Zodiac sign: ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಟವಾಡುವ ಜನರಿವರು!

ತಮ್ಮ ಕೆಲಸ ಮಾಡಿಸಿಕೊಳ್ಳಲು ಬಣ್ಣ ಬಣ್ಣದ ಮಾತುಗಳ ಮೂಲಕ ಮೋಡಿ ಮಾಡಿ, ಜನರ ಮನದ ಭಾವನೆಯ ಜೊತೆಗೆ ಆಟವಾಡುವ ಜನರು ಎಲ್ಲಾ ಕಡೆಗಳಲ್ಲಿಯೂ ಕಾಣಸಿಗುತ್ತಾರೆ. ಅಂತಹ ಜನರು ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿ ನೀಡಲಾಗಿರುವ ರಾಶಿ ಚಕ್ರದಲ್ಲಿ ಜನಿಸಿರುತ್ತಾರೆ..

These zodiacs can influence anybody by their lies

ಪ್ರಪಂಚದಲ್ಲಿ ಸಾಕಷ್ಟು ಜನರು ಸ್ವಾರ್ಥಿಗಳಾಗಿರುತ್ತಾರೆ. ತಮ್ಮ ಉದ್ದೇಶಗಳನ್ನು ಪೂರೈಸಿಕೊಳ್ಳುವುದಷ್ಟೇ ಅವರ ಯೋಚನೆ ಆಗಿರುತ್ತದೆ, ಇದೇ ಕಾರಣಕ್ಕೆ ಅವರು ನಿಮ್ಮೊಂದಿಗೆ ಆಟವಾಡಬಹುದು. ಇಂತಹ ವ್ಯಕ್ತಿಗಳು ತಮ್ಮ ಸ್ಮಾರ್ಟ್ ತಂತ್ರಗಳಿಂದ ನಿಮ್ಮನ್ನು ಸಲೀಸಾಗಿ ಅವರು ಬಯಸಿದ ಕೆಲಸಗಳನ್ನು ಮಾಡುವಂತೆ ಮಾಡಬಹುದು. ಚೇಷ್ಟೆ ಮತ್ತು ಕುತಂತ್ರದಿಂದ, ಅವರು ತಮ್ಮ ಹೆಜ್ಜೆಗಳನ್ನು ಎಷ್ಟು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳುತ್ತಾರೆ ಎಂದರೆ ಇತರ ವ್ಯಕ್ತಿಯು ಅವರ ಇಂತಹ ನಡೆಗಳನ್ನು ಗಮನಿಸುವುದಿಲ್ಲ. ಇತರರ ಭಾವನೆಗಳೊಂದಿಗೆ ಆಟವಾಡುವುದು ಅವರ ನೆಚ್ಚಿನ ವಿಷಯ ಮತ್ತು ಅವರು ಅದನ್ನು ಹೆಚ್ಚಾಗಿ ತಮ್ಮ ಸ್ವಾರ್ಥದ ಸಲುವಾಗಿ ಮಾಡುತ್ತಾರೆ. ಇಂತಹ ಕೆಟ್ಟ ಮಾನಸಿಕತೆ ಹೊಂದಿರುವ ಜನರು ಹೆಚ್ಚಾಗಿ ಇಲ್ಲಿ ಕೆಳಗೆ ನೀಡಿರುವ ರಾಶಿಗಳಲ್ಲಿ ಜನಿಸಿರುತ್ತಾರೆ.

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಜನರು ತಮ್ಮ ಸಹಾನುಭೂತಿ ಮತ್ತು ಇತರರ ಬಯಕೆಗಳನ್ನು ಪರಿಗಣಿಸುವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಮತ್ತು ಕೆಲವೊಮ್ಮೆ, ಅವರು ತಮ್ಮ ಗುರಿಗಳನ್ನು ಪೂರೈಸಲು ತಮ್ಮ ಸಹಾನುಭೂತಿಯ ಬದಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಅವರು ತಮ್ಮ ಪ್ರೀತಿಪಾತ್ರರ ಸಹಾನುಭೂತಿಯನ್ನು ಸಂಗ್ರಹಿಸಲು ತಮ್ಮ ದುಃಖಗಳನ್ನು ಉತ್ಪ್ರೇಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ತಮ್ಮ ಸಕ್ಕರೆ ಲೇಪಿತ ಪದಗಳಲ್ಲಿ ನಿಮ್ಮನ್ನು ಗೋಜಲು ಮಾಡುವ ಮೂಲಕ, ಕರ್ಕಾಟಕ ರಾಶಿಯ ಜನರು, ನೀವು ಅವರು ಬಯಸಿದ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಲು ನಿಮ್ಮನ್ನು ಸುಲಭವಾಗಿ ಮೋಸಗೊಳಿಸುತ್ತಾರೆ (Cheat).

ಇದನ್ನೂ ಓದಿ: ಈ Zodiac Sign ನವರು ಎಂಥದ್ದೇ ಪರಿಸ್ಥಿತಿಯನ್ನೂ ಸುಲಭವಾಗಿ ನಿಭಾಯಿಸುತ್ತಾರೆ!

ಮೇಷ ರಾಶಿ (Aries)
ವಿಶ್ವಾಸಘಾತುಕ ವ್ಯಕ್ತಿತ್ವ ಮತ್ತು ಇತರರನ್ನು ತಮ್ಮ ಸಿಹಿ ಮಾತುಕತೆಯಿಂದ ಮೋಡಿ ಮಾಡುವುದರಲ್ಲಿ ಹೆಸರುವಾಸಿಯಾದ (Famous) ಮೇಷ ರಾಶಿಯ ಜನರು, ಯಾರಿಗೆ ಬೇಕಾದರೂ ತಪ್ಪಾಗಿ ಮನವರಿಕೆ ಮಾಡುತ್ತಾರೆ. ಈ ರಾಶಿಯ ಜನರು ಸ್ವಾಭಾವಿಕತೆಯಿಂದ ಅಭಿವೃದ್ಧಿ ಹೊಂದುತ್ತಾರೆ ಮತ್ತು ಅದೇ ಕಾರಣದಿಂದ, ಅವರ ಮನಸ್ಸಿನ ಆಟವನ್ನು ಯಾರೂ ಅರಿಯಲು ಸಾಧ್ಯವಿಲ್ಲ. ಇದಲ್ಲದೆ, ಅವರ ಉತ್ತಮ ಬುದ್ಧಿಶಕ್ತಿಯು ಇತರರ ಮನಸ್ಸನ್ನು ಓದುವಲ್ಲಿ ಯಶಸ್ವಿಯಾಗುವ ಕಾರಣ ಅವರ ಪ್ರಭಾವದ ಶಕ್ತಿಗೆ ಇನ್ನೂ ಬಲ ಹೆಚ್ಚಿಸುತ್ತದೆ.

ವೃಶ್ಚಿಕ ರಾಶಿ (Scorpio)
ನಿಯಂತ್ರಣ (Control), ಗೀಳು ಮತ್ತು ರಹಸ್ಯವಾಗಿರುವುದು ವೃಶ್ಚಿಕ ರಾಶಿಯ ಜನರ ಗುಣಗಳು. ಒಮ್ಮೆ ಸ್ಕಾರ್ಪಿಯೋ ಏನನ್ನಾದರೂ ಮಾಡಲು ಮನಸ್ಸು ಮಾಡಿದರೆ, ಅವರು ಅದನ್ನು ಕಷ್ಟವಾದರೂ ಸಾಧಿಸುತ್ತಾರೆ. ಅವರು ಮೊದಲು ಇತರರ ವಿಶ್ವಾಸವನ್ನು ಗೆಲ್ಲಲು ಪ್ರಯತ್ನಿಸುತ್ತಾರೆ ಮತ್ತು ನಂತರ ಅದನ್ನು ಅವರ ವಿರುದ್ಧ ಅದೇ ರೀತಿ ಬಳಸುತ್ತಾರೆ. ಚೇಳುಗಳು ತಮ್ಮ ಕೆಲಸಗಳನ್ನು ಇತರರಿಂದ ಮಾಡಿಸಿಕೊಳ್ಳಲು ಭಾವನಾತ್ಮಕ ಬ್ಲ್ಯಾಕ್‌ಮೇಲಿಂಗ್ (Blackmail) ಮತ್ತು ಸಕ್ಕರೆ ಲೇಪಿಸಿದಂತೆ ಪದಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಆ ಬಳಿಕ ಅವರಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಸಂಬಂಧವನ್ನೇ ಹೊರೆ ಎಂದೇ ಭಾವಿಸುತ್ತಾರೆ ಈ ರಾಶಿ ಜನರು!

ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಎಲ್ಲಾ ಜನರ ಗಮನ ಸೆಳೆಯುವುದು ಮತ್ತು ತಮ್ಮನ್ನು ವೇದಿಕೆಯಲ್ಲಿ ಕೇಂದ್ರ ಬಿಂದು (Centre of attraction) ಆಗಿರಿಸುವುದು ಬಹಳ ಇಷ್ಟ. ಈ ಜನರು ಅಂತ್ಯವಿಲ್ಲದ ಉದ್ದೇಶಗಳು ಮತ್ತು ಗುರಿಗಳನ್ನು ಹೊಂದಿರುತ್ತಾರೆ, ಅದನ್ನು ಪೂರೈಸಿಕೊಳ್ಳಲು ಸುಳ್ಳು ಭರವಸೆಗಳು ಮತ್ತು ಸುಳ್ಳು ಹೇಳುವುದರ ದಾರಿ ಕಂಡುಕೊಳ್ಳುತ್ತಾರೆ. ಅವರು ಸಹಾಯವನ್ನು ಬಯಸುವುದಿಲ್ಲ ಮತ್ತು ಅದೇ ಕಾರಣದಿಂದ, ಅವರು ನಿಮ್ಮನ್ನು ತಮ್ಮ ಕೆಲಸವನ್ನು ಮಾಡಲು ಬುದ್ಧಿವಂತಿಕೆಯಿಂದ ಮೋಸಗೊಳಿಸಲು ಪ್ರಾರಂಭಿಸುತ್ತಾರೆ.

ಮೇಲೆ ತಿಳಿಸಿದ ರಾಶಿಚಕ್ರದ ಚಿಹ್ನೆಗಳ ಜನರ ಬುದ್ಧಿವಂತ ದ್ವಿಮುಖ ಮನಸ್ಸಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅವರೊಂದಿಗೆ ಮಾತನಾಡುವಾಗ ನಿಮ್ಮ ಮನಸ್ಸನ್ನು ಸಕ್ರಿಯವಾಗಿರಿಸಿಕೊಳ್ಳಿ. ಮತ್ತು ಮೊಸಹೋಗದಂತೆ ಜಾಗರೂಕರಾಗಿರಿ..

Latest Videos
Follow Us:
Download App:
  • android
  • ios