ತುಂಬಿದ ಸಭಾಂಗಣದಲ್ಲಿ ಮದುವೆ ಕನಸು, ಬಂದ ಗೆಸ್ಟ್ ನೋಡಿ ದಂಪತಿ ದಂಗು!
ಕಂಡ ಕನಸಿನಂತೆ ಮದುವೆ ನಡೆದ್ರೆ ಖುಷಿ ಡಬಲ್ ಆಗುತ್ತೆ. ಅದೇ ಮದುವೆ ದಿನ ಮನಸ್ಸು ನೋಯುವಂತಹ ಘಟನೆ ನಡೆದ್ರೆ ಅದನ್ನು ಮರೆಯೋದು ಕಷ್ಟ. ಈ ದಂಪತಿ ಆ ನೋವುಂಡಿದ್ದಾರೆ.
ಮದುವೆ (marriage), ಜೀವನದಲ್ಲಿ ನಡೆಯುವ ಮರೆಯಲಾಗದ ಘಟನೆಗಳಲ್ಲಿ ಒಂದು. ಮದುವೆ ಹಾಗೆ ಆಗ್ಬೇಕು, ಹೀಗೆ ಆಗ್ಬೇಕು ಅಂತ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ತಮ್ಮ ಸಂಗಾತಿ ಜೊತೆ ಕುಳಿತು ಗಂಟೆಗಟ್ಟಲೆ ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ತಾರೆ. ಫ್ರೀ ವೆಡ್ಡಿಂಗ್ (Free Wedding) ಫೋಟೋಶೂಟ್, ವಿಡಿಯೋ ಶೂಟ್ ಅಂತ ಶುರುವಾಗುವ ಮದುವೆ ಕೆಲಸ ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್, ಹನಿಮೂನ್ ನಲ್ಲಿ ಮುಕ್ತಾಯವಾಗುತ್ತದೆ. ಮದುವೆಗೆ ತಿಂಗಳುಗಟ್ಟಲೆ ತಯಾರಿ ನಡೆಸುವ ಜನರು, ತಮ್ಮ ಪ್ಲಾನ್ ನಂತೆ ಎಲ್ಲವೂ ನಡೆದಾಗ ಖುಷಿಯಾಗ್ತಾರೆ.
ಪ್ರತಿಯೊಬ್ಬರೂ ತಮ್ಮ ಬಜೆಟ್ ಗೆ ತಕ್ಕಂತೆ ಮದುವೆ ಜಾಗ, ಗೆಸ್ಟ್ ಬಗ್ಗೆ ನಿರ್ಧಾರ ತೆಗೆದುಕೊಳ್ತಾರೆ. ಕೊರೊನಾ ಸಮಯದಲ್ಲಿ ಮದುವೆಗೆ ಇಷ್ಟೇ ಜನ ಬರ್ಬೇಕು ಎನ್ನುವ ಕಂಡೀಷನ್ ಇತ್ತು. ಆದ್ರೆ ಅದಕ್ಕಿಂತ ಮೊದಲು ಮತ್ತು ನಂತ್ರ ಇಂಥ ಯಾವುದೇ ಕಂಡೀಷನ್ ಇಲ್ಲ. ಸ್ನೇಹಿತರು, ಸಂಬಂಧಿಕರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡೋದು ಖುಷಿಯ ವಿಷ್ಯ. ಕರೆದವರೆಲ್ಲ ಮದುವೆಗೆ ಬಂದ್ರೆ ಸಂತೋಷ ದುಪ್ಪಟ್ಟಾಗುತ್ತದೆ. ಅದೇ ಆಪ್ತ ಸ್ನೇಹಿತರು ಕೈಕೊಟ್ಟರೆ ಕೋಪ ಬರುತ್ತೆ. ಮದುವೆಗೆ ಯಾಕೆ ಬಂದಿಲ್ಲ ಅಂತ ಜಗಳ ಆಡುವವರಿದ್ದಾರೆ. ಆದ್ರೆ ಇಲ್ಲೊಬ್ಬರ ಮದುವೆ ಅತ್ಯಂತ ನೋವಿನಿಂದ ಕೂಡಿತ್ತು. ಅವರು ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು ಎನ್ನುವಂತಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಐಎಎಸ್ ಪುತ್ರಿಯ ವಿವಾಹ; ವರ ಯಾರು?
ಘಟನೆ ಅಮೆರಿಕಾ (America)ದಲ್ಲಿ ನಡೆದಿದೆ. ಕಲಿನಾ ಮೇರಿ ಮತ್ತು ಶೇನ್ ತಮ್ಮ ಮದುವೆ ಪ್ಲಾನ್ ಮಾಡಿದಾಗ, ಅನೇಕರು ಮದುವೆಗೆ ಕರೆದಿದ್ದರು. ಸುಮಾರು ನೂರಕ್ಕಿಂತ ಹೆಚ್ಚು ಜನರು ಮದುವೆಗೆ ಬರ್ತಾರೆ ಅಂತ ಗೆಸ್ಟ್ ಪಟ್ಟಿ (Guest List) ಸಿದ್ಧಪಡಿಸಿದ್ದರು. ಎಲ್ಲರ ಸಮ್ಮುಖದಲ್ಲಿ, ಅದ್ಧೂರಿಯಾಗಿ ಮದುವೆಯಾಗುವ ಕನಸು ಕಂಡಿದ್ದರು. ಆದ್ರೆ ಅವರು ಅಂದ್ಕೊಂಡಿದ್ದು ಒಂದೂ ಆಗ್ಲಿಲ್ಲ. ಮದುವೆಯ ಕನಸುಗಳು ಭಗ್ನಗೊಂಡವು. ಅದ್ದೂರಿಯಾಗಿ ಅಲಂಕೃತಗೊಂಡ ಸ್ವಾಗತ ಸಭಾಂಗಣಕ್ಕೆ ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದರು. ಇದನ್ನು ನೋಡಿದ ವಧು-ವರ (Bride-Groom)ರು ದಿಗ್ಭ್ರಮೆಗೊಂಡರು.
ಡಿಜಿಟಲ್ ಸಂದೇಶಗಳನ್ನು ಕಳುಹಿಸುವ ಮೂಲಕ ದಂಪತಿ 100 ಜನರನ್ನು ಮದುವೆಗೆ ಆಹ್ವಾನಿಸಿದ್ದರು. ಕನಿಷ್ಠ 25 ಜನರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಆಶ್ಚರ್ಯದ ಸಂಗತಿಯೆಂದರೆ, ಅವರು ಮದುವೆ ಮಂಟಪವನ್ನು ತಲುಪಿದಾಗ, ಅಲ್ಲಿಗೆ ಬಂದಿದ್ದು ಕೇವಲ ಐದು ಮಂದಿ ಮಾತ್ರ.
ಆಮಂತ್ರಣ ಪತ್ರಿಕೆ (Invitation Card ) ಯಲ್ಲಿ ಮಧ್ಯಾಹ್ನ 1 ಗಂಟೆಯ ಸಮಯ ನಿಗದಿಯಾಗಿತ್ತು. ಮಧ್ಯಾಹ್ನ 1 ಗಂಟೆ 15 ನಿಮಿಷವಾಗ್ತಿದ್ದಂತೆ ವಧುವಿನ ತಾಯಿ ಫೋನ್ ಮಾಡಿ, ಸಭಾಂಗಣಕ್ಕೆ ಬಂದಿದ್ದು ಕೆಲವೇ ಕೆಲವು ಮಂದಿ ಎಂದಿದ್ದರು. ಇದನ್ನು ಕೇಳಿದ ಜೋಡಿ, 2 ಗಂಟೆಗೆ ಸಭಾಂಗಣಕ್ಕೆ ಬಂದ್ರು. ಆದ್ರೆ ಆಗ್ಲೂ ಸಭಾಂಗಣ ಖಾಲಿಯಿತ್ತು. ಮದುವೆಗೆ ಬಂದಿದ್ದು ಕೇವಲ ಐದೇ ಐದು ಮಂದಿ. ಇದನ್ನು ನೋಡಿದ ದಂಪತಿ ಬೇಸರಗೊಂಡರು. ಅತ್ಯಂತ ಕಡಿಮೆ ಅತಿಥಿಗಳ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಭಾರತದ ಅತ್ಯಂತ ದುಬಾರಿ ಸೆಲೆಬ್ರಿಟಿ ವಿಚ್ಛೇದನಗಳಿವು
ತುಂಬಿದ ಸಭಾಂಗಣದಲ್ಲಿ ಮದುವೆ ಆಗ್ಬೇಕು ಎಂದು ನಾನು ಕನಸು ಕಂಡಿದ್ದೆ. ಆದ್ರೆ ನನ್ನ ಕನಸು ಭಗ್ನವಾಯ್ತು. ಜನರು ಏಕೆ ಬರಲಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡ್ತಿದೆ. ಇಷ್ಟೆಲ್ಲ ತಯಾರಿ ಮಾಡ್ಕೊಂಡು, ಮದುವೆಗೆ ಸಿದ್ಧವಾಗಿದ್ದ ನನಗೆ ಗೆಸ್ಟ್ ನೋಡಿ ಬೇಸರವಾಯ್ತು. ನಾನು ಏನು ಮಾಡಿದ್ದೇನೆ? ನಾನಷ್ಟು ಕೆಟ್ಟ ವ್ಯಕ್ತಿಯಾ, ನನ್ನ ಅಥವಾ ನನ್ನ ಪತಿಯಿಂದ ಏನಾದ್ರೂ ತಪ್ಪಾಗಿದ್ಯಾ ಎನ್ನುವ ಪ್ರಶ್ನೆ ಈಗ್ಲೂ ನನ್ನನ್ನು ಕಾಡ್ತಿದೆ ಎಂದು ವಧು ಹೇಳಿದ್ದಾಳೆ.