Parenting Tips: ಮಕ್ಕಳು ಈ ಕೆಲಸ ಮಾಡಿದ್ರೆ ಖುಷಿಯಲ್ಲಿ ತೇಲಾಡ್ತಾರೆ ಪಾಲಕರು
ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಹೊಣೆ ಅವರ ಮೇಲಿರುತ್ತದೆ. ಆದ್ರೆ ಈ ಹೊಣೆಯನ್ನು ಸಮಸ್ಯೆ ಎಂದುಕೊಳ್ಳದೆ ಮಕ್ಕಳ ಪ್ರತಿಯೊಂದು ಬೆಳವಣಿಗೆಯನ್ನು ಆನಂದಿಸಿದ್ರೆ ಎಲ್ಲವೂ ಸರಾಗವಾಗಿ ಸಾಗುತ್ತದೆ.
ಪಾಲಕರು (Parents) ಪ್ರಯಾಣ ಮುಗಿಯುವಂತಹದ್ದಲ್ಲ. ಮಕ್ಕಳು (Children ) ಚಿಕ್ಕವರಾಗಿರುವಾಗ ಒಂದು ಜವಾಬ್ದಾರಿಯಾದರೆ ಮಕ್ಕಳು ದೊಡ್ಡವರಾದ್ಮೇಲೆ ಇನ್ನೊಂದಿಷ್ಟು ಜವಾಬ್ದಾರಿಗಳಿರುತ್ತವೆ. ಮಕ್ಕಳನ್ನು ಹೆತ್ತವರಿಗೆ ಮಾತ್ರ ಅದ್ರ ಸಮಸ್ಯೆ ಗೊತ್ತಿರುತ್ತದೆ. ಅನೇಕ ಬಾರಿ ಬೇರೆಯವರು ಹೇಳಿದ ಯಾವುದೇ ಉಪದೇಶ ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮ ಮಕ್ಕಳನ್ನು ಸಲಹಲು ನಾವೇ ದಾರಿ ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಮಕ್ಕಳ ಪಾಲನೆಯನ್ನು ಅನೇಕರು ದೊಡ್ಡ ಹೊಣೆ ಎಂದು ಭಾವಿಸುತ್ತಾರೆ. ಅಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕೆಂದುಕೊಳ್ತಾರೆ. ಆದ್ರೆ ಪಾಲಕರ ಪ್ರಯಾಣದಲ್ಲಿ ಅನೇಕ ಅಚ್ಚರಿಯ,ಖುಷಿಯ ಸಂಗತಿಗಳೂ ಇರುತ್ವೆ ಎಂಬುದನ್ನು ಮರೆಯದಿರಿ. ಮಗು ಹುಟ್ಟಿದಾಗ ತಾಯಿಗೆ ಮರುಹುಟ್ಟು. ಮಗುವನ್ನು ಮೊದಲ ಬಾರಿ ಕೈನಲ್ಲಿ ಹಿಡಿದಾಗ ಪ್ರಪಂಚವೇ ಮರೆತು ಹೋಗುತ್ತದೆ. ಮಗು ಮೊದಲ ಬಾರಿ ಮಾತನಾಡಿದಾಗ, ಹೆಜ್ಜೆಯಿಟ್ಟಾಗ, ನಿಮಗೆ ತಿಳಿಯದೇ ಕೆಲಸ ಮಾಡಿದಾಗ ನಿಮಗಾಗುವ ಖುಷಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೆಲ ಪಾಲಕರು ಮಕ್ಕಳ ಆ ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ. ಬೇರೆಯವರ ಜೊತೆ ಖುಷಿ ಹಂಚಿಕೊಳ್ತಾರೆ. ಮತ್ತೆ ಕೆಲ ಪಾಲಕರು ಬೇರೆ ಬೇರೆ ಕಾರಣಗಳನ್ನು ಹೇಳಿ ಈ ಕ್ಷಣವನ್ನು ಆನಂದಿಸಲು ಮರೆಯುತ್ತಾರೆ. ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ತಾರೆ. ಪಾಲಕರು ಮಕ್ಕಳ ಬೆಳವಣಿಗೆಯನ್ನು ಆನಂದಿಸುವುದು ಬಹಳ ಮುಖ್ಯ. ಎಷ್ಟೇ ದುಃಖವಿದ್ದರೂ ಮಕ್ಕಳ ಮುಗ್ದ ನಗು ಎಲ್ಲವನ್ನೂ ಮರೆಸುತ್ತದೆ. ಹಾಗೆಯೇ ಏನೇ ಸಮಸ್ಯೆಗಳಿದ್ದರೂ ಮಕ್ಕಳ ಕೆಲವು ಕೆಲಸ, ಬೆಳವಣಿಗೆಯನ್ನು ಪಾಲಕರು ಹಬ್ಬದಂತೆ ಆಚರಿಸಬೇಕು. ಆಗ್ಲೇ ಪಾಲಕರ ಜೀವನ ಸಾರ್ಥಕವಾಗಲು ಸಾಧ್ಯ. ಇಂದು ನಾವು ಪಾಲಕರು ಯಾವ ಕ್ಷಣವನ್ನು ಸಂಭ್ರಮಿಸಬೇಕೆಂದು ಹೇಳ್ತೇವೆ.
ಮೊದಲ ಬಾರಿ ಅಡುಗೆ : ಮಕ್ಕಳಾಗುವ ಮೊದಲು ಮಹಿಳೆಯರು ಫ್ರೀಯಾಗಿರ್ತಾರೆ. ಅಡುಗೆ ಮಾಡಲು ಸಾಕಷ್ಟು ಸಮಯವಿರುತ್ತದೆ. ಆದ್ರೆ ಮಕ್ಕಳಾದ್ಮೇಲೆ ಅವರ ಪಾಲನೆ – ಪೋಷಣೆ ಮಧ್ಯೆ ಅಡುಗೆ ಕೆಲಸ ಮಾಡ್ಬೇಕಾಗುತ್ತದೆ. ಅನೇಕ ಬಾರಿ ಮಕ್ಕಳು ಅಡುಗೆ ಮಾಡಲು ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ಅವರನ್ನು ಎತ್ತಿಕೊಂಡು ಅಡುಗೆ ಮಾಡ್ತಾರೆ ಅಮ್ಮಂದಿರು. ಕೆಲ ಅಮ್ಮಂದಿರು ಇದನ್ನು ಕಷ್ಟವೆಂದು ಭಾವಿಸ್ತಾರೆ. ಮಕ್ಕಳಿಗೆ ಹೊಡೆದು –ಬೈದು ಮಾಡುವ ಜೊತೆಗೆ ಅವರ ಬಗ್ಗೆ ದೂರು ಹೇಳ್ತಾರೆ. ಆದ್ರೆ ಮಕ್ಕಳನ್ನು ಎತ್ತಿಕೊಂಡು ಕೆಲಸ ಮಾಡುವ ಮೂಲಕ ನಿಮ್ಮ ಕೌಶಲ್ಯ ಹೆಚ್ಚಾಗಿದೆ ಎಂಬುದನ್ನು ಅರಿಯಿರಿ. ಆ ಕ್ಷಣವನ್ನು ನೀವು ಸೆಲೆಬ್ರಿಟ್ ಮಾಡಿ.
ಇದನ್ನೂ ಓದಿ: ಗಂಡನಿಂದ ಬೇರೆಯಾಗಿ ಮಗನನ್ನೇ ಮದುವೆಯಾದ SOCIAL MEDIA ಇನ್‌ಫ್ಲುಯೆನ್ಸರ್
ಮಗುವಿನ ಮೊದಲ ಹೆಜ್ಜೆ : ಮಕ್ಕಳ ಬೆಳವಣಿಗೆಯನ್ನು ನೋಡುವುದೇ ಚಂದ. ತಿಂಗಳು, ಎರಡು ತಿಂಗಳು, ಮೂರು ತಿಂಗಳು ಹೀಗೆ ಮಕ್ಕಳು ಹುಟ್ಟಿದ ಪ್ರತಿ ತಿಂಗಳಲ್ಲಿ ಒಂದೊಂದು ಬದಲಾವಣೆಯಾಗ್ತಿರುತ್ತದೆ. ಪುಟಾಣಿ ಹೆಜ್ಜೆಯಿಟ್ಟು ಮಕ್ಕಳು ಅಮ್ಮ – ಅಪ್ಪನ ಬಳಿ ಬರುವುದನ್ನು ನೋಡುವುದೇ ಒಂದು ಖುಷಿ. ನಿಮ್ಮ ಮಗು ಮೊದಲ ಬಾರಿ ಹೆಜ್ಜೆಯಿಡಲು ಶುರು ಮಾಡಿದ್ದರೆ ಅದನ್ನು ಕಣ್ತುಂಬಿಕೊಳ್ಳಿ.
ತೊದಲು ನುಡಿ : ತೊದಲು ನುಡಿಯಾಡುವ ಮಕ್ಕಳು ಎಂಥವರನ್ನಾದ್ರೂ ಸೆಳೆಯುತ್ತಾರೆ. ಮಗು ಮೊದಲ ಬಾರಿ ಅಪ್ಪ – ಅಮ್ಮ ಎಂಬ ಪದ ಉಚ್ಚರಿಸಿದ್ರೆ ಎಲ್ಲ ಪಾಲಕರು ಖುಷಿಯಾಗ್ತಾರೆ. ಮಕ್ಕಳ ಬಾಯಲ್ಲಿ ಅಮ್ಮ ಎಂಬ ಪದ ಕೇಳ್ಬೇಕೆಂದು ಪಾಲಕರು ಹಾತೊರೆಯುತ್ತಿರುತ್ತಾರೆ. ಮಗು ಪಾಲಕರ ಹೆಸರು ಹೇಳಲು ಕಲಿತಾಗಲೂ ನೀವು ಸಂಭ್ರಮಿಸಬೇಕು. ಆ ಕ್ಷಣವನ್ನು ನೀವು ಎಂಜಾಯ್ ಮಾಡ್ಬೇಕು. ಆ ದಿನಗಳು ಮತ್ತೆ ಬರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಇದನ್ನೂ ಓದಿ: Dowry ಕೊಡೋದು ತಪ್ಪೇನಲ್ಲ, ಕುರೂಪಿ ಹುಡುಗಿಗೂ ಮದುವೆಯಾಗುತ್ತೆ..! ಪಠ್ಯದಲ್ಲಿ ವರದಕ್ಷಿಣೆಯ ಗುಣಗಾನ !
ನೀವೇ ರೋಲ್ ಮಾಡೆಲ್ : ಮಕ್ಕಳು ಪಾಲಕರನ್ನು ನೋಡಿ ಕಲಿಯುತ್ತಾರೆ. ಪಾಲಕರು ಮಾಡಿದ ಕೆಲಸವನ್ನೇ ಅವರು ಮಾಡ್ತಾರೆ. ನಿಮ್ಮನ್ನು ನಿಮ್ಮ ಮಕ್ಕಳು ರೋಲ್ ಮಾಡೆಲ್ ಎಂದುಕೊಳ್ಳುವುದು ದೊಡ್ಡ ವಿಷಯವಾಗಿದೆ. ಹಾಗಾಗಿ ನಿಮ್ಮ ಒಳ್ಳೆ ಕೆಲಸವನ್ನು ಮಕ್ಕಳು ಅನುಸರಿಸಿದ್ರೆ ಖುಷಿಪಡಿ.