ಪ್ರೀತಿಯಲ್ಲಿದ್ದೂ Loneliness ಕಾಡ್ತಿದ್ಯಾ? ಕಾರಣ ಕಂಡುಕೊಳ್ಳಿ
ಹಲವು ಬಾರಿ ಹೀಗೇ ಆಗುತ್ತದೆ. ಪ್ರೀತಿಯಲ್ಲಿದ್ದೂ, ಸಂಬಂಧವೊಂದರಲ್ಲಿದ್ದೂ ಒಂಟಿತನ ಕಾಡುತ್ತದೆ. ಇದೇಕೆ ಹೀಗಾಗುತ್ತದೆ? ಎಲ್ಲ ಇದ್ದೂ ಒಂಟಿ ಎನಿಸುವುದೇಕೆ?
ಇತ್ತೀಚಿನ ದಿನಗಳಲ್ಲಿ ದಾಂಪತ್ಯ (Marriage) ದಲ್ಲಿ ಬೇಗ ಬಿರುಕು ಕಾಣಿಸಿಕೊಳ್ತಿದೆ. ಸಂಗಾತಿ (Partner) ಮಧ್ಯೆ ಮದುವೆಯಾದ ತಿಂಗಳೊಳಗೆ ಜಗಳಗಳು ಶುರುವಾಗ್ತಿವೆ. ಎಲ್ಲ ಸಂಬಂಧಗಳಲ್ಲಿ ದಾಂಪತ್ಯ ಅತಿ ಸೂಕ್ಷ್ಮ ಸಂಬಂಧವಾಗಿದೆ. ಸಂಗಾತಿಯ ಭಾವನೆ (Emotion) ಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಪ್ರೀತಿ (Love), ಗೌರವ (Respect) ನೀಡಿ, ವಿಶ್ವಾಸದೊಂದಿಗೆ ಸಂಬಂಧ ಮುಂದುವರೆಸಬೇಕಾಗುತ್ತದೆ. ಮದುವೆಯಾದ್ಮೇಲೆ ಇಬ್ಬರೂ ಒಟ್ಟಿಗೆ ಇರಬೇಕು. ನಾಲ್ಕು ದಿನಕ್ಕೆ ಒಟ್ಟಿಗಿದ್ದು ಹೋಗುವ ಸಂಬಂಧ ಇದಲ್ಲ. ಹಾಗಾಗಿ ಮದುವೆಯಾದ ಆರಂಭದಲ್ಲಿ ನಾಟಕವಾಡುವ ಅಗತ್ಯವಿಲ್ಲ. ಆರಂಭದಿಂದಲೂ ನಿಮ್ಮತನವನ್ನು ನೀವು ಉಳಿಸಿಕೊಳ್ಳುವ ಅಗತ್ಯವಿದೆ.
ಸಂಗಾತಿ ಇಷ್ಟಪಡುವ ಅಥವಾ ಇಷ್ಟಪಡದಿರುವ ವಿಷಯಗಳನ್ನು ಪರಸ್ಪರ ತಿಳಿದುಕೊಳ್ಳಬೇಕು. ನಿಮ್ಮ ಸಂಬಂಧಕ್ಕಾಗಿ ನಿಮ್ಮನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಮದುವೆಯಾದ್ಮೇಲೆ ಅಥವಾ ಪ್ರೀತಿಗೆ ಬಿದ್ಮೇಲೆ ನಿಮ್ಮ ಕೆಲವು ಹವ್ಯಾಸಗಳನ್ನು ನೀವು ಬದಲಾಯಿಸಬೇಕಾದರೆ, ಅಂತಹ ಸಂಬಂಧವನ್ನು ಎಂದಿಗೂ ಮುಂದುವರಿಸಬಾರದು. ಸಂಬಂಧಕ್ಕಾಗಿ ನಿಮ್ಮ ಆಸಕ್ತಿಗಳನ್ನು ಬಿಟ್ಟುಕೊಡುವ ತಪ್ಪನ್ನು ಮಾಡಬೇಡಿ. ಈ ತಪ್ಪು ಮುಂದೆ ನಿಮ್ಮನ್ನು ಭಾದಿಸುತ್ತದೆ. ಸಂಗಾತಿಯಿದ್ರೂ ನೀವು ಒಂಟಿತನವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಜಂಟಿಯಾಗಿದ್ದು ಒಂಟಿತನ ಕಾಡಬಾರದು ಎಂದ್ರೆ ನೀವು ಕೆಲವೊಂದು ಟಿಪ್ಸ್ ಪಾಲನೆ ಮಾಡ್ಬೇಕಾಗುತ್ತದೆ.
ಆತ್ಮವಿಶ್ವಾಸದಿಂದ ಸಂಬಂಧ ಬಲಗೊಳ್ಳುತ್ತದೆ : ಸಂಗಾತಿ ನಿಮ್ಮ ಬಳಿ ಇದ್ದಾಗ ನೀವು ಆತ್ಮವಿಶ್ವಾಸದಿಂದಿದ್ದರೆ ಅಥವಾ ಆತ್ಮವಿಶ್ವಾಸ ಹೆಚ್ಚಾದ್ರೆ ನೀವು ಸರಿಯಾದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೀರಿ ಎಂದರ್ಥ. ಒಂದು ವೇಳೆ ಸಂಗಾತಿ ಜೊತೆ ನೀವಿದ್ದರೂ ಆತ್ಮವಿಶ್ವಾಸ ನಿಮಗೆ ಬರ್ತಿಲ್ಲವೆಂದಾದ್ರೆ ಅವರ ಜೊತೆ ಜೀವನ ನಡೆಸಲು ಕಷ್ಟವಾಗುತ್ತದೆ. ಆಗ ಸಂಗಾತಿಯ ಅವಲಂಬನೆ ಕಡಿಮೆಯಾಗುತ್ತದೆ. ಒಂಟಿತನ ಕಾಡಲು ಶುರುವಾಗುತ್ತದೆ.
SELF MARRIAGE TREND: ನನ್ನನ್ನೇ ನಾನು ಮದುವೆಯಾದೆ ! ಸೆಲ್ಫ್ ಮ್ಯಾರೇಜ್ ಟ್ರೆಂಡ್ ಬಗ್ಗೆ ಗೊತ್ತಾ ?
ಭಾವನಾತ್ಮಕ ಸಂಬಂಧ : ಕೆಲವೊಮ್ಮೆ ಆರಂಭದಲ್ಲಿದ್ದ ಭಾವನೆ ನಿಧಾನವಾಗಿ ಕಡಿಮೆಯಾಗ್ತಾ ಬರುತ್ತದೆ. ನಿಮ್ಮ ಸಮಸ್ಯೆ ಹೇಳಿದ್ರೂ ಸಂಗಾತಿ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆಗ ಭಾವನಾತ್ಮಕ ಸಂಬಂಧ ದುರ್ಬಲಗೊಳ್ಳುತ್ತದೆ. ಇದ್ರಿಂದ ಒಂಟಿತನ ಕಾಡಲು ಶುರುವಾಗುತ್ತದೆ.
ಸಂಬಂಧಕ್ಕಾಗಿ ಸ್ನೇಹ ಕಳೆದುಕೊಳ್ಳಬೇಡಿ : ಅನೇಕ ಬಾರಿ ಪ್ರೀತಿ ಸಂಬಂಧ ಶುರುವಾದ್ಮೇಲೆ ಸ್ನೇಹಿತರು ದೂರವಾಗ್ತಾರೆ. ಸ್ನೇಹಿತರ ಜೊತೆ ಸುತ್ತಾಟ,ಮಾತನಾಡುವುದು ಕಡಿಮೆಯಾಗ್ತಿದೆ ಅಂದ್ರೆ ಅದಕ್ಕೆ ಸಂಗಾತಿ ಕಾರಣರಾಗಿರುತ್ತಾರೆ. ಕೆಲವೊಮ್ಮೆ ಸ್ನೇಹಿತರ ಜೊತೆ ಬೆರೆಯಲು ಸಂಗಾತಿ ನೀಡುವುದಿಲ್ಲ. ಅಂತ ಸಂಗಾತಿ ಜೊತೆ ಬಾಳ್ವೆ ಒಂಟಿ ಜೀವನ ನಡೆಸಿದಂತ ಅನುಭವ ನೀಡುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಗೆ ಸ್ನೇಹಿತರಿಲ್ಲ ಅಥವಾ ಸ್ನೇಹಿತರು ಇಷ್ಟವಿಲ್ಲವೆಂದಾದ್ರೆ ಅವರಿಗೆ ಸ್ನೇಹ ಬೆಳೆಸುವಂತೆ ತಿಳಿ ಹೇಳಿ. ಜೀವನದಲ್ಲಿ ಸ್ನೇಹಿತರು ಎಷ್ಟು ಇಂಪಾರ್ಟೆಂಟ್ ಎಂಬುದನ್ನು ಅರ್ಥ ಮಾಡಿಸಿ. ಸ್ನೇಹಿತರ ಜೊತೆ ಸಮಯ ಕಳೆಯುವಂತೆ ಅವರನ್ನು ಒತ್ತಾಯಿಸಿ. ಪ್ರೀತಿ ಜೊತೆ ಸ್ನೇಹವಿದ್ದಾಗಲೇ ಜೀವನದಲ್ಲಿ ಖುಷಿ,ಸಂತೋಷ ದುಪ್ಪಟ್ಟಾಗಲು ಸಾಧ್ಯ.
Relationship Tips: ಸಂಬಂಧದಲ್ಲಿ ಭರವಸೆ ಇಲ್ಲವಾದ್ರೆ ರಿಸ್ಕ್ ಯಾಕೆ ತಗೋತೀರಿ ?
ನಿಮ್ಮ ಗುರಿಯೆಡೆಗಿರಲಿ ಗಮನ : ಮಹಿಳೆಯರಲ್ಲಿ ಇದನ್ನು ನಾವು ಹೆಚ್ಚಾಗಿ ಕಾಣ್ತೇವೆ. ದಾಂಪತ್ಯ ಶುರುವಾಗ್ತಿದ್ದಂತೆ ಅನೇಕರು ವೃತ್ತಿ ಬಿಡ್ತಾರೆ. ಇಲ್ಲವೆ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಮದುವೆಯಾದ ಆರಂಭದಲ್ಲಿ ಇದು ಖುಷಿ ನೀಡಬಹುದು. ಆದ್ರೆ ದಿನ ಕಳೆದಂತೆ ಒಂದೇ ರೀತಿಯ ಜೀವನ ಬೋರ್ ಆಗಲು ಶುರುವಾಗುತ್ತದೆ. ಒಂಟಿತನ ಕಾಡಲು ಶುರುವಾಗುತ್ತದೆ. ಸದಾ ಮನೆಯಲ್ಲಿರುವ ಕಾರಣ ಹಳೆ ಸಹೋದ್ಯೋಗಿಗಳು ದೂರವಾಗಿರ್ತಾರೆ. ಸಮಯ ಕಳೆಯುವುದು ಕಷ್ಟವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮದುವೆಯಾದ್ಮೇಲೆ ನಿಮ್ಮ ಗುರಿಯನ್ನು ನಿರ್ಲಕ್ಷ್ಯ ಮಾಡ್ಬೇಡಿ. ಇತ್ತ ಸಂಗಾತಿ ಆಸೆಯೇನು ಎಂಬುದನ್ನು ತಿಳಿದು ಅದಕ್ಕೆ ಸ್ಪಂದಿಸುವುದು ಇನ್ನೊಬ್ಬ ಸಂಗಾತಿ ಜವಾಬ್ದಾರಿಯಾಗಿರುತ್ತದೆ. ಪರಸ್ಪರ ಒಬ್ಬರಿಗೊಬ್ಬರು ನೆರವಾದಲ್ಲಿ ಮಾತ್ರ ಜೀವನದಲ್ಲಿ ಸುಖ,ಸಂತೋಷ ಸಾಧ್ಯ. ಇಲ್ಲವಾದ್ರೆ ಎಲ್ಲರೂ ಇದ್ದು ಏನೂ ಇಲ್ಲದ ಜೀವನ ನಡೆಸಬೇಕಾಗುತ್ತದೆ.