Cleaning Tips : ಮಕ್ಕಳ ಖಾಸಗಿ ಅಂಗದ ಸ್ವಚ್ಛತೆ ಹೀಗ್ ಮಾಡಿ
ಮಕ್ಕಳ ಆರೋಗ್ಯಕ್ಕೆ ಸ್ವಚ್ಛತೆ ಮುಖ್ಯವಾಗುತ್ತದೆ. ಕ್ಲೀನ್ ಇರುವ ಮಕ್ಕಳಲ್ಲಿ ಗುಪ್ತ ಸಮಸ್ಯೆ ಕಾಡೋದಿಲ್ಲ. ಖಾಸಗಿ ಅಂಗದಲ್ಲಿ ತುರಿಕೆ, ಉರಿ ಕಾಣಿಸಿಕೊಳ್ತಿದೆ ಅಂದ್ರೆ ಅಲ್ಲಿನ ಸ್ವಚ್ಛತೆ ಸರಿಯಾಗಿ ಆಗಿಲ್ಲ ಎಂದೇ ಅರ್ಥ.
ಮಕ್ಕಳ ಆಹಾರ, ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವ ಪಾಲಕರು ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಬಾರದು. ಹಲ್ಲಿನ ಸ್ವಚ್ಛತೆ, ಸ್ನಾನ ಹಾಗೂ ಜನನಾಂಗದ ಸ್ವಚ್ಛತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡ್ಬೇಕು. ಮಕ್ಕಳು ಇದ್ರ ಕ್ಲೀನಿಂಗ್ ಬಗ್ಗೆ ಜ್ಞಾನ ಹೊಂದಿದ್ದರೆ ಮುಂದೆ ಬರುವ ಸಮಸ್ಯೆಯನ್ನು ತಡೆಗಟ್ಟಬಹುದು. ನಾವಿಂದು ಮಕ್ಕಳ ಜನನಾಂಗದ ಸ್ವಚ್ಛತೆ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಚಿಕ್ಕ ಮಕ್ಕಳಿ (Children) ಗೆ ವಾರಕ್ಕೆ ಮೂರು ಬಾರಿ ಮಾತ್ರ ಸ್ನಾನ (Bathing ) ಮಾಡಿಸಬೇಕಂತೆ. ಈ ವೇಳೆ ಸೋಪ್ (Soap) ಅಥವಾ ಬಾಡಿ ವಾಶ್ ಬಳಕೆ ಮಾಡ್ಬೇಕು. ವಾರದ ಎಲ್ಲ ದಿನ ಸ್ನಾನ ಮಾಡಿಸ್ತೇವೆ ಎನ್ನುವ ಪಾಲಕರು ಸೋಪ್ ಹಾಗೂ ಬಾಡಿ ವಾಶ್ ಬಳಕೆ ಮಾಡ್ಬಾರದು ಎನ್ನುತ್ತಾರೆ ತಜ್ಞರು.
Relationship Tips: ತಂದೆ ಹೃದಯ ಘಾಸಿಗೊಳಿಸುತ್ತೆ ಮಕ್ಕಳ ಈ ಮಾತು
ಹೆಣ್ಣು ಮಕ್ಕಳ ಸ್ವಚ್ಛತೆ :
ಯೋನಿ ಶುಚಿ : ಹೆಣ್ಣು ಮಕ್ಕಳ ಯೋನಿಯ ಸ್ವಚ್ಛತೆಗೆ ಸೋಪ್ ಬಳಕೆ ಮಾಡಬಾರದು. ಇದರಿಂದ ತುರಿಕೆ ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ನಂತರ ಪ್ರತಿ ಬಾರಿಯೂ ಯೋನಿ ಸ್ವಚ್ಛಗೊಳಿಸಿ ಇಲ್ಲವೆ ಮಕ್ಕಳಿಗೆ ಸ್ವಚ್ಛಗೊಳಿಸಿಕೊಳ್ಳುವಂತೆ ಸಲಹೆ ನೀಡಿ. ಸ್ತ್ರೀ ಜನನಾಂಗಗಳಲ್ಲಿ ಹೆಚ್ಚಿನ ಪ್ರಮಾಣದ ಸೂಕ್ಷ್ಮಾಣು ಜೀವಿಗಳು ಕಂಡುಬರುತ್ತವೆ. ಇವುಗಳನ್ನು ಮೈಕ್ರೋಫ್ಲೋರಾ ಎಂದು ಕರೆಯಲಾಗುತ್ತದೆ. ಹಾಗಾಗಿ ಯೋನಿ ಸ್ವಚ್ಛತೆ ಮುಖ್ಯವಾಗುತ್ತದೆ.
ಗುದ್ದದ್ವಾರದ ಸ್ವಚ್ಛತೆ : ಯೋನಿ ಜೊತೆ ಗುದದ್ವಾರದ ಕ್ಲೀನಿಂಗ್ ಕೂಡ ಮಹತ್ವದ್ದಾಗಿದೆ. ಮೊದಲು ಯೋನಿ ಕ್ಲೀನ್ ಮಾಡಿ ನಂತ್ರ ಗುದದ್ವಾರಕ್ಕೆ ಹೋಗಬೇಕು. ಹೀಗೆ ಮಾಡಿದ್ರೆ ಅನೇಕ ಸೋಂಕಿನಿಂದ ಮಕ್ಕಳನ್ನು ದೂರವಿಡಬಹುದು.
Kids Health : ಋತು ಬದಲಾದಂತೆ ಕಾಡುವ ರೋಗದಿಂದ ಮಕ್ಕಳ ರಕ್ಷಣೆ ಹೇಗೆ?
ಮುಟ್ಟಿನ ನೈರ್ಮಲ್ಯ : ಪಿರಿಯಡ್ಸ್ ಬರುವಷ್ಟು ವಯಸ್ಸಾಗಿರುವ ಹೆಣ್ಣು ಮಕ್ಕಳ ಜೊತೆ ಅದ್ರ ಬಗ್ಗೆ ಮುಕ್ತವಾಗಿ ಮಾತನಾಡಿ. ಪ್ಯಾಡ್ ಬಳಕೆ, ಸ್ವಚ್ಛತೆ ಎಲ್ಲದರ ಬಗ್ಗೆಯೂ ಅವರಿಗೆ ಮಾಹಿತಿ ನೀಡಿ. ಆ ದಿನಗಳಲ್ಲಿ ಯೋನಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿ.
ಡೈಪರ್ ಬದಲಾವಣೆ : ಡೈಪರ್ ಬಳಸುವ ಮಕ್ಕಳ ಯೋನಿ ಸ್ವಚ್ಛತೆ ಬಗ್ಗೆ ಪಾಲಕರು ಗಮನ ಹರಿಸಬೇಕು. ದೀರ್ಘಕಾಲ ಒಂದೇ ಡೈಪರ್ ಬಳಕೆ ಮಾಡಬಾರದು.
ಗಂಡು ಮಕ್ಕಳ ಸ್ವಚ್ಛತೆ :
ಶಿಶ್ನದ ಸ್ವಚ್ಛತೆ : ಮಗು ಬೆಳೆದಂತೆ, ದೇಹದ ಇತರ ಭಾಗಗಳಂತೆ ಶಿಶ್ನದ ಶುಚಿತ್ವವೂ ಬಹಳ ಮುಖ್ಯ ಎಂದು ಅವರಿಗೆ ತಿಳಿಸಬೇಕು. ತುರಿಕೆ ಮತ್ತು ಇತರ ರೀತಿಯ ಸೋಂಕನ್ನು ತಪ್ಪಿಸುತ್ತದೆ ಎಂಬ ಮಾಹಿತಿ ನೀಡಬೇಕು. ಶಿಶ್ನವನ್ನು ಅತಿಯಾಗಿ ಕ್ಲೀನ್ ಮಾಡದಂತೆ ಸಲಹೆ ನೀಡಿ.
ಸೋಪ್ ಬಳಕೆ ಅತಿಯಾಗಬಾರದು : ಶಿಶ್ನ ಸ್ವಚ್ಛಗೊಳಿಸುವ ವೇಳೆ ಸೋಪ್ ಬಳಕೆ ಹೇಗಿರಬೇಕು ಎಂಬುದನ್ನು ಮಕ್ಕಳಿಗೆ ವಿವರಿಸಬೇಕು. ಪದೇ ಪದೇ ಸೋಪ್ ಬಳಸಿದ್ರೆ ತುರಿಕೆ ಕಾಣಿಸಿಕೊಳ್ಳಬಹುದು.
ಒಳ ಉಡುಪಿನ ಬಗ್ಗೆ ಮಾಹಿತಿ ನೀಡಿ : ಮಕ್ಕಳಿಗೆ ಬಿಗಿಯಾದ ಒಳ ಉಡುಪು ಧರಿಸದಂತೆ ಸಲಹೆ ನೀಡಿ. ಹಾಗೆಯೇ ಒಳ ಉಡುಪನ್ನು ಹೇಗೆ ಸ್ವಚ್ಛಗೊಳಿಸಬೇಕು, ಯಾವಾಗ ಬದಲಿಸಬೇಕು ಎಂಬೆಲ್ಲದರ ಬಗ್ಗೆ ಮಾಹಿತಿ ನೀಡುವುದು ಅಗತ್ಯ.
ಮಕ್ಕಳ ನೈರ್ಮಲ್ಯದ ಬಗ್ಗೆ ಇದೂ ಗಮನದಲ್ಲಿರಲಿ :
• ಮಕ್ಕಳು ದೊಡ್ಡವರಾಗ್ತಿದ್ದಂತೆ ಪ್ರತಿ ದಿನ ಸ್ನಾನ ಮಾಡಿಸುವುದು ಮುಖ್ಯ. ಖಾಸಗಿ ಅಂಗದ ನೈರ್ಮಲ್ಯಕ್ಕೆ ಇದು ಮುಖ್ಯ. ತುರಿಕೆ, ಸೋಂಕು, ವಾಸನೆ ಬರದಂತೆ ಇದು ತಡೆಯುತ್ತದೆ. ಆದ್ರೆ ರಾಸಾಯನಿಕಯುಕ್ತ ಸೋಪ್ ಬಳಕೆಗೆ ಒಪ್ಪಿಗೆ ನೀಡಬೇಡಿ. ಮಕ್ಕಳ ಚರ್ಮಕ್ಕೆ ತಕ್ಕಂತೆ ಬಾಡಿ ವಾಶ್ ಬಳಕೆ ಮಾಡಿ.
• ಮಕ್ಕಳಿಗೆ ಆಗಾಗ್ಗ ಕೈ ತೊಳೆಯುವಂತೆ ಸಲಹೆ ನೀಡಿ. ಮೂತ್ರ ವಿಸರ್ಜನೆ ಮಾಡಿದ ನಂತ್ರ ಎಂಬುದನ್ನು ಅವರಿಗೆ ಮನವರಿಕೆ ಮಾಡಿ.