ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್. ಏಳು ವರ್ಷಗಳ ದಾಂಪತ್ಯದ ನಂತರ ಬೇರೆಯಾಗಲು ನಿರ್ಧರಿಸಿದ್ದ ಜೋಡಿ ಮತ್ತೆ ಒಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿಚ್ಚೇದನ ಪಡೆಯಲು ಮುಂದಾಗಿದ್ದೇವೆ ಎಂದು ಘೋಷಿಸಿದ್ದ ಭಾರತದ ಸ್ಟಾರ್ ಬ್ಯಾಂಡ್ಮಿಂಟನ್ ದಂಪತಿ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮತ್ತೆ ಒಂದಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತಾವು ಮತ್ತೆ ಒಂದಾಗುತ್ತಿದ್ದೇವೆ ಎಂದು ದೃಢಪಡಿಸಿದ್ದು "ಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ತಿಳಿದು ಅವರ ಅಪಾರ ಕ್ರೀಡಾಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಕಳೆದ ಜುಲೈ 14ರಂದು ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಬ್ಯಾಡ್ಮಿಂಟನ್‌ನ ಪ್ರಸಿದ್ಧ ಜೋಡಿ 7 ವರ್ಷಗಳ ದಾಂಪತ್ಯ ಮತ್ತು 14 ವರ್ಷಗಳ ಸಂಬಂಧದ ನಂತರ ಬೇರ್ಪಡಲು ನಿರ್ಧರಿಸಿ ಅವರು ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬೇರ್ಪಡುವಿಕೆಯನ್ನು ದೃಢಪಡಿಸಿದ್ದರು. ಆದರೆ ಈಗ ಮತ್ತೆ ಒಂದಾಗಲು ನಿರ್ಧರಿಸಿದ್ದು ಈ ಮೂಲಕ ಮಾಧರಿಯಾಗಲು ಮುಂದಾಗಿದ್ದಾರೆ. 2018 ರಲ್ಲಿ ಮದುವೆಯಾದ ಈ ಜೋಡಿ, ಸುಮಾರು ಏಳು ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದ್ದರು. ಬ್ಯಾಡ್ಮಿಂಟನ್‌ನಿಂದಾಗಿ ಪರಸ್ಪರ ಹತ್ತಿರವಾದ ಜೋಡಿ ಇವರದ್ದಾಗಿತ್ತು. ಸೈನಾ 10 ವರ್ಷದವಳಿದ್ದಾಗ ಮೊದಲ ಬಾರಿಗೆ ಪರುಪಳ್ಳಿ ಕಶ್ಯಪ್‌ರನ್ನು ಭೇಟಿಯಾಗಿದ್ದಳು ಕ್ರಮೇಣ ಅವರ ಸ್ನೇಹ ಬೆಳೆದು ಪ್ರೀತಿಯಾಗಿ ವಿವಾಹವಾಗಿದ್ದರು.

ಈ ಸ್ಟಾರ್ ಜೋಡಿಯ ಮೊದಲ ಭೇಟಿ 1997 ರಲ್ಲಿ ಬ್ಯಾಡ್ಮಿಂಟನ್ ತರಬೇತಿ ಶಿಬಿರದ ಸಮಯದಲ್ಲಿ ಆಯ್ತು. ಆಗ ಇಬ್ಬರೂ ತುಂಬಾ ಚಿಕ್ಕವರಿದ್ದರು. 2002 ರಲ್ಲಿ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಇಬ್ಬರೂ ತರಬೇತಿ ಆರಂಭಿಸಿದರು. ಆದ ಅವರ ಮಧ್ಯೆ ಸ್ನೇಹ ಬೆಳಯಿತು. 2010 ರ ಏಷ್ಯನ್ ಗೇಮ್ಸ್ ಸಮಯದಲ್ಲಿ ಕಶ್ಯಪ್‌ಗೆ ಗಂಭೀರ ಗಾಯಗಳಾಗಿದ್ದವು. ಆ ಸಮಯದಲ್ಲಿ ಸೈನಾಗೆ ಇವರೇ ತನ್ನ ಜೀವನ ಸಂಗಾತಿ ಎಂಬ ಅರಿವು ಮೂಡಿತಂತೆ. ಇಬ್ಬರೂ 14 ವರ್ಷಗಳ ಕಾಲ ರಹಸ್ಯವಾಗಿ ಪರಸ್ಪರ ಡೇಟ್ ಮಾಡಿ ಬಳಿಕ ಮದುವೆಯಾದರು. ಸೈನಾ ನೆಹ್ವಾಲ್ ಮತ್ತು ಕಶ್ಯಪ್ 14 ಡಿಸೆಂಬರ್ 2018 ರಂದು ವಿವಾಹವಾದರು. 7 ವರ್ಷಗಳ ಕಾಲ ಇಬ್ಬರೂ ಸಂತೋಷದಿಂದ ಜೀವನ ನಡೆಸಿ ಬೇರಾಗಲು ಮುಂದಾಗಿದ್ದರು ಆದರೆ ಈಗ ಒಂದಾಗುತ್ತಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.

View post on Instagram