ಇದು ಮಾತ್ರೆಯಲ್ಲ, ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ !
ಮದ್ವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಪ್ರಮುಖ ಘಟ್ಟ. ಹೀಗಾಗಿಯೇ ಮದುವೆ ಕಾರ್ಯಕ್ರಮಗಳು, ಡೆಕೊರೇಶನ್, ವೆಡ್ಡಿಂಗ್ ಕಾರ್ಡ್ ಡಿಫರೆಂಟ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಹಾಗೇ ತಮಿಳುನಾಡಿನಲ್ಲೊಂದು ಫಾರ್ಮಾಸಿಸ್ಟ್- ನರ್ಸ್ ಜೋಡಿಯೊಂದು ಮಾತ್ರೆ ರ್ಯಾಪರ್ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಮದುವೆ ಎಂಬುದು ಬದುಕಿನ ಮಹತ್ತರ ಘಟ್ಟ. ನೂರಾರು ಕನಸಿನೊಂದಿಗೆ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದುವೆ ಹೀಗೇ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯದ್ದು ಪ್ರಮುಖ ಸ್ಥಾನ. ಇತ್ತೀಚಿಗಂತೂ ಡಿಫರೆಂಟ್ ಶೈಲಿಯ ಮದುವೆ ಆಮಂತ್ರಣ ಪತ್ರಿಕೆಗಳು ಸಿದ್ಧಗೊಳ್ಳುತ್ತಿವೆ. ಗ್ರ್ಯಾಂಡ್ ವೆಡ್ಡಿಂಗ್ ಕಾರ್ಡ್‌ನಿಂದ ಹಿಡಿದು ಸಿಂಪಲ್ ವೆಡ್ಡಿಂಗ್ ಕಾರ್ಡ್‌ಗಳನ್ನು ತಯಾರಿಸಿ ಜನರ ಮನಸ್ಸು ಸೆಳೆಯಲು ಯತ್ನಿಸ್ತಾರೆ. ಬಾಕ್ಸ್ ಶೇಪ್, ಹೂವಿನ ಆಕಾರದಲ್ಲಿಯೂ ಆಮಂತ್ರಣ ಪತ್ರಿಕೆಗಳು ಬರುತ್ತವೆ. ಮಾತ್ರವಲ್ಲ ತಮ್ಮ ಉದ್ಯೋಗವನ್ನು ಆಧರಿಸಿ ವಿಭಿನ್ನ ಶೈಲಿಯಲ್ಲಿ ವೆಡ್ಡಿಂಗ್ ಕಾರ್ಡ್‌ನ್ನು ತಯಾರಿಸುವವರೂ ಇದ್ದಾರೆ.
ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್ ಜೋಡಿಯೊಂದು ಇದೀಗ ಇದೇ ಮದುವೆ ಆಮಂತ್ರಣ ಪತ್ರಿಕೆ (Wedding card) ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ಹಿಂದೆ ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ದಿನಪತ್ರಿಕೆ, ಟಿವಿ ಜಾಹೀರಾತು, ಪರಿಸರ ಕಾಳಜಿ, ಮೊಬೈಲ್ ಅಪ್ಲಿಕೇಷನ್ ಮಾದರಿ, ಲ್ಯಾಪ್ಟಾಪ್ ಮದರಿಯ ಕಾರ್ಡ್ ಹೀಗೆ ತರೇಹವಾರಿ ರೀತಿಯ ಆಮಂತ್ರಣ ಪತ್ರಿಕೆಗಳು ಸುದ್ದಿಯಾಗಿದ್ದವು. ಈ ಪಟ್ಟಿಗೆ ಇದೀಗ ಟ್ಯಾಬ್ಲೆಟ್ ರ್ಯಾಪರ್ ಮಾದರಿಯ ಮದುವೆ ಆಮಂತ್ರಣ ಪತ್ರಿಕೆ ಸೇರ್ಪಡೆಯಾಗಿದೆ.
150 ಪುಟದ ಲಗ್ನ ಪತ್ರಿಕೆ ಮುದ್ರಿಸಿದ ವಕೀಲ : ಅದರಲ್ಲಿರುವ ಮಾಹಿತಿ ಏನು..?
ಟ್ಯಾಬ್ಲೆಟ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ
ತಮಿಳನಾಡಿನಲ್ಲಿ ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ. ಆ ಮೂಲಕ ವೃತ್ತಿಪರತೆ ತೋರಿದ್ದಾರೆ.
ವರನ ಹೆಸರು ಎಳಿಲರಸನ್. ವಧುವಿನ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಳಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಮುದ್ರಿಸಲಾಗಿದೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ (Bride-groom) ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.
ವಿಶಿಷ್ಟ ರೀತಿಯಲ್ಲಿದೆ ತಾ.ಪಂ ಸದಸ್ಯನ ಪುತ್ರನ ವಿವಾಹ ಆಹ್ವಾನ ಪತ್ರಿಕೆ.!
ಸಾಮಾಜಿಕ ಜಾಲತಾಣದಲ್ಲಿ ವೆಡ್ಡಿಂಗ್ ಕಾರ್ಡ್ ವೈರಲ್
ಟ್ಯಾಬ್ಲೆಟ್ ಕಾರ್ಡ್ಗಳಲ್ಲಿ ಸೂಚಿಸುವ ವಾರ್ನಿಂಗ್ ಸ್ಥಳದಲ್ಲಿ 'ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬನ್ನಿ' ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದು, ಅಂದು ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ. ಮಾತ್ರೆ ಶೀಟ್ ಮಾದರಿಯ ಈ ಮದ್ವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಗೆ ಶುಭ ಕೋರುತ್ತಿದ್ದಾರೆ