Viral Post: ಮಗಳಿಗೆ ಪೈಲಟ್ ಆಗೋ ಹೆಮ್ಮೆ ಈ ತಂದೆಯದು; ವಿಮಾನದಲ್ಲಿ ಏನಂದ್ರು ನೋಡಿ?
ಮಕ್ಕಳನ್ನು ಮೊದಲ ಬಾರಿ ಡ್ರೈವ್ ಗೆ ಕರೆದುಕೊಂಡು ಹೋದ ಸಮಯದಲ್ಲಿ ಅವರು ನೀಡುವ ಪ್ರತಿಕ್ರಿಯೆ ಪಾಲಕರಿಗೆ ಜೀವನವಿಡೀ ನೆನಪು ನೀಡುತ್ತದೆ. ಆ ಸಮಯ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು. ಹಾಗೆಯೇ, ಪೈಲಟ್ ಒಬ್ಬರು ತಾವೇ ಚಲಾಯಿಸುವ ವಿಮಾನದಲ್ಲಿ ತಮ್ಮ ಮಗಳನ್ನು ಹೊಂದಿದ್ದ ವಿಶಿಷ್ಟ ಅನುಭವಕ್ಕೆ ಈ ವಿಮಾನ ಸಾಕ್ಷಿಯಾಗಿತ್ತು.
ಮಕ್ಕಳನ್ನು ಮೊದಲ ಬಾರಿ ಡ್ರೈವ್ ಗೆ ಕರೆದುಕೊಂಡು ಹೋಗುವುದು, ಮೊದಲ ಬಾರಿ ಸೈಕಲ್ ನಲ್ಲಿ ಕೂರಿಸಿಕೊಂಡು ಸಾಗುವುದು, ಬೈಕ್ ನಲ್ಲಿ ಕೂರಿಸಿ ಮೆರೆಸುವುದು ಎಲ್ಲ ಪಾಲಕರಿಗೂ ಒಂದಿಷ್ಟು ಸ್ಮರಣೀಯ ಕ್ಷಣಗಳು. ಅಂತಹ ಸಮಯದಲ್ಲಿ ಮಕ್ಕಳ ಪ್ರತಿಕ್ರಿಯೆ ಕೂಡ ಸಾಮಾನ್ಯವಾಗಿರುವುದಿಲ್ಲ. ಭಾರೀ ಥ್ರಿಲ್ ನಲ್ಲಿರುತ್ತಾರೆ. ಪುಟ್ಟ ಮಕ್ಕಳಿಗೆ ಯಾವ ವಾಹನ ಎನ್ನುವ ಅರಿವು ಇಲ್ಲವಾದರೂ ಸಾಕಷ್ಟು ಖುಷಿಯಲ್ಲಂತೂ ಇರುತ್ತಾರೆ. ಮೊದಲ ಬಾರಿಗೆ ಕಾರಿನಲ್ಲಿ ಪಯಣಿಸುವ 8-10 ತಿಂಗಳ ಮಕ್ಕಳು ಕುತೂಹಲದಿಂದ ಕಿಟಕಿಯ ಹೊರಗೇ ನೋಡುತ್ತ ನಿಲ್ಲುವುದನ್ನು ಕಾಣಬಹುದು. ಇದು ಪಾಲಕರಿಗೂ ಖುಷಿ, ಏನೋ ಒಂದು ರೀತಿಯಲ್ಲಿ ಹೆಮ್ಮೆ ನೀಡುವ ಸಂಗತಿ. ಸಾಮಾನ್ಯವಾದ ವಾಹನಗಳಲ್ಲಿ ಕರೆದೊಯ್ಯುವಾಗಲೇ ಪಾಲಕರಿಗೆ ಇಷ್ಟೊಂದು ಹೆಮ್ಮೆ ಎನಿಸಬೇಕಾದರೆ, ವಿಮಾನದಲ್ಲಿ ಕರೆದೊಯ್ಯುವುದು ಅದೆಷ್ಟು ಥ್ರಿಲ್ ಎನಿಸಬಹುದು? ತಮ್ಮ ಮಕ್ಕಳನ್ನು ವಿಮಾನದಲ್ಲಿ ತಾವೇ ಚಲಾಯಿಸಿಕೊಂಡು ಕರೆದೊಯ್ಯುವ ಭಾಗ್ಯ ಕೇವಲ ಪೈಲಟ್ ಗಳಿಗೆ ದೊರೆಯುತ್ತದೆ. ಅಂಥದ್ದೊಂದು ಭಾಗ್ಯಕ್ಕೆ ಪಾತ್ರರಾಗಿದ್ದ ಪೈಲಟ್ ಒಬ್ಬರು ಆ ಸಮಯದಲ್ಲಿ ಆಡಿದ ಕ್ಯೂಟ್ ಮಾತುಗಳು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ.
ಇನ್ ಸ್ಟಾಗ್ರಾಮ್ (Instagram) ನಲ್ಲಿ ಈ ವೀಡಿಯೋ (Video) ಪೋಸ್ಟ್ (Post) ಮಾಡಲಾಗಿದೆ. ವೀಡಿಯೋದಲ್ಲಿ ಪೈಲಟ್ (Pilot) ಬೆನ್ ಎನ್ನುವವರು ತಮ್ಮ ಮಗಳನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ಯುತ್ತಿರುವ ಕುರಿತು ಪ್ರಕಟ ಮಾಡಿದ್ದಾರೆ. ಸೌತ್ ವೆಸ್ಟ್ ಏರ್ ಲೈನ್ಸ್ ಪೈಲಟ್ ಆಗಿರುವ ಬೆನ್ “ಎಲ್ಲರಿಗೂ ಹಾಯ್. ನಾನು ನಿಮ್ಮ ಫಸ್ಟ್ ಆಫೀಸರ್ ಬೆನ್. ನಾನು ನಿಮ್ಮನ್ನು ಡೆನ್ವರ್ ಗೆ ಇಂದು ಕರೆದೊಯ್ಯುತ್ತಿದ್ದೇನೆ’ ಎಂದು ಪ್ರಕಟಣೆ (Announcement) ಆರಂಭಿಸುತ್ತಾರೆ. ಇಂದು ತಮ್ಮೊಂದಿಗೆ ಲಿಟಲ್ ಮಿಸ್ ಎಲ್ಲಿ ರೋಸ್ ಕೂಡ ಇದ್ದಾಳೆ ಎಂದು ತಿಳಿಸುತ್ತಾರೆ.
ಓರಿ ಜೊತೆ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಗರ್ಭಾ ಡ್ಯಾನ್ಸ್; ಜನ ಮೆಚ್ಚಿದ ವಿಡಿಯೋ ಇಲ್ಲಿದೆ
ಈಕೆ ಬೆನ್ ಪುತ್ರಿ. ಆಕೆಯನ್ನು ಎತ್ತಿಕೊಂಡೇ ಅವರು ಅನೌನ್ಸ್ ಮಾಡುವುದು ಕಂಡುಬರುತ್ತದೆ. “ಅವಳು ನನ್ನ ಮಗಳು (Daughter). ಹೀಗಾಗಿ, ಇದು ನನಗೆ ಭಾರೀ ವಿಶೇಷವಾದ ಫ್ಲೈಟ್ (Flight) ಆಗಿದೆ. ಮಗಳಿಗೆ ಪೈಲಟ್ ಆಗಿರುವುದು ಇದೇ ಮೊದಲು’ ಎಂದು ಅವರು ತಮ್ಮ ರೋಮಾಂಚನವನ್ನು ಹಂಚಿಕೊಂಡಿದ್ದಾರೆ.
ಭಾವನಾತ್ಮಕ ನೆನಪು (Memory) ಉಳಿಸಲಿದೆ
‘ಮಿಸ್ ಎಲ್ಲಿ ರೋಸ್ ಒಬ್ಬಳೇ ಪ್ರಯಾಣ ಮಾಡುತ್ತಿಲ್ಲ. ಆಕೆಯ ಅಮ್ಮನೂ ಇದ್ದಾರೆ. ಈ ವಿಶೇಷ ಪಯಣ ಮಗಳಿಗೆ ಏನೂ ನೆನಪಿಲ್ಲದೇ ಇರಬಹುದು. ಆದರೆ, ನನಗೆ ಇದು ಹಲವು ಗಾಢವಾದ ಭಾವನಾತ್ಮಕ ಸ್ಮರಣೆಗಳನ್ನು ನೀಡಲಿದೆ’ ಎಂದು ಹೇಳುವ ಅವರು, ಶೇ.90ರಷ್ಟು ಈಕೆ ಒಳ್ಳೆಯ ಪ್ರಯಾಣಿಕಳಾಗಿದ್ದಾಳೆ. ಅಷ್ಟು ಸಮಯ ಈಕೆ ಖುಷಿ (Happy) ಯಾಗಿದ್ದು, ಕೇಕೆ ಹಾಕುತ್ತಾಳೆ ಎನ್ನುವುದು ಸಂತಸದ ಸಂಗತಿ. ಶೇ.10ರಷ್ಟು ಕೆಟ್ಟ ಸುದ್ದಿ ಏನೆಂದರೆ, ಕೆಲ ಸಮಯದಲ್ಲಿ ಅವಳು ಗಂಭೀರವಾಗಿ ಅಳಬಹುದು. ಒಂದೊಮ್ಮೆ ಹೀಗಾದರೆ, ಆಕೆಯ ಅಮ್ಮನನ್ನು (Mother) ದೂಷಿಸಿಬಿಡಿ’ ಎಂದು ತಮಾಷೆ ಮಾಡುತ್ತಾರೆ. “ಸೀ ಯೂ, ನಿಮ್ಮನ್ನು ಡೆನ್ವರ್ ನಲ್ಲಿ ಸಿಗುತ್ತೇನೆ’ ಎಂದು ಅನೌನ್ಸ್ ಮುಗಿಸುತ್ತಾರೆ.
ಅತ್ಯಂತ ಮನೋಜ್ಞವಾಗಿರುವ ಈ ವೀಡಿಯೋ ಈಗಾಗಲೇ 14 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ಸೌತ್ ವೆಸ್ಟ್ ಏರ್ ಲೈನ್ಸ್ ಕೂಡ ತಮಾಷೆ (Fun) ಮಾಡಿದ್ದು, “ನಿಮಗೆ ಇಂದು ಎಂಡಾರ್ಫಿನ್ ಬೂಸ್ಟ್ ಬೇಕಾಗಿತ್ತು ಎಂದು ನಾವು ಕೇಳಿದ್ದೆವು’ ಎಂದು ಹೇಳಿದೆ.
ಮದುವೆ ಗಂಡು-ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದು, ಕುಟುಂಬಗಳ ನಡುವೆ ಅನ್ನೋದು ನಾನ್ಸೆನ್ಸ್- ವಿದ್ಯಾ ಬಾಲನ್
ಬಹಳಷ್ಟು ಜನ ಇದಕ್ಕೆ ಪ್ರತಿಕ್ರಿಯೆ (Reaction) ನೀಡಿದ್ದು, ತಂದೆಯೊಂದಿಗಿನ ಈ ಪಯಣ ಆ ಮಗುವಿನ ಅತ್ಯಂತ ಸುರಕ್ಷಿತ ಪಯಣವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, “ಅಂದು ನಾನು ಈ ವಿಮಾನದಲ್ಲಿದ್ದೆ. ಬಹಳ ಒಳ್ಳೆಯ ಮಗು. ನನ್ನ ಮಗಳ ಪಕ್ಕ ನಗುಮುಖದಿಂದ ಕುಳಿತಿತ್ತು. ಅದನ್ನು ಇಲ್ಲಿ ನೋಡಲು ಖುಷಿಯಾಗುತ್ತಿದೆ’ ಎಂದು ಹೇಳಿದ್ದಾರೆ.