Asianet Suvarna News Asianet Suvarna News

ರಾಪಿಡೋ ಚಾಲಕನ ಹಿಂದಿನ ಉದ್ಯೋಗ ಯಾವ್ದಿತ್ತು? ಗೊತ್ತಾದ ನೆಟ್ಟಿಗರು ಶಾಕ್!

ಟೂ ವೀಲರ್ ಟ್ಯಾಕ್ಸಿ ಸೇವೆ ನೀಡುವ ರಾಪಿಡೋ ಬೈಕ್ ಚಾಲಕರು ಕಡಿಮೆ ದರದಲ್ಲಿ ಜನರನ್ನು ಅವರವರ ನಿಗದಿತ ಸ್ಥಳಗಳಿಗೆ ತಲುಪಿಸುವ ಹೊಣೆ ಹೊರುತ್ತಾರೆ. ಕಾರ್ಪೋರೇಟ್ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಬ್ಬರು ಈಗ ಜನ ಸೇವೆಯ ಉದ್ದೇಶದಿಂದ ರಾಪಿಡೋ ಚಾಲಕರಾಗಿದ್ದಾರೆ ಎಂದರೆ ಅಚ್ಚರಿಯ ಸಂಗತಿಯೇ ಸರಿ.
 

Rapido driver reveals his story, he was a ex corporate manager sum
Author
First Published Dec 27, 2023, 6:04 PM IST

ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟ ಚಿಂತಕ. ಪ್ರತಿಯೊಬ್ಬರೂ ವಿಭಿನ್ನ. ಹೀಗಾಗಿ, ಈ ಪ್ರಪಂಚ ಇಷ್ಟೊಂದು ವೈವಿಧ್ಯಮಯವಾಗಿದೆ. ಉತ್ತಮ ಉದ್ಯೋಗ ಹೊಂದಿರುವವರು ಅದನ್ನು ತೊರೆದು ಸ್ವಂತದ್ದೇನೋ ಶುರು ಮಾಡುತ್ತಾರೆ, ಅತ್ಯುತ್ತಮ ವಿದ್ಯಾಭ್ಯಾಸ ಮಾಡಿ, ಉನ್ನತ ವೃತ್ತಿ ಸಿಗುವಂತಿದ್ದರೂ ಎಲ್ಲ ಬಿಟ್ಟು ಸನ್ಯಾಸಿಯಾಗುತ್ತಾರೆ, ಕಾರ್ಪೋರೇಟ್ ಕೆಲಸ ಬಿಟ್ಟು ತಮ್ಮದೇ ಆದೊಂದು ಚಾ ಅಂಗಡಿ ಇಟ್ಟುಕೊಳ್ಳುತ್ತಾರೆ. ಅದೆಷ್ಟೋ ಜನ ಬಿಡಿಗಾಸಿನ ಬಯಕೆಯಿಲ್ಲದೆ ಸಮಾಜ ಸೇವೆಗೆ ಮುಂದಾಗುತ್ತಾರೆ. ತಾವು ಕಷ್ಟದಲ್ಲಿದ್ದರೂ ನಾಲ್ಕಾರು ಮನಸುಗಳು ಸೇರಿಕೊಂಡು ಸಮಾಜಕ್ಕೆ ಸಹಾಯವಾಗುವಂಥದ್ದನ್ನೇನಾದರೂ ಮಾಡಬೇಕು ಎಂದು ಯೋಚಿಸುತ್ತಾರೆ. ಒಟ್ಟಿನಲ್ಲಿ, ಈ ಜೀವನವೊಂದು ಸರಳರೇಖೆಯಲ್ಲ, ವಿಚಿತ್ರ ಸಂತೆಗಳ ಆಗರ. ಅಂಥದ್ದೇ ಒಂದು ವಿಚಿತ್ರ ಸಂಗತಿಯೊಂದನ್ನು ಬೆಂಗಳೂರಿನ ಶ್ರುತಿ ಎಂಬುವವರು ಹಂಚಿಕೊಂಡಿದ್ದಾರೆ. ರಾಪಿಡೋ ಬೈಕ್ ಸವಾರಿ ಮಾಡುತ್ತಿದ್ದ ಸಮಯದಲ್ಲಿ ಬೆಳಕಿಗೆ ಬಂದ ವಿಷಯವನ್ನು ಹೇಳಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. 

ಶ್ರುತಿ ಅವರು ಬೆಂಗಳೂರಿನಲ್ಲಿರುವ ಉದ್ಯೋಗಿ. ಕೆಲ ದಿನಗಳ ಹಿಂದೆ ಶ್ರುತಿ ಕಚೇರಿಗೆ ಹೋಗುವ ಬೆಳಗಿನ ಗಡಿಬಿಡಿಯಲ್ಲಿರುವಾಗ ರಾಪಿಡೋ ಬೈಕ್ ಬುಕ್ ಮಾಡಿದ್ದರು. 

ಧೋನಿಗೆ RCB ಗೆ ಬಂದು ಕಪ್ ಗೆಲ್ಲಿಸಿಕೊಡಿ ಎಂದ ಬೆಂಗಳೂರು ಅಪ್ಪಟ ಅಭಿಮಾನಿ: ಕ್ಯಾಪ್ಟನ್ ಕೂಲ್ ಕೊಟ್ಟ ರಿಪ್ಲೇ ವೈರಲ್

ಜನರ ಸಹಾಯಕ್ಕಾಗಿ ರಾಪಿಡೋ (Rapido)
ಶ್ರುತಿ ಆ ದಿನ ರಾಪಿಡೋ ಬೈಕ್ (Bike) ಹತ್ತಿದ್ದರು. ಡ್ರೈವರ್ ಜತೆ ಮಾತನಾಡುವಾಗ ತಿಳಿದು ಬಂದಿದ್ದು, ಆತ ಒಬ್ಬ ಮಾಜಿ ಕಾರ್ಪೋರೇಟ್ ಮ್ಯಾನೇಜರ್ (Corporate Manager) ಆಗಿದ್ದರು ಎನ್ನುವ ಸಂಗತಿ. ಕೋವಿಡ್ ನಿಂದಲೋ, ಬೇರೆ ಯಾವುದೋ ಕಾರಣಕ್ಕೆ ಉದ್ಯೋಗ (Job) ಕಳೆದುಕೊಂಡು ರಾಪಿಡೋ ಸವಾರರಾಗಿದ್ದರೆ ಅನಿವಾರ್ಯತೆಯ ಹಣೆಪಟ್ಟಿ ಇರುತ್ತಿತ್ತು. ಆದರೆ, ಆತ ನಿಜಕ್ಕೂ ಮಾದರಿ ವ್ಯಕ್ತಿ. ಕೈಗೆಟುಕುವ ದರದಲ್ಲಿ ಬೆಂಗಳೂರಿನ ಜನರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು ಸಹಾಯ (Help) ಮಾಡುವ ಉದ್ದೇಶದಿಂದ ಅವರು ರಾಪಿಡೋ ಬೈಕ್ ಚಾಲಕರಾಗಿ ಪರಿವರ್ತಿತಗೊಂಡಿದ್ದರು! ಆತ ಪ್ರಮುಖ ಕಾರ್ಪೋರೇಟ್ ಕಂಪೆನಿಯಲ್ಲಿ (Company) ಕೆಲಸದಲ್ಲಿದ್ದರು ಎನ್ನುವುದು ಇನ್ನೂ ಅಚ್ಚರಿದಾಯಕ ಸಂಗತಿ. 


ಶ್ರುತಿ ಅವರೂ ಸಹ ಕಾರ್ಪೋರೇಟ್ ಮಾಜಿ ಉದ್ಯೋಗಿಯ ಸೇವೆಗೆ ಅಚ್ಚರಿ ಪಟ್ಟಿದ್ದಾರೆ, “ಎನಿಥಿಂಗ್ ಪಾಸಿಬಲ್ ಇನ್ ಬೆಂಗಳೂರು (Bengaluru)’ ಎಂದು ಮೆಚ್ಚುಗೆ ಸೂಸಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಅಜ್ಜಿಗೆ ಪಂಚ್‌ ಮಾಡಿದ ಚೀನಾದ ವೈದ್ಯ ಅಮಾನತು; ಮಹಿಳೆಯ ಕಣ್ಣೂ ಢಮಾರ್: ವಿಡಿಯೋ ವೈರಲ್‌

ಬೆಂಗಳೂರಿನ ಟ್ರಾಫಿಕ್ (Traffic) ಸಮಸ್ಯೆಯ ಅಗಾಧತೆ ಹೇಳಲು ಅಸಾಧ್ಯ. ಕೆಲವು ದಿನ ಅಂಥದ್ದೇನೂ ಸಮಸ್ಯೆ ಇಲ್ಲದೆ ಓಡಾಟ ಮುಗಿದು ಹೋದರೂ ಕೆಲವೊಮ್ಮೆ ಮಾತ್ರ ತಲೆ ಚಿಟ್ಟು ಹಿಡಿಯುವಂತೆ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಕಾಯುವ ಪರಿಸ್ಥಿತಿ ಎದುರಾಗುತ್ತದೆ. ಈ ಅನುಭವ ಅಲ್ಲಿನ ಜನರಿಗೆ ಸಾಕಷ್ಟಿದೆ. ಕೆಲವೇ ಕೆಲವು ಕಿಲೋಮೀಟರ್ ಸಂಚರಿಸಬೇಕು (Travel) ಎಂದರೂ ಭಾರೀ ಟ್ರಾಫಿಕ್ ನಿಂದಾಗಿ ತಾಸುಗಳ ಸಮಯವೇ ಬೇಕಾಗುವುದು ಅಪರೂಪವಲ್ಲ. ಆಟೋ, ಕ್ಯಾಬ್ ದುಬಾರಿಯಾಗುತ್ತದೆ ಮತ್ತು ಟ್ರಾಫಿಕ್ ನಲ್ಲಿ ಸಿಲುಕುತ್ತದೆ, ಬಸ್ಸು ಸಿಗುವುದಿಲ್ಲ. ಈ ನಡುವೆಯೇ ಹೇಗೋ ಕಚೇರಿ (Office) ತಲುಪುವ ಧಾವಂತ ಎಲ್ಲರಿಗೂ ಇರುತ್ತದೆ. ಹೀಗಾಗಿ, ಕಡಿಮೆ ವೆಚ್ಚದಲ್ಲಿ ಗ್ರಾಹಕರನ್ನು ಬೈಕ್ ಮೂಲಕ ನಿಗದಿತ ಸ್ಥಳ ತಲುಪಿಸುವ ಟೂ ವೀಲರ್ ಟ್ಯಾಕ್ಸಿ (Two Wheeler Taxi) ಸೇವೆ ನೀಡುತ್ತಿರುವ ರಾಪಿಡೋ ಬಹಳಷ್ಟು ಬಾರಿ ವರದಾನವಾಗುತ್ತದೆ. ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ. 

Latest Videos
Follow Us:
Download App:
  • android
  • ios