Asianet Suvarna News Asianet Suvarna News

Real Story: ನಾನು ಗೇ ಅಂದ್ಕೊಂಡ ಕುಟುಂಬಸ್ಥರು ಮದುವೆ ಮಾಡ್ತಿಲ್ಲ!

ಸರಿಯಾದ ವಯಸ್ಸಿಗೆ ಮದುವೆ ಆಗ್ಬೇಕು. ಕೈ ಹಿಡಿಯುವ ಸಂಗಾತಿ ಆಯ್ಕೆ ಕೂಡ ಮುಖ್ಯ. ಅದು ಇದು ನೆಪ ಹೇಳಿ ಮದುವೆ ಮುಂದೂಡ್ತಾ ಇದ್ರೆ ಹಿರಿಯರು ನಿಮ್ಮ ಮದುವೆ ಸುದ್ದಿಗೆ ಬರೋದಿಲ್ಲ. ಈಗ ಇವನ ಕಥೆಯೂ ಇದೇ ಆಗಿದೆ.
 

People Think I Am Gay Forty Four Year Old Unmarried Man Shared roo
Author
First Published Jul 14, 2023, 3:48 PM IST

ಮದುವೆ ಸ್ವರ್ಗದಲ್ಲಿ ನಿಶ್ಚಿಯವಾಗಿರುತ್ತೆ ಎಂದು ಭಾರತೀಯರು ನಂಬಿದ್ದಾರೆ. ಭಾರತದಲ್ಲಿ ಮದುವೆಗೆ ಸಂಬಂಧಿಸಿದಂತೆ ಕೆಲ ಅಲಿಖಿತ ನಿಯಮವಿದೆ. ಹಿರಿಯರು ಮಕ್ಕಳ ಮದುವೆಗೆ ಸಂಬಂಧಿಸಿದಂತೆ ಕೆಲ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಮುಂದಾಗ್ತಾರೆ. ಅದಕ್ಕೆ ಮಕ್ಕಳು ಅಡ್ಡಿ ಮಾಡಿದಾಗ ಮಕ್ಕಳ ಮದುವೆ ಪ್ರಯತ್ನ ಕೈಬಿಟ್ಟು ಕುಳಿತುಕೊಳ್ಳುವವರಿದ್ದಾರೆ. ಮದುವೆ ಯಾರ ಜೊತೆಗೆ ಆಗುತ್ತೆ ಎನ್ನುವುದಕ್ಕಿಂತ ಯಾವ ವಯಸ್ಸಿನಲ್ಲಿ ಆಗುತ್ತೆ ಎಂಬುದು ಹಿರಿಯರಿಗೆ ಮುಖ್ಯ. 

ಅವರ ಆಲೋಚನೆ (Thought) ಸಂಪೂರ್ಣ ತಪ್ಪು ಎನ್ನಲು ಸಾಧ್ಯವಿಲ್ಲ. ಯಾಕೆಂದ್ರೆ ಸರಿಯಾದ ವಯಸ್ಸಿನಲ್ಲಿ ಮದುವೆ (Marriage) ಯಾಗದೆ ಹೋದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹಾಗಂತ, ಯೋಗ್ಯವಲ್ಲದ ವ್ಯಕ್ತಿಯನ್ನು ವಿವಾಹವಾಗಿ ಸಂಸಾರ ನಡೆಸುವುದು ಕಷ್ಟದ ಮಾತು. ಈಗಿನ ಕಾಲದಲ್ಲಿ ಅನೇಕ ಕಾರಣಕ್ಕೆ ಅವಿವಾಹಿತರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಮದುವೆಯಾಗದೆ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಿರುತ್ತಾರೆ. ಇನ್ನು ಕೆಲವರು ಸಂಗಾತಿ ಸಿಗದೆ ಒಂಟಿ ಜೀವನ (Life) ವನ್ನು ಅನಿವಾರ್ಯವಾಗಿ ನಡೆಸುತ್ತಿರುತ್ತಾರೆ. ಅದಕ್ಕೆ ಈ ವ್ಯಕ್ತಿ ಕೂಡ ನಿದರ್ಶನ. ತನ್ನದೇ ಒಂದು ಪುಟ್ಟ ಸಂಸಾರದ ಕನಸು ಕಂಡಿದ್ದ ವ್ಯಕ್ತಿಗೆ ವಯಸ್ಸು 44 ಆದ್ರೂ ಮದುವೆಯಾಗಿಲ್ಲ. ಆತ ವಿವಾಹ ಬಂಧನಕ್ಕೆ ಒಳಗಾಗದಿರಲು ಕುಟುಂಬಸ್ಥರೂ ಒಂದು ರೀತಿಯಲ್ಲಿ ಕಾರಣ. ಇಷ್ಟು ವರ್ಷ ಹುಡುಗಿಯ ಹುಡುಕಾಟದಲ್ಲಿಯೇ ಸಮಯ ಕಳೆದ ವ್ಯಕ್ತಿ ಈಗ ಮದುವೆಯಾಗದಿರುವ ನಿರ್ಧಾರಕ್ಕೆ ಬಂದಿದ್ದಾನೆ. ಒಂಟಿಯಾಗಿ ಜೀವನ ಸಾಗಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾನೆ.

ಗಂಡನೂ ಬೇಡ, ಈ ಮದ್ವೆನೂ ಬೇಡ; ವಜ್ರದ ನೆಕ್ಲೇಸ್ ಕದ್ದು ಪ್ರೇಮಿಯೊಂದಿಗೆ ನವವಧು ಪರಾರಿ!

ಆತನ ಮಾತುಗಳಲ್ಲೇ ಹೇಳೋದಾದ್ರೆ 44 ವರ್ಷದ ಅಜಯ್ ಜೈನ್ ಗೆ ಜನರು ಯಾಕೆ ಒಂಟಿಯಾಗಿದ್ದೀಯಾ ಎಂಬ ಪ್ರಶ್ನೆ ಕೇಳಿದ್ರೆ ಬೇಸರವಾಗುತ್ತದೆಯಂತೆ. ನನಗೆ ಮದುವೆಯಾಗಲು ಇಷ್ಟವಿತ್ತು. ಆದ್ರೆ ಸಿಗಲಿಲ್ಲ. ಅದನ್ನೇ ಮತ್ತೆ ಮತ್ತೆ ಕೇಳಿದ್ರೆ ಕೋಪ, ಬೇಸರ ಬರುತ್ತೆ ಎನ್ನುತ್ತಾರೆ ಅಜಯ್ ಜೈನ್. ಜನರು ತಮ್ಮ ಮನೆಯಲ್ಲಿ ಕೊಳಕಿಟ್ಟುಕೊಂಡು ಇನ್ನೊಬ್ಬರನ್ನು ಪ್ರಶ್ನೆ ಮಾಡ್ತಾರೆ. ಪುಕ್ಕಟೆಯಾಗಿ ಸಲಹೆ ನೀಡುವುದು, ಪ್ರಶ್ನೆ ಕೇಳುವ ಮೂಲಕ ಎಲ್ಲರ ಮನಸ್ಥಿತಿ ಹಾಳು ಮಾಡ್ತಾರೆ ಎಂದು ಜನರನ್ನು ದೂರುತ್ತಾರೆ ಜೈನ್. 
ಅಜಯ್ ಜೈನ್ ಮದುವೆಯಾಗದೆ ಹಾಗೇ ಇರುವ ಕಾರಣ ಅವರನ್ನು ಗೇ ಎಂದು ಬಹುತೇಕರು ಭಾವಿಸಿದ್ದಾರಂತೆ. ಅಪರಿಚಿತರು, ದೂರದವರು ಹೀಗೆ ಅಂದುಕೊಂಡಿದ್ರೆ ಸಮಸ್ಯೆಯಿರಲಿಲ್ಲ. ಕುಟುಂಬಸ್ಥರೇ ಇದನ್ನು ನಂಬಿರುವ ಕಾರಣ ನನಗೆ ಮದುವೆಯಾಗಿಲ್ಲ ಎನ್ನುತ್ತಾರೆ ಅಜಯ್. 

ಅಜಯ್ ವೃತ್ತಿಯಲ್ಲಿ ಡೇಟಾ ವಿಶ್ಲೇಷಕರಾಗಿದ್ದಾರೆ. ಮದುವೆ ವಯಸ್ಸಿನಲ್ಲಿ  ಒಂದೆರಡು ಹುಡುಗಿಯನ್ನು ನೋಡಿದ್ದೆ. ಒಂದು ಹುಡುಗಿ ಇಷ್ಟವಾಗಿದ್ದಳು. ಆಕೆ ಮನೆಯವರು ವರದಕ್ಷಿಣೆ ನೀಡಲು ಬಯಸಿದ್ದರು. ನನ್ನ  ತಂದೆ – ತಾಯಿಗೆ ಇದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಮದುವೆ ನಿಂತಿತು ಎನ್ನುತ್ತಾರೆ ಅಜಯ್.

One Life One wife: ಅಸ್ಸಾಂನಲ್ಲಿ ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ ಮಸೂದೆ

ಇನ್ನೊಂದು ಹುಡುಗಿ ಇಂಟರ್ನೆಟ್ ನಲ್ಲಿ ಸಂಪರ್ಕಕ್ಕೆ ಬಂದಿದ್ದಳು. ಆಕೆಗೆ ಗ್ರೀನ್ ಕಾರ್ಡ್ ಇರುವ ಹುಡುಗ ಬೇಕಾಗಿತ್ತು. ಹಾಗಾಗಿ ನಾನು ಹಿಂದೆ ಸರಿದೆ ಎನ್ನುತ್ತಾರೆ ಅಜಯ್. ಇದಾದ್ಮೇಲೆ ಬಂದ ಒಂದೆರಡು ಸಂಬಂಧವನ್ನು ನಾನು ನಿರಾಕರಿಸಿದ್ದೆ. ನಾನು ಗೇ, ಹಾಗಾಗಿ ಹುಡುಗಿಯರನ್ನು ನಿರಾಕರಿಸ್ತೇನೆ ಎಂದು ಮನೆಯವರು ಭಾವಿಸಿದ್ದಾರೆ. ಇದೇ ಕಾರಣಕ್ಕೆ ನನ್ನ ಮದುವೆ ಪ್ರಯತ್ನಕ್ಕೆ ಮುಂದಾಗಿಲ್ಲ ಎನ್ನುತ್ತಾರೆ ಅಜಯ್. ಜೀವನದಲ್ಲಿ ಸಂಗಾತಿ ಅಗತ್ಯವಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ನನಗೆ ಅಗತ್ಯವಿತ್ತು. ಆದ್ರೆ ಸಿಗಲಿಲ್ಲ. ನನಗೂ ಮದುವೆಯಾಗುತ್ತೆ ಎಂಬ ನಂಬಿಕೆಯಿಂದ ದೂರ ಸರಿಯುತ್ತಿದ್ದೇನೆ. ಕಾದು ಕಾದು ಸುಸ್ತಾಗಿದ್ದು, ಈಗ ಒಂಟಿ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದೇನೆ ಎನ್ನುವ ಅಜಯ್, ಮದುವೆಯಾಗದೆ ಸಂತೋಷದಿಂದ ಜೀವನ ನಡೆಸುತ್ತಿರುವ ಅನೇಕ ಸ್ನೇಹಿತರೇ ನನಗೆ ಸ್ಫೂರ್ತಿ ಎಂದಿದ್ದಾರೆ.  
 

Follow Us:
Download App:
  • android
  • ios