ಪತ್ನಿ ಜತೆಗೆ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗೋ ಪತಿ; ಸಂಸಾರ ಮಾಡೋದು ಸಾಧ್ಯವಾ?

ರಿಲೇಟಿವ್ ಇಂಪೊಟೆನ್ಸ್ ಇರುವ ವ್ಯಕ್ತಿಯ ಸಮಸ್ಯೆ ಮದುವೆಗೆ ಮುನ್ನ ಗೊತ್ತಾಗುವುದಿಲ್ಲ. ಅಂದರೆ, ನಿರ್ದಿಷ್ಟವಾಗಿ ಪತ್ನಿಯ ಜತೆಗೆ ಲೈಂಗಿಕತೆ ನಡೆಸಲು ಅಸಮರ್ಥನಾಗುವ ಪತಿಯ ಸಮಸ್ಯೆ ಇಬ್ಬರನ್ನೂ ಜರ್ಜರಿತಗೊಳಿಸಬಲ್ಲದು. ಅಂಥ ಸಂಬಂಧ ದೀರ್ಘಕಾಲ ಬಾಳಲು ಸಾಧ್ಯವೇ ಎನ್ನುವುದು ಪ್ರಶ್ನೆ. 
 

What if husband not able to do sexual intercourse with wife

ನವವಿವಾಹಿತರು ಡಿವೋರ್ಸ್ ಪಡೆಯುವುದು ಇಂದು ಹೊಸ ವಿದ್ಯಮಾನವೇನೂ ಅಲ್ಲ. ಯಾವ್ಯಾವುದೋ ಕಾರಣಗಳಿಗೆ ಮದುವೆ ಮುರಿದು ಬೀಳುತ್ತದೆ. ಮದುವೆಯಾದ ಕೆಲವೇ ದಿನಗಳಲ್ಲಿ ನವ ದಂಪತಿ ಕೋರ್ಟ್ ಮೆಟ್ಟಿಲೇರುವುದು ಕಂಡುಬರುತ್ತದೆ. ಸಾಮಾನ್ಯವಾಗಿ, ಹಣಕಾಸು, ಹೊಂದಾಣಿಕೆಯ ಸಮಸ್ಯೆ ಇರುವಂಥ ಪ್ರಕರಣಗಳೇ ಹೆಚ್ಚಾಗಿರುವುದು ಸಾಮಾನ್ಯ. ಅಪರೂಪದ ಪ್ರಕರಣಗಳೂ ಕೆಲವೊಮ್ಮೆ ಕಂಡುಬರುತ್ತವೆ. ಪತಿ ಅಥವಾ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲವೆಂದಾದರೆ ಡಿವೋರ್ಸ್ ಪಡೆಯಲು ಸಾಧ್ಯ. ದುರಂತವೆಂದರೆ, ಇಂಥ ಸಮಸ್ಯೆಗಳು ಮದುವೆಯಾದ ಬಳಿಕವೇ ಗಮನಕ್ಕೆ ಬರುತ್ತವೆ. ಮನೆಯಲ್ಲಿ ಸಮಸ್ಯೆಯನ್ನು ಗಮನಕ್ಕೆ ತರುವ ಪರಿಪಾಠ ಅಥವಾ ಅಂಥದ್ದೊಂದು ಮುಕ್ತ ವಾತಾವರಣ ನಮ್ಮ ಕುಟುಂಬಗಳಲ್ಲಿ ಇಲ್ಲವಾದ್ದರಿಂದ ಇಂತಹ ತಪ್ಪುಗಳು ಸಂಭವಿಸುತ್ತವೆ ಎಂದು ಹೇಳಬಹುದು. ಕೊನೆಯ ಪಕ್ಷ ಮದುವೆಯಾಗುವ ಜೋಡಿಯಾದರೂ ಪರಸ್ಪರ ಮುಕ್ತವಾಗಿ ಮಾತನಾಡಿಕೊಂಡು ಮದುವೆಯನ್ನು ತಡೆಯಬಹುದು. ಆದರೆ, ಹಾಗೆ ಮಾಡುವುದಿಲ್ಲ. ಮದುವೆಯಾದ ಬಳಿಕವೇ ಸಮಸ್ಯೆ ಅರಿವಾಗುವ ಹಿನ್ನೆಲೆಯಲ್ಲಿ ಡಿವೋರ್ಸ್ ಪಡೆಯುವುದು ಅನಿವಾರ್ಯ ಎಂಬಂತೆ ಆಗುತ್ತದೆ.

ಕೆಲವೊಮ್ಮೆ ಅಪರೂಪದ ಪ್ರಕರಣಗಳೂ ಇರಬಹುದು. ಪತಿಗೆ ನೈಜವಾಗಿ ನಪುಂಸಕತೆ ಇಲ್ಲದೇ ಇದ್ದರೂ ಆತ ಪತ್ನಿಯೊಂದಿಗೆ ಮಾತ್ರ ಲೈಂಗಿಕತೆಯಲ್ಲಿ ಸಕ್ರಿಯನಾಗಲು ಸಾಧ್ಯವಾಗದೇ ಇರಬಹುದು. ಇಂಥ ಪ್ರಕರಣವನ್ನೂ ಡಿವೋರ್ಸ್ ಗೆ ಅರ್ಹ ಎಂದೇ ಪರಿಗಣಿಸಲಾಗುತ್ತದೆ. ಇಂಥದ್ದೇ ಒಂದು ವಿಚಿತ್ರ ಪ್ರಕರಣ ಬಾಂಬೆ ಹೈಕೋರ್ಟ್ ಎದುರು ಬಂದಿತ್ತು. ಅದರಲ್ಲಿ ನವವಿವಾಹಿತನ “ಸಂಬಂಧಿತ ನಂಪುಸಕತೆ-ರಿಲೇಟಿವ್ ಇಂಪೊಟೆನ್ಸ್’ ಕಾರಣದಿಂದ ಯುವ ಜೋಡಿಯ ಮದುವೆಯನ್ನು ರದ್ದುಪಡಿಸಲಾಗಿದೆ. 
ರಿಲೇಟಿವ್ ಇಂಪೊಟೆನ್ಸ್ (Relative Impotence) ಎನ್ನುವ ಇಂಥದ್ದೊಂದು ಸಮಸ್ಯೆ (Problem) ಇರಬಹುದು ಎನ್ನುವುದೂ ಸಹ ಅನೇಕರ ಅರಿವಿಗೆ ಇರುವುದಿಲ್ಲ. ಇದೊಂಥರ ವಿಚಿತ್ರ ಎನ್ನಬಹುದಾದ ಸಮಸ್ಯೆ. ಇದು ಪುರುಷ (Male) ಹಾಗೂ ಮಹಿಳೆ (Woman) ಯಾರಿಗೆ ಬೇಕಾದರೂ ಇರಬಹುದು. ಅಸಲಿಗೆ ಅವರಲ್ಲಿ ನಪುಂಸಕತ್ವ ಇರುವುದಿಲ್ಲ. ಆದರೆ, ನಿರ್ದಿಷ್ಟ ವ್ಯಕ್ತಿಯೊಂದಿಗೆ ಮಾತ್ರವೇ ಅವರು ಲೈಂಗಿಕ (Sexual Intercourse) ಕ್ರಿಯೆ ನಡೆಸಲು ಅಮರ್ಥರಾಗುತ್ತಾರೆ.

ಲೈಂಗಿಕವಾಗಿ ಹತಾಶರಾಗಿದ್ದೀರಾ? ಚಿಕಿತ್ಸೆ ಶುರು ಮಾಡಿ… ಇಲ್ಲಾಂದ್ರೆ ಆರೋಗ್ಯಕ್ಕೆ ಹಾನಿ

ದಂಪತಿಯ (Couple) ನಡುವೆ ಹೀಗಾದರೆ, ಮಾನಸಿಕವಾಗಿ ಜರ್ಜರಿತವಾಗುವುದು ಸಹಜ. ಮದುವೆ (Marriage) ಎನ್ನುವುದೇ ಅವರ ಸಮಸ್ಯೆಗೆ ಕಾರಣವಾಗಬಹುದು, ನೋವನ್ನು ನೀಡಬಹುದು. ಹೀಗಾಗಿ, ಈ ಪ್ರಕರಣದಲ್ಲಿ “ಮದುವೆಯಿಂದ ಬಳಲುತ್ತಿರುವ ಯುವ ದಂಪತಿ’ಯನ್ನು ಗಮನದಲ್ಲಿ ಇಟ್ಟುಕೊಂಡು ಅವರು ದೂರವಾಗುವುದೇ ಸರಿ ಎನ್ನುವ ತೀರ್ಪು (Verdict) ಹೊರಬಿದ್ದಿದೆ. 
ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಈ ಮಹತ್ವದ ತೀರ್ಪು ನೀಡಿದ್ದು, 17 ದಿನಗಳ ಮದುವೆಯನ್ನು ಅನೂರ್ಜಿತಗೊಳಿಸಿದೆ. ಪತಿಯ ರಿಲೇಟಿವ್ ಇಂಪೊಟೆನ್ಸ್ ಸಮಸ್ಯೆ ಮದುವೆಯನ್ನು ಅನೂರ್ಜಿತಗೊಳಿಸುವಲ್ಲಿ ಪ್ರಮುಖ ಕಾರಣವಾಗಬಲ್ಲದು ಎಂದು ಹೇಳಿದೆ. 

ಲೈಂಗಿಕತೆ ಯಾಕೆ ಮುಖ್ಯ?: ದಾಂಪತ್ಯದಲ್ಲಿ (Relationship) ಲೈಂಗಿಕತೆ ಎನ್ನುವುದು ಇಬ್ಬರನ್ನೂ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ (Emotional) ಬೆಸೆಯುವ ಪ್ರಮುಖ ಸಾಧನ. ಅದೇ ಇಲ್ಲವಾದರೆ, ಯುವ ಜೋಡಿ ಪರಸ್ಪರ ಅರಿತುಕೊಂಡು ಬಾಳುವುದು ಕಷ್ಟವಾಗುತ್ತದೆ. ಮಾನಸಿಕ, ಭಾವನಾತ್ಮಕ ಮತ್ತು ದೈಹಿಕವಾಗಿ (Physical) ಒಂದಾಗದೇ ಜೀವನ ನಡೆಸುವುದು ಹಿಂಸೆ ನೀಡುವ ವಿಚಾರ. ದಾಂಪತ್ಯದಲ್ಲಿ ಲೈಂಗಿಕತೆಯನ್ನು ನಿರಾಕರಿಸುವುದು ಸಹ ಅಪರಾಧ (Crime) ಎನ್ನುತ್ತದೆ ಕಾಯ್ದೆ. ಕಾಯ್ದೆಯ ಮಾತನ್ನು ಬದಿಗಿಟ್ಟರೂ ಲೈಂಗಿಕತೆಯಿಂದ ವಿಮುಖವಾದ ದಾಂಪತ್ಯದಲ್ಲಿ, ದಂಪತಿಗಳ ನಡುವೆ ಪರಸ್ಪರ ಆಕರ್ಷಣೆ, ಮಾಧುರ್ಯ ಇರುವುದಿಲ್ಲ. ಹೀಗಾಗಿ, ದೀರ್ಘಕಾಲದ ಸಂಬಂಧಕ್ಕೆ, ಪರಸ್ಪರ ಅರ್ಥೈಸಿಕೊಳ್ಳಲು ಲೈಂಗಿಕತೆ ಅಗತ್ಯ. 

ಖುಷಿಪಡಲೂ ಹೆದರೋ ಒಂದು ರೋಗವಿದೆ, ಇದ್ಯಾವ ಚೆರೊಫೋಬಿಯಾ?

ಏನು ಪರಿಹಾರ?:  ನಪುಂಸಕತೆಯ ಸಮಸ್ಯೆ ಇರುವ ಸಮಯದಲ್ಲಿ,ಮನೆಮಂದಿಯೊಂದಿಗೆ ಅಥವಾ ಮದುವೆಯಾಗುವ ಹುಡುಗಿಯೊಂದಿಗೆ ಮೊದಲೇ ಮನಬಿಚ್ಚಿ ಮಾತನಾಡುವುದು ಅಗತ್ಯ. ಆದರೆ, ರಿಲೇಟಿವ್ ಇಂಪೊಟೆನ್ಸ್ ಇದ್ದಾಗ ಈ ಸಮಸ್ಯೆ ಮದುವೆಗೆ ಮುನ್ನ ಗೊತ್ತಾಗುವುದಿಲ್ಲ. ಸಂಗಾತಿಯ ಜತೆಗೆ ಮಾತ್ರವೇ ಲೈಂಗಿಕತೆಗೆ ಅಮರ್ಥರಾಗಲು ಕೆಲವು ಮಾನಸಿಕ (Mental) ಹಾಗೂ ದೈಹಿಕ ಪರಿಸ್ಥಿತಿಗಳು ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು. ಅಂತಹ ಸಮಯದಲ್ಲಿ ಪರಸ್ಪರ ಅರ್ಥ ಮಾಡಿಕೊಂಡು, ಪ್ರೀತಿ (Love)-ಹೊಂದಾಣಿಕೆ ಮೂಡಲು ಸಮಯ ನೀಡಬೇಕಾಗುತ್ತದೆ. ಅಷ್ಟು ಸಮಯ ನೀಡಿದ ಮೇಲೂ ಲೈಂಗಿಕತೆಗೆ ಅಮರ್ಥರಾದರೆ ಮುಂದಿನ ವಿಚಾರ ಮಾಡಬಹುದು.  

Latest Videos
Follow Us:
Download App:
  • android
  • ios