Real Story : ಹತ್ತಿರವಾಗ್ತಿದ್ದ ಕ್ಲೈಂಟ್ ಗೆ ಯರ್ರಾಬಿರ್ರಿ ಬೈದ್ಲು… ಪಾಪ ಬಾಯ್ ಫ್ರೆಂಡ್ ಕೆಲಸ ಕಳದ್ಕೊಂಡ!
ಮಾತು ಆಡಿದ್ರೆ ಹೋಯ್ತು…ಎನ್ನುವ ಗಾದೆಯಿದೆ. ಪ್ರತಿಯೊಂದು ಹೆಜ್ಜೆಯನ್ನು ಮನುಷ್ಯ ಯೋಚಿಸಿ ಇಡಬೇಕು. ನಾವು ಆತುರದಲ್ಲಿ ಮಾಡುವ ಕೆಲ ತಪ್ಪು ಮುಂದೆ ನಮ್ಮನ್ನು ಹಿಂಸಿಸುತ್ತದೆ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೂ ಶಿಕ್ಷೆಯಾಗುತ್ತದೆ.
ಕೋಪಕ್ಕೆ ಮೂಗು ಕೊಯ್ದುಕೊಂಡ್ರೆ ಮತ್ತೆ ಬರುತ್ತಾ ಎನ್ನುವ ಮಾತೊಂದಿದೆ. ಆತುರದಲ್ಲಿ ಅನಾಹುತ ಮಾಡಿದ್ರೆ ಕೊನೆಯಲ್ಲಿ ನಮಗೆ ಸಿಗೋದು ಪಶ್ಚಾತಾಪವೇ. ಕೆಲವೊಮ್ಮೆ ಸರಿಮಾಡಲಾಗದ ತಪ್ಪನ್ನು ಮಾಡಿರ್ತೇವೆ. ಅತಿಯಾಗಿ ಪ್ರೀತಿಸುವ ವ್ಯಕ್ತಿಗಳ ಜೊತೆ ಇಂಥ ಘಟನೆ ನಡೆಯೋದು ಹೆಚ್ಚು. ಈ ಹುಡುಗಿ ಕೂಡ ಪ್ರೀತಿ ಕಳೆದುಕೊಳ್ಳುವ ಭಯದಲ್ಲಿ ಯಡವಟ್ಟು ಮಾಡಿ ಈಗ ಕಣ್ಣಿರಿಡುತ್ತಿದ್ದಾಳೆ. ಬಾಯ್ ಫ್ರೆಂಡ್ ಜೊತೆ ಮಾತು ಹೆಚ್ಚಾಯ್ತು ಅಂತಾ ಕ್ಲೈಂಟ್ ಗೆ ಬಾಯಿಗೆ ಬಂದ ಹಾಗೆ ಬೈದು, ಬಾಯ್ ಫ್ರೆಂಡ್ ಕೆಲಸ ಹೋಗುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಕಥೆ ಏನು? ಆಕೆಗೆ ತಜ್ಞರು ನೀಡಿದ ಸಲಹೆ ಏನು ಅಂತಾ ನಾವು ಹೇಳ್ತೇವೆ.
ಏನು ಈ ಹುಡುಗಿ ಸಮಸ್ಯೆ? :
ಆಕೆಗೆ 28 ವರ್ಷ ವಯಸ್ಸು (Age) . ಎರಡು ವರ್ಷದಿಂದ ವ್ಯಕ್ತಿಯೊಬ್ಬನನ್ನು ಪ್ರೀತಿಸ್ತಿದ್ದಾಳೆ. ಆಕೆ ಪ್ರೀತಿ (Love) ಗಾಢವಾಗಿದೆ. ಒಂದು ಸಮಯದವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಇವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಬಾಯ್ ಫ್ರೆಂಡ್ ಕ್ಲೈಂಟ್. ಆಕೆ ಬಾಯ್ ಫ್ರೆಂಡ್ (Boy Friend) ಗೆ ಹತ್ತಿರವಾಗ್ತಿದ್ದಳಂತೆ. ಪ್ರತಿ ದಿನ ಕರೆ ಮಾಡ್ತಿದ್ದಳಂತೆ. ಆರಂಭದಲ್ಲಿ ಇದನ್ನು ಇಗ್ನೋರ್ ಮಾಡಿದ್ದ ಹುಡುಗಿ, ಯಾಕೋ ತನ್ನ ಹುಡುಗ ಕೂಡ ಅವಳತ್ತ ವಾಲ್ತಿದ್ದಾನೆ ಎಂಬ ಭಯಕ್ಕೆ ಬಿದ್ದಿದ್ದಳಂತೆ. ಇದೇ ಕಾರಣಕ್ಕೆ ಕ್ಲೈಂಟ್ (Client) ಗೆ ಕರೆ ಮಾಡಿ ಯರ್ರಾಬಿರ್ರಿ ಬೈದಿದ್ದಳಂತೆ. ಆ ಕ್ಲೈಂಟ್, ಬಾಯ್ ಫ್ರೆಂಡ್ ಕೆಲಸ ಮಾಡ್ತಿದ್ದ ಕಚೇರಿಗೆ ತುಂಬಾ ಇಂಪಾರ್ಟೆಂಟ್ ಆಗಿದ್ದಳಂತೆ. ವಿಷ್ಯ ಕಚೇರಿಗೆ ತಿಳಿಯುತ್ತಿದ್ದಂತೆ, ಬಾಯ್ ಫ್ರೆಂಡ್ ಕರೆದ ಬಾಸ್, ಕೆಲಸ ಬಿಡುವಂತೆ ಹೇಳಿದ್ನಂತೆ. ಒತ್ತಾಯಪೂರ್ವಕವಾಗಿ ರಾಜೀನಾಮೆ ಪತ್ರವನ್ನು ಪಡೆದಿದ್ದಾರಂತೆ. ಈಗ ಕೆಲಸವಿಲ್ಲದೆ ಖಾಲಿ ಕೈನಲ್ಲಿದ್ದಾನೆ ಬಾಯ್ ಫ್ರೆಂಡ್. ನನ್ನ ಮೇಲೆ ಆತನಿಗೆ ಕೋಪ (Anger) ವಿಲ್ಲ. ಆದ್ರೆ ನನಗೆ ಗಿಲ್ಟಿ ಫೀಲ್ ಆಗ್ತಿದೆ ಎಂದು ಹುಡುಗಿ ನೊಂದುಕೊಂಡಿದ್ದಾಳೆ. ಮುಂದೇನು ಮಾಡ್ಬೇಕು ಎಂದು ಪ್ರಶ್ನೆ ಇಟ್ಟಿದ್ದಾಳೆ.
ಪತಿಗೆ ಮಡದಿ ಕೊಡಲಾಗದ್ದು ಇದು, ಏನದು? ಪಾಕಿಸ್ತಾನಿ ಆ್ಯನ್ಸರ್ ಫುಲ್ ವೈರಲ್!
ತಜ್ಞ (Expert) ರ ಉತ್ತರ : ಈಗ ನಿಮ್ಮಿಬ್ಬರ ಸ್ಥಿತಿ ಹೇಗಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎನ್ನುವ ತಜ್ಞರು, ಮೊದಲು ಬಾಯ್ ಫ್ರೆಂಡ್ ಮನಸ್ಥಿತಿ ಅರ್ಥ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಆತ ಶೀಘ್ರವೇ ಜಾಬ್ ಹುಡುಕುವ ಮೂಡ್ ನಲ್ಲಿ ಇಲ್ಲದೆ ಇರಬಹುದು. ಈ ಬಗ್ಗೆ ಆತನ ಜೊತೆ ಮಾತನಾಡುವುದು ಮುಖ್ಯ ಎನ್ನುತ್ತಾರೆ ತಜ್ಞರು. ಮೌನವಾಗಿರುವುದು ಈಗ ಸುರಕ್ಷಿತವಲ್ಲ. ಇಬ್ಬರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯ. ಬಾಯ್ ಫ್ರೆಂಡ್ ತೊಂದರೆಗೆ ನಾನೇ ಕಾರಣವೆಂದು ನೀವು ಕ್ಷಮೆ ಕೇಳ್ಬಹುದು. ಆತ ಈಗ ಯಾವುದ್ರ ಬಗ್ಗೆ ಆಲೋಚನೆ ಮಾಡ್ತಿದ್ದಾನೆ ಎಂಬುದನ್ನು ನೀವು ಕೇಳೋದು ಮುಖ್ಯ.
Golden Child Syndrome: ನಿಮ್ಮ ಮಗುವಿನಲ್ಲೂ ಇದ್ಯಾ ಗೋಲ್ಡನ್ ಚೈಲ್ಡ್ ಸಿಂಡ್ರೋಮ್?
ಕೆಲಸ ಕಳೆದುಕೊಂಡ ಕಾರಣಕ್ಕೆ ಬಾಯ್ ಫ್ರೆಂಡ್ ಖಿನ್ನತೆಗೆ ಒಳಗಾಗಿರುವ ಸಾಧ್ಯತೆಯೂ ಇರುತ್ತದೆ. ಒಂದ್ವೇಳೆ ನಿಮ್ಮ ಮುಂದೆ ಎಲ್ಲವನ್ನೂ ಹೇಳ್ತಿಲ್ಲ ಎಂದಾದ್ರೆ ನೀವು ಬೇರೆಯವರ ಸಹಾಯ ಪಡೆಯಿರಿ ಎನ್ನುತ್ತಾರೆ ತಜ್ಞರು. ನಿಮ್ಮ ಬಾಯ್ ಫ್ರೆಂಡ್ ಗೆ ಆಪ್ತರಾಗಿರುವವರ ಸಹಾಯ ಪಡೆಯಬಹುದು. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭ ಬಂದ್ರೂ ಅವರ ಕೈಬಿಡಬೇಡಿ. ನಿಮ್ಮ ಕಾರಣದಿಂದಾಗಿ ಅವರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಅವರನ್ನು ದೂರ ಮಾಡಿದ್ರೆ ಅದ್ರಿಂದ ಹೊರ ಬರುವುದು ಅವರಿಗೆ ಕಷ್ಟವಾಗಬಹುದು. ನೀವು ಜೊತೆಗಿದ್ದರೆ ಒಂದು ಧೈರ್ಯ. ಸುಧಾರಿಸಿಕೊಳ್ಳಲು ಸಮಯ ಹಿಡಿದ್ರೂ ಅವರ ಜೊತೆ ಸದಾ ಇರಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು.