Asianet Suvarna News Asianet Suvarna News

17 ವರ್ಷದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌!

ಭಾರತೀಯ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಮಾಸ್ಟರ್ ಬ್ಲಾಸ್ಟರ್‌ ಅಂತ ಕರೆಯಲ್ಪಡೋ ಈ ಕ್ರಿಕೆಟಿಗ  17 ವರ್ಷದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ರು ಅನ್ನೋದು ನಿಮ್ಗೆ ಗೊತ್ತಿದ್ಯಾ?

Sachin Tendulkar Fell In Love With Anjali Tendulkar When He Was 17 Vin
Author
First Published Apr 25, 2024, 11:51 AM IST | Last Updated Apr 25, 2024, 12:29 PM IST

ಭಾರತೀಯ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಏಪ್ರಿಲ್ 24, 1973 ರಂದು ಬಾಂಬೆಯ ದಾದರ್‌ನಲ್ಲಿ ಮರಾಠಿ ಕಾದಂಬರಿಕಾರ ಮತ್ತು ಕವಿ ರಮೇಶ್ ತೆಂಡೂಲ್ಕರ್ ಮತ್ತು ಅವರ ರಜನಿ ದಂಪತಿಗೆ ಜನಿಸಿದ ಸಚಿನ್ ಚಿಕ್ಕಂದಿನಲ್ಲೇ ಕ್ರಿಕೆಟಿಗನಾಗಲು ಬಯಸಿದ್ದರು. 16ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಅಂದಿನಿಂದ, 'ಮಾಸ್ಟರ್ ಬ್ಲಾಸ್ಟರ್' ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿದ್ದಾರೆ.

1995ರಲ್ಲಿ, ಸಚಿನ್ ತೆಂಡೂಲ್ಕರ್, ಅಂಜಲಿ ಮೆಹ್ತಾರನ್ನು ವಿವಾಹವಾದರು. 1997ರಲ್ಲಿ, ಸಚಿನ್ ಮತ್ತು ಅಂಜಲಿ ಅವರ ಮೊದಲ ಮಗು ಸಾರಾ ತೆಂಡೂಲ್ಕರ್ ಮತ್ತು ಅವರ ಮಗ ಅರ್ಜುನ್ ತೆಂಡೂಲ್ಕರ್ 1999ರಲ್ಲಿ ಜನಿಸಿದರು. ಅಂಜಲಿ ಯಾವಾಗಲೂ ಸಚಿನ್ ಜೀವನದ ಎಲ್ಲಾ ಏರಿಳಿತಗಳಲ್ಲಿ ಭಾಗಿಯಾಗಿದ್ದರು. ಸಚಿನ್‌ಗಿಂತ ಆರು ವರ್ಷ ದೊಡ್ಡವರಾಗಿದ್ದರೂ ಅವರ ಸಂಬಂಧಕ್ಕೆ ವಯಸ್ಸು ಅಡ್ಡಿಯಾಗಲಿಲ್ಲ.

 ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ 51ನೇ ಜನ್ಮದಿನದ ಸಂಭ್ರಮ; ಹರಿದು ಬಂತು ಶುಭಾಶಯಗಳ ಮಹಾಪೂರ

ಏರ್‌ಪೋರ್ಟ್‌ನಲ್ಲಿ ಸಚಿನ್ ಹಿಂದೆ ಓಡಿದ್ದ ಅಂಜಲಿ
ಸಂದರ್ಶನವೊಂದರಲ್ಲಿ ಅಂಜಲಿ ತಾನು ಹೇಗೆ ಸಚಿನ್ ತೆಂಡುಲ್ಕರ್ ಪ್ರೀತಿಯಲ್ಲಿ ಬಿದ್ದೆ ಎಂಬುದನ್ನು ಹೇಳಿಕೊಂಡಿದ್ದರು. 'ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇರಲಿಲ್ಲ. ಆದರೆ ಸಚಿನ್ ತುಂಬಾ ಮುದ್ದಾಗಿದ್ದಾನೆ ಎಂದು ನನಗೆ ಅನಿಸಿತು. ಆ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ವೀಕ್ಷಣಾ ಗ್ಯಾಲರಿ ಇತ್ತು. ನಾನು ಇಂಗ್ಲೆಂಡ್‌ನಿಂದ ಬಂದಿಳಿದ ನನ್ನ ತಾಯಿಯನ್ನು ಹುಡುಕುತ್ತಿದ್ದೆ. ಆದರೆ ಸಚಿನ್‌ನ್ನು ನೋಡಿದ ತಕ್ಷಣ ನಾನು ಸಚಿನ್‌ ಎಂದು ಕಿರುಚುತ್ತಾ ಅವನ ಹಿಂದೆ ಓಡಿದೆ. ಸಚಿನ್ ತುಂಬಾ ಮುಜುಗರಕ್ಕೊಳಗಾದರು' ಎಂದು ಅಂಜಲಿ ತಿಳಿಸಿದ್ದಾರೆ.

'ನಾನು ವೈದ್ಯಕೀಯ ಓದುತ್ತಿದ್ದೆ. ನನ್ನೊಂದಿಗೆ ಓದುತ್ತಿದ್ದ ಸ್ನೇಹಿತನೊಬ್ಬನೂ ಕ್ರಿಕೆಟ್ ಆಡುತ್ತಿದ್ದನು. ನಾನು ಅವನ ಬಳಿ ಹೇಗಾದರೂ ಸಚಿನ್ ನಂಬರ್ ಪಡೆಯಲು ತಿಳಿಸಿದೆ. ಆ ನಂತರ ಸಚಿನ್‌ಗೆ ಕರೆ ಮಾಡಿದೆ. ಹಲವಾರು ಬಾರಿ ಕಾಲ್ ಮಾಡಿದಾಗಲೂ ಸಚಿನ್ ಕಾಲ್‌ ಅಟೆಂಡ್ ಮಾಡಲ್ಲಿಲ್ಲ. ಒಂದು ಸಾರಿ ಕಾಲ್ ಮಾಡಿದಾಗ ಸ್ವತಃ ಸಚಿನ್ ಅಟೆಂಡ್ ಮಾಡಿದರು. ನಾನು ಏರ್‌ಪೋರ್ಟ್‌ನಲ್ಲಿ ಭೇಟಿಯಾದ ಹುಡುಗಿ ಎಂದು ಪರಿಚಯಿಸಿದೆ. ಸಚಿನ್‌ ನೀವು ನನಗೆ ನೆನಪಿದ್ದೀರಿ ಎಂದು ಹೇಳಿದರು. ಮಾತ್ರವಲ್ಲ ನೀವಂದು ಆರೆಂಜ್ ಟೀ ಶರ್ಟ್ ಧರಿಸಿದ್ದಿರಲ್ಲ ಎಂದು ನೆನಪಿಸಿಕೊಂಡರು' ಎಂದು ಅಂಜಲಿ ಹೇಳಿದ್ದಾರೆ.

ವೈದ್ಯಕೀಯದಿಂದ ಮಾಡೆಲಿಂಗ್‌ವರೆಗೆ.. ಬಾಲಿವುಡ್‌ಗೂ ಬರ್ತಾರಾ ಸಾರಾ ತೆಂಡೂಲ್ಕರ್?

ವೇಷ ಬದಲಿಸಿ ಅಂಜಲಿ ಜೊತೆ ಡೇಟಿಂಗ್ ಹೋಗಿದ್ದ ಸಚಿನ್‌
ಸಚಿನ್ ಅತ್ಯಂತ ಜನಪ್ರಿಯ ಕ್ರಿಕೆಟಿಗನಾಗಿದ್ದರಿಂದ, ಅಂಜಲಿಯೊಂದಿಗೆ ಡೇಟ್‌ಗೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ನಿಯತಕಾಲಿಕವೊಂದಕ್ಕೆ ಸಂದರ್ಶನ ನೀಡುತ್ತಿರುವಾಗ, ಅಂಜಲಿ ತಮ್ಮ ಡೇಟಿಂಗ್ ದಿನಗಳ ಘಟನೆಯನ್ನು ನೆನಪಿಸಿಕೊಂಡಿದ್ದರು. ಒಂದು ಬಾರಿ ಸಚಿನ್ ಹಾಗೂ ಅಂಜಲಿ ಸಿನಿಮಾ ನೋಡಲು ಹೋಗಿದ್ದರು. ಜನರ ಕಣ್ಣಿಗೆ ಬೀಳುವುದನ್ನು ತಪ್ಪಿಸಲು ಸಚಿನ್‌ ವೇಷ ಬದಲಿಸಿ ಹೋಗಿದ್ದರು. ಫೇಕ್ ಗಡ್ಡ, ಮೀಸೆ ಧರಿಸಿದ್ದರು. ಆದರೆ ಸಿನಿಮಾ ನೋಡುವ ಮಧ್ಯೆ ಇದು ಕಳಚಿಬಿತ್ತು. ಅಭಿಮಾನಿಗಳು ಸುತ್ತುವರಿದ ಕಾರಣ ನಾನು ಸಚಿನ್ ಇಬ್ಬರೂ ಅರ್ಧದಲ್ಲೇ ಸಿನಿಮಾ ಬಿಟ್ಟು ಬರಬೇಕಾಯಿತು' ಎಂದು ಅಂಜಲಿ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ನಡುವೆಯಿರುವ ವಯಸ್ಸಿನ ಅಂತರೆವೆಷ್ಟು?
ಅಂಜಲಿ, ಸಚಿನ್ ತೆಂಡೂಲ್ಕರ್‌ಗಿಂತ ಆರು ವರ್ಷ ಹಿರಿಯರು. ಆದರೆ ಇವರಿಬ್ಬರ ನಡುವಿನ ವೈವಾಹಿಕ ಜೀವನದ ಮಧ್ಯೆ ಮಯಸ್ಸು ಅಡ್ಡಿಯಾಗಿಲ್ಲ. ದಂಪತಿಗಳು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ಮೇ 24,1995ರಂದು ವಿವಾಹವಾದರು. ಸಚಿನ್‌ನ್ನು ಮದುವೆಯಾಗುವ ಮೊದಲು ಅಂಜಲಿಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. 

ಆದರೆ ಆ ನಂತರ ಅಂಜಲಿ ಕ್ರಿಕೆಟ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿದರು. ಅಂಜಲಿ ತೆಂಡೂಲ್ಕರ್ ತಮ್ಮ ವೃತ್ತಿಜೀವನವನ್ನು ಸಚಿನ್ ತೆಂಡೂಲ್ಕರ್ ಮತ್ತು ಮಕ್ಕಳಿಗಾಗಿ ತೊರೆದರು. ಸಂದರ್ಶನವೊಂದರಲ್ಲಿ ಅಂಜಲಿ, ವೈವಾಹಿಕ ಜೀವನಕ್ಕಾಗಿ ಕುಟುಂಬವನ್ನು ತೊರೆದಿರುವುದಕ್ಕೆ ಯಾವುದೇ ರೀತಿಯ ಬೇಸರವಿಲ್ಲ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios