ಎಷ್ಟೊಂದು ಮಂದಿ ಫ್ರೆಂಡ್ಸ್ (Friends) ಇದ್ರೂ ಕೆಲವೊಮ್ಮೆ ನಮ್ಮನ್ನು ಯಾರೂ ಮಿಸ್ (Miss) ಮಾಡಿಕೊಳ್ಳೋದೆ ಇಲ್ವಲ್ಲಪ್ಪಾ ಅಂತ ಅನಿಸುತ್ತೆ. ಒಬ್ರೂ ಕಾಲ್, ಮೆಸೇಜ್ (Message) ಏನೂ ಮಾಡಲ್ಲ. ಹಾಗಿದ್ರೆ ಎಲ್ರೂ ನಿಮ್ಮನ್ನು ಮಿಸ್ ಮಾಡಿಕೊಳ್ಬೇಕಾದ್ರೆ ನೀವೇನ್ ಮಾಡ್ಬೇಕು.
ಸಂಬಂಧಗಳೇ ಹಾಗೇ, ದೂರವಾದಷ್ಟೂ ಹತ್ತಿರವಾಗುವ ಭಾವನೆ ಮೂಡುತ್ತದೆ. ಹತ್ತಿರ ಹೋದಷ್ಟೂ ದೂರ ಹೋಗುವ ತವಕ ಹೆಚ್ಚಾಗುತ್ತದೆ. ಜತೆಗಿದ್ದಾಗ ಜಗಳವಿರುತ್ತದೆ. ದೂರ ಇದ್ದಾಗ ಪ್ರೀತಿ (Love) ಹೆಚ್ಚಾಗುತ್ತದೆ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಹತ್ತಿರವಿದ್ದರೂ, ದೂರವಿದ್ದರೂ ಪ್ರೀತಿಯಲ್ಲಿ ಆಗೊಮ್ಮೆ ಈಗೊಮ್ಮೆ ಒಡಕು ಮೂಡುವುದುಂಟು. ಅದರಲ್ಲೂ ಇವತ್ತಿನ ಜನರೇಷನ್ ಅಂದ್ರೆ ಹೇಳ್ಬೇಕಾ. ಲವ್ ಎಟ್ ಫಸ್ಟ್ ಸೈಟ್ ಅಲ್ಲ ಲವ್ ಎಟ್ ಆಲ್ ಸೈಟ್ ಅನ್ನೋ ಪರಿಸ್ಥಿತಿ. ನೋಡಿದವರ ಮೇಲೆಲ್ಲಾ ಪ್ರೀತಿಯಾಗುತ್ತಲೇ ಇರುತ್ತದೆ. ಹೀಗಾಗಿ ಪ್ರೀತಿ ಕೈ ಜಾರಿ ಹೋಗದಂತೆ ನೋಡಿಕೊಳ್ಳಬೇಕಾದುದು ಅತೀ ಅಗತ್ಯ. ನಿಮ್ಮ ಸಂಗಾತಿ ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುವಂತೆ ಮಾಡಲು, ಯಾವಾಗಲೂ ಮಿಸ್ ಮಾಡುತ್ತಿರಲು ಈ ರೀತಿ ಮಾಡಿ ನೋಡಿ.
ಅಟ್ರ್ಯಾಕ್ಟಿವ್ ಆಗಿ ಡ್ರೆಸ್ ಮಾಡಿ
ಚೆನ್ನಾಗಿ ಡ್ರೆಸ್ (Dress) ಮಾಡುವುದು ಯಾವಾಗಲೂ ನಾವು ಅತ್ಯಾಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ ನಿಮ್ಮಗೊಪ್ಪುವ ಸೂಕ್ತವಾದ ಧಿರಿಸನ್ನೇ ಯಾವಾಗಲೂ ಆಯ್ಕೆ ಮಾಡಿಕೊಳ್ಳಿ. ನೀವು ಆ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಓವರ್ ಮೇಕಪ್ (Makeup), ಜ್ಯುವೆಲ್ಲರಿಗಳು ಕಡ್ಡಾಯವೇನಲ್ಲ. ಮುಖದ ಮೇಲೆ ಸುಂದರ ನಗುವಿರಲಿ ಅಷ್ಟೆ. ಇದನ್ನು ಎಲ್ಲರನ್ನೂ ನಿಮ್ಮತ್ತ ಸೆಳೆಯುತ್ತದೆ. ನಿಮ್ಮನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಕೆಟ್ಟದಾಗಿ ಡ್ರೆಸ್ ಮಾಡಿದಾಗ ಜನರು ನಿಮ್ಮನ್ನು ನೋಡಿ ಬೇಸರಗೊಳ್ಳುತ್ತಾರೆ. ಇದು ನಿಮ್ಮ ಕುರಿತಾದ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.
Valentines Day: ಮನೆಯಲ್ಲೇ ದಿನವನ್ನು ವಿಶೇಷವಾಗಿಸುವುದು ಹೇಗೆ?
ಪರಿಮಳ ಭರಿತವಾದ ಪರ್ಫ್ಯೂಮ್
ವ್ಯಕ್ತಿಯೊಬ್ಬರು ರೆಡಿಯಾಗುವಾಗ ಯಾವ ರೀತಿಯ ಪರ್ಫ್ಯೂಮ್ (Perfume) ಬಳಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪರಿಮಳಭರಿತವಾದ ಸೆಂಟ್fನ್ನು ಉಪಯೋಗಿಸುವುದು ವ್ಯಕ್ತಿಯ ಬಗ್ಗೆ ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಇದು ಭಾವನೆಗಳನ್ನು ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಯಾವಾಗಲೂ ಅತಿ ಗಾಡವಲ್ಲದ, ಹಿತವಾದ ಸುಗಂಧ ಧ್ರವ್ಯವನ್ನು ಬಳಸಿ. ಇದು ನಿಮ್ಮ ಸಂಗಾತಿ, ನಿಮ್ಮ ಸುತ್ತಮುತ್ತಲಿದ್ದವರು ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತದೆ.
ಕುತೂಹಲ ಉಳಿಸಿಕೊಳ್ಳಿ
ಯಾವಾಗಲೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿಯನ್ನು ಬಿಟ್ಟು ಕೊಡಬೇಡಿ. ನಿಮ್ಮ ಬಗ್ಗೆ ತಿಳಿದುಕೊಳ್ಳಲು ಮತ್ತೆ ಮತ್ತೆ ಹಲವು ವಿಚಾರಗಳಿರಲಿ. ನಿಮ್ಮ ಕುರಿತಾದ ಕುತೂಹಲ ಹೆಚ್ಚುತ್ತಿರಲಿ. ನಿಮ್ಮ ಕುರಿತ ಕೆಲವು ವಿವರಗಳು ಮತ್ತು ಪ್ರತಿಭೆಯನ್ನು ಮುಚ್ಚಿಡಿ. ಹೀಗಾಗಿ ನಿಮ್ಮ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತದೆ. ನಿಮ್ಮ ಬಗ್ಗೆ ಕಡಿಮೆ ಹೇಳಿ ಮತ್ತು ಅವರ ಬಗ್ಗೆ ಹೆಚ್ಚು ಕೇಳಿ. ಇದರಿಂದ ಅವರು ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ.
Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ
ಸಾಮಾಜಿಕ ಮಾಧ್ಯಮ (Social Media)ದಲ್ಲಿ ಯಾವತ್ತೂ ಸಕ್ರಿಯರಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೊಸ ಸ್ಥಳಗಳಲ್ಲಿ ಹೋದಾಗ, ಚೆನ್ನಾಗಿ ಡ್ರೆಸ್ ಮಾಡಿದಾಗ ಫೋಟೋಗಳನ್ನು ಪೋಸ್ಟ್ ಮಾಡುವುದನ್ನು ಮರೆಯದಿರಿ. ಇದರಿಂದ ಜನರಿಗೆ ನಿಮ್ಮ ಬಗ್ಗೆ ಆಸಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಮತ್ತು ನಿಮ್ಮ ಜೀವನ ಹೆಚ್ಚು ಕುತೂಹಲಕಾರಿಯಾಗಿ ಎಂದುಕೊಳ್ಳುತ್ತಾರೆ. ಇದರಿಂದ ಸಹಜವಾಗಿಯೇ ನಿಮ್ಮನ್ನು ಮಿಸ್ ಮಾಡಲು ಆರಂಭಿಸುತ್ತಾರೆ.
ಸ್ವಾವಲಂಬಿಯಾಗಿರಿ, ಖುಷಿಯಾಗಿರಿ
ಆತ್ಮವಿಶ್ವಾಸ (Confidence) ಮತ್ತು ಸ್ವತಂತ್ರವಾಗಿರುವುದು ಜನರಿಗೆ ನಿಮ್ಮ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡುತ್ತದೆ. ಇದು ನಿಮಗೆ ಜೀವನದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಹೊಂದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹೀಗಾಗಿ ಯಾವತ್ತೂ ಸ್ವಾವಲಂಬಿಯಾಗಿರಿ, ಖುಷಿಯಾಗಿರಿ. ಇದರಿಂದಾಗಿ ನಿಮ್ಮ ಅನುಪಸ್ಥಿತಿಯಲ್ಲಿ ಜನರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ.
ನಿಮ್ಮ ಗುರುತನ್ನು ಬಿಟ್ಟು ಹೋಗಿ
ಯಾರನ್ನಾದರೂ ಭೇಟಿಯಾದ ಸಂದರ್ಭದಲ್ಲಿ ನಿಮಗೆ ಅವರು ಇಷ್ಟವಾದರೆ ಉದ್ದೇಶಪೂರ್ವಕವಾಗಿಯೇ ಯಾವುದಾದರೂ ವಸ್ತುವನ್ನು ಬಿಟ್ಟು ಹೋಗಿ. ಬಳೆಯಾಗಲಿ, ಕಿವಿಯೋಲೆಯಾಗಲಿ ಯಾವುದಾದರೂ ಸರಿ. ಇದರಿಂದ ನೀವು ಹತ್ತಿರವಿಲ್ಲದಿದ್ದಾಗ ಅವರು ನೀವು ಬಳಸುವ ವಸ್ತುವನ್ನು ನೋಡಿ ನಿಮ್ಮನ್ನು ನೆನಪಿಸಿಕೊಳ್ಳಲು ಆರಂಭಿಸುತ್ತಾರೆ.
ಸೋ, ಯಾರಾದ್ರೂ ನಮ್ಮನ್ನು ಮಿಸ್ ಮಾಡ್ಕೊಳ್ ಬೇಕಾದ್ರೆ ಏನ್ ಮಾಡ್ಬೇಕು ಅನ್ನೋದನ್ನು ತಿಳ್ಕೊಂಡ್ರಲ್ಲಾ. ಇನ್ನೇನು ಸಾಲು ಸಾಲು ಮಿಸ್ ಯೂ (Miss You), ಮಿಸ್ ಯೂ ಟೆಕ್ಸ್ಟ್ ಬರೋದು ಗ್ಯಾರಂಟಿ.
