Dream Meaning: ಸೆಕ್ಸ್ ಬಗ್ಗೆ ಪದೇ ಪದೇ ನಿಮಗೂ ಬೀಳುತ್ತಾ ಕನಸು?
ಕನಸು ನಮ್ಮ ಭಾವನೆಗಳ ಜೊತೆ ಸಂಬಂಧ ಹೊಂದಿದೆ. ಹಾಗಂತ ಎಲ್ಲ ಕನಸುಗಳಿಗೂ ಅರ್ಥ ಹುಡುಕೋದು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾತ್ರವಲ್ಲ ಮನಶ್ಶಾಸ್ತ್ರದಲ್ಲೂ ಕನಸಿನ ಬಗ್ಗೆ ಹೇಳಲಾಗಿದೆ. ಸಂಭೋಗದ ಬಗ್ಗೆ ಕನಸು ಬಿದ್ರೆ ಮುಜುಗರ ಬೇಡ. ಅದ್ರ ಬಗ್ಗೆ ತಿಳಿದುಕೊಳ್ಳಿ.
ಕನಸು ನಮ್ಮ ಮನಸ್ಸಿನಲ್ಲಿರುವ ಅನೇಕ ವಿಷ್ಯಗಳನ್ನು ತಿಳಿಸುತ್ತದೆ. ಕೆಲವೊಮ್ಮ ನಮ್ಮ ಕನಸು ವಿಚಿತ್ರವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ದೈಹಿಕ ಸಂಬಂಧದ ಬಗ್ಗೆ ಯೋಚಿಸುವುದು ಅಥವಾ ಕನಸು ಕಾಣುವುದು ತುಂಬಾ ಸಾಮಾನ್ಯ. ಕೆಲವರಿಗೆ ದೈಹಿಕ ಸಂಬಂಧದ ಬಗ್ಗೆ ಪದೇ ಪದೇ ಕನಸು ಬೀಳುತ್ತದೆ. ಲೈಂಗಿಕ ಸಂಬಂಧದ ಕನಸು ಅನೇಕ ಬಾರಿ ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಇನ್ನು ಕೆಲವೊಮ್ಮೆ ನಗು ತರಿಸುತ್ತದೆ. ಅಪರಿಚಿತರ ಜೊತೆ ಸಂಬಂಧ ಬೆಳೆಸಿದಂತೆ ಕಂಡಲ್ಲಿ ಅಥವಾ ಆಪ್ತರ ಜೊತೆ ಸಂಬಂಧ ಬೆಳೆಸಿದಂತೆ ಕಂಡರೆ ನಾಚಿಕೆಯಾಗುತ್ತದೆ. ಹಗಲಿನಲ್ಲೂ ಆ ಕನಸು ನಮ್ಮನ್ನು ಹಿಂಸಿಸುವುದಿದೆ. ಲೈಂಗಿಕತೆ ಬಗ್ಗೆ ಕನಸು ಕಾಣೋದು ಸಮಸ್ಯೆಯಾಗುತ್ತದೆಯೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ದೈಹಿಕ ಸಂಬಂಧದ ಬಗ್ಗೆ ಬೀಳುವ ಕನಸು ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಥವಾ ನಮ್ಮ ಮನಸ್ಸನ್ನು ಹಾಳು ಮಾಡುತ್ತಾ ಎನ್ನುವ ಬಗ್ಗೆ ನಾವಿಂದು ನಿಮಗೆ ಹೇಳ್ತೇವೆ.
ಆಗಾಗ ಸೆಕ್ಸ್ (Sex) ಬಗ್ಗೆ ಕನಸು ಬೀಳೋದು ಕೆಟ್ಟದ್ದಾ? : ತಜ್ಞರ ಪ್ರಕಾರ, ಕಾಲಕಾಲಕ್ಕೆ ಇಂಥ ಕನಸು (Dream) ಬೀಳೋದು ಸಾಮಾನ್ಯ. ಲೈಂಗಿಕತೆಯ ಬಗ್ಗೆ ಕನಸು ಕಾಣುವುದು ನಿಮ್ಮ ಲೈಂಗಿಕತೆಯನ್ನು ಅನ್ವೇಷಿಸುವ ಒಂದು ಮಾರ್ಗವಾಗಿದೆ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ನಮ್ಮ ಕನಸುಗಳು ಭಯ (Fear), ಭಾವನೆಗಳು ಮತ್ತು ಆಸೆಗಳನ್ನು ಪ್ರತಿಬಿಂಬಿಸುತ್ತವೆ. ಕೆಲವೊಮ್ಮೆ ನಮ್ಮ ಭಾವನೆಗಳು ತುಂಬಾ ಬಲವಾಗಿರುತ್ತವೆ. ಇದರಿಂದಾಗಿ ಒಂದೇ ರೀತಿಯ ಕನಸುಗಳು ಮತ್ತೆ ಮತ್ತೆ ಬರುತ್ತವೆ. ಇದರಲ್ಲಿ ಚಿಂತಿಸುವಂಥದ್ದೇನೂ ಇಲ್ಲ. ನಮ್ಮ ಮನಸ್ಸಿನಲ್ಲಾಗುವ ಗೊಂದಲ, ಭಾವನೆಗಳು ಕನಸಿನ ರೂಪದಲ್ಲಿ ಕಾಣಿಸುತ್ತವೆ. ನಿಮ್ಮ ಮನಸ್ಸು ಎಷ್ಟು ಸೃಜನಶೀಲವಾಗಿದೆ ಎಂಬುದರ ಆಧಾರದ ಮೇಲೆ ಕನಸುಗಳು ಸಂಕೀರ್ಣ ಮತ್ತು ವಿಚಿತ್ರವಾಗಿರುತ್ತವೆ.
ADHD IN CHILDREN: ನಿಮ್ಮ ಮಕ್ಕಳು ಎಲ್ಲರ ಹಾಗಿಲ್ವಾ? ಪಾಲಕರು ಗುರ್ತಿಸೋಕೆ ತಡ ಮಾಡ್ಬೇಡಿ
ಹಾಗಂತ ನಿಮಗೆ ಸೆಕ್ಸ್ ಬಗ್ಗೆ ಕನಸು ಬಿದ್ರೆ ನಿಮ್ಮ ಮನಸ್ಸು ಕೆಟ್ಟದ್ದಾಗಿದೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಕನಸಿನಲ್ಲಿ ಯಾರೊಂದಿಗಾದರೂ ಸಲಿಂಗಕಾಮಿ ಸಂಬಂಧವನ್ನು ಹೊಂದುವುದು, ನಿಕಟ ವ್ಯಕ್ತಿಯೊಂದಿಗಿರುವಂತೆ ಕನಸು ಕಾಣುವುದು, ಸಾರ್ವಜನಿಕ ಸ್ಥಳದಲ್ಲಿ ಸಂಭೋಗ ಬೆಳೆಸಿದಂತೆ ಕನಸು ಕಾಣುವುದು ಸಾಮಾನ್ಯವಾಗಿದೆ. ಇದನ್ನು ನಿಮ್ಮ ಲೈಂಗಿಕತೆಯ ಪ್ರತಿಬಿಂಬ ಎಂದು ತೆಗೆದುಕೊಳ್ಳಲಾಗುವುದಿಲ್ಲ. ಕನಸನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತೀರಿ ಎಂಬುದು ನಿಮ್ಮ ಮನಸ್ಸನ್ನು ಅವಲಂಭಿಸಿದೆ.
ಮತ್ತೆ ಮತ್ತೆ ನಿಮಗೆ ಇಂಥ ಕನಸು ಬೀಳುತ್ತಿದ್ದರೆ, ಆ ಕನಸು ದುಃಸ್ವಪ್ನವಾಗಿ ಪರಿಣಮಿಸಿದ್ರೆ, ಕನಸಿನಿಂದಾಗಿ ಸರಿಯಾಗಿ ನಿದ್ರೆ ಮಾಡಲು ನಿಮಗೆ ಆಗ್ತಿಲ್ಲವೆಂದ್ರೆ, ಭಯವಾದ್ರೆ, ನಿತ್ಯದ ಕೆಲಸ ಹದಗೆಟ್ಟಿದ್ದರೆ, ಸಂಬಂಧದ ಮೇಲೂ ಪರಿಣಾಮ ಬೀರುತ್ತಿದ್ದರೆ ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಿಮ್ಮ ಕನಸಿನ ಬಗ್ಗೆ ಹಾಗೂ ಅದ್ರಿಂದ ಆಗ್ತಿರುವ ಸಮಸ್ಯೆ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸಬೇಕು. ಕನಸು ಬೀಳದಂತೆ ಮಾಡಲು ಯಾವೆಲ್ಲ ಕ್ರಮಕೈಗೊಳ್ಳಬೇಕೋ ಅದನ್ನೆಲ್ಲ ಮಾಡ್ಬೇಕು. ಕನಸಿಗೆ ಪ್ರಾಬಲ್ಯ ನೀಡಿದ್ರೆ ಆಗ ತೊಂದರೆ ಹೆಚ್ಚಾಗುತ್ತದೆ.
Health Tips : ನೀವೂ ಆಗಾಗ ಐಸ್ ತಿನ್ನುತ್ತೀರಾ..ಎಚ್ಚರ ! ದೇಹದ ಮೇಲೆ ಏನಾಗುತ್ತೆ?
ನಿಮಗೆ ಲೈಂಗಿಕತೆ ಬಗ್ಗೆ ಕನಸು ಬೀಳಲು ನಾನಾ ಕಾರಣವಿದೆ. ಮನಸ್ಸಿನ ಸೃಜನಶೀಲತೆಯಿಂದಾಗಿ ಇಂತಹ ಕನಸುಗಳು ಬರುತ್ತವೆ. ಕೆಲವು ಭಾವನಾತ್ಮಕ ಘಟನೆಗಳಿಂದಾಗಿ ಇಂತಹ ಕನಸುಗಳು ಬೀಳುತ್ತವೆ ಎಂದು ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲ, ವ್ಯಕ್ತಿ ಲೈಂಗಿಕತೆ ಬಗ್ಗೆ ಬಲವಾದ ಭಾವನೆಗಳನ್ನು ಹೊಂದಿದ್ದರೆ ಅಂತಹ ಕನಸುಗಳು ಕಾಡುತ್ತವೆ. ಮಹಿಳೆಯರ ಮುಟ್ಟಿನ ಸಮಯದಲ್ಲಿ ಬದಲಾವಣೆಯಾದಾಗ, ನೀವು ಯಾರನ್ನಾದ್ರೂ ಮೆಚ್ಚಿಕೊಂಡಾಗ, ಅವರ ಬಗ್ಗೆ ಹೆಚ್ಚು ಕಲ್ಪನೆಗಳನ್ನು ನೀವು ಹೊಂದಿದ್ದರೆ, ಲೈಂಗಿಕತೆ ಬಗ್ಗೆ ನೀವು ಹೆಚ್ಚು ಚಿಂತಿಸುತ್ತಿದ್ದರೆ ನಿಮಗೆ ಸೆಕ್ಸ್ ಬಗ್ಗೆ ಕನಸು ಬೀಳುವ ಸಾಧ್ಯತೆಯಿರುತ್ತದೆ.