ಅಪ್ರಾಪ್ತ ಪತ್ನಿ ಒಪ್ಪಿಗೆ ಮೇಲೆ ಸಂಬಂಧ ಬೆಳೆಸಿದ್ರೂ ಅದು ಬಲಾತ್ಕಾರ, ಕೋರ್ಟ್ ಮಹತ್ವದ ತೀರ್ಪು
ಶಾರೀರಿಕ ಸಂಬಂಧ ಬೆಳೆಸುವ ಮುನ್ನ ವಯಸ್ಸು ಮುಖ್ಯವಾಗುತ್ತದೆ. ಪತ್ನಿ ಎನ್ನುವ ಕಾರಣಕ್ಕೆ ಅಪ್ರಾಪ್ತೆ ಜೊತೆ ಸಂಬಂಧ ಬೆಳೆಸಿದ್ರೆ ನಿಮಗೆ ಕಾನೂನಿನ ರಕ್ಷಣೆ ಸಿಗೋದಿಲ್ಲ. ಬಾಂಬೆ ಹೈಕೋರ್ಟ್ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ.
ಮದುವೆ, ಪತ್ನಿ ಜೊತೆ ಶಾರೀರಿಕ ಸಂಬಂಧದ (Physical relationship) ವಿಷ್ಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ (Bombay High Court) ಮಹತ್ವದ ತೀರ್ಪೊಂದನ್ನು ನೀಡಿದೆ. ಅಪ್ರಾಪ್ತ ಪತ್ನಿ ಜೊತೆ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧ ಬೆಳೆಸಿದ್ರೂ ಅದು ಬಲಾತ್ಕಾರ ಎಂದು ಕೋರ್ಟ್ ಹೇಳಿದೆ. ಇದನ್ನು ಕಾನೂನಿನ ಅಡಿಯಲ್ಲಿ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ, ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ನ ನಾಗ್ಪುರ ಪೀಠ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಜಿಎ ಸನಪ್ ಅವರ ಪೀಠ, ಹುಡುಗಿಗೆ ಮದುವೆಯಾಗಿದ್ದರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಬಲಾತ್ಕಾರ ಎಂದು ಪರಿಗಣಿಸಲಾಗುವುದು ಎಂದಿದೆ.
ಪತಿ ಒಪ್ಪಿಗೆ ಇಲ್ಲದೆ ಸಂಬಂಧ ಬೆಳೆಸಿರುವುದಾಗಿ ಅಪ್ರಾಪ್ತ ಪತ್ನಿ (minor wife) ದೂರಿದ್ದಳು. ಮೊದಲು ಬಲಾತ್ಕಾರವೆಸಗಿ ನಂತ್ರ ಮದುವೆಯಾಗಿದ್ದಲ್ಲದೆ, ನಂತ್ರವೂ ಹಿಂಸೆ ನೀಡುತ್ತಿದ್ದ ಎಂದು ದೂರಿದ್ದಳು. ಪ್ರಕರಣ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ (imprisonment) ವಿಧಿಸಿತ್ತು.
ಮಕ್ಳು ಮದುವೆ ಬೇಡ ಅಂತಿದಾರಾ? ಇವೆಲ್ಲ ಕಾರಣ
ಯಾವ ಪ್ರಕರಣದಲ್ಲಿ ಈ ತೀರ್ಪು : ಮಹಾರಾಷ್ಟ್ರದ ವಾರ್ಧಾದಲ್ಲಿ ವಾಸವಾಗಿರುವ ಅಪ್ರಾಪ್ತೆ ಮೇಲೆ ನೆರೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿ ಬಲಾತ್ಕಾರವೆಸಗಿದ್ದ. ಸಂತ್ರಸ್ತೆ ತನ್ನ ತಂದೆ, ಸಹೋದರಿಯರು ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಪಕ್ಕದಲ್ಲೇ ವಾಸವಾಗಿದ್ದ ವ್ಯಕ್ತಿ ಎರಡು ವರ್ಷಗಳಿಂದ ಹುಡುಗಿ ಸ್ನೇಹ ಬೆಳೆಸಿದ್ದ. ನಂತ್ರ ಮದುವೆ ಆಸೆ ತೋರಿಸಿ ಬಲಾತ್ಕಾರವೆಸಗಿದ್ದ. ಪೀಡಿತೆ ಗರ್ಭ ಧರಿಸುತ್ತಿದ್ದಂತೆ ಆರೋಪಿ ಆಕೆಯನ್ನು ಮದುವೆಯಾಗಿದ್ದ. ಮನೆಯಲ್ಲಿಯೇ ನಾಟಕದ ಮದುವೆಯಾಗಿತ್ತು. ಮದುವೆಗೆ ನೆರೆಹೊರೆಯವರು ಮಾತ್ರ ಬಂದಿದ್ದಿದ್ದರು. ಮದುವೆ ನಂತ್ರ ಪತಿ, ಪತ್ನಿಗೆ ಹಿಂಸೆ ನೀಡಲು ಶುರು ಮಾಡಿದ್ದ. ಪತ್ನಿ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎನ್ನುವ ಹೇಳಿಕೆ ಕೂಡ ನೀಡಿದ್ದ. ದೈಹಿಕ ಹಾಗೂ ಮಾನಸಿಕ ಹಿಂಸೆಗೊಳಗಾಗಿದ್ದ ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಳು. 2019ರಲ್ಲಿ ಪೀಡಿತೆ, ದೂರು ದಾಖಲಿಸಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ಕೋರ್ಟ್, ಪತಿಯನ್ನು ಅಪರಾಧಿ ಎಂದು ತೀರ್ಪು ನೀಡಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಸಂದರ್ಭದಲ್ಲಿ ವಾದ ಮಂಡಿಸಿದ್ದ ಪತಿ, ಬಲಾತ್ಕಾರವಲ್ಲ. ಒಪ್ಪಿಗೆ ಮೇಲೆ ಸಂಬಂಧ ಬೆಳೆಸಲಾಗಿದೆ. ಆಕೆ ತನ್ನ ಪತ್ನಿ ಎಂದಿದ್ದ. ವಿಚಾರಣೆ ವೇಳೆ ಮಗುವಿನ ಡಿಎನ್ಎ ಪರೀಕ್ಷೆ ಕೂಡ ನಡೆದಿತ್ತು. ಮಗು ಇವರದ್ದೇ ಎಂಬುದು ವರದಿಯಿಂದ ಸಾಭಿತಾಗಿತ್ತು.
ತೀರ್ಪನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅಲ್ಲಿ ವಿಚಾರಣೆ ನಡೆಸಿದ ಕೋರ್ಟ್, 10 ವರ್ಷ ಜೈಲು ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ. ಘಟನೆ ನಡೆಯುವ ಸಮಯದಲ್ಲಿ ಪತ್ನಿ ಅಪ್ರಾಪ್ತೆಯಾಗಿದ್ದಳು. ಒಂದ್ವೇಳೆ, ವ್ಯಕ್ತಿ ಪತ್ನಿ ಒಪ್ಪಿಗೆ ಮೇಲೆ ಶಾರೀರಿಕ ಸಂಬಂಧ ಬೆಳೆಸಿದ್ದರೂ ಅದನ್ನು ಬಲಾತ್ಕಾರ ಎಂದೇ ಪರಿಗಣಿಸಲಾಗುತ್ತಿತ್ತು ಎಂದು ಕೋರ್ಟ್ ಹೇಳಿದೆ.
ತುಂಬಿದ ಸಭಾಂಗಣದಲ್ಲಿ ಮದುವೆ ಕನಸು, ಬಂದ ಗೆಸ್ಟ್ ನೋಡಿ ದಂಪತಿ ದಂಗು!
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗೋದೇ ಅಪರಾಧ. ಹಾಗಿರುವಾಗ, ಅವಳೊಂದಿಗೆ ಸಮ್ಮತಿಯ ಲೈಂಗಿಕತೆ ಹೊಂದುವುದು ಕಾನೂನು ಬಾಹಿರ ಎಂದು ಕೋರ್ಟ್ ಹೇಳಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಲಿದೆ. ಕೆಲ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗುವುದು. ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಮನೆಯಲ್ಲಿಯೇ ಮಹಿಳಾ ಅಧಿಕಾರಿಗಳು ತೆಗೆದುಕೊಳ್ಳುವ ವ್ಯವಸ್ಥೆ ಇದ್ದು, ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸುವ ಅವಕಾಶವನ್ನೂ ಕಾನೂನು ಒಳಗೊಂಡಿದೆ.