Asianet Suvarna News Asianet Suvarna News

Parenting Tips: ಮಗಳು ಮುದ್ದಾಗಿದ್ರೆ ಸಾಲದು ಆಕೆಗೊಂದಿಷ್ಟು ತಿಳಿದಿರಬೇಕು..

ಹೆಣ್ಣ ಮಕ್ಕಳೆಂದ್ರೆ ಕೆಲ ಪಾಲಕರಿಗೆ ಅತಿ ಪ್ರೀತಿ. ಅವರು ಹೇಳಿದ್ದೆಲ್ಲ ನೀಡುವ ತಂದೆ – ತಾಯಿ ಅನೇಕ ಸಂದರ್ಭದಲ್ಲಿ ಎಡವುತ್ತಾರೆ. ಬಾಲ್ಯದಿಂದ್ಲೇ ಸಣ್ಣಪುಟ್ಟ ವಿಷ್ಯಗಳನ್ನು ಮಗಳಿಗೆ ತಿಳಿಸ್ತಾ ಬಂದ್ರೆ ಆಕೆ ಭವಿಷ್ಯ ಉಜ್ವಲವಾಗಿರುತ್ತೆ.  
 

Parenting Tips Parents Should Teach These Things To Girls roo
Author
First Published Jun 5, 2023, 3:51 PM IST

ಹೆಣ್ಣಿನ ಸ್ಥಾನಮಾನ, ಹೆಣ್ಣಿನ ವಿದ್ಯಾಭ್ಯಾಸ, ಹೆಣ್ಣಿನ ಪೋಷಣೆ ಯಾವುದೂ ಈಗ ಮೊದಲಿನಂತಿಲ್ಲ. ಮೊದಲಾದರೆ ಒಂದು ಗಂಡು ಮಗುವನ್ನು ಬೆಳೆಸುವುದಕ್ಕೂ ಹೆಣ್ಣು ಮಗುವನ್ನು ಬೆಳೆಸುವುದಕ್ಕೂ ವ್ಯತ್ಯಾಸವಿರುತ್ತಿತ್ತು. ಆದರೆ ಈಗ ಒಂದು ಹೆಣ್ಣನ್ನು ಗಂಡಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಸುವಲ್ಲಿ ಎಲ್ಲ ತಂದೆ ತಾಯಿಗಳು ಕೂಡ ಸಮರ್ಥರಾಗಿದ್ದಾರೆ. ಅದಕ್ಕಾಗಿಯೇ ಇಂದು ಹೆಣ್ಣು ಎಲ್ಲ ರಂಗದಲ್ಲಿಯೂ ತನ್ನ ಛಾಪು ಮೂಡಿಸಿದ್ದಾಳೆ. 

ಒಂದು ಕಡೆ ಜಗತ್ತು ಎಷ್ಟೇ ಮುಂದುವರೆದಿದ್ದರೂ, ಹೆಣ್ಣು (Female) ಮಕ್ಕಳಿಗೆ ಎಷ್ಟೇ ಸ್ವಾತಂತ್ರ್ಯ (Freedom) ವಿದ್ದರೂ ಕೂಡ ಹೆಣ್ಣಿನ ತಂದೆ ತಾಯಿಗಳಿಗೆ ಒಂದು ಹೆಣ್ಣನ್ನು ಸಾಕಿ ಬೆಳೆಸಿ ಆಕೆಯನ್ನು ಸುಸಂಸ್ಕೃತಳನ್ನಾಗಿ ಮಾಡುವುದು ಒಂದು ಸವಾಲೇ ಸರಿ. ಒತ್ತಡದ ಜೀವನ (Life) ದಲ್ಲಿ ಕೆಲವೊಮ್ಮೆ ತಂದೆ ತಾಯಿಗಳು ಕೂಡ ಮಗಳನ್ನು ಬೆಳೆಸುವಲ್ಲಿ ಕೆಲವು ಅಂಶಗಳನ್ನು ಮರೆತುಬಿಡುತ್ತಾರೆ ಅಥವಾ ಅದರ ಕಡೆಗೆ ನಿರ್ಲಕ್ಷ ತೋರುತ್ತಾರೆ. ಪಾಲಕರ ಇಂತಹ ಸ್ವಭಾವದಿಂದ ಹೆಣ್ಣು ಮಕ್ಕಳು ದಾರಿ ತಪ್ಪಬಹುದು. ಆದ್ದರಿಂದ ಹೆಣ್ಣುಮಕ್ಕಳಿಗೆ ಅಗತ್ಯವಾದ ಶಿಕ್ಷಣವನ್ನು, ತಿಳುವಳಿಕೆಯಲ್ಲಿ ಅವರಲ್ಲಿ ಮೂಡಿಸುವ ಅನಿವಾರ್ಯತೆ ಇದೆ. ಪಾಲಕರಾದವರು ಹೆಣ್ಣು ಮಕ್ಕಳಿಗೆ ತಿಳಿಸಲೇಬೇಕಾದ ಸಂಗತಿ ಇಲ್ಲಿದೆ. 

Cleaning Tips : ಮಕ್ಕಳ ಖಾಸಗಿ ಅಂಗದ ಸ್ವಚ್ಛತೆ ಹೀಗ್ ಮಾಡಿ

ಖಾಸಗಿತನದ ಬಗ್ಗೆ ತಿಳಿಸಿಕೊಡಿ : ಹೆಚ್ಚಿನ ಪಾಲಕರು ತಮ್ಮ ಮಗಳಿಗೆ ಖಾಸಗಿತನದ ಬಗ್ಗೆ ಅರಿವು ನೀಡುವುದಿಲ್ಲ. ಹೆಣ್ಣು ಮಕ್ಕಳು ಸ್ವತಃ ತಾವೇ ಕೆಲವು ವಿಚಾರಗಳನ್ನು ತಿಳಿದಿಕೊಳ್ಳುತ್ತಾರೆ. ಬಟ್ಟೆ ಬದಲಾಯಿಸುವುದು, ಸ್ಯಾನಿಟರಿ ಪ್ಯಾಡ್ ಗಳನ್ನು ಹೇಗೆ, ಎಲ್ಲಿ ಇಟ್ಟುಕೊಳ್ಳಬೇಕು ಎಂಬಂತಹ ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಒಬ್ಬರೇ ನಿಭಾಯಿಸುವಂತಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಹೆಣ್ಣು ಮಕ್ಕಳಿಗೆ ಪಾಲಕರು ಸಹಾಯ ಮಾಡಬೇಕು. ಹೆಣ್ಣು ಮಗಳ ರಕ್ಷಣೆ ಹಾಗೂ ಪ್ರೈವಸಿ ಕುರಿತಾಗಿ ಇಡೀ ಕುಟುಂಬವೇ ಅವಳ ಜೊತೆಗಿರಬೇಕು.

ಹೆಣ್ಣು ಮಕ್ಕಳ ಮಾತನ್ನು ಕೇಳಿ : ಮಗಳ ಮೇಲೆ ನಮಗೆ ಎಲ್ಲಾ ಹಕ್ಕು ಇದೆ. ಮಗಳಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ನಾವೇ ತೆಗೆದುಕೊಳ್ಳುತ್ತೇವೆ. ನಾವು ಹೇಳಿದ ಮಾತನ್ನೇ ಅವಳು ಪಾಲಿಸಬೇಕೆಂಬ ಕಟ್ಟುನಿಟ್ಟಿನ ನಿಯಮಗಳನ್ನು ಅವಳ ಮೇಲೆ ಹೇರಬೇಡಿ. ಅವಳು ಧರಿಸುವ ಬಟ್ಟೆ, ಕಲಿಯುವ ವಿದ್ಯೆ ಹಾಗೂ ಅವಳ ಮದುವೆಯ ಕುರಿತು ಆಕೆಯ ನಿರ್ಧಾರವನ್ನು ತಂದೆ ತಾಯಿಗಳು ಕೇಳಬೇಕು. ನಮ್ಮ ಸಮಾಜದಲ್ಲಿ ಹುಡುಗಿಯರಿಗೆಂದೇ ಕೆಲವು ನಿಯಮಗಳನ್ನು ಹೇರಲಾಗಿದೆ. ಅಂತಹ ನಿಯಮಗಳನ್ನು ಬದಿಗೊತ್ತಿ ನಿಮ್ಮ ಮಗಳ ಹಿತ ಹಾಗೂ ಅವಳ ಆಸೆ, ಕನಸನ್ನು ಹೆತ್ತವರು ಕೇಳಬೇಕು.

ವಿಪರೀತ ಮೊಬೈಲ್‌ ಬಳಸೋ ಮಕ್ಕಳನ್ನು ಕಾಡುತ್ತೆ ಮಾನಸಿಕ ಸಮಸ್ಯೆ, ಪೋಷಕರು ಏನ್ಮಾಡ್ಬೇಕು?

ಸ್ವಯಂ ರಕ್ಷಣೆಯ (Self Defence) ಪಾಠವನ್ನು ಕಲಿಸಿ : ಹೆಣ್ಣು ಅಬಲೆಯಲ್ಲ ಸಬಲೆ ಎಂದು ಎಷ್ಟೇ ಬಾರಿ ಹೇಳಿದರೂ ಎಲ್ಲೋ ಒಂದು ಮೂಲೆಯಲ್ಲಿ ಅಂಜಿಕೆ ಎಂಬುದು ಇದ್ದೇ ಇರುತ್ತದೆ. ಹಾಗಾಗಿ ನಿಮ್ಮ ಮಗಳಿಗೆ ಅವಳ ರಕ್ಷಣೆಯ ಜವಾಬ್ದಾರಿಯನ್ನು ಅವಳೇ ನಿಭಾಯಿಸುವುದನ್ನು ಕಲಿಸಿಕೊಡಿ. ರಕ್ಷಣೆಯ ಜೊತೆ ತನ್ನ ಎಲ್ಲ ಕೆಲಸಗಳನ್ನು ಕೂಡ ತಾನೇ ಮಾಡಿಕೊಳ್ಳುವಂತೆ ಆಕೆಯನ್ನು ಪ್ರೇರೇಪಿಸಿ. ಇದರಿಂದ ಅವಳಿಗೆ ಹೆಚ್ಚಿನ ಅನುಭವವಾಗುತ್ತದೆ. ಇಲ್ಲದಿದ್ದರೆ ಅವಳು ತನ್ನ ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸುತ್ತಾಳೆ. ಇದರಿಂದ ಅವಳು ದಿನದಿಂದ ದಿನಕ್ಕೆ ದುರ್ಬಲಳಾಗುತ್ತಾಳೆ.

ಅಸಾಧ್ಯ ಎನ್ನುವುದು ಯಾವುದೂ ಇಲ್ಲ : ಕಠಿಣ ಪರಿಶ್ರಮ ಹಾಗೂ ಗುರಿ ನಿಶ್ಚಿತವಾಗಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಪಾಠವನ್ನು ಹೆಣ್ಣು ಮಗಳಿಗೆ ಹೇಳಿಕೊಡಿ. ತಂದೆ ತಾಯಿಗಳು ನಮ್ಮ ಹೆಣ್ಣು ಮಕ್ಕಳ ಮೇಲೆ ಕೆಲವು ಮಿತಿಯನ್ನು ಬಲವಂತವಾಗಿ ಹೇರುತ್ತಾರೆ. ಆ ಇತಿಮಿತಿಯಲ್ಲೇ ಅವರನ್ನು ಕಟ್ಟಿಹಾಕುತ್ತಾರೆ. ಕೆಲವು ಕೆಲಸಗಳು ಗಂಡುಮಕ್ಕಳು ಮಾತ್ರ ಮಾಡಬೇಕು ಅವರಿಂದ ಮಾತ್ರ ಅದು ಸಾಧ್ಯ, ಇಂತಹ ಕ್ಷೇತ್ರಗಳಿಗೆ ಹೆಣ್ಣು ಮಕ್ಕಳು ಹೋಗಬಾರದು ಎಂಬಂತಹ ಹಲವಾರು ನಿಯಮಗಳು ಸಮಾಜದಲ್ಲಿ ಇರುತ್ತವೆ. ಹೆಣ್ಣುಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ನಲ್ಲಿ ಭಾಗವಹಿಸುವ ಮಟ್ಟದಲ್ಲಿ ಬೆಳೆಯುತ್ತಿರುವಾಗ ನೀವು ಕೂಡ ನಿಮ್ಮ ಮಗಳಿಗೆ ಒಬ್ಬ ಗಂಡಿಗೆ ಸರಿಸಮಾನವಾಗಿ ದುಡಿಯುವ ಶಿಕ್ಷಣವನ್ನು ಹೇಳಿಕೊಡಿ.
 

Follow Us:
Download App:
  • android
  • ios