Asianet Suvarna News Asianet Suvarna News

ಮದುವೆ ಸಮಯದಲ್ಲಿ ತಂದೆ ಬಾಯಿಂದ ಈ ಮಾತು ಕೇಳ ಬಯಸ್ತಾಳೆ ಮಗಳು

ಮದುವೆ ಜೀವನದ ದೊಡ್ಡ ಘಟ್ಟ. ಈ ಸಮಯದಲ್ಲಿ ಮಗಳು ಹೊಸ ಬಾಳಿಗೆ ಕಾಲಿಡುವ ಆತುರ, ಆತಂಕದಲ್ಲಿರ್ತಾಳೆ. ಅವಳ ಜೀವನ ಸುಖವಾಗಿಬೇಕೆಂದ್ರೆ ತಂದೆಯಾದವನು ತನ್ನ ಜವಾಬ್ದಾರಿ ನಿಭಾಯಿಸಬೇಕು. ಗಂಡನ ಮನೆಗೆ ಹೋಗುವ ಮೊದಲು ತಂದೆ ಈ  ಕೆಲಸ ಮಾಡಬೇಕು.

Relationship Every Father Should Say These Five Things To His Daughter roo
Author
First Published Oct 21, 2023, 3:03 PM IST

ಮಗಳು ತನ್ನ ಜೀವನದಲ್ಲಿ ಮೊದಲು ನೋಡುವ ಪುರುಷನೆಂದ್ರೆ ಅದು ತಂದೆ. ಮಗಳಿಗೆ ಅಪ್ಪನೇ ತನ್ನ ಮೊದಲ ಹಿರೋ ಆಗಿರ್ತಾನೆ. ಮಗಳು ತಂದೆಯನ್ನು ಕಣ್ಮುಚ್ಚಿ ನಂಬುತ್ತಾಳೆ. ತಂದೆಗೆ ಮಗಳು ತನ್ನ ಜೀವನದಲ್ಲಿ ನೀಡುವ ಸ್ಥಾನ ಹಾಗೂ ಪ್ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ತಂದೆ ಉತ್ತಮ ಸ್ನೇಹಿತ, ಗುರು, ಸೂಪರ್ ಹೀರೋ, ಮಾದರಿ ವ್ಯಕ್ತಿಯಾಗಿರ್ತಾನೆ. ತನಗೆ ಅಪ್ಪನಂತಹ ಪತಿ ಸಿಗ್ಬೇಕೆಂದು ಬಹುತೇಕ ಹೆಣ್ಮಕ್ಕಳು ಬಯಸ್ತಾರೆ. ಬಾಲ್ಯದಲ್ಲಿ, ಯೌವನದಲ್ಲಿ ತಂದೆಯ ಮನೆಯಲ್ಲಿ ಆರಾಮದ ಜೀವನ ನಡೆಸುವ ಹುಡುಗಿ ಮದುವೆ ಸಮಯದಲ್ಲಿ ಭಯಕ್ಕೆ ಒಳಗಾಗ್ತಾಳೆ. ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ಆಕೆ ಗಂಡನ ಮನೆಗೆ ಹೋಗ್ಬೇಕಾಗುತ್ತದೆ. ಈ ಸಮಯದಲ್ಲಿ ತಂದೆ ಬಾಯಿಂದ ಕೆಲ ಮಾತುಗಳನ್ನು ಮಗಳು ಕೇಳ ಬಯಸ್ತಾಳೆ. ತಂದೆಯಾದವನು ಮಗಳಿಗೆ ಕೆಲ ಆಶ್ವಾಸನೆ, ವಿಶ್ವಾಸ, ಧೈರ್ಯ ತುಂಬುವ ಮಾತುಗಳನ್ನು ಆಡಿದ್ರೆ ಆಕೆ ನೆಮ್ಮದಿಯಾಗಿ ಗಂಡನ ಮನೆಯಲ್ಲಿ ಜೀವನ ಸಾಗಿಸ್ತಾಳೆ. ಹಾಗಿದ್ರೆ ಗಂಡನ ಮನೆಗೆ ಹೋಗುವ ಮೊದಲು ತಂದೆ ಮಾಡಬೇಕಾದ ಕೆಲಸವೇನು ಗೊತ್ತಾ?.

ತಂದೆ ಬಾಯಿಂದ ಯಾವ ಮಾತು ಕೇಳ ಬಯಸ್ತಾಳೆ ಮಗಳು?: ಮದುವೆ (Wedding) ಯಾಗಿ ಮತ್ತೊಂದು ಮನೆಯಲ್ಲಿ ತನ್ನ ಹೊಸ ಜೀವನ (Life) ಶುರು ಮಾಡಲು ಮುಂದಾಗುವ ಮಗಳಿಗೆ ಅದು  ಸಂಕೀರ್ಣತೆಯ ಸಮಯ. ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂದೆಯಾದವನು, ಚಿಂತೆ ಮಾಡಬೇಡ ನಾನಿದ್ದೇನೆ  ಎಂದು ಹೇಳಿದ್ರೆ ಸಾಕು. ಆಕೆಗೆ ಸಮಾಧಾನ ಆಗುತ್ತದೆ. 

100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ

ಮದುವೆಯಾದ್ಮೇಲೆ ಹೆಣ್ಣು ತವರಿನಿಂದ ದೂರ ಎನ್ನುವ ಮಾತೊಂದಿದೆ. ತಂದೆ (Father ) ಯಾದವನು ಈ ಕಲ್ಪನೆಯಿಂದ ಹೊರ ಬರುವಂತೆ ಮಗಳಿಗೆ ಹೇಳ್ಬೇಕು. ತವರಿನ ಬಾಗಿಲು ಮಗಳಿಗೆ ಯಾವಾಗಲೂ ತೆರೆದಿದೆ ಎಂದು ಮಗಳಿಗೆ ತಿಳಿಸಬೇಕು. ಆಗ ಮಗಳು ಖುಷಿ ಖುಷಿಯಾಗಿ ತವರಿಗೆ ಬರ್ತಾಳೆ, ತವರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾಳೆ.

ಅತ್ತೆ ಮನೆಯವರ ಜೊತೆ ಹೇಗೆ ವರ್ತಿಸಬೇಕು ಎನ್ನುವುದ ಅಮ್ಮ ಹೇಳುವುದಕ್ಕಿಂತ ಅಪ್ಪ ಹೇಳಿದ್ರೆ ಉತ್ತಮ. ಹೆಣ್ಮಕ್ಕಳು ಯಾವಾಗ್ಲೂ ತಂದೆಗೆ ಪ್ರಿಯವಾಗಿರ್ತಾರೆ. ಅಪ್ಪ ಹೇಳಿದ ಮಾತನ್ನು ಅವರು ಹೆಚ್ಚು ಆಲಿಸ್ತಾರೆ. ಅತ್ತೆಯನ್ನು ಗೌರವಿಸುವಂತೆ ತಂದೆ ಮಗಳಿಗೆ ಹೇಳ್ಬೇಕು. ಮನೆಯಲ್ಲಿ ತಂದೆ – ತಾಯಿಯನ್ನು ನೋಡಿದಂತೆ, ಪ್ರೀತಿ ತೋರಿಸಿದಂತೆ, ಗೌರವಿಸಿದಂತೆ ಗಂಡನ ಮನೆಯಲ್ಲೂ ಅತ್ತೆ – ಮಾವ ಹಾಗೇ ಕುಟುಂಬಸ್ಥರನ್ನು ಗೌರವಿಸಬೇಕೆಂದು ತಂದೆ ಮಗಳಿಗೆ ಹೇಳ್ಬೇಕಾಗುತ್ತದೆ. ಪತಿಯಿಂದ ನೀನು ಏನೆಲ್ಲ ಬಯಸ್ತಿಯೋ ಅದೇ ರೀತಿ ನೀನು ಯಾವುದೇ ನಿರೀಕ್ಷೆ ಇಲ್ಲದೆ ಅತ್ತೆ ಕುಟುಂಬಕ್ಕೆ ಪ್ರೀತಿ ನೀಡ್ಬೇಕೆಂದು ಹೇಳಬೇಕು.

ಅತ್ತೆ ಮನೆಯಲ್ಲಿ ಹೇಗಿರಬೇಕು ಎಂಬುದು ಮಗಳಿಗೆ ತಿಳಿದಿರುತ್ತದೆ. ಆದ್ರೆ ತಂದೆಯಾದವನು ಆಕೆ ಆತ್ಮಗೌರವಕ್ಕೆ ಧಕ್ಕೆ ಆಗದಂತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿವರಿಸಬೇಕು. ನಿನ್ನ ಪರವಾಗಿ ನಾನಿದ್ದೇನೆ, ನಿನ್ನೆಲ್ಲ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ ಎಂಬ ಧೈರ್ಯವನ್ನು ಆಕೆಗೆ ತುಂಬಬೇಕು.

ನೀವ್‌ ತುಂಬಾ ರೋಮ್ಯಾಂಟಿಕ್ ವ್ಯಕ್ತಿನಾ.. ಅಲ್ಲ ಬೋರಿಂಗ್ ಪರ್ಸನ್ನಾ..ಫೋಟೋ ನೋಡಿ ತಿಳ್ಕೊಳ್ಳಿ

ಒಬ್ಬ ಪತಿ ಏನನ್ನು ಬಯಸ್ತಾನೆ ಎಂಬುದು ತಂದೆಗೆ ತಿಳಿದಿರುತ್ತದೆ. ಪತ್ನಿ ತನಗೆ ಹೊಂದಿಕೊಳ್ಳಬೇಕೆಂದು ಪತಿ ಬಯಸ್ತಾನೆ. ಆದ್ರೆ ಈ ಹೊಂದಾಣಿಕೆಯಲ್ಲಿ ಪತಿಯ ಕೆಟ್ಟ ನಡವಳಿಕೆಯನ್ನೂ ಆಕೆ ಸಹಿಸಬೇಕಾಗಿಲ್ಲ. ಜೀವನದಲ್ಲಿ ಯಾವುದಕ್ಕೆ ಹೊಂದಿಕೊಳ್ಳಬೇಕು, ಯಾವುದಕ್ಕೆ ಹೊಂದಿಕೊಳ್ಳಬಾರದು, ಯಾವುದನ್ನು ಪ್ರತಿಭಟಿಸಬೇಕು ಎಂಬುದನ್ನು ತಂದೆ ಮಗಳಿಗೆ ಹೇಳ್ಬೇಕು. ಹಾಗೆಯೇ ಗಂಡನ ಕೆಟ್ಟ ನಡವಳಿಕೆಯನ್ನು ಮೌನವಾಗಿ ಸಹಿಸಿಕೊಳ್ಳುವ ಬದಲು ತನ್ನ ಬಳಿ ಎಲ್ಲವನ್ನೂ ಹೇಳುವಂತೆ ತಿಳಿಸಬೇಕು. ಆಗ ಮಗಳು ಧೈರ್ಯವಾಗಿ ಗಂಡನ ಮನೆಗೆ ಹೋಗ್ತಾಳೆ. ತನ್ನ ಬೆಂಬಲಕ್ಕೆ ತಂದೆಯಿದ್ದಾರೆಂಬ ಬಲವಾದ ನಂಬಿಕೆ ಆಕೆಗಿರುತ್ತದೆ.
 

Follow Us:
Download App:
  • android
  • ios