Asianet Suvarna News Asianet Suvarna News

ಪಾರ್ಕ್‌ನ ಪೊದೆಯಲ್ಲಿ ತಗ್ಲಾಕೊಂಡ ಜೋಡಿ... ಇಬ್ಬರ ಕುಚ್‌ ಕುಚ್ ವಿಡಿಯೋ ವೈರಲ್ 

ತಾವು ಪಾರ್ಕ್‌ನಲ್ಲಿ ಇದ್ದೇವೆ  ಎಂಬುದನ್ನು ಮರೆತ ಜೋಡಿ ಪೊದೆಯ ಮರೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡುತ್ತಿರುವ  ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

couple romance in public park video gone viral mrq
Author
First Published Aug 20, 2024, 3:08 PM IST | Last Updated Aug 20, 2024, 3:08 PM IST

Viral Video: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಜನರು ವಿಡಿಯೋ ನೋಡಿ ಕಮೆಂಟ್ ಮಾಡುತ್ತಾ ತಗ್ಲಾಕೊಂಡ ಜೋಡಿಯನ್ನು ತಮಾಷೆ ಮಾಡಿದ್ದಾರೆ. ಪಾರ್ಕ್‌ ಬೆಂಚ್ ಹಿಂದಿನ ಪೊದೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕನೋರ್ವ ವಿಡಿಯೋ ಮಾಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಆದ್ರೆ ಸ್ಥಳ ಯಾವುದೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. 

ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇವರಿಬ್ಬರು ಪರೀಕ್ಷೆ ಬರೆಯಲು ಬಂದು ರೊಮ್ಯಾನ್ಸ್ ಮಾಡುತ್ತಿದ್ದಾರೆ ಎಂದು ಸಾಲಿನ ಜೊತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದೆಂಥಾ ಎಕ್ಸಾಂ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಮಾಡುತ್ತಿದ್ದವನ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. 

ಹೆದ್ದಾರಿ ಪಕ್ಕದಲ್ಲಿಯೇ ಕಾರ್ ನಿಲ್ಲಿಸಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್; ಓಯೋ ರೂಮ್‌ಗೆ ಹೋಗಿ ಎಂದ ಜನರು

ಬೆಂಚ್ ಹಿಂದಿರುವ ಪೊದೆಯಲ್ಲಿ ಹುಡುಗ-ಹುಡುಗಿ ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವಾಗ ಹಿಂದಿನಿಂದ ಓರ್ವ ವ್ಯಕ್ತಿ ವಿಡಿಯೋ ಮಾಡುತ್ತಿರೋದನ್ನು ಯುವತಿ ನೋಡಿ ಶಾಕ್ ಆಗುತ್ತಾಳೆ. ಆಕೆಯ ಜೊತೆಯಲ್ಲಿದ್ದ ಯುವಕ ಕೋಪದಿಂದ ಯಾಕೆ ವಿಡಿಯೋ ಮಾಡುತ್ತಿದ್ದೀಯಾ? ಯಾರು ನೀನು ಎಂದು ಕೋಪದಿಂದ ಕೇಳುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. 

ರಾಜಧಾನಿ ಬೆಂಗಳೂರಿನಲ್ಲಿರುವ 300 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಬ್ಬನ್ ಪಾರ್ಕ್‌ನಲ್ಲಿ ಜೋಡಿಗಳು ಅನುಚಿತವಾಗಿ ವರ್ತಿಸಿಕೊಳ್ಳುತ್ತಿದ್ದರು. ಪಾರ್ಕ್‌ನಲ್ಲಿರುವ ಪೊದೆಗಳಲ್ಲಿ ಸೇರಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಹಾಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಬ್ಬನ್ ಪಾರ್ಕ್‌ಗೆ ಬರೋ ಸಾರ್ವಜನಿಕರಿಗೆ ಕೆಲವೊಂದು ಕಂಡೀಷನ್‌ಗಳನ್ನು ಹಾಕಿದೆ. ಪಾರ್ಕ್‌ಗೆ ಬರೋ ಜೋಡಿಗಳು ಅಂಟಿಕೊಂಡು ಕುಳಿತುಕೊಳ್ಳುವಂತಿಲ್ಲ. ಒಂದು ವೇಳೆ ಹೀಗೆ ಕಂಡು ಬಂದ್ರೆ ಭದ್ರತಾ ಸಿಬ್ಬಂದಿ ವಿಷಲ್ ಹಾಕಿ, ಮೈಕ್‌ನಲ್ಲಿ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಾರೆ. ಇದರ ಜೊತೆಗೆ ಪಾರ್ಕ್‌ ನಲ್ಲಿ ಆಹಾರ ಸೇವಿಸದಂತೆ ಎಂಬ ಷರತ್ತು ವಿಧಿಸಲಾಗಿದೆ. ಕಬ್ಬನ್ ಪಾರ್ಕ್‌ನಲ್ಲಿ ಭದ್ರತಾ ಸಿಬ್ಬಂದಿ ಸದಾ ಗಸ್ತು ತಿರುಗುತ್ತಿರುತ್ತಾರೆ.  

ಮುಸ್ಲಿಂ ಜೋಡಿ ಹಸೆಮಣೆ ಏರುವ ವೇಳೆ ಮೊಳಗಿದ ರಾಷ್ಟ್ರಗೀತೆ: ಆಮೆಲೇನಾಯ್ತು ನೋಡಿ ವೀಡಿಯೋ

Latest Videos
Follow Us:
Download App:
  • android
  • ios