ಶಸ್ತ್ರಚಿಕಿತ್ಸೆ ವೇಳೆ ಅಜ್ಜಿಗೆ ಪಂಚ್ ಮಾಡಿದ ಚೀನಾದ ವೈದ್ಯ ಅಮಾನತು; ಮಹಿಳೆಯ ಕಣ್ಣೂ ಢಮಾರ್: ವಿಡಿಯೋ ವೈರಲ್
Aier China ಕಣ್ಣಿನ ಆಸ್ಪತ್ರೆಗಳ ಸರಣಿಯನ್ನು ನಿರ್ವಹಿಸುತ್ತಿದೆ. ನೈಋತ್ಯ ಚೀನಾದ ನಗರವಾದ ಗೈಗಾಂಗ್‌ನಲ್ಲಿರುವ ತನ್ನ ಆಸ್ಪತ್ರೆಯಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಗುಂಪು ಸ್ಪಷ್ಟವಾಗಿ ದೃಢಪಡಿಸಿದೆ.
ಬೀಜಿಂಗ್ (ಡಿಸೆಂಬರ್ 23, 2023): ಚೀನಾದಲ್ಲಿ ಇತ್ತೀಚೆಗೆ ಆಸ್ಪತ್ರೆಗಳ ವಿಡಿಯೋಗಳೇ ಹೆಚ್ಚು ಸದ್ದು ಮಾಡ್ತಿವೆ. ಆಸ್ಪತ್ರೆಗಳಲ್ಲಿ ಮಕ್ಕಳು ತುಂಬಿರುವುದು, ಚಿಕಿತ್ಸೆಗೆ ಗಂಟೆಗಟ್ಟಲೆ ಕ್ಯೂ ಮುಂತಾದ ವಿಡಿಯೋಗಳನ್ನು ಇತ್ತೀಚೆಗೆ ನೋಡಿದ್ದೆವು. ಈಗ ವೈದ್ಯರೊಬ್ಬರು ಆಸ್ಪತ್ರೆಯಲ್ಲಿ, ಅದೂ ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಪಂಚ್ ಮಾಡಿರುವ ವಿಡಿಯೋವೊಂದು ವೈರಲ್ ಆಗ್ತಿದೆ.
ಸರ್ಜನ್ ವೈದ್ಯರು ತಾನು ಆಸ್ಪತ್ರೆಯಲ್ಲಿ ಆಪರೇಷನ್ ಮಾಡುತ್ತಿದ್ದ ಹಿರಿಯ ಮಹಿಳೆಗೆ ಗುದ್ದಿದ್ದಾರೆ ಎಂಬ ವರದಿಗಳು ಹೊರಬಂದ ನಂತರ ಚೀನಾದ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ವಿಡಿಯೋ ಈ ವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆಯ ನಿಖರವಾದ ದಿನಾಂಕ ಮತ್ತು ಸಮಯ ಇನ್ನೂ ಬಹಿರಂಗಗೊಂಡಿಲ್ಲ.
ಇದನ್ನು ಓದಿ: ಕುಲದೇವತೆ ಎಂದು ಡೈನೋಸಾರ್ ಮೊಟ್ಟೆ ಪೂಜೆ ಮಾಡ್ತಿದ್ದ ಭಾರತದ ಈ ಕುಟುಂಬ!
ಆದರೂ, ಈ ವಿಡಿಯೋ ವೈರಲ್ ಆದ ಹಿನ್ನೆಲೆ ಆಸ್ಪತ್ರೆಯ ಪೋಷಕ ಗುಂಪು Aier China ಸರ್ಜನ್ ಅನ್ನು ಅಮಾನತುಗೊಳಿಸಿದೆ. 2019 ರಲ್ಲಿ ಈ ಘಟನೆ ಎನ್ನಲಾಗಿದ್ದು, ಆ ಸಮಯದಲ್ಲಿದ್ದ ಆಸ್ಪತ್ರೆಯ ಸಿಇಒ ರನ್ನೂ ವಜಾಗೊಳಿಸಲಾಗಿದೆ.
ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಕಣ್ಣುಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಸರ್ಜನ್ ರೋಗಿಯ ತಲೆಗೆ ಕನಿಷ್ಠ 3 ಬಾರಿ ಗುದ್ದುವುದನ್ನು ವಿಡಿಯೋ ತೋರಿಸುತ್ತದೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇನ್ನೂ ಇಬ್ಬರು ಜನರನ್ನು ಕಾಣಬಹುದು.
ಅಬ್ಬಾಬ್ಬ..! ಹೆಬ್ಬಾವನ್ನೇ ಬೇಟೆಯಾಡಿದ ಕಾಳಿಂಗ: ಭಯಾನಕ ವಿಡಿಯೋ
Aier China ಕಣ್ಣಿನ ಆಸ್ಪತ್ರೆಗಳ ಸರಣಿಯನ್ನು ನಿರ್ವಹಿಸುತ್ತಿದೆ ಎಂದು BBC ವರದಿ ಉಲ್ಲೇಖಿಸಿದೆ. ನೈಋತ್ಯ ಚೀನಾದ ನಗರವಾದ ಗೈಗಾಂಗ್‌ನಲ್ಲಿರುವ ತನ್ನ ಆಸ್ಪತ್ರೆಯಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಗುಂಪು ಸ್ಪಷ್ಟವಾಗಿ ದೃಢಪಡಿಸಿದೆ.
ರೋಗಿಯು 82 ವರ್ಷದ ಮಹಿಳೆಯಾಗಿದ್ದು, ಲೋಕಲ್ ಅನಸ್ತೇಷಿಯಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಸಹಿಷ್ಣುತೆಯನ್ನು ಹೊಂದಿದ್ದರು ಎಂದು ವರದಿ ಹೇಳಿದೆ. ಆಕೆ ತನ್ನ ತಲೆ ಮತ್ತು ಕಣ್ಣುಗಳನ್ನು ಹಲವಾರು ಬಾರಿ ಚಲಿಸಿದರು ಎಂದೂ ವರದಿಯಾಗಿದೆ. ರೋಗಿಯು ಸ್ಥಳೀಯ ಉಪಭಾಷೆಯನ್ನು ಮಾತ್ರ ಮಾತನಾಡಬಲ್ಲವರಾಗಿದ್ದು, ಸರ್ಜನ್ ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಸ್ಥೂಲವಾಗಿ ಚಿಕಿತ್ಸೆ ನೀಡಿದರು ಎಂದೂ ತಿಳಿದುಬಂದಿದೆ.
ರೋಗಿಯ ಹಣೆಯ ಮೇಲೆ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಈ ಸಂಬಂಧ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆಯ ಪುತ್ರ,, ಆಸ್ಪತ್ರೆಯ ಆಡಳಿತವು ಕ್ಷಮೆಯಾಚಿಸಿದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಪರಿಹಾರವಾಗಿ 70 ಡಾಲರ್ ಪಾವತಿಸಿದೆ ಎಂದು ಹೇಳಿದರು.
ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ತನ್ನ ತಾಯಿಗೆ ಈಗ ಎಡಗಣ್ಣು ಕಾಣುತ್ತಿಲ್ಲ. ಆದರೆ, ಈ ಘಟನೆಯಿಂದಲೇ ಆಕೆ ದೃಷ್ಟಿ ಕಳೆದುಕೊಂಡಿದ್ದಾಳೆ ಎಂದು ಹೇಳಲು ಸಾಧ್ಯವಿಲ್ಲ ಎಂದೂ ಮಗ ಹೇಳಿದ್ದಾನೆ.