Asianet Suvarna News Asianet Suvarna News

ನೀವ್‌ ತುಂಬಾ ರೋಮ್ಯಾಂಟಿಕ್ ವ್ಯಕ್ತಿನಾ.. ಅಲ್ಲ ಬೋರಿಂಗ್ ಪರ್ಸನ್ನಾ..ಫೋಟೋ ನೋಡಿ ತಿಳ್ಕೊಳ್ಳಿ

ಫ್ಯೂಚರ್, ಲವ್‌, ವೈವಾಹಿಕ ಜೀವನ ಹೇಗಿರುತ್ತದೆ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿರುತ್ತದೆ. ರಿಲೇಶನ್‌ಶಿಪ್‌ನಲ್ಲಿ ನೀವು ತುಂಬಾ ರೋಮ್ಯಾಂಟಿಕ್ ವ್ಯಕ್ತಿನಾ ಅಲ್ಲ ಬೋರಿಂಗ್ ಪರ್ಸನಾ..ಫೋಟೋ ನೋಡಿ, ನಿಮ್ ವ್ಯಕ್ತಿತ್ವ ಹೇಗೇಂತ ತಿಳ್ಕೊಳ್ಳಿ.

Are You Romantic Or A Loner In Relationships, This Optical Illusion Will Reveal Your True Personality Vin
Author
First Published Oct 21, 2023, 10:26 AM IST

ಫೋಟೋಸ್ ಅಥವಾ ಭ್ರಮೆಯ ಫೋಟೋಗಳು ಮಾನವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಹಲವಾರು ವರ್ಷಗಳನ್ನು ಕಳೆದಿದ್ದಾರೆ. ಕೆಲವರು ಆಪ್ಟಿಕಲ್ ಇಲ್ಯೂಶನ್ ಮನಸ್ಸನ್ನು ಚುರುಕುಗೊಳಿಸುತ್ತದೆ ಎನ್ನುತ್ತಾರೆ. ಇನ್ನು ಕೆಲವರು, ಇದನ್ನು ಜಸ್ಟ್ ಟೈಂ ಪಾಸ್‌ಗೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಪ್ರಯೋಜನವಿದ್ದರೂ, ಇಲ್ಲದಿದ್ದರೂ ಇಂಥಾ ಆಪ್ಟಿಕಲ್ ಇಲ್ಯೂಶನ್ ಫೋಟೋಸ್ ಆಗಾಗ ವೈರಲ್ ಅಗುತ್ತಲೇ ಇರುತ್ತವೆ. ಅಂಥಹದ್ದೇ ಗೊಂದಲಮಯವಾದ ಪೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಫ್ಯೂಚರ್, ಲವ್‌, ವೈವಾಹಿಕ ಜೀವನ ಹೇಗಿರುತ್ತದೆ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿರುತ್ತದೆ. ರಿಲೇಶನ್‌ಶಿಪ್‌ನಲ್ಲಿ ನೀವು ತುಂಬಾ ರೋಮ್ಯಾಂಟಿಕ್ ವ್ಯಕ್ತಿನಾ ಅಲ್ಲ ಬೋರಿಂಗ್ ಪರ್ಸನಾ..ಫೋಟೋ ನೋಡಿ, ನಿಮ್ ವ್ಯಕ್ತಿತ್ವ (Personality) ಹೇಗೇಂತ ತಿಳ್ಕೊಳ್ಳಿ. ಈ ಆಪ್ಟಿಕಲ್ ಇಲ್ಯೂಷನ್ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಸಂಬಂಧದಲ್ಲಿ (Relationship) ನೀವು ಹೆಚ್ಚು ರೋಮ್ಯಾಂಟಿಕ್ ಆಗಿದ್ದೀರಾ ಅಥವಾ  ಒಂಟಿ (Alone)ಯಾಗಿದ್ದೀರಾ ಎಂಬುದನ್ನು ತಿಳಿಸುತ್ತದೆ. 

ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

ಆಪ್ಟಿಕಲ್ ಇಲ್ಯೂಶನ್‌ ಎಂದರೇನು?
ಆಪ್ಟಿಕಲ್ ಭ್ರಮೆಗಳು ನಿರ್ಧಿಷ್ಟ ವಿಷಯವನ್ನು ಸೆರೆಹಿಡಿಯುವ ದೃಶ್ಯಗಳಾಗಿವೆ, ಅದು ಮನಸ್ಸನ್ನು ಬೆರಗುಗೊಳಿಸಬಹುದು, ವಿಷಯಗಳನ್ನು ಅವುಗಳ ನೈಜ ರೂಪಕ್ಕಿಂತ ಭಿನ್ನವಾದ ರೀತಿಯಲ್ಲಿ ಗ್ರಹಿಸಲು ನಿಮ್ಮನ್ನು ಪ್ರೇರೇಪಿಸಬಹುದು. ಈ ಚಿತ್ರಗಳು (Image) ಸಾಮಾನ್ಯವಾಗಿ ಚಿತ್ರದೊಳಗೆ ಅಸ್ತಿತ್ವದಲ್ಲಿಲ್ಲದ ಅಂಶಗಳನ್ನು ಪರಿಚಯಿಸುವ ಮೂಲಕ ಅಥವಾ ಸಾಮಾನ್ಯವಾಗಿ ಸುಲಭವಾಗಿ ಗಮನಿಸಬಹುದಾದ ಅಗತ್ಯ ವಿವರಗಳನ್ನು ಮರೆಮಾಡುವ ಮೂಲಕ ಭ್ರಮೆಗಳನ್ನು ಉಂಟುಮಾಡುತ್ತವೆ.

ಚಿತ್ರದಲ್ಲಿ ನಿಮಗೇನು ಕಾಣಿಸುತ್ತಿದೆ?
ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳುವ ರೀತಿ ತುಂಬಾ ಸರಳವಾಗಿದೆ. ಮೊದಲು ನೀವು ಈ ಚಿತ್ರವನ್ನು ಗಮನಿಸಿ. ತಕ್ಷಣಕ್ಕೆ ನಿಮಗೆ ಯಾವ ವಸ್ತು ಕಾಣಿಸುತ್ತದೆ ಎಂಬುದುನ್ನು ತಿಳಿದುಕೊಳ್ಳಿ. ನೀವು ಮೊದಲು ನೋಡುವ ವಸ್ತು (Things) ಸಂಬಂಧದಲ್ಲಿ ನೀವು ರೋಮ್ಯಾಂಟಿಕ್‌ ವ್ಯಕ್ತಿಯಾ ಅಥವಾ ಹೆಚ್ಚು ಆಸಕ್ತಿ (Interest)ಯಿಲ್ಲದ ವ್ಯಕ್ತೀನಾ ಎಂಬುದನ್ನು ಬಹಿರಂಗಪಡಿಸುತ್ತದೆ.

ಲವ್‌ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ

ಮರ
ಫೋಟೋ ನೋಡಿದ ತಕ್ಷಣ ನಿಮಗೆ ಮರ ಕಾಣಿಸಿದರೆ, ನೀವು ಏಕಾಂತತೆಯನ್ನು ಮೆಚ್ಚುವ ವ್ಯಕ್ತಿ. ಅಂದರೆ ಸಂಬಂಧದಲ್ಲಿ ಇರಲು ಇಷ್ಟಪಡದೆ ಒಂಟಿಯಾಗಿರಲು ಇಷ್ಟಪಡುತ್ತೀರಿ. ನೀವು ಪ್ರಕೃತಿಯ ಬಗ್ಗೆ ಆಳವಾದ ಒಲವನ್ನು ಹೊಂದಿದ್ದೀರಿ ಮತ್ತು ಶಾಂತವಾಗಿರುತ್ತೀರಿ, ನೀವು ನಿಮ್ಮ ಏಕಾಂಗಿ ಸಮಯವನ್ನುಗೌರವಿಸುತ್ತೀರಿ. ತುಂಬಾ ಭಾವುಕರಾಗಿರುವ ವ್ಯಕ್ತಿಗಳಾಗಿರುತ್ತೀರಿ. ಹೀಗಾಗಿ ಯಾವುದೇ ಭಾವನಾತ್ಮಕ ಹಾನಿಯನ್ನು ಉಂಟುಮಾಡುವುದನ್ನು ತಡೆಯಲು ಇತರರೊಂದಿಗೆ ಸಂವಹನವನ್ನು ಕಡಿಮೆ ಮಾಡುತ್ತೀರಿ. ಮತ್ತೊಬ್ಬರು ನಿಮಗೆ ನೋವುಂಟು ಮಾಡಬಹುದು ಎಂಬ ಉದ್ದೇಶದಿಂದಲೇ ನೀವು ಯಾವುದೇ ಪ್ರೀತಿಯ ಸಂಬಂಧದಲ್ಲಿ ಇರಲು ಇಷ್ಟಪಡುವುದಿಲ್ಲ.

ದಂಪತಿ ಪರಸ್ಪರ ನೋಡುತ್ತಿರುವ ಚಿತ್ರ
ಪರಸ್ಪರ ಪ್ರೀತಿಯಿಂದ ನೋಡುತ್ತಿರುವ ದಂಪತಿಯನ್ನು ನೀವು ಗಮನಿಸಿದರೆ ನೀವು ತುಂಬಾ ರೋಮ್ಯಾಂಟಿಕ್ ವ್ಯಕ್ತಿ ಎಂದರ್ಥ. ಇದು ಪ್ರಣಯ ಮತ್ತು ಭಾವನಾತ್ಮಕತೆಯ ಕಡೆಗೆ ನಿಮ್ಮ ಒಲವನ್ನು ಪ್ರತಿಬಿಂಬಿಸುತ್ತದೆ. ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ನೀವು ಹೆಚ್ಚು ಆಕರ್ಷಿತರಾಗುತ್ತೀರಿ. ಪ್ರೀತಿಯನ್ನು ಸೂಚಿಸುವ ಸೂಕ್ಷ್ಮ ಸನ್ನೆಗಳು ಮತ್ತು ಅಭಿವ್ಯಕ್ತಿಗಳನ್ನು ನೀವು ಹೆಚ್ಚಾಗಿ ಪ್ರಶಂಸಿಸುತ್ತೀರಿ. ನೀವು ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ ಹೊಂದಿರುತ್ತೀರಿ. ತಮ್ಮ ಮಾತಿನ ಮೋಡಿಯ ಮೂಲಕ ಯಾರನ್ನಾದರೂ ಸುಲಭವಾಗಿ ನಿಮ್ಮತ್ತ ವಾಲುವಂತೆ ಮಾಡುತ್ತೀರಿ. 

ಸೋ, ಆಪ್ಟಿಕಲ್ ಇಲ್ಯೂಶನ್‌ ನೋಡಿ ಸಂಬಂಧದಲ್ಲಿ ನೀವು ಹೇಗಿರ್ತೀರಿ ಗೊತ್ತಾಯ್ತಲ್ಲ. ಇದಕ್ಕೆ ಅನುಗುಣವಾಗಿ ಪ್ರೀತಿಯಲ್ಲಿ ನೀವು ಹೇಗಿರ್ಬೇಕು, ಹೇಗಿದ್ದರೆ ಒಳ್ಳೆಯದು ಎಂದು ನಿಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳಬಹುದು.

Follow Us:
Download App:
  • android
  • ios