Real Story: ಸಾಕುನಾಯಿ ಸತ್ತು 9 ತಿಂಗಳಾದ್ರೂ ನೋವು ಮರೆಯೋಕಾಗ್ತಿಲ್ಲ!

ನಿಷ್ಠಾವಂತ ಪ್ರಾಣಿ ನಾಯಿ. ಮನೆಯಲ್ಲಿ ಸಾಕಿದ ನಾಯಿ ಮೇಲೆ ಪ್ರೀತಿ ಹೆಚ್ಚಿರುತ್ತದೆ. ಅದನ್ನು ಮನೆಯ ಸದಸ್ಯರಂತೆ ನೋಡುವ ಜನರು ಅದು ಸಾವನ್ನಪ್ಪಿದ್ರೆ ಬಿಕ್ಕಿ ಅಳ್ತಾರೆ. ಕೆಲವರಿಗೆ ಈ ನೋವಿನಿಂದ ಹೊರ ಬರೋದು ಸುಲಭವಾಗಿರೋದಿಲ್ಲ.
 

Pet Dog Passed Away And Unable To Get Over Dog Death

ಸಾಕು ಪ್ರಾಣಿಯನ್ನು ಕೆಲವರು ಮನೆಯ ಮಕ್ಕಳಂತೆ ಸಾಕ್ತಾರೆ. ನಾಯಿ, ಬೆಕ್ಕನ್ನು ಮಕ್ಕಳಿಗಿಂತ ಹೆಚ್ಚು ಆರೈಕೆ ಮಾಡೋರಿದ್ದಾರೆ. ಮನೆಯಲ್ಲಿರುವ ಈ ಪ್ರಾಣಿ ಕಳೆದು ಹೋದ್ರೆ ಜೀವ ಹೋದಂತೆ ಕಂಗಾಲಾಗುವ ಜನರು, ಅದೇನಾದ್ರೂ ಸಾವನ್ನಪ್ಪಿದ್ರೆ ದುಃಖದಲ್ಲಿ ತೊಯ್ದು ಹೋಗ್ತಾರೆ. ಆ ನೋವನ್ನು ಮರೆಯೋದು ಅವರಿಗೆ ಬಹಳ ಕಷ್ಟ. ಈಗ ಈ ಹುಡುಗಿ ಸ್ಥಿತಿ ಕೂಡ ಅದೇ ಆಗಿದೆ. 9 ತಿಂಗಳ ಹಿಂದೆ ಸಾವನ್ನಪ್ಪಿದ ನಾಯಿಯನ್ನು ಆಕೆಗೆ ಮರೆಯಲು ಸಾಧ್ಯವಾಗ್ತಿಲ್ಲ. ಅದಕ್ಕೆ ಏನು ಮಾಡ್ಬೇಕು ಎಂದು ತಜ್ಞರ ಮುಂದೆ ಪ್ರಶ್ನೆ ಇಟ್ಟಿದ್ದಾಳೆ. ಅಷ್ಟಕ್ಕೂ ಆಕೆಯನ್ನು ಕಾಡ್ತಿರುವ ನೋವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಆಕೆ ಕಾಲೇಜಿ (College) ಗೆ ಹೋಗುವ ಹುಡುಗಿ. ಮನೆ (House) ಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಪ್ರೀತಿ ಮಾಡುವ ಪಾಲಕರ ಜೊತೆ ಆರಾಮವಾಗಿ ಜೀವನ (Life) ನಡೆಸ್ತಿದ್ದಾಳೆ. ಆದ್ರೆ ಆಕೆ ಮನೆಯಲ್ಲಿ ಸಾಕಿದ್ದ ನಾಯಿಯ ಸಾವು ಆಕೆಯನ್ನು ಸಂಪೂರ್ಣ ಹತಾಶೆಗೊಳಿಸಿದೆ. ನಾಯಿ ಆಕೆಯ ಬೆಸ್ಟ್ ಫ್ರೆಂಡ್ ಆಗಿತ್ತಂತೆ. ಸದಾ ಅದ್ರ ಜೊತೆ ಕಾಲ ಕಳೆಯುತ್ತಿದ್ದಳಂತೆ. ನಾಯಿ ಜೊತೆಯಲ್ಲಿದ್ದಾಗ ಸಂತೋಷ (Happiness) ವಾಗಿರ್ತಿದ್ದಳಂತೆ ಹುಡುಗಿ. 9 ತಿಂಗಳ ಹಿಂದೆ ನಾಯಿ (Dog ) ಸಾವನ್ನಪ್ಪಿದೆಯಂತೆ. ಅದಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿದ್ದರಂತೆ. ಆದ್ರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಒಂದು ದಿನ ಏಕಾಏಕಿ ಹುಷಾರು ತಪ್ಪಿದ ನಾಯಿ 6 ಗಂಟೆಯೊಳಗೆ ಇಹಲೋಕ ತ್ಯಜಿಸಿತ್ತಂತೆ. ಈ ದುಃಖವನ್ನು ನಾನಿನ್ನು ಮರೆಯಲು ಸಾಧ್ಯವಾಗ್ತಿಲ್ಲ ಎನ್ನುತ್ತಾಳೆ ಹುಡುಗಿ. ಆರಂಭದಲ್ಲಿ ಅದು ನಮ್ಮ ಬಳಿ ಇದೆ ಎನ್ನಿಸುತ್ತಿತ್ತು. ಅದ್ರ ಆಟಿಕೆಗಳನ್ನು ನೋಡಿದಾಗ ನನ್ನ ಮನಸ್ಸು ಮತ್ತಷ್ಟು ನೋಯುತ್ತದೆ. ಈ ದುಃಖ ಮರೆಯಲು ನಾವು ಮತ್ತೊಂದು ನಾಯಿಯನ್ನು ಮನೆಗೆ ತಂದಿದ್ದೇವೆ. ಆದ್ರೂ ನನಗೆ ಅದನ್ನು ಮರೆಯಲು ಸಾಧ್ಯವಾಗ್ತಿಲ್ಲ. ನನ್ನ ದುಃಖದಿಂದ ಹೇಗೆ ಹೊರಗೆ ಬರಬೇಕೆಂದು ತಿಳಿಯುತ್ತಿಲ್ಲ ಎನ್ನುತ್ತಾಳೆ ಹುಡುಗಿ.

ಪತ್ನಿ ಓಡಿಹೋದ್ಲು ಅಂತ ಅಳ್ತಾ ಕೂರ್ಲಿಲ್ಲ ಈತ..ಆಕೆಯ ಪ್ರೇಮಿಯ ಹೆಂಡ್ತಿಯನ್ನೇ ಮದ್ವೆಯಾದ!

ತಜ್ಞರ ಸಲಹೆ : ನಾಯಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಭಾವನಾತ್ಮಕ ಬೆಂಬಲವನ್ನು ನೀಡುವುದಲ್ಲದೆ ನಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಮ್ಮನ್ನು ಬೇಷರತ್ತಾಗಿ ಪ್ರೀತಿಸುತ್ತವೆ.  ನಿಷ್ಠಾವಂತ ಪ್ರಾಣಿ ನಾಯಿ. ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಾಗ ಎಷ್ಟು ನೋವಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಆದ್ರೆ ಈ ದುಃಖದಿಂದ ಹೊರಬರುವುದು ಅನಿವಾರ್ಯ. ನೀವು ಹೊಸ ನಾಯಿಯ ಜೊತೆ ಸಮಯ ಕಳೆಯಲು ಶುರು ಮಾಡಿ. ಮನೆಯಲ್ಲಿರುವ ನಾಯಿಯ ಆಟಿಕೆಯನ್ನು ಕಣ್ಣಿಗೆ ಕಾಣದ ಜಾಗದಲ್ಲಿ ಇಡಿ ಎನ್ನುತ್ತಾರೆ ತಜ್ಞರು.
ನಾಯಿ ಸಾವಿಗೆ ನಾನೇ ಕಾರಣ ಎಂಬ ನೋವಿದ್ದರೆ ಮೊದಲು ಅದನ್ನು ತೆಗೆದುಹಾಕಿ. ನಾಯಿ ಜೊತೆ ಕಳೆದ ಸುಂದರ ಕ್ಷಣಗಳನ್ನು ಮಾತ್ರ ನೆನಪಿಸಿಕೊಳ್ಳಿ. ನೀವು ಹೊಸ ನಾಯಿ ಜೊತೆ ಸಮಯ ಕಳೆಯಲು ಶುರು ಮಾಡಿದ್ರೆ ನಿಮ್ಮ ಮನಸ್ಸು ಹಗುರವಾಗುತ್ತದೆ. ನೋವಿನಿಂದ ನೀವು ನಿಧಾನವಾಗಿ ಹೊರಗೆ ಬರಬಹುದು. ನಾಯಿ ಸಾವಿಗೆ ನೀವೇ ಕಾರಣ ಎನ್ನುವ ಪಶ್ಚಾತ್ತಾಪ ನಿಮ್ಮನ್ನು ಮತ್ತಷ್ಟು ನೋವಿಗೆ ನೋಕುತ್ತಿದೆ. ಆದ್ರೆ  ಈ ದುಃಖವನ್ನು ನೀವು ಜೀವನ ಪರ್ಯಂತ ಅನುಭವಿಸಬೇಕಾಗಿಲ್ಲ ಎನ್ನುತ್ತಾರೆ ತಜ್ಞರು.

ಮುದ್ದು ಮಗಳ ಬಗ್ಗೆ ಅಪ್ಪ ತಿಳಿಯಲೇಬೇಕಾದ ಕೆಲವು ಸಂಗತಿಗಳು

ನಾಯಿ ಸಾವಿನ ದುಃಖದಿಂದ ಹೊರಬರಲು, ಈಗಾಗಲೇ ಆ ನೋವನ್ನು ಅನುಭವಿಸಿರುವವರ ಜೊತೆ ಮಾತನಾಡಿ. ಅವರು ಇದ್ರಿಂದ ಹೇಗೆ ಹೊರ ಬಂದ್ರು ಎಂಬುದನ್ನು ತಿಳಿದುಕೊಳ್ಳಿ. ಅದನ್ನು ಪಾಲಿಸಲು ಪ್ರಯತ್ನಿಸಿ. ಯಾವುದೂ ಸಾಧ್ಯವಾಗ್ತಿಲ್ಲ ಎಂದಾದ್ರೆ ನೀವು ಆಪ್ತ ಸಮಾಲೋಚಕರ ನೆರವು ಪಡೆಯಬಹುದು ಎನ್ನುತ್ತಾರೆ ತಜ್ಞರು. 
 

Latest Videos
Follow Us:
Download App:
  • android
  • ios