Relationship Tips: ಸಂಬಂಧದಲ್ಲಿ ಭರವಸೆ ಇಲ್ಲವಾದ್ರೆ ರಿಸ್ಕ್ ಯಾಕೆ ತಗೋತೀರಿ ?
ನೀವು ಗಾಢವಾಗಿ ಪ್ರೀತಿ (Love)ಸುತ್ತಿದ್ದರೂ ಅವರಿಂದ ಅಂತಹ ಯಾವುದೇ ಕಮಿಟ್ ಮೆಂಟ್ (Commitment) ಕಾಣದಿದ್ದಾಗ 'ಇಷ್ಟೇ ಕಾದಿದ್ದಾಗಿದೆ, ಇನ್ನೊಂದು ಸ್ವಲ್ಪ ಸಮಯ ನೋಡೋಣ’ ಎನ್ನುವ ಮನೋಭಾವ ಬೇಡವೇ ಬೇಡ. ನಿಮ್ಮ ಸಮಯ (Time)ಕ್ಕೂ ಬೆಲೆಯಿದೆ ಎನ್ನುವುದನ್ನು ಮರೆಯಬೇಡಿ.
ಸಂಬಂಧದಲ್ಲಿ (Relation) ಒಂದು ಬೆಚ್ಚಗಿನ ಭರವಸೆ (Promising)) ಇದ್ದರಷ್ಟೇ ನೆಮ್ಮದಿ. ಅದರಲ್ಲೂ ಹೆಣ್ಣುಮಕ್ಕಳು ಸುರಕ್ಷತೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಪೈಕಿ. ಹೀಗಾಗಿ, ಪ್ರೇಮಿಯಿಂದ ಕಮಿಟ್ ಮೆಂಟ(Commitment)ನ್ನೇ ಮುಖ್ಯವಾಗಿ ಬಯಸುತ್ತಾರೆ. ಆದರೆ, ಕೆಲವೊಮ್ಮೆ ಹಾಗಾಗುವುದಿಲ್ಲ. ಕೆಲವು ಪ್ರೇಮಿಗಳು ಸಂಬಂಧಕ್ಕೆ ಕಮಿಟ್ಟೂ ಆಗುವುದಿಲ್ಲ, ಇತ್ತ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸುವುದೂ ಇಲ್ಲ. ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಾರೆ. ಕೆಲವೊಮ್ಮೆ ನೀವು ಬೇಕು, ಮತ್ತೊಮ್ಮೆ ನೀವು ದೂರವೇ ಇರಬೇಕು. ಹೀಗಾದಾಗ ಸಂಬಂಧದಲ್ಲಿ ಗೊಂದಲ ಹೆಚ್ಚುತ್ತದೆ.
ನೀವು ಒಂದೊಮ್ಮೆ ನಿಮ್ಮ ಪ್ರೇಮಿಯಿಂದ ಇಂಥದ್ದೇ ಗೊಂದಲವನ್ನು ಎದುರಿಸುತ್ತಿದ್ದರೆ ಸ್ವಲ್ಪ ನಿಲ್ಲಿ. ನೀವಾಗಿಯೇ ಅವರ ಹಿಂದೆ ಬೀಳುವುದನ್ನು ಬಿಡಿ. ಏಕೆಂದರೆ, ಅವರ ಹಿಂದೆ ಸಾಗುವುದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಯಾವಾಗ ನೀವು ಪ್ರೇಮಿಯಿಂದ ದೂರವಾಗುವುದು ಉತ್ತಮ ಎಂದು ನೋಡಿಕೊಳ್ಳಿ. ಅವರ ಕೆಲವು ವರ್ತನೆಗಳನ್ನು ಆಧರಿಸಿ ದೃಢವಾದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಪತ್ನಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ No Problem ಅಂತಾನೆ ಈ ಪತಿ ಮಹಾಶಯ!
• ನೀವು ಕೇವಲ ಭಾವನಾತ್ಮಕ ಬೆಂಬಲ (Emotional Support) ಆಗಿದ್ದಾಗ
ಕೆಲವರು ಹಾಗೇ. ಅವರಿಗೆ ಆಗಾಗ ಭಾವನಾತ್ಮಕ ಬೆಂಬಲ ಬೇಕಾಗುತ್ತದೆ. ಹೀಗಾಗಿ, ಅವರು ಆ ಸಂದರ್ಭಗಳಲ್ಲಿ ಮಾತ್ರ ನಿಮ್ಮ ಬಳಿ ಓಡೋಡಿ ಬರುತ್ತಾರೆ. ಮಡಿಲಲ್ಲಿ ಮುಖವಿಟ್ಟು ಬಿಕ್ಕುತ್ತಾರೆ, ನಿಮ್ಮ ಹೆಗಲ ಮೇಲೆ ತಲೆಯಾನಿಸುತ್ತಾರೆ. ಆಗ ನಿಮಗೆ ಅವರನ್ನು ಸಮಾಧಾನಪಡಿಸುವುದರಲ್ಲಿ ಸುಖ ಕಾಣಬಹುದು. ಜೀವನ ಸಾರ್ಥಕವಾಯಿತು ಎನಿಸಬಹುದು. ಕೆಲವೇ ಕ್ಷಣ, ಮತ್ತೆ ಅವರು ಮಾಮೂಲಿನಂತೆ ಆಗುತ್ತಾರೆ. ಅಂದರೆ, ಸಾಮಾನ್ಯ ಉಳಿದ ಸಮಯಗಳಲ್ಲಿ ನಿಮ್ಮ ಅಗತ್ಯವೇ ಇಲ್ಲದಂತೆ ವರ್ತಿಸುತ್ತಾರೆ. ಇಂಥವರಿಂದ ಜೀವನದ ಸಾಂಗತ್ಯ ನಿರೀಕ್ಷಿಸುವುದು ವ್ಯರ್ಥ. ಇವರಿಗಾಗಿ ನಿಮ್ಮ ಸಮಯ ಹಾಳುಮಾಡಿಕೊಳ್ಳಬೇಡಿ.
• ನೀವು ಬ್ಯಾಕ್ ಅಪ್ ನಂತೆ (Back-up)
ಅವರಿಗೆ ಬೇಕಾದಾಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ಅವರಿಗೆ ಬೋರಾದಾಗ, ಯಾರೂ ಇಲ್ಲವಾದಾಗ, ಏಕಾಂಗಿ (Alone) ಎನಿಸಿದಾಗ ಮಾತ್ರ ನೀವು ನೆನಪಾಗುತ್ತೀರಿ. ಉಳಿದಂತೆ ಅವರ ಪ್ರಪಂಚದಲ್ಲಿ ನೀವಿರುವುದಿಲ್ಲ. ನೀವು ಬಯಸಿದರೂ, ಜಗಳ ಕಾಯ್ದರೂ ಅವರು ನಿಮಗೆ ಲಭ್ಯವಾಗುವುದಿಲ್ಲ. “ಅವರಿಗೆ ಬೇಕಾದಾಗ ನೆರವು ನೀಡಲು ಮಾತ್ರ ನಾವು ಬೇಕು’ ಎನ್ನುವ ಭಾವನೆ ನಿಮ್ಮಲ್ಲಿ ಬಲವಾಗಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಸಂಗಾತಿಯ ತಪ್ಪು ಹುಡುಕೋದ್ರಲ್ಲಿ ನಿಸ್ಸೀಮರು ಈ 4 ರಾಶಿಯವರು!
• ಒಂದೇ ರೀತಿಯ ಧೋರಣೆ (Same Interest) ಇಲ್ಲದಿರುವಾಗ
ನೀವು ಸಂಬಂಧದಲ್ಲಿ ಕಮಿಟ್ ಆಗಲು ಬಯಸುತ್ತಿದ್ದರೂ ಅವರು ಭರವಸೆ ಮೂಡಿಸದಿದ್ದರೆ, ಗಂಭೀರವಾಗಿ ಮಾತನಾಡಲು ಸಿಗದೆ ಆಟವಾಡುತ್ತಿದ್ದರೆ ಅವರನ್ನು ತೊರೆಯುವುದು ಉತ್ತಮ. ಇದರಿಂದ ಒಮ್ಮೆ ಮಾತ್ರ ಮನಸಿಗೆ ನೋವಾಗಬಹುದು. ಆದರೆ, ಸಂಬಂಧಕ್ಕೆ ಕಮಿಟ್ ಆಗದವರ ಬಳಿ ಎಷ್ಟೆಂದು ಒದ್ದಾಡುತ್ತೀರಿ? “ಇವರೊಂದಿಗೆ ಬಾಳುವುದು ಕಷ್ಟ’ ಎನ್ನುವ ಭಾವನೆ ಆಗಾಗ ಬರುತ್ತಿದ್ದರೂ ಅವರಿಗೆ ನೋವುಂಟು ಮಾಡಬಾರದೆಂದು ಮುಂದುವರಿಯುವುದರಿಂದ ಮುಂದೆ ಪಶ್ಚಾತ್ತಾಪವಾಗಬಹುದು.
• ಆಸಕ್ತಿ (Interest) ಇಲ್ಲವೆಂದು ನೇರವಾಗಿ ಹೇಳಿದಾಗ
ಕೆಲವರು ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದು ನೇರವಾಗಿ ಹೇಳುತ್ತಾರೆ. ಇದು ಉತ್ತಮ ವಿಧಾನವೇನೋ ನಿಜ. ಆದರೆ, ಅವರು ಇದನ್ನು ತಮಾಷೆಗಾಗಿ ಹೇಳುತ್ತಾರೆಂದು ನೀವು ಭಾವಿಸಿಕೊಳ್ಳುವುದು ತಪ್ಪು. ಅವರಿಗೆ ನಿಮ್ಮ ಸ್ನೇಹವಷ್ಟೇ (Friendship) ಬೇಕಿರುತ್ತದೆ, ಹೀಗಾಗಿ ಅವರು ನಿಮ್ಮನ್ನು ಕಳೆದುಕೊಳ್ಳಲು ಇಷ್ಟಪಡದೇ ಮೊದಲಿನಂತೆಯೇ ಇರುತ್ತಾರೆ. ಅದನ್ನು ನೀವು ತಪ್ಪಾಗಿ ಭಾವಿಸಬಾರದು.
ಹುಡುಗಿಯರ ವಿಚಾರದಲ್ಲಿ ಹೀಗಾಗುವುದು ಹೆಚ್ಚು. ನಿಮ್ಮೊಂದಿಗೆ ನಿರ್ದಿಷ್ಟ ಸಂಬಂಧವಿರಿಸಿಕೊಳ್ಳಲು, ಭವಿಷ್ಯದಲ್ಲಿ ಸಂಗಾತಿಯಾಗಲು ಅವರಿಗೆ ಮನಸಿರುವುದಿಲ್ಲ. ಆದರೆ, ಸ್ನೇಹಿತರಾಗಿ ನೀವು ಬೇಕಿರುತ್ತದೆ. ಅದನ್ನವರು ನಿಮಗೆ ಹೇಳಿರುತ್ತಾರೆ ಹಾಗೂ ಹಿಂದಿನಂತೆಯೇ ನಿಮ್ಮೊಂದಿಗೆ ವರ್ತಿಸುತ್ತಾರೆ. ಆದರೆ ಅವರು ತಮಾಷೆಗಾಗಿ ಮಾತ್ರ ಹಾಗೆ ಹೇಳಿದ್ದಾರೆ ಎಂದುಕೊಳ್ಳಬೇಡಿ. ಅವರನ್ನು ಸಂಗಾತಿ(Partner)ಯನ್ನಾಗಿ ಮಾಡಿಕೊಳ್ಳುವ ಕನಸನ್ನು ಕಾಣಬೇಡಿ.