ಕೆಟ್ಟ ಕಮೆಂಟ್ ಹಾಕಿ ಕೆಟ್ಟ, ಬಾಡಿಗೆದಾರ ಬೇರೊಬ್ಬಳ ಜೊತೆಗಿರುವ ವಿಡಿಯೋವನ್ನು ಆತನ ಪತ್ನಿಗೆ ಕಳಿಸಿದ ಮಾಲಕಿ, ಪರಿಣಾಮ ಸಂಸಾರ ಮುರಿದು ಬಿದ್ದಿದೆ. ಇತ್ತ ಈತ ಕೋರ್ಟ್ ಮೆಟ್ಟಿಲೇರಿ ಹೋರಾಟ ಶುರುಮಾಡಿದ್ದಾನೆ. ಇವೆಲ್ಲವೂ ಒಂದು ಕಮೆಂಟ್‌ನಿಂದ.
ಕಮೆಂಟ್ ಮಾಡುವುದು ಭಾರತೀಯರಿಗೆ ಹೊಸದಾಗಿ ಹೇಳಿಕೊಡಬೇಕಿಲ್ಲ. ಅದು ದಾರಿಯಲ್ಲಿರಬಹುದು ಅಥವಾ ಸೋಶಿಯಲ್ ಮೀಡಿಯಾದಲ್ಲಿರಬಹುದು. ತಮಗೆ ಅನಿಸಿದ್ದು ಕಮೆಂಟ್ ಮಾಡುತ್ತಾರೆ. ಕಮೆಂಟ್ ಮಾಡುವಾಗ ಸಭ್ಯತೆ ಸೇರಿದಂತೆ ಇತರ ಯಾವುದನ್ನು ಗಮನಿಸುವುದಿಲ್ಲ. ಕೆಟ್ಟ ಕಮೆಂಟ್ ಮಾಡಿ ಹಲವರು ಕರ್ನಾಟಕ ಸೇರಿದಂತೆ ದೇಶದಲ್ಲಿ ಪೊಲೀಸ್ ಠಾಣೆ,ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇದೀಗ ಕೆಟ್ಟ ಕಮೆಂಟ್ ಮಾಡಿ ಇಡೀ ಸಂಸಾರವೇ ಬೀದಿ ಬಂದ ಘಟನೆ ನಡೆದಿದೆ. ಮನೆ ಬಾಡಿಗೆ ಪಡೆದ ವ್ಯಕ್ತಿ ಕೆಲ ತಿಂಗಳ ಬಳಿಕ ಮನೆ ತೊರೆದಿದ್ದಾನೆ. ಮನೆ ತೊರೆದ ಬಳಿಕ ಕೆಟ್ಟ ಕಮೆಂಟ್ ಮಾಡಿದ್ದಾನೆ. ಇಷ್ಟೇ ನೋಡಿ ಮನೆ ಮಾಲಕಿ ಕೆರಳಿ ಕೆಂಡವಾಗಿದ್ದಾಳೆ. ಸಿಸಿಟಿವಿ ಹುಡುಕಿ ಬಾಡಿಗಾರನ ಪತ್ನಿ ಇಲ್ಲದ ವೇಳೆ ಬೇರೊಬ್ಬ ಯುವತಿ ಜೊತೆ ಸರಸವಾಡುತ್ತಿರುವ ವಿಡಿಯೋವನ್ನು ಆತನ ಪತ್ನಿಗೆ ಕಳುಹಿಸಿದ ಘಟನೆ ನಡೆದಿದೆ.
ಬಾಡಿಗೆ ಮನೆ ಬುಕ್ ಮಾಡಿದ್ದ ವ್ಯಕ್ತಿ
Airbnb(ಏರ್‌ಬಿಎನ್‌ಬಿ) ಅಮೆರಿನ್ ವೆಕೇಶನ್ ರೆಂಟಲ್ ಕಂಪನಿ. ಹೋಮ್ ಸ್ಟೇ, ಬಾಡಿಗೆ ಮನೆ ಸೇರಿದಂತೆ ಒಂದು ದಿನ ಅಥವಾ ಸುದೀರ್ಘ ದಿನಗಳಿಗೆ ಬಾಡಿಗೆ ಮನೆ ನೀಡುವ ಪ್ಲಾಟ್‌ಫಾರ್ಮ್. ಇದು ಅಗ್ರೇಗೇಟರ್ ಪ್ಲಾಟ್‌ಫಾರ್ಮ್. ಇದರಲ್ಲಿ ನೋಂದಣಿ ಮಾಡಿಕೊಂಡು ಹಲವರು ತಮ್ಮ ಮನೆಗಳನ್ನು, ಹೆಚ್ಚುವರಿ ಕೊಠಡಿಗಳ್ನು ಬಾಡಿಗೆ ನೀಡಿ ಆದಾಯಗಳಿಸುತ್ತಾರೆ. ಹೀಗೆ Airbnb ಮೂಲಕ ವ್ಯಕ್ತಿಯೊಬ್ಬ ಕೆಲ ತಿಂಗಳಿಗೆ ಬಾಡಿಗೆ ಮನೆ ಬುಕ್ ಮಾಡಿದ್ದಾನೆ.
ಕೆಟ್ಟ ಕಮೆಂಟ್
ಬುಕ್ ಮಾಡಿದ ಮನೆಗೆ ತನ್ನ ಪತ್ನಿ ಜೊತೆ ತೆರಳಿದ್ದಾನೆ. ಕೆಲ ತಿಂಗಳ ಕಾಲ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕೆಲಸ, ಪತ್ನಿ ಕುಟುಂಬ ಹೀಗೆ ಕೆಲ ತಿಂಗಳು ಈ ಮನೆಯಲ್ಲಿ ಕಳೆದಿದ್ದ. ಬಳಿಕ ಮನೆ ತೊರೆದಿದ್ದಾನೆ. ಆದರೆ ಮನೆ ತೊರೆದ ಬಳಿಕ Airbnb ವೆಬ್‌ಸೈಟ್‌ನಲ್ಲಿ ತಾನು ವಾಸವಿದ್ದ ಬಾಡಿಗೆ ಮನೆಯ ಸೌಲಭ್ಯ, ಸ್ಥಳವಕಾಶ ಸೇರಿದಂತೆ ಕೆಲ ಸೌಕರ್ಯಗಳ ಕುರಿತು ಕೆಟ್ಟ ಕಮೆಂಟ್ ಮಾಡಿದ್ದಾನೆ. ಈ ಮನೆ ಉಸಿರುಗಟ್ಟುವ ವಾತಾವರಣದಿಂದ ಕೂಡಿದೆ. ಹೀಗಾಗಿ ತನಗೆ ಹಣ ವಾಪಸ್ ನೀಡಬೇಕು ಎಂದು ನೆಗಟೀವ್ ಕಮೆಂಟ್ ಹಾಕಿದ್ದ. ಈ ಮನೆ ವಾಸಿಸಲು ಯೋಗ್ಯವಲ್ಲ, ಒಂದು ಗಂಟೆ ಇರಲು ಯೋಗ್ಯವಲ್ಲ ಎಂದಿದ್ದ.
ಕೆಟ್ಟ ಕಮೆಂಟ್ ಕಾರಣದಿಂದ ಮನೆ ಮಾಲಕಿಗೆ Airbnb ಕಡೆಯಿಂದ ಕೆಲ ಕಡಿತಗಳು ಆಗಿದೆ. ಜೊತೆಗೆ ಮರು ನೋಂದಣಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತ ಮನೆ ಮಾಲಕಿಗೆ ಕರೆ ಮಾಡಿ ಹಣ ವಾಪಾಸ್ ನೀಡುವಂತೆ ಧಮ್ಕಿ ಹಾಕಿದ್ದಾನೆ. ಕಮೆಂಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದರೂ ಈತ ಕೇಳಲಿಲ್ಲ. ಇದರಿಂದ ಮನೆಯ ಮಾಲಕಿ ಕೆರಳಿ ಕೆಂಡವಾಗಿದ್ದಾಳೆ. ಬಾಡಿಗೆ ಮನೆಯತ್ತ ಮರಳಿದ ಮನೆಯ ಮಾಲಕಿ ಸಿಸಿಟಿವಿ ದೃಶ್ಯ ತೆಗೆದು ಪರಿಶೀಲಿಸಲು ಆರಂಭಿಸಿದ್ದಳೆ. ಕೆಲ ದಿನಗಳಿಂದ ಸಿಸಿಟಿವಿ ಪರಿಶೀಳನೆ ಆರಂಭಿಸಿದ್ದಾಳೆ. ಮನೆಯ ಮಂಭಾಗ, ಹಿಂಭಾಗ ಸೇರಿದಂತೆ ಕೆಲೆವೆಡೆ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳ ಪರಿಶೀಲಿಸುತ್ತದ ವೇಳೆ ಇದೇ ಬಾಡಿಗೆದಾರನ ಮನೆಗೆ ಪತ್ನಿ ಇಲ್ಲದ ವೇಳೆ ಬೇರೊಬ್ಬ ಯುವತಿ ಆಗಮಿಸಿರುವುದು ಪತ್ತೆಯಾಗಿದೆ. ಈ ದೃಶ್ಯಗಳನ್ನು ಮತ್ತಷ್ಟು ಪರಿಶೀಲಿಸಿದ್ದಾಳೆ. ಈ ವೇಳೆ ಯುವತಿ ಜೊತೆಗೆ ಸರಸದಲ್ಲಿರುವುದು, ತಬ್ಬಿಕೊಂಡು ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿದೆ.
ಈ ದೃಶ್ಯಗಳನ್ನು ಕಟ್ ಮಾಡಿ ನೇರವಾಗಿ ಬಾಡಿಗೆದಾರನ ಪತ್ನಿಗೆ ಮಾಲಕಿ ಕಳುಹಿಸಿದ್ದಾಳೆ. ಇಷ್ಟೇ ನೋಡಿ. ಪತ್ನಿ ವಿಡಿಯೋ ನೋಡಿ ಉಗ್ರ ಸ್ವರೂಪ ತಾಳಿದ್ದಾಳೆ. ತಾನು ಮನೆಯಲ್ಲಿ ಇಲ್ಲದ ವೇಳೆ ಬೇರೊಬ್ಬ ಯುವತಿ ಜೊತೆ ಚಕ್ಕಂದವಾಡಿದ್ದಿ ಎಂದು ಪತ್ನಿ ರೇಗಾಡಿದ್ದಾಳೆ. ಮನೆಯಿಂದ ಹೊರಗೆ ಹಾಕಿದ್ದಾಳೆ. ಒಂದು ಕಮೆಂಟ್ ಹಾಕಿದ ಈತ ಬೀದಿಗೆ ಬಿದ್ದಿದ್ದಾನೆ. ಇದೀಗ ಬಾಡಿಗೆ ಮನೆಯ ಮಾಲಕಿ ವಿರುದ್ದ ಈತ ಕೋರ್ಟ್ ಮೆಟ್ಟಿಲೇರಿದ್ದಾನೆ. ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾನೆ.


