ಮದ್ವೆಯಾಗಿ ಒಂದು ವರ್ಷ ಆದ್ರೂ ಹೆಂಡ್ತಿಯ ಅಸಲಿ ಮುಖವನ್ನೇ ನೋಡಿಲ್ವಂತೆ ಗಂಡ..!

ಮದ್ವೆ (Wedding)ಯಾಗಿ ಜಸ್ಟ್ ಒಂದು ವರ್ಷವಾದ್ರೂ ಸಾಕು ಗಂಡ-ಹೆಂಡ್ತಿ (Husband-wife) ಸಿಕ್ಕಾಪಟ್ಟೆ ಅನ್ಯೋನ್ಯವಾಗಿರ್ತಾರೆ. ಆದ್ರೆ ಇಲ್ಲೊಬ್ಬ ಗಂಡ ಅನಿಸಿಕೊಂಡೋದನು ಮದ್ವೆಯಾಗಿ ಒಂದು ವರ್ಷವಾಗಿದ್ರೂ ಇನ್ನೂ ಹೆಂಡ್ತಿಯ ಅಸಲಿಯ ಮುಖ (Face)ವನ್ನೇ ಸರಿಯಾಗಿ ನೋಡಿಲ್ವಂತೆ. ಅರೆ, ಏನಪ್ಪಾ ಇವ್ರ ಕಥೆ ಅಂತೀರಾ ? ಇಲ್ಲಿದೆ ನೋಡಿ ಫುಲ್ ಸ್ಟೋರಿ.

Person Have Been Married For A Year, But Havent Seen My Wifes Real Face Yet Vin

ಹೊಸದಾಗಿ ಮದ್ವೆ (Wedding)ಯಾದವರನ್ನು ನೊಡಿದ್ದೀರಲ್ಲಾ. ಎಷ್ಟು ಅನ್ಯೋನ್ಯವಾಗಿರ್ತಾರೆ. ಕೈ ಕೈ ಹಿಡಿದು ಜೊತೆಯಲ್ಲೇ ಓಡಾಡೋದೇನು, ಪರಸ್ಪರ ಒಬ್ಬರನ್ನೊಬ್ಬರು ಹೊಗಳೋದೇನು ನೋಡಿದ್ರೆ ಅಪರೂಪದ ಜೋಡಿ ಅನ್ಸುತ್ತೆ. ಕಿತ್ತಾಡೋದೆಲ್ಲಾ ಆಮೇಲೆ ಇದ್ದಿದ್ದೇ ಬಿಡಿ. ಆದ್ರೆ ಮದುವೆಯ ಆರಂಭದ ದಿನಗಳಲ್ಲಂತೂ ಸಾಮಾನ್ಯವಾಗಿ ಎಲ್ಲಾ ಜೋಡಿ ಹೀಗೇ ಇರ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ದಂಪತಿ (Couple)ಯಿದ್ದಾರೆ. ಮದ್ವೆಯಾಗಿ ಒಂದ್ ವರ್ಷ ಕಳೆದ್ರೂ ಗಂಡ, ಹೆಂಡ್ತಿಯ ಅಸಲಿ ಮುಖವನ್ನೇ ನೋಡಿಲ್ವಂತೆ. 

34 ವರ್ಷದ ವಿವಾಹಿತ ವ್ಯಕ್ತಿ, ಹೆಂಡತಿಯ ವಿಪರೀತ ಮೇಕಪ್‌ (Makeup) ಹಾಕುವ ಅಭ್ಯಾಸದಿಂದಾಗಿ ನಾನ್ಹೇಗೆ ಆಕೆಯ ಅಸಲಿ ಮುಖ (Real face) ವನ್ನು ನೋಡಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ಅವ್ರ ಸಮಸ್ಯೆಯನ್ನು ಅವ್ರ ಮಾತಲ್ಲೇ ಕೇಳಿ. 

Mature relationship: ಒಬ್ಬರಿಗೊಬ್ಬರು ಪ್ರೀತಿಸಿದರೆ ಸಾಲದು, ಗೌರವಿಸಬೇಕು!

ಪ್ರಶ್ನೆ: ನಾನು 34 ವರ್ಷದ ವಿವಾಹಿತ ವ್ಯಕ್ತಿ. ಕಳೆದ ವರ್ಷವಷ್ಟೇ ನನಗೆ ಮದುವೆಯಾಯಿತು. ಇದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ನನ್ನ ಪೋಷಕರು, ನನ್ನ ಹೆಂಡತಿಯನ್ನು ಆಯ್ಕೆ ಮಾಡಿದ್ದಾರೆ. ನನ್ನ ಹೆಂಡತಿ ನನಗಿಂತ 7 ವರ್ಷ ಚಿಕ್ಕವಳು. ಅನೇಕ ವಿಷಯಗಳಲ್ಲಿ ನಮ್ಮ ಇಷ್ಟಗಳು ಒಂದಕ್ಕೊಂದು ಹೊಂದಿಕೆಯಾಗದಿರಲು ಇದೂ ಒಂದು ಕಾರಣ. ಆದರೆ, ನನ್ನ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮದುವೆಯಾದಂದಿನಿಂದ ನನಗೆ ವಿಚಿತ್ರವಾದ ಸಮಸ್ಯೆ ಎದುರಾಗಿದೆ. ವಾಸ್ತವವಾಗಿ, ನನ್ನ ಹೆಂಡತಿ ಚೆನ್ನಾಗಿ ಡ್ರೆಸ್ ಮಾಡುವುದನ್ನು ಇಷ್ಟಪಡುತ್ತಾಳೆ. ಆಕೆ ಫ್ಯಾಶನ್ ಬಟ್ಟೆಗಳನ್ನು ಧರಿಸುವುದು ಮಾತ್ರವಲ್ಲದೆ ಸುಂದರವಾಗಿ ಕಾಣಲು ಸಾಕಷ್ಟು ಮೇಕಪ್ ಕೂಡಾ ಮಾಡುತ್ತಾಳೆ.

ಅವಳು ಆಕೆ ಫ್ಯಾಷನೆಬಲ್ ಆಕೆ ಡ್ರೆಸ್ ಮಾಡುವುದರಿಂದ ಅಥವಾ ಮೇಕಪ್ ಮಾಡುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಅವಳು ಮೇಕಪ್ ಮಾಡಲು ಗಂಟೆಗಟ್ಟಲೆ ಕಳೆಯುವುದನ್ನು ನಾನು ಗಮನಿಸಿದ್ದೇನೆ. ಮದುವೆಯ ಆರಂಭಿಕ ದಿನಗಳಲ್ಲಿ, ನಾನು ಅದನ್ನು ಸಣ್ಣ ಸಮಸ್ಯೆ ಎಂದು ಬಿಟ್ಟೆ. ಆದರೆ ಮದುವೆಯಾಗಿ 6 ​​ತಿಂಗಳು ಕಳೆದರೂ ಈ ಅಭ್ಯಾಸ ಬದಲಾಗದೇ ಇದ್ದಾಗ ನನ್ನ ಹೆಂಡತಿ ಮೇಕಪ್ ಗೆ ಅಡಿಕ್ಟ್ ಆಗಿದ್ದಾಳೆ ಎಂದು ಅರಿವಾಯಿತು. ಅವಳು ಪ್ರತಿ ತಿಂಗಳು ಸೌಂದರ್ಯ ಉತ್ಪನ್ನಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾಳೆ. ಮನೆಯಲ್ಲಿದ್ದಾಗ್ಲೂ ಮೇಕಪ್ ಹಾಕಿಕೊಂಡೇ ಕೂರ್ತಾಳೆ. ಮಲಗುವಾಗಲೂ ಮೇಕಪ್ ಮಾಡ್ತಾಳೆ. ಹೀಗಾಗಿ ನಾನು ಅವಳ ಅಸಲಿ ಮುಖವನ್ನೇ ನೋಡಿಲ್ಲ. 

ಗಡಿ ಮೀರಿದ ಪ್ರೀತಿ: ಫೇಸ್‌ಬುಕ್‌ ಗೆಳೆಯನ ಭೇಟಿಗೆ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ

ನಿಜ ಹೇಳಬೇಕೆಂದರೆ, ಮೇಕಪ್ ಇಲ್ಲದೆ ಅವಳು ಹೇಗಿದ್ದಾಳೆಂದು ನನಗೆ ತಿಳಿದಿಲ್ಲ. ನಾನು ಇಲ್ಲಿಯವರೆಗೆ ನನ್ನ ಹೆಂಡತಿಯ ನಿಜವಾದ ಮುಖವನ್ನು ನೋಡಿಲ್ಲ. ಇಷ್ಟೇ ಅಲ್ಲ, ದಿನವೂ ಇಂತಹ ಭಾರೀ ಮೇಕಪ್ ಬಳಸುವುದನ್ನು ತಪ್ಪಿಸಬೇಕು ಎಂದು ನಾನು ಅವಳಿಗೆ ಹೇಳಿದಾಗ, ಅವಳು ನನ್ನ ಮೇಲೆ ಕೋಪಗೊಂಡಳು. ನಾನು ಅವನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದೇನೆ ಎಂದು ಹೇಳಿದಳು. ಆ ದಿನದ ನಂತರ ನಾನು ಅವಳೊಂದಿಗೆ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ಅವಳ ಈ ಅಭ್ಯಾಸದಿಂದಾಗಿ ನಾನು ಅವಳನ್ನು ದ್ವೇಷಿಸಲು ಪ್ರಾರಂಭಿಸಿದೆ. ನಾನು ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ? ನನ್ನ ಹೆಂಡತಿಗೆ ಮೇಕ್ಅಪ್ ಹಾಕದಂತೆ ಮನವರಿಕೆ ಮಾಡುವುದು ಹೇಗೆ? 

ಫೋರ್ಟಿಸ್ ಹೆಲ್ತ್‌ಕೇರ್‌ನ ಮಾನಸಿಕ ಆರೋಗ್ಯ ಮತ್ತು ವರ್ತನೆಯ ವಿಜ್ಞಾನ ವಿಭಾಗದ ಮುಖ್ಯಸ್ಥ ಕಾಮ್ನಾ ಛಿಬ್ಬರ್ ವಿವಾಹಿತ ವ್ಯಕ್ತಿಯ ಪ್ರಶ್ನೆಗೆ ಉತ್ತರ ನೀಡಿದ್ದಾರೆ.  

ತಜ್ಞರ ಉತ್ತರ:  ನಿಮ್ಮ ಹೆಂಡತಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅನೇಕ ಭಾವನೆಗಳು ಮೂಡುತ್ತಿರಬೇಕು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಇದೆಲ್ಲದರ ನಂತವೂ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕೆಲವರಿಗೆ ಮಾಡರ್ನ್‌ ಡ್ರೆಸ್ (Dress) ಹಾಕಲು ಇಷ್ಟವಾದರೆ, ಕೆಲವರಿಗೆ ಇಷ್ಟವಾಗುವುದಿಲ್ಲ. ಕೆಲವರಿಗೆ ಮೇಕಪ್ ಹಾಕುವುದು ಇಷ್ಟವಾಗುತ್ತದೆ, ಕೆಲವರಿಗೆ ಇಲ್ಲ. ನಿಮ್ಮ ಹೆಂಡತಿಯ ವಿಷಯದಲ್ಲೂ ಅದೇ ಆಗಿದೆ. ಅವಳು ತಾನು ಚೆನ್ನಾಗಿ ಕಾಣಲು ಇಷ್ಟಪಡುತ್ತಾಳೆ, ಹಾಗಾಗಿ ಯಾವಾಗಲೂ ಮೇಕಪ್ ಮಾಡಿಕೊಳ್ಳುತ್ತಾಳೆ. 

ದಾಂಪತ್ಯದಲ್ಲಿ ಹೀಗೆಲ್ಲಾ ಆಯ್ತು ಅಂದ್ರೆ ಡಿವೋರ್ಸ್ ಆಗೋದು ಪಕ್ಕಾ, ಹುಷಾರಾಗಿರಿ !

ನೀವು ಇಲ್ಲಿಯವರೆಗೆ ನಿಮ್ಮ ಹೆಂಡತಿಯನ್ನು ಮೇಕಪ್ ಇಲ್ಲದೆ ನೋಡಿಲ್ಲ ಎಂದು ನೀವು ಹೇಳಿದ್ದೀರಿ, ಬಹುಶಃ ಮೇಕಪ್ ಇಲ್ಲದೆ ನೀವು ಅವರನ್ನು ನೋಡಿದರೆ, ನಿಮಗೆ ಇಷ್ಟವಾಗುವುದಿಲ್ಲ ಎಂದವರು ಅಂದುಕೊಳ್ಳುತ್ತಿರಬಹುದು. ಹೀಗಾಗಿ ಆಕೆಯ ಬಗ್ಗೆ ತಪ್ಪು ತಿಳಿದುಕೊಳ್ಳಲು ಹೋಗಬೇಡಿ. ನೀವು ಮದುವೆಯಾಗಿ ಬಹಳ ದಿನಗಳು ಆಗಿಲ್ಲ. ಅವರು ಇದೀಗ ನಿಮ್ಮೊಂದಿಗೆ ಹೆಚ್ಚು ಆರಾಮದಾಯಕವಾಗಿಲ್ಲ. ಅದಕ್ಕಾಗಿಯೇ ಅವರು ನಿಮ್ಮನ್ನು ಸಂತೋಷಪಡಿಸಲು ನಿರಂತರವಾಗಿ ಮೇಕಪ್ ಬಳಸುತ್ತಿರಬಹುದು. ಕಾಲಾನಂತರದಲ್ಲಿ, ನಿಮ್ಮ ಸಂಬಂಧವು ಬಲಗೊಂಡಾಗ, ಅವರ ಮೇಕ್ಅಪ್ ಮಾಡಿಕೊಳ್ಳುವ ಅಭ್ಯಾಸ ಕೂಡಾ ಕಡಿಮೆಯಾಗಬಹುದು. ವ್ಯಕ್ತಿ, ಮೇಕಪ್‌ಗಿಂತ ಅವರ ಸ್ವಭಾವವನ್ನು ನೋಡಿ ಇಷ್ಟಪಡಿ.

Latest Videos
Follow Us:
Download App:
  • android
  • ios