Asianet Suvarna News Asianet Suvarna News

Robert De Niro: 79ರ ವಯಸ್ಸಿನಲ್ಲಿ ತಂದೆಯಾದ ಹೀರೋ ರಾಬರ್ಟ್‌ ಡಿ ನೀರೋ! ಏನಿದರ ಗುಟ್ಟು?

ಹಾಲಿವುಡ್‌ನ ಎವರ್‌ಗ್ರೀನ್‌ ಹೀರೋ ರಾಬರ್ಟ್‌ ಡಿ ನೀರೋ (Robert De Niro) ಮೊನ್ನೆ ಮೊನ್ನೆ ಇನ್ನೊಂದು ಮಗುವಿನ ತಂದೆಯಾಗಿದ್ದಾರೆ. ಇದರಲ್ಲೇನು ವಿಶೇಷ ಅಂದಿರಾ? ಅವರಿಗೀಗ 79 ವರ್ಷ ವಯಸ್ಸು. ಅದೇ ವಿಶೇಷ. ಈ ವಯಸ್ಸಿನಲ್ಲೂ ಬೀಜ ಬಿತ್ತುವ, ಬಿತ್ತಿದ ಬೀಜ ಮೊಳಕೆಯೊಡೆಯುವಂತೆ ಮಾಡುವುದರ ಗುಟ್ಟೇನು?

 

Robert De Niro becomes father in his 79, can you
Author
First Published May 12, 2023, 6:49 PM IST

ರಾಬರ್ಟ್ ಡಿ ನೀರೋ (Robert De Niro) ಅವರಿಗೆ ಇದು ಏಳನೇ ಮಗು. ಆದರೆ ಈ ಮಗುವಿನ ಲಿಂಗ ಯಾವುದು, ಮಗುವಿನ ತಾಯಿ ಯಾರು ಎಂಬುದನ್ನೆಲ್ಲಾ ರಾಬರ್ಟ್‌ ಹೇಳಿಲ್ಲ. ರಾಬರ್ಟ್‌ ಮೂರು ಮದುವೆಯಾಗಿದ್ದಾರೆ. ಮೂವರೊಂದಿಗೆ ಡೈವೋರ್ಸ್‌ (Divorce) ಆಗಿದ್ದಾರೆ. ಈಗ ತಮಗೆ ಬೇಕೆನಿಸುವ ಹುಡುಗಿಯರ ಜತೆ ಜಾಲಿಯಾಗಿರುತ್ತಾರೆ.

ಅವರ ಮೊದಲ ಪತ್ನಿ ಡಯಾಹ್ನ್ನೆ ಅಬಾಟ್. ಇವರಲ್ಲಿ ಮಗ ರಾಫೆಲ್ (46) ಮತ್ತು ಮಗಳು ಡ್ರೆನಾ. ಎರಡನೇ ಹೆಂಡತಿ ರೂಪದರ್ಶಿ ಮತ್ತು ನಟಿ ಟೌಕಿ ಸ್ಮಿತ್. ಅವರ ಜತೆ 1995ರಲ್ಲಿ ಅವಳಿ ಹುಡುಗರು. ಜೂಲಿಯನ್ ಮತ್ತು ಆರನ್. ಅವರೊಂದಿಗೆ ಡೈವೋರ್ಸ್‌ ಆಗಿ 27 ವರ್ಷ. ಮೂರನೇ ಪತ್ನಿ ಗ್ರೇಸ್ ಹೈಟವರ್. ಇವರ ಜೊತೆಗೆ ಮಗಳು ಹೆಲೆನ್ ಗ್ರೇಸ್ ಮತ್ತು ಮಗ ಎಲಿಯಟ್.

ಡಿ ನಿರೋ ಅವರ ಏಳನೇ ಮಗುವಿನ ಸುದ್ದಿಯ ಅವರ ವಯಸ್ಸನ್ನು ಗಮನಿಸಿದರೆ ಆಶ್ಚರ್ಯವೇ. ಆದರೂ ಇತ್ತೀಚೆಗೆ ಕೆಲವರು ಎಪ್ಪತ್ತು, ಎಂಬತ್ತರ ವಯಸ್ಸಿನಲ್ಲಿಯೂ ತಂದೆಯಾಗುತ್ತಿರುವುದನ್ನು ಗಮನಿಸಬಹುದು. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವೂ ಆಗುತ್ತದೆ. ಆದರೆ ಇದು ಅಸಾಧ್ಯವೇನಲ್ಲ. ಪುರುಷರು ನಿಜಕ್ಕೂ 80-90 ವಯಸ್ಸಿನವರೆಗೂ ತಂದೆಯಾಗಲು ಸಾಧ್ಯ. ಅದಕ್ಕಿಂತಲೂ ಮುಖ್ಯವಾಗಿ, ಆರೋಗ್ಯ ಸರಿಯಾಗಿ ಇಟ್ಟುಕೊಂಡರೆ ಎಲ್ಲ ಪುರುಷರೂ 80ನೇ ವಯಸ್ಸಿನವರೆಗೂ ಸೆಕ್ಸ್ ಅನ್ನು ಅನುಭವಿಸಬಹುದು. ಅಮೆರಿಕದ ಒಂದು ಅಧ್ಯಯನದ ಪ್ರಕಾರ 75ರಿಂದ 85 ವರ್ಷ ವಯಸ್ಸಿನ 40% ಪುರುಷರು ಲೈಂಗಿಕವಾಗಿ ಸಕ್ರಿಯ (male virility) ರಾಗಿರುತ್ತಾರಂತೆ.

ಇದಕ್ಕೇನು ಮಾಡಬೇಕು? ವೈದ್ಯರು ಕೆಲವು ಅಂಶಗಳನ್ನು ಹೇಳುತ್ತಾರೆ:

- ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ನೀವು ನಿಮ್ಮ ಎಂಬತ್ತರ ವಯಸ್ಸಿನಲ್ಲೂ ಸೆಕ್ಸನ್ನು ಎಂಜಾಯ್ ಮಾಡಬೇಕೆಂದರೆ ಈಗಿನಿಂದಲೇ ಆರೋಗ್ಯದ ಕಡೆ ಗಮನ ಹರಿಸಬೇಕು.
- ಡಯಾಬಿಟಿಸ್ ಮತ್ತು ಹೃದಯದ ಕಾಯಿಲೆಗಳನ್ನು ದೂರವಿಡಬೇಕು. ಇವೆರಡೂ ನಿಮ್ಮ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಮಂದಗೊಳಿಸುತ್ತವೆ. ಹೃದಯದ ಕಾಯಿಲೆ ಇದ್ದರೆ ಶಿಶ್ನ ಸರಿಯಾಗಿ ನಿಮಿರದು. ಇದರಿಂದ ಲೈಂಗಿಕ ಆನಂದ ಕಷ್ಟ.
- ಟೆಸ್ಟೋಸ್ಟಿರಾನ್ ಹಾರ್ಮೋನ್‌ನ ಸ್ರಾವ ಚೆನ್ನಾಗಿರಬೇಕು. ಇದಕ್ಕೆ ಸರಿಯಾದ ಸಮತೂಕದ ಆಹಾರ ಮತ್ತು ಅಷ್ಟೇ ಪ್ರಮಾಣದ ನಿಯಮಿತ ವ್ಯಾಯಾಮ ಮಾಡಲೇಬೇಕು. ವ್ಯಾಯಾಮ ಕಡೆಗಣಿಸುವಂತಿಲ್ಲ. ದೇಹದಲ್ಲಿ ಬೊಜ್ಜು ಶೇಖರವಾದರೆ ಟೆಸ್ಟೋಸ್ಟಿರಾನ್ ಮಟ್ಟ ಕುಸಿಯುತ್ತದೆ.  

- ಮಾನಸಿಕ ಆರೋಗ್ಯ ಚೆನ್ನಾಗಿರಬೇಕು. ಖಿನ್ನತೆ, ಚಿಂತೆ ಇತ್ಯಾದಿಗಳನ್ನು ದೂರವಿಡಬೇಕು. ದಿನಕ್ಕೆ ಒಂದು ಗಂಟೆಯಾದರೂ ಮನಸ್ಸನ್ನು ಆನಂದವಾಗಿಡುವ ಚಟುವಟಿಕೆಯನ್ನು ಇಟ್ಟುಕೊಳ್ಳಬೇಕು.
- ಮುಖ್ಯವಾಗಿ, ಪ್ರೀತಿಸುವ ಸಂಗಾತಿ ಜೊತೆಗಿರಬೇಕು. ಆಕೆ ಕೊರಡನ್ನೂ ಕೊನರಿಸಬಲ್ಲಳು. ನೀವೂ ಅಷ್ಟೇ ಚೆನ್ನಾಗಿ ಆಕೆಯನ್ನು ನೋಡಿಕೊಳ್ಳಬೇಕು.    

ಹಾಗೆಯೇ ವಯಸ್ಸಾದ ಮೇಲೆ ತಂದುಯಾಗುವುದು ಕೂಡ ಗರ್ಭಧಾರಣೆಯ ಆರೋಗ್ಯ, ಶಿಶುಗಳು ಮತ್ತು ತಾಯಿಯ ಮೇಲೂ ಪರಿಣಾಮ ಬೀರಬಹುದು. ವೃದ್ಧಾಪ್ಯದಲ್ಲಿ ತಂದೆಯಾಗುವುದರ ಬಗ್ಗೆ ಪುರುಷರು ಗಮನಿಸಬೇಕಾದ ವಿಚಾರಗಳು ಇಲ್ಲಿವೆ:

ಪುರುಷರ ಜೈವಿಕ ಗಡಿಯಾರ 50ನೇ ವರ್ಷದಿಂದ ದುರ್ಬಲವಾಗಲು ಆರಂಭಿಸುತ್ತದೆ. ಅವರ ಫಲವತ್ತತೆಯ ಮಟ್ಟ 50 ವರ್ಷದ ಬಳಿಕ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಲಂಡನ್‌ನಲ್ಲಿ ನಡೆದ ಹೊಸ ಅಧ್ಯಯನದ ಪ್ರಕಾರ ಪುರುಷ 50 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದರೆ, ಜೀವಂತ ಜನನದ ಸಾಧ್ಯತೆ 33 ಪ್ರತಿಶತದಷ್ಟು ಕಡಿಮೆಯಂತೆ. ಅಧ್ಯಯನದ ಪ್ರಕಾರ, "ಪುರುಷ ಫಲವತ್ತತೆ ಎಂದೆಂದಿಗೂ ಇರುತ್ತದೆ" ಎಂಬುದು ಸುಳ್ಳು. ಸೆಲೆಬ್ರಿಟಿಗಳು 60ರ ನಂತರ ತಂದೆಯಾಗುವುದು ಅಪರೂಪದ ಸುದ್ದಿಯಷ್ಟೆ. ಪುರುಷರು ಸಹ ತಂದೆಯಾಗುವುದನ್ನು ಮುಂದೂಡಬಾರದು.

2017ರಲ್ಲಿ ಬಿಡುಗಡೆಯಾದ ಲಂಡನ್‌ನ ಮತ್ತೊಂದು ಅಧ್ಯಯನದ ಪ್ರಕಾರ ವಯಸ್ಸಾದ ಬಳಿಕ ಮಕ್ಕಳನ್ನು ಹೊಂದುವುದರಿಂದಲೂ ಪ್ರಯೋಜನಗಳಿವೆ. ಕಿಂಗ್ಸ್ ಕಾಲೇಜ್ ಲಂಡನ್‌ನ ಸಂಶೋಧನೆಯ ಪ್ರಕಾರ ವಯಸ್ಸಾದ ತಂದೆಯಿಂದ ಬಂದ ಮಕ್ಕಳು ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ; ಕಡಿಮೆ ಸ್ವಯಂ ಪ್ರಜ್ಞೆ ಹೊಂದಿರುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಅಧ್ಯಯನ ಮಾಡುವಲ್ಲಿ ವಿಶೇಷ ಆಸಕ್ತಿ ತೋರುತ್ತಾರೆ. ಇದಕ್ಕೆ ಬೇರೆ ಕಾರಣಗಳೂ ಇರಬಹುದು- ಅಂದರೆ ವಯಸ್ಸಾದ ಅಪ್ಪಂದಿರು ಹೆಚ್ಚಿನ ಸಾಮಾಜಿಕ ಆರ್ಥಿಕ ಸ್ಥಾನ ಹೊಂದಿರುತ್ತಾರೆ. ಇದು ಮಕ್ಕಳಿಗೆ ಉತ್ತಮ ಶಾಲಾ ಶಿಕ್ಷಣ ಪಡೆಯಲು ಹಾಗೂ ಹೆಚ್ಚು ಶ್ರೀಮಂತ ವಾತಾವರಣದಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ.

Dream Meaning: ಸೆಕ್ಸ್ ಬಗ್ಗೆ ಪದೇ ಪದೇ ನಿಮಗೂ ಬೀಳುತ್ತಾ ಕನಸು?

ವಯಸ್ಸಾದ ತಂದೆ ತಾಯಿ ದೈಹಿಕವಾಗಿ ಮಕ್ಕಳೊಂದಿಗೆ ಇರಲು ಸಾಧ್ಯವಿಲ್ಲ ಎಂಬುದು ಚಿಂತೆಗೆ ಕಾರಣವಾಗುವ ಇನ್ನೊಂದು ಅಂಶ. ಆದರೆ ಇತ್ತೀಚಿನ ಬೆಳವಣಿಗೆಗಳು ಹಿಂದಿನ ತಲೆಮಾರಿನ ಹಿರಿಯರಿಗಿಂತ ಹೆಚ್ಚಿನ ಕಾಲವನ್ನು ಇಂದಿನ ವಯಸ್ಕರು ಮಕ್ಕಳೊಂದಿಗೆ ಹೊಂದುತ್ತಾರಂತೆ.

ವಯಸ್ಸು ಬುದ್ಧಿವಂತಿಕೆ ಮತ್ತು ಪರಿಪಕ್ವತೆಯನ್ನು ತರುತ್ತದೆ. ಹಾಗೆಯೇ ವಯಸ್ಸಾದ ತಂದೆಯರು ತಮ್ಮ ಮಕ್ಕಳಿಗೆ ಮಹತ್ವದ ಅವಕಾಶಗಳನ್ನು ಕೊಡಿಸಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಆನುವಂಶಿಕ ಅಸಹಜತೆಗಳು ಬಾಧಿಸಬಹುದು.

ವಯಸ್ಸಾದ ಪುರುಷರು ಹೆಚ್ಚಿನ ಜೀವನ ಅನುಭವ, ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಪರಿಪಕ್ವತೆಯನ್ನು ಹೊಂದಿರಬಹುದು. ಇದು ಅವರಿಗೆ ಉತ್ತಮ ಪೋಷಕರಾಗಲು ಸಹಾಯ ಮಾಡುತ್ತದೆ. ಮಕ್ಕಳೊಂದಿಗೆ ಉತ್ತಮ ಸಂವಹನ ನಡೆಸಲು, ಮಕ್ಕಳೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಲು ನೆರವಾಗುತ್ತದೆ.

ಡಿ ನಿರೋ 79 ಆಗಿದ್ದರೂ ಒಳ್ಳೊಳ್ಳೆಯ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆಯುತ್ತಲೇ ಇದ್ದಾರೆ. "ನಾನು ನನ್ನನ್ನು ವಯಸ್ಸಾದವನೆಂದು ಪರಿಗಣಿಸಲಿಲ್ಲ. ನಟನೆಯನ್ನು ನಿಲ್ಲಿಸುವ ಯಾವುದೇ ಯೋಚನೆ ಹೊಂದಿಲ್ಲʼʼ ಎಂದಿದ್ದಾರೆ ಸಂದರ್ಶನವೊಂದರಲ್ಲಿ. "ನನ್ನ ಮಕ್ಕಳಿಗಾಗಿ ನಾನು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಬದುಕಲು ಬಯಸುತ್ತೇನೆ" ಎಂಬುದೂ ಅವರ ಮಾತೇ.

23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು
 

Follow Us:
Download App:
  • android
  • ios