Dowry ಕೊಡೋದು ತಪ್ಪೇನಲ್ಲ, ಕುರೂಪಿ ಹುಡುಗಿಗೂ ಮದುವೆಯಾಗುತ್ತೆ..! ಪಠ್ಯದಲ್ಲಿ ವರದಕ್ಷಿಣೆಯ ಗುಣಗಾನ !

ಹಲವು ಕಾನೂನುಗಳು ಜಾರಿಯಲ್ಲಿದ್ದರೂ ಸಹ ವರದಕ್ಷಿಣೆ (Dowry) ಪದ್ದತಿ ಮಾತ್ರ ಸಮಾಜದಲ್ಲಿ ಮುಂದುವರೆಯುತ್ತಿದೆ. ಹೀಗಾಗಿ ಇದರ ಬಗ್ಗೆ ಅರಿವು ಮೂಡಿಸಲು ಶಾಲೆ, ಕಾಲೇಜು (College) ಪಠ್ಯಕ್ರಮದಲ್ಲಿ ವರದಕ್ಷಿಣೆ ಪಿಡುಗಿನ ಬಗ್ಗೆ ವಿವರಿಸಲಾಗುತ್ತಿದೆ. ಆದರೆ ವಿಚಿತ್ರ ಏನಂದರೆ ವರದಕ್ಷಿಣೆ ವಿರುದ್ಧ ಕೆಲಸ ಮಾಡಬೇಕಾದ ವಿದ್ಯಾಸಂಸ್ಥೆಯ ಪಠ್ಯಕ್ರಮದಲ್ಲಿ ವರದಕ್ಷಿಣೆ ತೆಗೆದುಕೊಂಡರೆ ಆಗುವ ಲಾಭಗಳೇನು ಎಂದು ತಿಳಿಸಿಕೊಡಲಾಗಿದೆ.

Ugly Girls Can Be Married Off, Textbook Lists Dowry Merits In Shocker Vin

ಭಾರತೀಯ ಸಮಾಜದಲ್ಲಿ ಹಲವಾರು ವರ್ಷಗಳಿಂದಲೂ ವರದಕ್ಷಿಣೆ (Dowry) ಪಡೆದುಕೊಳ್ಳುವ ಪದ್ಧತಿ ಚಾಲ್ತಿಯಲ್ಲಿದೆ. ಇದನ್ನು ಹೋಗಲಾಡಿಸಲು ಅದೆಷ್ಟೋ ಸಮಾಜ ಸುಧಾರಕರು ಹೋರಾಡಿದರೂ ಫಲಪ್ರದವಾಗಿಲ್ಲ. ಇವತ್ತಿಗೂ ವರದಕ್ಷಿಣೆಯ ಹೆಸರಲ್ಲಿ ಅದೆಷ್ಟೋ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ (Women) ಹಿಂಸೆ, ಅನ್ಯಾಯ, ಕೊಲೆ, ದೌರ್ಜನ್ಯ ಎಲ್ಲವೂ ನಡೆಯುತ್ತದೆ. ವರದಕ್ಷಿಣೆಯನ್ನು ಸಮಾಜಕ್ಕೆ ಮಾರಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಂದೆಡೆ ಮಕ್ಕಳಿಗೆ ಬೋಧಿಸುವ ಪಠ್ಯದಲ್ಲಿ ವರದಕ್ಷಿಣೆ ಒಳ್ಳೆಯದೆಂದು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ವರದಕ್ಷಿಣೆಯ ಒಳಿತುಗಳು (Merits) ಎಂಬ ಶೀರ್ಷಿಕೆಯಡಿ ಮಕ್ಕಳಿಗೆ ಇದನ್ನು ಹೇಳಿಕೊಡಲಾಗುತ್ತಿದೆ. 

ವರದಕ್ಷಿಣೆ ಎಂದರೆ ಹೆಣ್ಣನ್ನು ಮದುವೆ ಮಾಡಿಕೊಡುವ ಸಂದರ್ಭ ಗಂಡಿನ ಕಡೆಯವರು ಡಿಮ್ಯಾಂಡ್ (Demand) ಮಾಡಿದ ನಗದು ಅಥವಾ ವಸ್ತುವನ್ನು ಹೆಣ್ಣಿನ ಪೋಷಕರು ಕೊಡುವುದಾಗಿದೆ. ಇದು ಒಡವೆ, ಮನೆ, ಆಸ್ತಿ, ಕಾರು ಹೀಗೆ ಹಲವು ಐಷಾರಾಮಿ ವಸ್ತುಗಳನ್ನು ಒಳಗೊಂಡಿರುತ್ತದೆ. ಧನದಾಹಿಗಳು ಹೆಣ್ಣನ್ನು ಮದುವೆಯಾಗಲು ವರದಕ್ಷಿಣೆಗೆ ಬೇಡಿಕೆಯಿಡುತ್ತಾರೆ. ಹೆಣ್ಣನ್ನು ಹಿಂಸಿಸಿ ದೌರ್ಜನ್ಯವೆಸಗುತ್ತಾರೆ. ಹೀಗಾಗಿಯೇ ವರದಕ್ಷಿಣೆಯನ್ನು ಸಾಮಾಜಿಕ ಪಿಡುಗೆಂದು ಪರಿಗಣಿಸಲಾಗಿದೆ. ಆದರೆ ಮಕ್ಕಳಿಗೆ ಬೋಧಿಸುತ್ತಿರುವ ಈ ಪುಸ್ತಕದಲ್ಲಿ ವರದಕ್ಷಿಣೆಯ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ.ಅಷ್ಟೇ ಅಲ್ಲ, ವರದಕ್ಷಿಣೆ ಪದ್ಧತಿಯ ಮೂಲಕ ಕುರೂಪಿ ಹುಡುಗಿಯ ಮದುವೆಯನ್ನು ಸಹ ಮಾಡಬಹುದು ಎಂದು ಟೀಕಿಸಲಾಗಿದೆ. 

ಮಹಿಳೆಯರ ಶೋಷಣೆಗೆ (Harassment) ಕಾರಣವಾಗಿರುವ ವರದಕ್ಷಿಣೆ ಪದ್ದತಿಯನ್ನು (Dowry System) ಹಲವು ಕಾನೂನುಗಳು ಜಾರಿಯಲ್ಲಿದ್ದರೂ ಸಹ ಈ ವ್ಯವಸ್ಥೆ ಮಾತ್ರ ಮುಂದುವರೆಯುತ್ತಿದೆ. ಹೀಗಾಗಿ ಇದರ ಬಗ್ಗೆ ಅರಿವು ಮೂಡಿಸಲು ಶಾಲೆ, ಕಾಲೇಜು (College) ಪಠ್ಯಕ್ರಮದಲ್ಲಿ ವರದಕ್ಷಿಣೆ ಪಿಡುಗಿನ ಬಗ್ಗೆ ವಿವರಿಸಲಾಗಿದೆ. ಆದರೆ ವಿಚಿತ್ರ ಏನಂದರೆ ವರದಕ್ಷಿಣೆ ವಿರುದ್ಧ ಕೆಲಸ ಮಾಡಬೇಕಾದ ವಿದ್ಯಾಸಂಸ್ಥೆಯ ಪಠ್ಯಕ್ರಮದಲ್ಲಿ ವರದಕ್ಷಿಣೆ ತೆಗೆದುಕೊಂಡರೆ ಆಗುವ ಲಾಭಗಳೇನು ಎಂದು ತಿಳಿಸಿಕೊಡಲಾಗಿದೆ . ಸದ್ಯ ಮುದ್ರಿತವಾಗಿರುವ ಈ 'ವರದಕ್ಷಿಣೆಯ ಅರ್ಹತೆಗಳು' ಎಂಬ ಪಠ್ಯಪುಸ್ತಕದ ಚಿತ್ರ ವೈರಲ್ (Viral) ಆಗ್ತಿದ್ದು ಭಾರಿ ವಿರೋಧ ವ್ಯಕ್ತವಾಗಿದೆ.

ವರದಕ್ಷಿಣೆ ಪಡೆಯಲ್ಲ: ಕೇರಳ ಸರ್ಕಾರಿ ನೌಕರರಿಗೆ ಘೋಷಣೆ ಕಡ್ಡಾಯ!

ನರ್ಸಿಂಗ್ ವಿದ್ಯಾರ್ಥಿಗಳ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ ಎನ್ನಲಾಗುತ್ತಿದೆ. ಈ ಪುಸ್ತಕವನ್ನು ಲೇಖಕಿ ಟಿ.ಕೆ. ಇಂದ್ರಾಣಿ ಬರೆದಿದ್ದಾರೆ. ಇಂದ್ರಾಣಿ ಬರೆದಿರುವ ಪುಸ್ತಕದಲ್ಲಿ ವರದಕ್ಷಿಣೆ ಅರ್ಹತೆಗಳು ಎಂಬ ಮಾಹಿತಿ ಇರುವ ಪುಟದ ಸ್ಕ್ರೀನ್‌ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು,ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. 'ವರದಕ್ಷಿಣೆಯ ಅರ್ಹತೆ' ಅನ್ನು ಒಳಗೊಂಡಿರುವ ಕಾಲೇಜು ಪುಸ್ತಕದ ಪುಟದ ಈ ಚಿತ್ರವನ್ನು ಅಪರ್ಣಾ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿದ್ಯಾರ್ಥಿಗಳ ಅಧ್ಯಯನ ವಿಷಯ
ಪಠ್ಯಪುಸ್ತಕವನ್ನು ಟಿ.ಕೆ. ಇಂದ್ರಾಣಿ ಅವರು ಬರೆದಿದ್ದಾರೆ ಮತ್ತು ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ವಿದ್ಯಾರ್ಥಿಗಳ ಅಧ್ಯಯನ ವಿಷಯವಾಗಿದೆ. ಅದರ ಒಂದು ಪುಟವು "ವರದಕ್ಷಿಣೆಯ ಅರ್ಹತೆಗಳು ಮತ್ತು ಪ್ರಯೋಜನಗಳನ್ನು" ಪಟ್ಟಿ ಮಾಡುತ್ತದೆ. ಮೊದಲನೆಯ ಅಂಶವು ಹೊಸ ಸಂಸಾರ ಸ್ಥಾಪನೆಗೆ ವರದಕ್ಷಿಣೆ ಸಹಕಾರಿ ಎಂದು ಪುಸ್ತಕ ಹೇಳುತ್ತದೆ, ಮಂಚಗಳು, ಹಾಸಿಗೆಗಳು, ದೂರದರ್ಶನ, ಫ್ಯಾನ್, ರೆಫ್ರಿಜರೇಟರ್, ಪಾತ್ರೆಗಳು, ಬಟ್ಟೆಗಳು ಮತ್ತು ವಾಹನದಂತಹ ಗೃಹೋಪಯೋಗಿ ವಸ್ತುಗಳನ್ನು ನೀಡುವ ಪದ್ಧತಿ ನಮ್ಮ ಭಾರತದ ಅನೇಕ ಭಾಗಗಳಲ್ಲಿ ವರದಕ್ಷಿಣೆಯಾಗಿ ಕಂಡುಬರುತ್ತದೆ ಎಂದು ಹೇಳುತ್ತದೆ.

21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!

ಪುಸ್ತಕದಲ್ಲಿ ಹೇಳಿರೋದೇನು?
ಪುಸ್ತಕವು ವರದಕ್ಷಿಣೆ ವ್ಯವಸ್ಥೆಯ ಅನುಕೂಲಗಳೆಂದು ಕರೆಯಲ್ಪಡುವ ಹೆಣ್ಣುಮಕ್ಕಳ ಶಿಕ್ಷಣವನ್ನು ಉಲ್ಲೇಖಿಸಿದೆ. ವರದಕ್ಷಿಣೆಯ ಹೊರೆಯಿಂದಾಗಿ, ಅನೇಕ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದಾರೆ. ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ ಅಥವಾ ಉದ್ಯೋಗದಲ್ಲಿರುವಾಗ ವರದಕ್ಷಿಣೆಯ ಬೇಡಿಕೆ ಕಡಿಮೆ ಇರುತ್ತದೆ. ಇದು ಪರೋಕ್ಷ ಪ್ರಯೋಜನವಾಗಿದೆ, ಎಂದು ಪುಸ್ತಕದಲ್ಲಿ ಹೇಳಲಾಗಿದೆ. ನೋಡಲು ಚೆನ್ನಾಗಿರದ ಹುಡುಗಿಯರನ್ನು ಆಕರ್ಷಕ ವರದಕ್ಷಿಣೆಯೊಂದಿಗೆ ಮದುವೆಯಾಗಬಹುದು ಎಂದು ಅಲ್ಲಿ ಉಲ್ಲೇಖಿಸಲಾಗಿದೆ.

ಪಠ್ಯದಿಂದ ತೆಗೆದುಹಾಕುವಂತೆ ಒತ್ತಾಯ
ಈ ಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಪುಸ್ತಕ ಮತ್ತು ಲೇಖಕರ ವಿರುದ್ಧ ಹರಿಹಾಯ್ದಿದ್ದಾರೆ. ಇದು ಕಾಲೇಜು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿತ್ತು ಅನ್ನೋದು ನಿಜವಾಗಿಯೂ ಆಘಾತಕಾರಿ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಅತಿರೇಕದ ಸಂಗತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದು, ವರದಕ್ಷಿಣೆಯ ಅರ್ಹತೆಯನ್ನು ಪ್ರಚಾರ ಮಾಡುವ ಈ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios