Asianet Suvarna News Asianet Suvarna News

ಹಸೆಮಣೆ ಏರಿದ ಸಲಿಂಗಿ ಜೋಡಿ: ಕೋಲ್ಕತ್ತಾದಲ್ಲಿ ಇದು 3ನೇ ಸಲಿಂಗಿ ವಿವಾಹ

ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿಯೊಂದು ಕಾನೂನು ಮಾನ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಹಸೆಮಣೆ ಏರಿದ್ದಾರೆ. ಸಂಪ್ರದಾಯಿಕ ಬೆಂಗಾಲಿ ವಿವಾಹದಂತೆ ಈ ಸಮಾರಂಭ ನಡೆದಿದೆ. 

Same sex couple married in west Bengal This is the 3rd same sex wedding in Kolkata akb
Author
First Published May 25, 2023, 12:21 PM IST

ಕೋಲ್ಕತ್ತಾ: ಸಲಿಂಗ ಜೋಡಿಗಳ ವಿವಾಹಕ್ಕೆ ಮಾನ್ಯತೆ ಕೊಟ್ಟು ಕಾನೂನುಬದ್ಧಗೊಳಿಸಬೇಕೆ ಬೇಡವೇ ಎಂಬ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.  ಕೆಲವರು ಮಾನ್ಯತೆ ಬೇಕು ಎಂದು ಹೇಳಿದರೆ,  ಹಲವು ಧಾರ್ಮಿಕ ಸಂಘಟನೆಗಳು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿವೆ. ಈ ಮಧ್ಯೆ ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿಯೊಂದು ಕಾನೂನು ಮಾನ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಹಸೆಮಣೆ ಏರಿದ್ದಾರೆ. ಸಂಪ್ರದಾಯಿಕ ಬೆಂಗಾಲಿ ವಿವಾಹದಂತೆ ಈ ಸಮಾರಂಭ ನಡೆದಿದೆ. ಅರಿಶಿಣಶಾಸ್ತ್ರ, ಸಂಗೀತ, ಮೆಹಂದಿ ಸಪ್ತಪದಿ ಸೇರಿದಂತೆ ಎಲ್ಲಾ ಆಚರಣೆಗಳನ್ನು ನಡೆಸಿದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. 

ಮೌಸುಮಿ ದತ್ತ (Mousumi Datta) ಹಾಗೂ ಮೌನಿತಾ ಮಜಮ್ದಾರ್ (Moumita Majumder) ಎಂಬುವವರೇ ಸಲಿಂಗ ವಿವಾಹವಾದ ಜೋಡಿ, ಇದು ಕೋಲ್ಕತ್ತಾದಲ್ಲಿ ನಡೆದ ಮೂರನೇ ಸಲಿಂಗ ವಿವಾಹವಾಗಿದೆ. ಇದಕ್ಕೂ ಮೊದಲು ಚೈತನ್ಯ ಶರ್ಮಾ ಹಾಗೂ ಅಭಿಷೇಕ್ ರಾಯ್  (Abhishek Ray) ಎಂಬ ಸಲಿಂಗ ಜೋಡಿ ವಿವಾಹವಾಗಿದ್ದು, ಆದರೆ  ಈ ವಿವಾಹಕ್ಕೂ ಮೊದಲು 2018ರಲ್ಲಿ ಸುಚೇಂದ್ರ ದಾಸ್ ಹಾಗೂ ಶ್ರೀ ಮುಖರ್ಜಿ ಎಂಬುವವರು  ಮೊದಲ ಬಾರಿಗೆ ಸಲಿಂಗ ವಿವಾಹವಾಗುವ ಮೂಲಕ ಸಲಿಂಗ ವಿವಾಹಕ್ಕೆ ನಾಂದಿ ಹಾಡಿ ಆ ಸಮುದಾಯದ ಜನರಿಗೆ ಸ್ಪೂರ್ತಿಯಾಗಿದ್ದರು. 

ಸಲಿಂಗಕಾಮ ಒಂದು ‘ಕಾಯಿಲೆ’: ಆರೆಸ್ಸೆಸ್‌ ಸಹವರ್ತಿ ಸಂಘಟನೆ; ದೇಶದ ವೈದ್ಯರನ್ನು ಸಂದರ್ಶಿಸಿ ಅಧ್ಯಯನ

ಪ್ರೀತಿ ಎಂದರೆ ಪ್ರೀತಿ. ನೀವು ಪ್ರೀತಿಯಲ್ಲಿ ಬೀಳುವಾಗ ಲಿಂಗದ ವಿಚಾರ ದೊಡ್ಡ ವಿಷಯವಾಗುವುದಿಲ್ಲ. ಪ್ರೀತಿ ಸರಿಯಾದ ವ್ಯಕ್ತಿ ಮತ್ತು ನಿಮ್ಮ ಮನಸ್ಸಿನ ಭಾವನೆಯಾಗಿದೆ. ಪ್ರೀತಿಯು ಎಲ್ಲರನ್ನು ಗೆಲ್ಲುತ್ತದೆ ಎಂದು ಸಲಿಂಗ ವಿವಾಹವಾದ  ಕೋಲ್ಕತ್ತಾದ ಬಾಗುಯಾಟಿ (Baguiati) ನಿವಾಸಿ ಮೌಸುಮಿ ಹೇಳಿದ್ದಾರೆ. ತನ್ನ ಸಂಗಾತಿಯ ಕುಟುಂಬ ನನ್ನನ್ನು ಸ್ವೀಕರಿಸುತ್ತದೆ ಎಂಬ ಭರವಸೆಯಲ್ಲಿ ನಾನಿದ್ದೇನೆ ಎಂದು ಅವರು ಹೇಳಿದ್ದಾರೆ. 

ಸಲಿಂಗ ವಿವಾಹವೂ ಭಾರತದಲ್ಲಿ ಕಾನೂನುಬದ್ಧವಾಗಿಲ್ಲ, ಹೀಗಾಗಿ ಇಂತಹ ಸಂಬಂಧ ಅನೈತಿಕವಾಗಿದೆ. ಆದರೆ ಕೋಲ್ಕತ್ತಾ ನಗರವೂ ಇಂತಹ ಸಲಿಂಗ ವಿವಾಹಕ್ಕೆ ಮೇಲ್ಪಂಕ್ತಿ ಹಾಕಿದ್ದು, ಮೌನಿತಾ ಹಾಗೂ ಮೌಸಮಿ ಅವರ ವಿವಾಹವೂ ಇಲ್ಲಿ ನಡೆಯುತ್ತಿರುವ ಮೂರನೇ ಸಲಿಂಗ ವಿವಾಹವಾಗಿದೆ. ಮೌಮಿತಾ ಹಾಗೂ ಮೌಸಮಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಮೊದಲಿಗೆ ಭೇಟಿಯಾಗಿದ್ದು,  ನಂತರ ಚಾಟಿಂಗ್ ಮಾಡುತ್ತಾ ಸ್ನೇಹ ಶುರುವಾಗಿದ್ದು, ನಂತರ ಜೊತೆಯಾಗಿ ಸುತ್ತಾಡಲು ಆರಂಭಿಸಿದ ನಂತರ ಪ್ರೀತಿ ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಮೌನಿತಾ ಹಾಗೂ ಮೌಸಮಿ ಮೊದಲಿಗೆ ಸದ್ದಿಲ್ಲದೇ ವಿವಾಹವಾಗುವ ಮೂಲಕ ಈ ವಿವಾಹವನ್ನು ಖಾಸಗಿಯಾಗಿ ಇಡಬೇಕೆಂದೇ ಭಾವಿಸಿದ್ದರು. ಆದರೆ  ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತಮ್ಮ ಈ ಮದುವೆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಕೋಲ್ಕತ್ತಾದ ಶೋವ ಬಜಾರ್‌ನಲ್ಲಿರುವ ಅರಿಟೋಲಾ ಪ್ರದೇಶದ (Aritola area) ಭೂತನಾಥ್ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ (Hindu tradition) ಹಸೆಮಣೆ ಏರಿದ್ದಾರೆ. ಮೌನಿತಾ ಮೌಸಮಿ ಹಣೆಗೆ ತಿಲಕ ಇರಿಸಿ ಈ ವಿವಾಹ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. 

ಚಲಿಸುವ ಬೈಕ್ ಮೇಲೆ ಬಾಲಕಿಯರ ರೋಮ್ಯಾನ್ಸ್: ಲಿಪ್ ಕಿಸ್ ವಿಡಿಯೋ ವೈರಲ್

ಈ ನವಜೋಡಿ ಈಗ ಸಮಾಜದಿಂದ ಆಶೀರ್ವಾದವನ್ನು ಬಯಸಿದ್ದು, ಸಮಾಜ ನಮ್ಮ ಈ ಸಂಬಂಧವನ್ನು ಸ್ವೀಕರಿಸಬೇಕು ಎಂದು ಕೋರಿದ್ದಾರೆ. ಈ ವೇಳೆ ಸಾಮಾಜಿಕ ನಿಷೇಧಗಳಿಗೆ ಒಳಪಟ್ಟರೆ  ಹೇಗೆ ಎದುರಿಸುವಿರಿ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಜೋಡಿ ಪ್ರೀತಿ ಇರುವಲ್ಲಿ ತಾರತಮ್ಯ ಇರಬಾರದು. ತಾವು ಹೇಗೆ ಸಂತೋಷವಾಗಿರುತ್ತಾರೆ ಮತ್ತು ಯಾರೊಂದಿಗೆ ತಮ್ಮ ಜೀವನವನ್ನು ಕಳೆಯಲು ಬಯಸುತ್ತಾರೆ ಎಂಬುದರ ಕುರಿತು ಒಬ್ಬರು ಯೋಚಿಸಬೇಕು. ಇದು ಸಮಾಜಕ್ಕೆ ಸಂಬಂಧಿಸಿದ್ದಲ್ಲ ಎಂದು ಮೌಸುಮಿ ಹೇಳಿದರು.

ಪ್ರಸ್ತುತ ಈ ನವದಂಪತಿ ಉತ್ತರ ಕೋಲ್ಕತ್ತಾದ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ (rented apartment) ವಾಸಿಸುತ್ತಿದ್ದಾರೆ. ಆದರೆ ತಾವು ವಾಸಿಸುವ ಪ್ರದೇಶವನ್ನು ಗೌಪ್ಯವಾಗಿಡಲು ಈ ಜೋಡಿ ಬಯಸಿದ್ದಾರೆ. ಕೇಂದ್ರ ಸರ್ಕಾರವೂ ಸಲಿಂಗ ವಿವಾಹಕ್ಕೆ ಅನುಮತಿ ನಿರಾಕರಿಸಿದೆ. ಈ ಮಧ್ಯೆ ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಪ್ರಸ್ತುತ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದ್ದು,  ಸುಪ್ರೀಂಕೋರ್ಟ್‌ನಿಂದ (Supreme Court) ಅನುಕೂಲಕರವಾದ ತೀರ್ಪಿನ ನಿರೀಕ್ಷೆಯಲ್ಲಿ ಸಲಿಂಗಿಗಳಿದ್ದಾರೆ.

ಗೌರವಾನ್ವಿತ ಸುಪ್ರೀಂಕೋರ್ಟ್ ನಮ್ಮ ಪರವಾಗಿ ಮತ್ತು ಸಂತೋಷದ ಜೀವನವನ್ನು ಬಯಸುವ ನಮ್ಮಂತಹ ಜನರ ಪರವಾಗಿದೆ ಎಂದು ನಾವು ಭಾವಿಸುತ್ತೇವೆ. ಯಾವುದೇ ತಾರತಮ್ಯ ಇರಬಾರದು. ಸಾಮಾನ್ಯ ಜೋಡಿಗಳು ಲಿವ್-ಇನ್ ಸಂಬಂಧದಲ್ಲಿ ಉಳಿಯಲು ಅನುಮತಿಸಿದರೆ, ನಾವು ಪ್ರೀತಿಸುವ ಯಾರೊಂದಿಗಾದರೂ ವಾಸಿಸುವಂತಹ ಸರಳವಾದ ಜೀವನದ ಆನಂದದಿಂದ ನಾವು ಏಕೆ ವಂಚಿತರಾಗಬೇಕುಎಂದು ಮೌಸುಮಿ ಪ್ರಶ್ನಿಸುತ್ತಾರೆ. 

ಚಾಟ್ ಮಾಡುವಾಗ ಮತ್ತು ನಂತರ ಡೇಟ್‌ಗಳಲ್ಲಿ ಭೇಟಿಯಾದಾಗ ಪ್ರೀತಿ ಹುಟ್ಟಿಕೊಂಡಿತು. ಈಗಿನಂತೆ, ಅವರು ನಗರದಿಂದ ಸ್ವಲ್ಪ ಸಮಯ ಏಕಾಂಗಿಯಾಗಿ ಕಳೆಯಲು ಸಣ್ಣ ಪ್ರವಾಸಕ್ಕೆ ಹೊರಡುತ್ತಾರೆ. ಅವರು ತಮ್ಮ ಒಂದು ವರ್ಷದ ವಾರ್ಷಿಕೋತ್ಸವವು ಅದ್ಧೂರಿಯಾಗಿ ನಡೆಯಲಿ ಎಂದು ಹಾರೈಸುತ್ತಾರೆ, ಆಗ ಸರ್ವೋಚ್ಚ ನ್ಯಾಯಾಲಯವು LGBTQ ಸಮುದಾಯಕ್ಕೆ ತಿದ್ದುಪಡಿಗಳನ್ನು ಮಾಡುತ್ತದೆ ಎಂದು ಆಶಿಸುತ್ತಿದ್ದಾರೆ.

Follow Us:
Download App:
  • android
  • ios