ವಿಶಿಷ್ಟ ರೀತಿಯಲ್ಲಿದೆ ತಾ.ಪಂ ಸದಸ್ಯನ ಪುತ್ರನ ವಿವಾಹ ಆಹ್ವಾನ ಪತ್ರಿಕೆ.!
ಇಲ್ಲೊಂದು ವಿಶೇಷ ವಿವಾಹ ಪತ್ರಿಕೆ ಮುದ್ರಣ ಮಾಡಲಾಗಿದೆ. ವಿವಾಹ ಆಹ್ವಾನ ಪತ್ರಿಕೆಯಲ್ಲಿ ಕೃಷಿ ಪ್ರೀತಿ ಎದ್ದು ಕಾಣಿಸುತ್ತಿದೆ.
ಭದ್ರಾವತಿ [ಜ.24]: ಆಹ್ವಾನ ಪತ್ರಿಕೆಯ ಮಧ್ಯ ಭಾಗದಲ್ಲಿ ಅಡಕೆ ತೋಟ, ಫಲಭರಿತ ಅಡಕೆ ಗೊನೆ ಒಳಗೊಂಡಂತೆ, ಕೆಳಗಿನ ಒಂದು ಬದಿಯಲ್ಲಿ ಸ್ವಚ್ಛತೆ ಕುರಿತು ಜಾಗೃತಿ, ಮತ್ತೊಂದು ಬದಿಯಲ್ಲಿ ನದಿ ಉಳಿಸಿ, ಜೀವ ಉಳಿಸಿ ಹಾಗೂ ಮಹಿಳೆಯರಿಗೆ ಗೌರವ. ಇದನ್ನು ನೋಡಿದಾಕ್ಷಣ ಇದೊಂದು ಸರ್ಕಾರದ ಅಥವಾ ಅಡಕೆ ಬೆಳೆಗಾರರ ಸಮಾರಂಭವೊಂದರ ಆಹ್ವಾನ ಪತ್ರಿಕೆ ಎಂದು ಕೊಳ್ಳಬಹುದು. ಆದರೆ ಇದು ವಿಶಿಷ್ಟ ರೀತಿಯ ಮದುವೆ ಆಹ್ವಾನ ಪತ್ರಿಕೆ.
ಅಡಕೆ ಹಿಂಗಾರು ಒಣಗು ರೋಗ: ರೈತರಿಗೆ ಹತೋಟಿ ಕ್ರಮದ ಸಲಹೆ..
ತಾಪಂ ಸದಸ್ಯ, ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದ ನಿವಾಸಿ ಧರ್ಮೇಗೌಡ(ಕುಮರಿ ಚಂದ್ರಣ್ಣ)-ಪದ್ಮಾವತಿ ದಂಪತಿ ಪುತ್ರ ಡಿ. ಅರುಣಕುಮಾರ ಮತ್ತು ತಾಲೂಕಿನ ವೀರಾಪುರ, ಸಿರಿಯೂರು ಗ್ರಾಮದ ನಿವಾಸಿ ನಾಗರಾಜು-ಚಿಕ್ಕತಾಯಮ್ಮ ದಂಪತಿ ಪುತ್ರಿ ಎನ್. ಸಾನ್ವಿ ಅವರ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ.
ಅಡಕೆ ಹಿಂಗಾರು ಒಣಗು ರೋಗ: ರೈತರಿಗೆ ಹತೋಟಿ ಕ್ರಮದ ಸಲಹೆ...
ಮೂಲತಃ ಕೃಷಿ ಕುಟುಂಬದಲ್ಲಿ ಬೆಳೆದಿರುವ ಧರ್ಮೇಗೌಡರು ಈ ವಿಶಿಷ್ಟಅಹ್ವಾನ ಪತ್ರಿಕೆಯ ರೂವಾರಿಯಾಗಿದ್ದು, ಈ ಹಿಂದೆ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದರು. ತಮ್ಮಲ್ಲಿನ ಅನುಭವದ ಜಾಗೃತಿಯನ್ನು ಪುತ್ರನ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ ಮೂಲಕ ವ್ಯಕ್ತಪಡಿಸಿ ಹಿರಿತನ ಮೆರೆದಿದ್ದಾರೆ ಎಂದು ತಪ್ಪಾಗಲಾರದು.