Parent Shaming: ಪೋಷಕರ ಮೇಲೆ ಮಾತ್ರವಲ್ಲ ಮಕ್ಕಳ ಮೇಲೂ ಕೆಟ್ಟ ಪರಿಣಾಮ !
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಬೈಯುವುದಕ್ಕಿಂತೂ ಹೆಚ್ಚಾಗಿ, ಮಕ್ಕಳು ಪೋಷಕರಿಗೆ ಬೈಯುವುದು ಹೆಚ್ಚಾಗಿದೆ. ಏನಿದು ಪೇರೆಂಟ್ ಶೇಮಿಂಗ್ (Parent shaming)? ಇದರಿಂದ ಮಕ್ಕಳು ಹಾಗೂ ಪೋಷಕರ ಮೇಲಾಗುವ ಪರಿಣಾಮವೇನು ತಿಳಿಯೋಣ.
ಈಗಿನ ಜನರೇಷನ್ (Generation) ಹೇಗಿದೆ ಎಂದರೆ ತಂದೆ, ತಾಯಿಗಿಂತ ಮಕ್ಕಳು 10 ಪಟ್ಟು ಚುರುಕಾಗಿರುತ್ತವೆ. ಮಾತು, ನಡವಳಿಕೆ, ಚುರುಕುತನ ಯಾವುದೇ ವಿಷಯವಿರಬಹುದು. ಅಂದರೆ ಫಾಸ್ಟ್ ತಿಂಕಿಂಗ್ ಕ್ಯಾಪ್ಯಾಸಿಟಿ (Thinking Capacity)ಯನ್ನು ಸಣ್ಣ ವಯಸ್ಸಿಗೇ ಬೆಳೆಸಿಕೊಂಡಿರುತ್ತಾರೆ. ಅದು ಸಾಧಕ ಬಾಧಕ (Pro-cons) ಎರಡನ್ನೂ ಒಳಗೊಂಡಿರುತ್ತವೆ.ಮಕ್ಕಳು ಎಲ್ಲಾ ರೀತಿಯಲ್ಲೂ ಪೋಷಕರಿಂದ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿಯೇ ತಾವೇ ಸುಪೀರಿಯರ್ ಎಂಬ ಕೆಟ್ಟ ಮನೋಭಾವವನ್ನು ಹೊಂದಿರುತ್ತಾರೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಪೇರೆಂಟ್ ಶೇಮಿಂಗ್ (Parent shaming) ಎನ್ನುವುದು ಸಾಮಾನ್ಯವಾಗಿ ಹೋಗಿದೆ.
ಪ್ರತಿಯೊಬ್ಬ ಪೋಷಕರೂ (Parents) ತಮ್ಮ ಮಕ್ಕಳು (Children) ಜೀವನದಲ್ಲಿ ಯಶಸ್ವೀ ವ್ಯಕ್ತಿಗಳಾಗಬೇಕು ಎಂದು ಆಶಿಸುತ್ತಾರೆ. ಅದಕ್ಕಾಗಿ ಮಕ್ಕಳನ್ನು ಅತಿ ಮುದ್ದು ಮಾಡುವುದು, ಬೈಯುವುದು, ಕೇಳಿದ್ದನ್ನೆಲ್ಲಾ ಕೊಡಿಸುವುದು ಮೊದಲಾದವನ್ನು ಮಾಡುತ್ತಾರೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಲೆಕ್ಕವಿಲ್ಲದಷ್ಟು ಜವಾಬ್ದಾರಿಗಳನ್ನು ಹೊಂದಿದ್ದಾರೆ.
ಪೋಷಕರು ಮಕ್ಕಳ ಜೊತೆ ಹೇಗಿದ್ದರೆ ಒಳ್ಳೇದು ? ಟಾಟಾ ಗ್ರೂಪ್‌ನ ಅಧಿಕಾರಿ ಏನ್ ಹೇಳ್ತಾರೆ ಕೇಳಿ..
ಹೀಗಿರುವಾಗ ಪೋಷಕರಿಗೆ ಕೆಲವೊಂದು ವಿಚಾರಗಳು ಗೊತ್ತಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಹೀಯಾಳಿಸಬಹುದಾ ? ಅಥವಾ ಮಕ್ಕಳು ಮಾಡುವ ತಪ್ಪುಗಳಿಗೆ ನಾವು ಪೋಷಕರನ್ನು ದೂಷಿಸಬಹುದೇ ? ಖಂಡಿತವಾಗಿಯೂ ಇಲ್ಲ. ಹೀಗಿದ್ದೂ ಪೇರೆಂಟ್ ಶೇಮಿಂಗ್ ನಡೆಯುತ್ತಲೇ ಇದೆ. ಮಕ್ಕಳಿಂದ ತೊಡಗಿ, ಸಂಬಂಧಿಕರು, ಸಮಾಜದ ಮಂದಿಯೂ ಪೋಷಕರನ್ನು ಆಡಿಕೊಳ್ಳುತ್ತಾರೆ.
ಇದನ್ನೇ ಮನಶ್ಶಾಸ್ತ್ರಜ್ಞರು ಮತ್ತು ಪೋಷಕರ ತಜ್ಞರು ಪೋಷಕರ ಶೇಮಿಂಗ್ ಎಂದು ವ್ಯಾಖ್ಯಾನಿಸುತ್ತಾರೆ. ಯಾವುದೇ ನೈಜ ಹಾನಿಯನ್ನುಂಟುಮಾಡದ ಕ್ರಮಗಳಿಗಾಗಿ ಪೋಷಕರನ್ನು ಟೀಕಿಸುವುದಾಗಿದೆ. ಮಕ್ಕಳು ಬೆಳೆಯುತ್ತಾ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಾ ಹೋಗುತ್ತದೆ. ಹಿಂದಿನ ಜನರೇಷನ್‌ನ ಪೋಷಕರಿಗೆ ಇದು ಅರ್ಥವಾಗುವುದಿಲ್ಲ. ಪೋಷಕರ ದಿರಿಸು, ಗ್ಯಾಜೆಟ್ಸ್ ಬಳಸಲು ಬರದೇ ಇರುವುದು, ಹಲವು ಭಾಷೆಗಳ ತೊಡಕು ಈ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳು ಪೋಷಕರನ್ನು ಹೀಯಾಳಿಸುತ್ತಲೇ ಇರುತ್ತಾರೆ. ಅದೆಷ್ಟೋ ಮಕ್ಕಳಿಗೆ ತಮ್ಮ ಪೋಷಕರನ್ನು ಇತರರಿಗೆ ಪರಿಚಯಿಸಿ ಕೊಡುವುದೇ ಅವಮಾನದ ವಿಷಯ. ಸಮಾಜದಲ್ಲಿ ಪೋಷಕರ ದೂಷಣೆ ಬೇರೆಯೇ ಇರುತ್ತದೆ.
ಸೆಲೆಬ್ರಿಟಿಗಳು ಕೂಡ ಇದನ್ನು ಅನುಭವಿಸಿದ್ದಾರೆ ಮತ್ತು ಅದರ ಬಗ್ಗೆ ಮಾತನಾಡಿದ್ದಾರೆ. 2017 ರಲ್ಲಿ, ಲೆಜೆಂಡರಿ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಮ್ ಅವರು ತಮ್ಮ ಆಗಿನ 5 ವರ್ಷದ ಮಗಳನ್ನು ತುಟಿಗಳ ಮೇಲೆ ಚುಂಬಿಸುವ ಚಿತ್ರವನ್ನು ಪೋಸ್ಟ್ ಮಾಡಿದಾಗ ಹಲವಾರು ನಕಾರಾತ್ಮಕ ಕಾಮೆಂಟ್ಗಳನ್ನು ಪಡೆದರು. ಪ್ರೀತಿಯ ಪ್ರದರ್ಶನವಾಗಬೇಕಿದ್ದ ಪೋಸ್ಟ್ ಅನ್ನು ಅನುಚಿತ ಎಂದು ಕರೆಯಲಾಯಿತು. ನಟಿ ರೀಸ್ ವಿದರ್‌ಸ್ಪೂನ್ ತನ್ನ ಮಗುವಿಗೆ ಬೆಳಗಿನ ಉಪಾಹಾರಕ್ಕಾಗಿ ನಿಂದನೆ ಎದುರಿಸಬೇಕಾಯಿತು.
ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !
ಅವಮಾನವು ಒಂದು ಭಾವನೆ ಮತ್ತು ಅದು ತುಂಬಾ ನೋವಿನಿಂದ ಕೂಡಿದೆ. ಇದು ತಪ್ಪಿತಸ್ಥ ಭಾವನೆಗಿಂತ ಭಿನ್ನವಾಗಿದೆ, ಇದು ಕನಿಷ್ಠ ವ್ಯಕ್ತಿಗೆ ಅವನ / ಅವಳ ಕ್ರಿಯೆಗಳನ್ನು ಬೆಳೆಯಲು ಮತ್ತು ಮಾರ್ಪಡಿಸಲು ಅವಕಾಶವನ್ನು ನೀಡುತ್ತದೆ. ಮತ್ತೊಂದೆಡೆ ಅವಮಾನವು ಸ್ವತಃ ತನ್ನ ಬಗ್ಗೆ ಕೆಟ್ಟ ಭಾವನೆಯನ್ನು ಉಂಟುಮಾಡುತ್ತದೆ. ಅನರ್ಹ ಮತ್ತು ಅಸಮರ್ಪಕ ಭಾವನೆಯನ್ನು ಮೂಡಿಸುತ್ತದೆ. ಯಾವುದೇ ಪೋಷಕರು ಪರಿಪೂರ್ಣರಲ್ಲ. ಹಾಗೆಂದು ಅವರನ್ನು ಟೀಕಿಸುವುದು ಸರಿಯಾದ ಮಾರ್ಗವಲ್ಲ. ಅವರನ್ನು ನಿರ್ಣಯಿಸುವುದು, ಟೀಕಿಸುವುದು ಮತ್ತೂ ನಾಚಿಕೆಪಡುವಂತೆ ಮಾಡುತ್ತದೆ. ಇದು ಪೋಷಕರಿಗೂ ಅನ್ವಯಿಸುತ್ತದೆ. ಪೇರೆಂಟ್ ಶೇಮಿಂಗ್‌ನಿಂದ ಪೋಷಕರು ಇಂಥಾ ಕಷ್ಟದ ಸಮಯವನ್ನು ಎದುರಿಸುತ್ತಾರೆ.
ಪೋಷಕರು ಅವಮಾನದಿಂದ ಹೆಚ್ಚು ನೆಗೆಟಿವ್ ಮೈಂಡ್‌ನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಅಥವಾ ಸ್ವ ಸಾಮರ್ಥ್ಯದ ಬಗ್ಗೆಯೇ ಸಂದೇಹ ಪಟ್ಟುಕೊಳ್ಳಬಹುದು. ಇದು ಕೇವಲ ಪೋಷಕರ ಮನಸ್ಥಿತಿಯ ಮೇಲೆ ಮಾತ್ರವಲ್ಲ, ತಮ್ಮ ಮಗುವಿನ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ. ಪೇರೆಂಟ್ ಶೇಮಿಂಗ್ ಮೂಲಕ ಮಕ್ಕಳೂ ಸ್ವತಃ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.
ತೀವ್ರವಾದ ಪಾಲನೆಯು ಮಕ್ಕಳಲ್ಲಿ ಈ ರೀತಿ ಶೇಮಿಂಗ್ ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣವಾಗುತ್ತಿದೆ. ಪೋಷಕರು ಮಕ್ಕಳನ್ನು ಬೆಳೆಸಲು ಗಮನಾರ್ಹ ಪ್ರಮಾಣದ ಸಮಯ, ಹಣ ಮತ್ತು ಪರಿಶ್ರಮ ಪಡುತ್ತಾರೆ. ಇದು ಮಗುವಿನ ಜೀವನದಲ್ಲಿ ಅತಿಯಾಗಿ ತೊಡಗಿಸಿಕೊಳ್ಳಲು ಮತ್ತು ಹಾನಿಯ ಮಾರ್ಗದಿಂದ ಅವರನ್ನು ರಕ್ಷಿಸಲು ಬಯಸುತ್ತದೆ. ಆದರೆ ಓವರ್‌ಪರೆಂಟಿಂಗ್ ಮಕ್ಕಳ ಸ್ವಭಾವವನ್ನು ಹಾಳು ಮಾಡುತ್ತದೆ. ಪೋಷಕರನ್ನೇ ಅವಮಾನಿಸುವಂತೆ ಮಾಡುತ್ತದೆ.