Asianet Suvarna News Asianet Suvarna News

Online Dating: ಟಿಂಡರ್ ಅಪ್ಲಿಕೇಷನ್‌ನಲ್ಲಿ ಬದಲಾಗಿದೆ ಯುವಕರ ಆದ್ಯತೆ

ಆನ್ಲೈನ್ ಡೇಟಿಂಗ್ ಗೆ ಯುವಕರು ಆಸಕ್ತಿ ತೋರುತ್ತಿದ್ದಾರೆ. ಅದ್ರ ಜೊತೆಯಲ್ಲೇ ಅವರ ಆಯ್ಕೆ ಕೂಡ ಬದಲಾಗಿದೆ. ಸಂಪ್ರದಾಯ ಪದ್ಧತಿ ಬಿಟ್ಟು ಜನರು ಹೊಸ ಹೊಸ ದಾರಿಯಲ್ಲಿ ಸಂಗಾತಿ ಹುಡುಕ್ತಿದ್ದಾರೆ.
 

People In Tinder This Year Referred Suitationship Over Normal Relationship
Author
First Published Dec 24, 2022, 4:24 PM IST

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡೆಂಟಿಂಗ್ ಅಪ್ಲಿಕೇಶನ್‌ಗಳು ಪ್ರಸಿದ್ಧಿಯಲ್ಲಿವೆ.  ಈ ಅಪ್ಲಿಕೇಷನ್ ಮೂಲಕ ಅನೇಕ ಜನರು ಪರಿಪೂರ್ಣ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಪ್ರಸಿದ್ಧಿ ಪಡೆದ ಡೇಟಿಂಗ್   ಪ್ಲಿಕೇಶನ್ ನಲ್ಲಿ ಟಿಂಡರ್ ಕೂಡ ಒಂದು. ಇದರಲ್ಲಿ ಅನೇಕ ಸಕ್ರಿಯ ಬಳಕೆದಾರರಿದ್ದಾರೆ. ಈ ಅಪ್ಲಿಕೇಶನ್ ಇತ್ತೀಚೆಗೆ, 2022 ರಲ್ಲಿ ಕಂಡುಬರುವ ಅಪ್ಲಿಕೇಶನ್ ಬಳಕೆದಾರರ ಡೇಟಿಂಗ್ ಮಾದರಿಯನ್ನು  ಸಮೀಕ್ಷೆ ನಡೆಸಿದೆ. ಇದರಲ್ಲಿ ಸಿಚ್ಯುವೇಷನ್ಶಿಪ್, ಆಲ್ಕೋಹಾಲ್ ಮುಕ್ತ ಡೇಟಿಂಗ್ ವಿಶೇಷ ಪ್ರವೃತ್ತಿಯಲ್ಲಿವೆ. 2022 ರ ಯಾವ ಜನಪ್ರಿಯ ಟ್ರೆಂಡ್‌ಗಳನ್ನು ಟಿಂಡರ್ಸ್ ಇಯರ್ ಇನ್ ಸ್ವೈಪ್ ಟಿಂಡರ್ ನಲ್ಲಿ ಹಂಚಿಕೊಳ್ಳಲಾಗಿದೆ ಎಂಬುದನ್ನು ನಾವು ಹೇಳ್ತೆವೆ. 

ಸಾಂಪ್ರದಾಯಿಕ (Traditional) ಸಂಬಂಧಕ್ಕಿಂತ ಸಾಂದರ್ಭಿಕ ಡೇಟಿಂಗ್ (Dating) ಗೆ ಆದ್ಯತೆ : 2022 ರಲ್ಲಿ ಯುವಕರಲ್ಲಿ ವಿಭಿನ್ನ ಮಾದರಿಯ ಡೇಟಿಂಗ್ ಕಂಡುಬಂದಿದೆ.  ಜನರು ಸಾಂಪ್ರದಾಯಿಕ ಸಂಬಂಧಕ್ಕೆ ಹೆಚ್ಚು ಮಹತ್ವ ನೀಡಿಲ್ಲ. ಆದ್ರೆ ಇವು ಹುಕ್ ಅಪ್ (Hook up) ಗಿಂತ ಹೆಚ್ಚಿರುತ್ತವೆ. ಅದನ್ನು  ಸಾಂದರ್ಭಿಕ ಸಂಬಂಧಗಳು ಎಂದು ಕರೆಯಲಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಸ್ನೇಹಕ್ಕಿಂತ ಮಿಗಿಲಾದ ಆದರೆ ಹೆಸರಿಲ್ಲದ ಸಂಬಂಧ ಇದು. ಇದರಲ್ಲಿ ಪಾಲುದಾರರು ಪರಸ್ಪರರ ಅಗತ್ಯಗಳನ್ನು ಪೂರೈಸುತ್ತಾರೆ. ಆದರೆ ಔಪಚಾರಿಕವಾಗಿ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ. ಶೇಕಡಾ 49ರಷ್ಟು ಮಂದಿ ಟಿಂಡರ್ (Tinder) ನಲ್ಲಿ ಇಂಥ ಸಂಬಂಧ ಒಪ್ಪಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 10 ಯುವ ಜನರಲ್ಲಿ ಒಬ್ಬರು ಒತ್ತಡದ ಸಂಬಂಧಕ್ಕಿಂತ ಸಿಚ್ಯುವೇಶನಲ್ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. 

ಪಾರದರ್ಶಕತೆಗೆ ಮಹತ್ವ : ಈ ವರ್ಷ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪಾರ್ಕಿಂಗ್ ಚಿಹ್ನೆ ಪುಶಿನ್ ಪಿ ಅನ್ನು ಹೆಚ್ಚು ಬಳಸಲಾಗಿದೆ. ಟಿಂಡರ್‌ನಲ್ಲಿ ಸೇರುವ ಜನರು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡಿದ್ದಾರೆ. ಸಕಾರಾತ್ಮಕತೆಯನ್ನು ಸ್ವೀಕರಿಸಿದ್ದಾರೆ. 

ZODIAC SIGN: ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಟವಾಡುವ ಜನರಿವರು!

ಡಿನ್ನರ್ ಡೇಟ್ ಗಿಂತ ಕಾಫಿ ಡೇಟ್ ಗೆ ಮಹತ್ವ : ಟಿಂಡರ್ ಇಂಡಿಯಾ ಬಯೋದಲ್ಲಿ ಪಿಕ್ನಿಕ್,  ಸ್ಟ್ಯಾಂಡ್ ಅಪ್  ಮತ್ತು  ಕಾಫಿ ಡೇಟ್ಸ್  ಯುವಕರ ಆಯ್ಕೆಗಳಾಗಿವೆ. ಈ ಪ್ರವೃತ್ತಿಯಲ್ಲಿ ಕ್ಯಾಂಪಿಂಗ್ ಸೇರಿದಂತೆ ಹೊಸ ವಿಷಯಗಳನ್ನು ಪ್ರಯತ್ನಿಸಲಾಗಿದೆ. ಅಂದರೆ ಜನರು ಡಿನ್ನರ್ ಡೇಟ್ ಗೆ ಹೆಚ್ಚು ಮಹತ್ವ ನೀಡಿಲ್ಲ. ಸಾಂಪ್ರದಾಯಿಕ ಡೇಟಿಂಗ್ ಅವರಿಗೆ ಇಷ್ಟವಾಗ್ತಿಲ್ಲ. ಶಾಂತವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ಆಲ್ಕೋಹಾಲ್ ಫ್ರೀ ಡೇಟ್ : ಟಿಂಡರ್‌ನ ಸಮೀಕ್ಷೆಯಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಯುವ ಸಿಂಗಲ್ಸ್ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಆಲ್ಕೋಹಾಲ್ ಕುಡಿಯಲು ಮಹತ್ವ ನೀಡಿದ್ದಾರೆ. ಶೇಕಡಾ 72ರಷ್ಟು ಜನರು ಟಿಂಡರ್ ಪ್ರೊಫೈಲ್ ನಲ್ಲಿ ಮದ್ಯಪಾನ ಮಾಡುವುದಿಲ್ಲ, ಅಪರೂಪಕ್ಕೊಮ್ಮೆ ಮಾಡ್ತೇವೆ ಎಂಬುದನ್ನು ಬರೆದಿದ್ದಾರೆ. 

ಸಂಗಾತಿಯಲ್ಲಿ ಈ ಗುಣಗಳಿದ್ದರೆ, ನೀವು ಲಕ್ಕಿ ಎನ್ನೋದರಲ್ಲಿ ಅನುಮಾನವೇ ಇಲ್ಲ

ಇಂಥ ಸಂಗಾತಿ ಹುಡುಕ್ತಿದ್ದಾರೆ ಯುವಕರು : ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರು ತಮಾಷೆ, ತಾಜಾ ಮತ್ತು ಫಾರ್ವರ್ಡ್ ಸಂಗಾತಿಯನ್ನು ಹುಡುಕುತ್ತಿದ್ದಾರೆ. ಅಲ್ಲದೆ ಶೇಕಡಾ 73ರಷ್ಟು ಯುವಕರು ತಮಗೆ ಬೇಕಾದುದನ್ನು ಸ್ಪಷ್ಟಪಡಿಸುವ ಮತ್ತು ನೈರ್ಮಲ್ಯವನ್ನು ಹೊಂದಿರುವ ಪಾಲುದಾರರನ್ನು ಹುಡುಕುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.  ಯಂಗ್ ಟಿಂಡರ್ ಬಳಕೆದಾರರು ನಿಷ್ಠೆಗೆ ಶೇಕಡಾ  79ರಷ್ಟು, ಗೌರವಕ್ಕೆ ಶೇಕಡಾ 78ರಷ್ಟು ಮತ್ತು ಮುಕ್ತ ಮನಸ್ಸಿಗೆ ಶೇಕಡಾ 61ರಷ್ಟು ಮತ್ತು ನೋಟಕ್ಕೆ ಶೇಕಡಾ 56ರಷ್ಟು ಆದ್ಯತೆ ನೀಡಿದ್ದಾರೆ. 

ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಜ್ಯೋತಿಷ್ಯದ ಪಾತ್ರ : ಟಿಂಡರ್ ಬಯೋದಲ್ಲಿ ಮತ್ತೊಂದು ವಿಶೇಷತೆಯನ್ನು ನಾವು ನೋಡಬಹುದು.  ಯುವಕರು ಸಾಕುಪ್ರಾಣಿಗಳು ಮತ್ತು ಆಹಾರ ಮತ್ತು ಪಾನೀಯಗಳನ್ನು ಹೊರತುಪಡಿಸಿ ತಮ್ಮ ರಾಶಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸಿಂಹ, ವೃಶ್ಚಿಕ ಮತ್ತು ಕರ್ಕ ರಾಶಿಯನ್ನು ಜನರು ತಮ್ಮ ಬಯೋದಲ್ಲಿ ಸೇರಿಸಿದ್ದಾರೆ.  

Follow Us:
Download App:
  • android
  • ios