Asianet Suvarna News Asianet Suvarna News

Ratan Tata: ಬ್ರಹ್ಮಚಾರಿ ರತನ್ ಟಾಟಾ ಬದುಕಿನ ಲವ್ ಸ್ಟೋರಿ ಇದು!

ಬ್ರಹ್ಮಚಾರಿ ರತನ್ ಟಾಟಾ ಅವರ ಯವ್ವನದಲ್ಲಿ ಒಂದು ಮೈ ಬೆಚ್ಚಗಾಗಿಸುವಂಥೆ ಪ್ರೇಮ ಕಥೆಯಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಇದು ಅವರೇ ಹೇಳಿದ ಕತೆ.

 

real love story of bachular Ratan Tata love life bni
Author
First Published May 31, 2024, 5:33 PM IST

ನಮ್ಮ ದೇಶದ ದೊಡ್ಡ ಬ್ಯುಸಿನೆಸ್‌ಮ್ಯಾನ್ ಆದ ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ಅವರ ಸಂಸಾರದ ಬಗ್ಗೆ ನಿಮಗೆ ಏನೂ ಗೊತ್ತಿರಲಾರದು. ಯಾಕೆಂದರೆ ಅವರು ಮದುವೆಯೇ ಆಗಿಲ್ಲ! ಆದರೂ ಅವರ ಯವ್ವನದಲ್ಲಿ ಒಂದು ಮೈ ಬೆಚ್ಚಗಾಗಿಸುವಂಥೆ ಪ್ರೇಮ ಕಥೆಯಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಇದು ಅವರೇ ಹೇಳಿದ ಕತೆ.
 
ರತನ್ ಟಾಟಾ ವಿವಾಹವಾಗಲಿಲ್ಲ. ಆದರೆ ರತನ್ ಟಾಟಾ ಪ್ರೀತಿಯ ಬಲೆಗೆ ಬಿದ್ದ ಕತೆ ನಿಜ. ರತನ್ ಟಾಟಾ ಕಳೆದ ವರ್ಷ ಹ್ಯೂಮನ್ಸ್ ಆಫ್ ಬಾಂಬೆ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಮಾತನಾಡಿ ತಮ್ಮ ಬಾಲ್ಯ, ಪ್ರೇಮ ಜೀವನ ಮತ್ತು ಸಂಬಂಧಗಳನ್ನು ಹೇಳಿದರು. ಒಮ್ಮೆ ಪ್ರೀತಿಸಿ ಮದುವೆಯಾಗಿ ಸೆಟಲ್ ಆಗಲು ಅವರು ಬಯಸಿದ್ದರಂತೆ. ಇದು ನಡೆದದ್ದು ಅಮೆರಿಕದಲ್ಲಿ. ಆಗ ಅವರು ಲಾಸ್ ಏಂಜಲೀಸ್‌ನಲ್ಲಿ ಉದ್ಯೋಗಿಯಾಗಿದ್ದರು. 

"ಕಾಲೇಜಿನ ನಂತರ, ನಾನು ಎಲ್‌ಎ ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ, ಅಲ್ಲಿ ನಾನು ಎರಡು ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಎಲ್‌ಎನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ಬಹುತೇಕ ಮದುವೆಯಾಗುವುದು ಖಚಿತವಾಗಿತ್ತು. ಆದರೆ ಅದೇ ಸಮಯದಲ್ಲಿ, ಸುಮಾರು 7 ವರ್ಷಗಳಿಂದ ನನ್ನ ಅಜ್ಜಿಯ ಆರೋಗ್ಯ ಸರಿ ಇರಲಿಲ್ಲ. ಆದ್ದರಿಂದಾಗಿ ಅವರನ್ನು ನೋಡಲೆಂದು ನಾನು ತಾತ್ಕಾಲಿಕವಾಗಿ ನನ್ನ ಊರಿಗೆ ಹಿಂದಿರುಗುವ ನಿರ್ಧಾರವನ್ನು ಮಾಡಿದೆ. ನಾನು ಅಜ್ಜಿಯನ್ನು ನೋಡಲು ಬಂದೆ. ನಾನು ಮದುವೆಯಾಗಲು ಬಯಸುವ ವ್ಯಕ್ತಿಯೂ ಕೂಡಾ ನನ್ನೊಂದಿಗೆ ಭಾರತಕ್ಕೆ ಬರುತ್ತಾರೆ ಎಂದು ನಾನು ಭಾವಿಸಿದೆ. ಆದರೆ ಆಕೆ ಬರಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ, ಆಕೆಯ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧವೇ ದೂರವಾಯಿತು," ಎಂದು ರತನ್ ಹೇಳಿಕೊಳ್ಳುತ್ತಾರೆ. ಇದಾದ ಮೇಲೆ ರತನ್ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಬಹುದು ಎಂದು ರತನ್‌ಗೆ ಅನಿಸಲಿಲ್ಲವಂತೆ.

ಅಂಬಾನಿ ಮದುವೆ, ರಿಹಾನ್ನಾ 66 ಕೋಟಿ ರೂ, ಬಿಯೊನ್ಸ್ 33 ಕೋಟಿ, ಆರ್ಟಿಸ್ಟ್ ಚಾರ್ಜ್ ಇಷ್ಟೊಂದಾ?

ರತನ್ ಟಾಟಾಗೆ ನೋಯೆಲ್ ಟಾಟಾ ಎಂಬ ಮಲಸಹೋದರನೂ ಇದ್ದಾರೆ. "ನನಗೆ ಸಂತೋಷದ ಬಾಲ್ಯವಿತ್ತು, ಆದರೆ ನನ್ನ ಸಹೋದರ ಮತ್ತು ನಾನು ವಯಸ್ಸಾದಂತೆ, ನಮ್ಮ ಪೋಷಕರ ವಿಚ್ಛೇದನದಿಂದ ನಾವು ಸ್ವಲ್ಪ ತೊಂದರೆಗೆ ಒಳಗಾದೆವು. ಹಲವಾರು ಸಲ ಕಷ್ಟದ ಸಮಯವನ್ನು ಎದುರಿಸಿದ್ದೇವೆ. ಆ ದಿನಗಳಲ್ಲಿ ವಿಚ್ಛೇದನ ಎಂಬುದು ಇಂದಿನಂತೆ ಸಾಮಾನ್ಯವಾಗಿರಲಿಲ್ಲ. ಆದರೆ ನನ್ನ ಅಜ್ಜಿ ನಮ್ಮನ್ನು ಬೆಳೆಸಿದರು," ಎಂದು ರತನ್ ಟಾಟಾ ವಿವರಿಸಿದ್ದಾರೆ. ರತನ್ ಟಾಟಾರ ತಾಯಿ ಮತ್ತೆ ವಿವಾಹವಾಗಲು ನಿರ್ಧರಿಸಿದಾಗ ಟಾಟಾರ ಶಾಲೆಯ ಹುಡುಗರು ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದರು. "ನನ್ನ ತಾಯಿ ಮತ್ತೆ ವಿವಾಹವಾದಾಗ ಜನರು ಕೆಟ್ಟದಾಗಿ ಮಾತನಾಡಲು ಆರಂಭಿದರು. ಆದರೆ ನಮ್ಮ ಅಜ್ಜಿ ಏನೇ ಆದರೂ ಘನತೆಯನ್ನು ಉಳಿಸಿಕೊಳ್ಳಲು ನಮಗೆ ಕಲಿಸಿದರು," ಎಂದು ರತನ್ ಟಾಟಾ ಹೇಳುತ್ತಾರೆ.

ಭಾರತದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿರುವ 83 ವರ್ಷ ವಯಸ್ಸಿನ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿ ಅವರ ಕೆಲಸ, ಅವರ ಅಸಾಮಾನ್ಯ ಕರುಣೆ, ಶಾಂತ ಸ್ವಭಾವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ರತನ್ ಟಾಟಾ ಅವರು ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದರು. ಅವರ ತಂದೆ ನವಲ್ ಟಾಟಾ. ತಾಯಿ ಸೋನು ಟಾಟಾ. ಟಾಟಾ ಅವರ ಪೋಷಕರಾದ ನವಲ್ ಮತ್ತು ಸೋನೂ ಅವರು 1948ರಲ್ಲಿ, ರತನ್ ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ಬೇರೆ ಬೇರೆಯಾದರು. ಜಮ್ಸೆಟ್ಜಿ ಟಾಟಾ, ರತನ್ ಟಾಟಾರ ಮುತ್ತಾತ ಆಗಿದ್ದಾರೆ. ರತನ್‌ಜಿ ಟಾಟಾ ಇವರ ಅಜ್ಜ. 

ವಿಚ್ಛೇದನವಾಗಿ ಖಿನ್ನತೆಗೆ ಜಾರಿದ್ದ 56 ವರ್ಷದ ಮಹಿಳೆಗೆ 36 ವರ್ಷದ ವ್ಯಕ್ತಿಯೊಂದಿಗೆ ಮದುವೆ!

Latest Videos
Follow Us:
Download App:
  • android
  • ios