್ತಾಡಿಕೊಂಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ಬಜಾರ್ ಪ್ರದೇಶದ ಅಮೃತಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಬಿಸಿಯೂಟದಲ್ಲಿರುವ ಕೋಳಿಯ ಪೀಸ್‌ಗಳನ್ನು (Chilcken pieces) ಶಿಕ್ಷಕರು ತಮಗಾಗಿ ಇಟ್ಟುಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕರ ವಿರುದ್ಧ ಕೋಪಗೊಂಡ ಪೋಷಕರು (Parents) ಅವರನ್ನು ನಾಲ್ಕು ಗಂಟೆಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿದರು. ಪೋಷಕರ ಆರೋಪದ ಮೇರೆಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.
ಶಿಕ್ಷಕರು (Teachers) ಕೋಳಿ ಮಾಂಸದಿಂದ ಎಲ್ಲಾ ಲೆಗ್ ಪೀಸ್ ಮತ್ತು ಇತರ ಮಾಂಸದ ಭಾಗಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಇತರ ಮಾಂಸವನ್ನು ಮಾತ್ರ ನೀಡಿದ್ದಾರೆ ಎಂದು ಪೋಷಕರು ಸಂಸ್ಥೆಯ ಆವರಣಕ್ಕೆ ನುಗ್ಗಿದ್ದಾರೆ. ಕೋಳಿ ಮಾಂಸವನ್ನು ಮಧ್ಯಾಹ್ನದ ಊಟದ ಭಾಗವಾಗಿ ನಿಗದಿಪಡಿಸಿದ ದಿನದಂದು ಶಿಕ್ಷಕರು 'ಪಿಕ್ನಿಕ್ ಮೂಡ್'ನಲ್ಲಿರುತ್ತಾರೆ ಮತ್ತು ಉತ್ತಮ ಗುಣಮಟ್ಟದ ಅಕ್ಕಿಯನ್ನು (Rice) ಬಳಸಿ ಪ್ರತ್ಯೇಕವಾಗಿ ಬೇಯಿಸಿಕೊಳ್ಳುತ್ತಾರೆ ಎಂದು ಪೋಷಕರು ಆರೋಪಿಸಿದರು.
20 ವರ್ಷದ ಹಿಂದೆ ಚಿಕನ್ ಬಿರಿಯಾನಿ ಇಷ್ಟು ಚೀಪಾ, ಮೂರು ಹೊತ್ತೂ ತಿನ್ಬೋದಿತ್ತು!
ಶಿಕ್ಷಕರನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಕೂಡಿ ಹಾಕಿದ ಪೋಷಕರು
ಚಿಕನ್ ಕರಿ ನೀಡಲು ನಿಗದಿಪಡಿಸಿದ ದಿನಗಳಲ್ಲಿ ವಿದ್ಯಾರ್ಥಿಗಳು ನಿರಾಶೆಯಿಂದ ಮನೆಗೆ ಹಿಂದಿರುಗುತ್ತಾರೆ. ಯಾಕೆಂದರೆ ಮಾಲ್ಡಾ ಶಾಲೆಯಲ್ಲಿ ಶಿಕ್ಷಕರು ಉತ್ತಮ ಚಿಕನ್ ಅನ್ನು ತಾವಿಟ್ಟುಕೊಂಡು, ಉಳಿದಿದ್ದನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎಂದು ದೂರಿದರು. 'ವಿದ್ಯಾರ್ಥಿಗಳ ಪೋಷಕರು ಮತ್ತು ಪಾಲಕರು ಶಾಲೆಗೆ ಬಂದು ಶಿಕ್ಷಕರ ಬಳಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ವೇಳೆ ಎರಡೂ ಕಡೆಯವರು ವಾಗ್ವಾದ ನಡೆಸಿದ್ದಾರೆ. ಬಳಿಕ ಪೋಷಕರು ಆರು ಶಿಕ್ಷಕರನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಹೊರಗಿನಿಂದ ಬಾಗಿಲು ಹಾಕಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಶಿಕ್ಷಕರನ್ನು ಕೂಡಿ ಹಾಕಲಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಶಿಕ್ಷಕರನ್ನು ಬಿಡುಗಡೆಗೊಳಿಸಿದರು.
ಉತ್ತಮ ಗುಣಮಟ್ಟದ ಅಕ್ಕಿ ಮತ್ತು ಚಿಕನ್ ಲೆಗ್ ಪೀಸ್ ಬಳಸಿ ಶಿಕ್ಷಕರು ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಶಾಲೆಯ ಉಸ್ತುವಾರಿ ಶಿಕ್ಷಕರು ನಿರಾಕರಿಸಿದ್ದಾರೆ. ಸ್ಥಳೀಯ ಗ್ರಾಪಂ ಸದಸ್ಯ ನಿಖಿಲ್ ಸಿಂಘ ಮಾತನಾಡಿ, 'ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಪೂರೈಸುವ ಆಹಾರದಿಂದ ಶಿಕ್ಷಕರು ಅವರನ್ನು ವಂಚಿತರನ್ನಾಗಿ ಮಾಡುತ್ತಿರುವುದು ವಿಷಾದನೀಯ ವಿಷಯವಾಗಿದೆ' ಎಂದರು. ಜಿಲ್ಲಾ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷೆ ಬಸಂತಿ ಬರ್ಮನ್, ಶಾಲಾ ಇನ್ಸ್ಪೆಕ್ಟರ್ ಅವರನ್ನು ತನಿಖೆ ನಡೆಸಲು ಕೇಳಲಾಗಿದೆ ಎಂದರು.
ಚಿಕನ್ ತುಂಬಾ ಇಷ್ಟಾಂತ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನೋ ತಪ್ಪು ಮಾಡ್ಬೇಡಿ
ಜನವರಿಯಲ್ಲಿ ಬಿಸಿಯೂಟದ ಮೆನುವಿಗೆ ಚಿಕನ್ ಸೇರ್ಪಡೆ
ಜನವರಿಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಮೆನುವಿನಲ್ಲಿ ಕೋಳಿ ಮತ್ತು ಸೀಸನಲ್ ಹಣ್ಣುಗಳನ್ನು ಸೇರಿಸಿತು. ಸಾಂಕ್ರಾಮಿಕ ರೋಗದ ಮೊದಲು, ಸರ್ಕಾರವು ರಾಜ್ಯದ ಶಾಲೆಗಳಲ್ಲಿ ಮೆನುವನ್ನು ನಿಗದಿಪಡಿಸಿತು ಮತ್ತು ಇತರ ದಿನಗಳಲ್ಲಿ ಬೇಯಿಸಿದ ಅನ್ನ, ಸೋಯಾಬೀನ್ ಮತ್ತು ತರಕಾರಿಗಳೊಂದಿಗೆ ವಾರಕ್ಕೆ ಎರಡು ಬಾರಿ ಮೀನು ಅಥವಾ ಮೊಟ್ಟೆಯನ್ನು ಸೇರಿಸಿತು. ರಾಜ್ಯಾದ್ಯಂತ ಶಾಲೆಗಳಲ್ಲಿ ದಾಖಲಾದ 11.6 ಮಿಲಿಯನ್ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುತ್ತಾರೆ. ಜನವರಿಯಲ್ಲಿ, ಏಪ್ರಿಲ್ 23 ವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶ ನೀಡಲು ಸರ್ಕಾರ 372 ಕೋಟಿ ರೂ. ನಿಗದಿಪಡಿಸಿದೆ.