ಪ್ರೀತಿ ಅಂತ ಹೆಂಡ್ತಿಗೆ ಪದೆ ಪದೇ ಮೆಸೇಜ್ ಕಳುಹಿಸಿದ್ರೆ ಉಸಿರುಗಟ್ಟಬಹುದು ಎಚ್ಚರ!
ಹೊಸ ಸಂಬಂಧ ಅಂದ್ಮೇಲೆ ಎಲ್ಲವೂ ಹೊಸತಾಗಿರುತ್ತೆ. ಈ ಸಮಯದಲ್ಲಿ ಕೈನಲ್ಲಿರುವ ಫೋನ್ ಗೆ ಹೆಚ್ಚು ಕೆಲಸ. ಇಬ್ಬರ ಮಧ್ಯೆ ಚಾಟಿಂಗ್ ಜೋರಾಗಿರುತ್ತೆ ಸರಿ. ಆದ್ರೆ ಒಂದೇ ಕಡೆಯಿಂದ ಮೆಸ್ಸೇಜ್ ಸುರಿಮಳೆಯಾಗ್ತಿದ್ದರೆ ಡೇಂಜರ್.
ಒಂಟಿಯಾಗಿರುವ ನಿಮ್ಮ ಜೀವನದಲ್ಲಿ ಸಂಗಾತಿಯೊಬ್ಬರ ಆಗಮನವಾದಾಗ ಖುಷಿ ಹೇಳತೀರದು. ಅದೇನೋ ಸಂತೋಷ, ತಳಮಳ. ಸಂಗಾತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ಕುತೂಹಲ ಒಂದ್ಕಡೆ ಆದ್ರೆ ಸಂಗಾತಿಗೆ ತನ್ನೆಲ್ಲ ವಿಷ್ಯವನ್ನು ಹೇಳುವ ಆತುರ ಇನ್ನೊಂದು ಕಡೆ. ಬೆಳಿಗ್ಗೆ ಎದ್ದ ತಕ್ಷಣ ಅರಿವಿಲ್ಲದೆ ಗುಡ್ ಮಾರ್ನಿಂಗ್ ಮೆಸ್ಸೇಜ್ ರವಾನೆ ಆಗಿರುತ್ತದೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಮಲಗುವವರೆಗೆ ಎಲ್ಲ ವಿಷ್ಯವನ್ನು ಕೇಳಿ ತಿಳಿದುಕೊಳ್ತಾರೆ. ಒಂಟಿಯಾಗಿದ್ದಾಗ ತಮ್ಮಿಷ್ಟದಂತೆ ಸುತ್ತಾಡುತ್ತಿದ್ದವರು ಈಗ ಸ್ನೇಹಿತರ ಮನೆಗೆ ಹೋಗುವ ಮೊದಲು ಸಂಗಾತಿ ಒಪ್ಪಿಗೆ ಪಡೆದು ಹೋಗ್ತಾರೆ. ಆರಂಭದಲ್ಲಿ ಇದ್ಯಾವುದೂ ಕಿರಿಕಿರಿ ಎನ್ನಿಸೋದಿಲ್ಲ ನಿಜ. ಆದ್ರೆ ನಿಮ್ಮ ಈ ಅಭ್ಯಾಸ ಮುಂದೆ ನಿಮ್ಮ ಸಂಬಂಧ ಮುರಿದು ಬೀಳಲು ಕಾರಣವಾಗುತ್ತದೆ. ನಿಮ್ಮ ಪ್ರೀತಿಯ ಮೆಸ್ಸೇಜ್ ಗಳು ಸಂಗಾತಿಗೆ ಉರುಳು ಬಿಗಿದ ಅನುಭವ ಆಗ್ಬಹುದು. ಹಾಗಾಗಿ ಕೈನಲ್ಲಿ ಮೊಬೈಲ್ ಇದೆ, ಸಂಗಾತಿ ನೆನಪಾಗ್ತಿದೆ ಎಂದಾಗೆಲ್ಲ ನೀವು ಸಂದೇಶ ರವಾನೆ ಮಾಡುವ ಅಗತ್ಯವಿಲ್ಲ. ಅತ್ತ ಸಂಗಾತಿ ಯಾವ ಪರಿಸ್ಥಿತಿಯಲ್ಲಿ ಇರಬಹುದು ಎಂಬುದನ್ನು ಅರಿಯಬೇಕು. ನಾವಿಂದು ನಿಮ್ ಪದೇ ಪದೇ ಸಂದೇಶದಿಂದಾಗುವ ಸಮಸ್ಯೆ ಬಗ್ಗೆ ಮಾಹಿತಿ ನೀಡ್ತೇವೆ.
ಡೇಟಿಂಗ್ (Dating) ವೇಳೆ ಸಂಗಾತಿ ನಿಮಗಾಗಿ ಸಂಪೂರ್ಣ ಸಮಯ ನೀಡಬಲ್ಲರು ಎನ್ನುವ ಗ್ಯಾರಂಟಿ ಇರೋದಿಲ್ಲ. ನಿಮ್ಮ ಖುಷಿ, ಇಚ್ಛೆಗಾಗಿ ಅವರಿಗೆ ಪದೇ ಪದೇ ಮೆಸ್ಸೇಜ್ (Message) ಕಳುಹಿಸೋದು ಒಳ್ಳೆಯದಲ್ಲ. ನೀವು ಸಂಗಾತಿ (Partner) ಬಗ್ಗೆ ಆಲೋಚನೆ ಮಾಡದೆ ಎಲ್ಲ ವಿಷ್ಯಗಳನ್ನು ಮೆಸ್ಸೇಜ್ ಮೂಲಕ ಹಂಚಿಕೊಳ್ಳುವ ಪ್ರಯತ್ನ ನಡೆಸಬೇಡಿ.
ಪತ್ನಿ ಜತೆಗೆ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗೋ ಪತಿ; ಸಂಸಾರ ಮಾಡೋದು ಸಾಧ್ಯವಾ?
ಪದೇ ಪದೇ ಮೆಸ್ಸೇಜ್ ಕಳುಹಿಸುವುದ್ರಿಂದ ಆಗುವ ತೊಂದರೆ :
ನೀವು ಪದೇ ಪದೇ ಸಂಗಾತಿಗೆ ಮೆಸ್ಸೇಜ್ ಕಳುಹಿಸುತ್ತಿದ್ದರೆ ಅದು ನೀವು ಅವರ ಮೇಲೆ ನಿಯಂತ್ರಣ (Control) ಹೇರಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಸಂದೇಶ ರವಾನೆ ಮಾಡ್ತಾ ಸಂಗಾತಿ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡಬೇಡಿ.
ನಿಮಗೆ ಸಂಗಾತಿ ನೆನಪಾಗ್ತಿದ್ದರೆ, ಅವರ ಜೊತೆ ಚಾಟಿಂಗ್ ಮಾಡ್ಬೇಕೆಂಬ ಹಂಬಲ ಆಗ್ತಿದ್ದರೂ ಅದನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಈ ಪದೇ ಪದೇ ಮೆಸ್ಸೇಜ್ ಅವರಿಗೆ ಕಿರಿಕಿರಿಯುಂಟು ಮಾಡಬಹುದು. ನಿಮ್ಮ ಪ್ರೀತಿ ಉಳಿಯಬೇಕೆಂದ್ರೆ ನೀವದನ್ನು ಸಮತೋಲಿತವಾಗಿ ವ್ಯಕ್ತಪಡಿಸಬೇಕು.
ನಿಮ್ಮ ಸಂಗಾತಿ ನಿಮಗೆ ಆ ತಕ್ಷಣ ಮರು ಸಂದೇಶ ಕಳುಹಿಸಿಲ್ಲ ಅಂದ್ರೆ ನೀವು ತಪ್ಪು ನಿರ್ಧಾರಕ್ಕೆ ಬರಬೇಡಿ. ಕೆಲವರು ಸಂದೇಶ ಟೈಪ್ ಮಾಡಲು ನಿಧಾನ ಮಾಡ್ತಾರೆ ಮತ್ತೆ ಕೆಲವರಿಗೆ ಸಂದೇಶ ಕಳುಹಿಸಲು ಅಥವಾ ನೋಡಲು ಸಮಯ ಇರೋದಿಲ್ಲ. ಇಂಥ ಸಮಯದಲ್ಲಿ ನೀವು ಪದೇ ಪದೇ ಮೆಸ್ಸೇಜ್ ಕಳುಹಿಸುತ್ತಿದ್ದರೆ ಅವರ ಕೆಲಸಕ್ಕೆ ತೊಂದರೆ ಆಗುತ್ತದೆ. ಅದು ನಿಮ್ಮಿಬ್ಬರ ಸಂಬಂಧವನ್ನು ಹಾಳು ಮಾಡುತ್ತದೆ.
ನಿಮಗೆ ಆ ಕ್ಷಣಕ್ಕೆ ಉತ್ತರ ಬೇಕು ಎನ್ನುವುದಾದ್ರೆ ಯಾವುದೇ ಕಾರಣಕ್ಕೂ ಮೆಸ್ಸೇಜ್ ಕಳುಹಿಸಿ ಉತ್ತರಕ್ಕೆ ಕಾಯ್ಬೇಡಿ. ನೀವು ಕರೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ನೀವು ಕರೆ ಮಾಡಿದಾಗ ಅದು ಮಹತ್ವದ ವಿಷ್ಯ ಇರಬೇಕೆಂದು ಭಾವಿಸುವ ಅವರು ಕರೆ ಸ್ವೀಕರಿಸುತ್ತಾರೆ.
ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದ ಸೀತಾ: ಸಿಹಿಯ ಸತ್ಯ ತಾತಂಗೆ ತಿಳೀತಾ?
ನೀವು ಸಂಗಾತಿಗೆ ಪದೇ ಪದೇ ಮೆಸ್ಸೇಜ್ ಕಳುಹಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಹಾಗೆಯೇ ನಿಮ್ಮಿಬ್ಬರ ಮಧ್ಯೆ ಎಲ್ಲ ವಿಷ್ಯಗಳು ಮೆಸ್ಸೇಜ್ ನಲ್ಲಿಯೇ ರವಾನೆಯಾಗಿದ್ದರೆ ಮಾತನಾಡಲು ವಿಷ್ಯ ಉಳಿದಿಲ್ಲ ಎನ್ನುವಂತಾಗುತ್ತದೆ. ನೀವು ಪದೇ ಪದೇ ಸಂದೇಶ ಕಳುಹಿಸುವ ಕಾರಣ ಕೆಲವೊಮ್ಮೆ ನಿಮ್ಮ ಸಂಗಾತಿ ನಿಮ್ಮ ಸಂದೇಶವನ್ನು ನೋಡದೆ ನಿರ್ಲಕ್ಷ್ಯ ಮಾಡಬಹುದು.