Parenting tips :   ಮಕ್ಕಳು ಓದೋದಿಲ್ಲ, ಇದು ಪ್ರತಿಯೊಬ್ಬ ಪಾಲಕರ ಸಮಸ್ಯೆ. ಎಗ್ಸಾಂ ಹತ್ತಿರ ಬರ್ತಿದ್ದಂತೆ ಪಾಲಕರ ಟೆನ್ಷನ್‌ ಹೆಚ್ಚಾಗುತ್ತೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರ್ಬೇಕು ಅಂದ್ರೆ ಏನು ಮಾಡ್ಬೇಕು? ಇಲ್ಲಿದೆ ಟಿಪ್ಸ್. 

ಸೆಪ್ಟೆಂಬರ್ – ಮಾರ್ಚ್ ತಿಂಗಳು ಬಂತು ಅಂದ್ರೆ ಪಾಲಕರ ಗೋಳು ಕೇಳೋದು ಬೇಡ. ಸ್ಕೂಲಿನಿಂದ ಎಗ್ಸಾಂ (Exam) ಟೈಮ್ ಟೇಬಲ್ ಬರ್ತಿದ್ದಂತೆ ಪಾಲಕರ ಬಿಪಿ ಹೆಚ್ಚಾಗುತ್ತೆ. ಓದು ಓದು ಅಂತ ಮಕ್ಕಳಿಗೆ ಎಷ್ಟೇ ಹೇಳಿದ್ರೂ ಮಕ್ಕಳು ಮಾತ್ರ ಮಾತು ಕೇಳೋದಿಲ್ಲ. ಅದೆಷ್ಟೋ ಪಾಲಕರು, ಮಕ್ಕಳ ಪರೀಕ್ಷೆ ಬರ್ತಿದ್ದಂತೆ ಆಫೀಸ್ ಗೆ ಚಕ್ಕರ್ ಹಾಕಿ, ಮಕ್ಕಳಿಗೆ ಓದಿಸೋಕೆ ಕುಳಿತುಕೊಳ್ತಾರೆ. ಆದ್ರೆ ವಾಸ್ತವ ಬೇರೆನೇ ಇರುತ್ತೆ. ಮಕ್ಕಳು ಮೊಬೈಲ್, ಟಿವಿಯಲ್ಲಿ ಬ್ಯುಸಿಯಾದ್ರೆ ಪಾಲಕರು ಮಕ್ಕಳ ನೋಟ್ಸ್ ಮಾಡ್ತಾ, ಎಗ್ಸಾಂಗೆ ಯಾವೆಲ್ಲ ಪ್ರಶ್ನೆ ಬರ್ಬಹುದು ಅಂತ ಲೆಕ್ಕ ಹಾಕ್ತಿರ್ತಾರೆ. ಟಿವಿ, ಮೊಬೈಲ್ ಅಂದ ತಕ್ಷಣ ಓಡಿ ಬರುವ ಮಕ್ಕಳು, ಬುಕ್ ಕಂಡ್ರೆ ದೂರ ಓಡ್ತಾರೆ. ಮಕ್ಕಳು ತಾವಾಗಿಯೇ ಓದುವ ಮನಸ್ಸು ಮಾಡ್ಬೇಕು ಅಂದ್ರೆ ಪಾಲಕರು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.

ಮಕ್ಕಳ (Children)ನ್ನು ಓದಿನ ಕಡೆ ಸೆಳೆಯೋದು ಹೇಗೆ? :

ನಿಗದಿತ ಸಮಯ – ಜಾಗ : ಮನೆಯಲ್ಲಿ ಮಕ್ಕಳು ತಾವಾಗಿಯೇ ಓದ್ಬೇಕು ಅಂದ್ರೆ ಮೊದಲು ಪಾಲಕರು ಮಾಡುವಂತಹದ್ದು ಸಮಯ ಹಾಗೂ ಜಾಗದ ನಿಗದಿ. ಮಕ್ಕಳು ಯಾವ ಜಾಗದಲ್ಲಿ ಕುಳಿತು ಓದ್ಬೇಕು ಹಾಗೇ ಯಾವ ಸಮಯದಲ್ಲಿ ಓದ್ಬೇಕು ಅನ್ನೋದನ್ನು ಡಿಸೈಡ್ ಮಾಡಿ. ಮಕ್ಕಳು ಪ್ರತಿದಿನ ಒಂದೇ ಸಮಯದಲ್ಲಿ ಮತ್ತು ಸ್ಥಳದಲ್ಲಿ ಕುಳಿತು ಓದಲು ಶುರು ಮಾಡಿದಾಗ ಅವರ ಮನಸ್ಸು ಈ ಟೈಂ ಟೇಬಲ್ ಗೆ ಒಗ್ಗಿಕೊಳ್ಳುತ್ತದೆ. ಇದು ಅವರಿಗೆ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಎಗ್ಸಾಂ ಹಿಂದಿನ ದಿನ ಮಾಡೋದಲ್ಲ. ಸ್ಕೂಲ್ ಆರಂಭವಾದ ಮೊದಲ ದಿನದಿಂದಲೇ ನೀವು ಮಕ್ಕಳಿಗೆ ಈ ರೂಢಿ ಬೆಳೆಸಿದ್ರೆ ಎಗ್ಸಾಂ ಟೈಂನಲ್ಲಿ ನಿಮ್ಮ ಕೂಗಾಡ, ಬಡಿದಾಟಕ್ಕೆ ಬ್ರೇಕ್ ಬೀಳುತ್ತೆ.

ವರ್ಷಕ್ಕೆ 30 ಲಕ್ಷ ಸ್ಯಾಲರಿ ಇದ್ದರೂ ವೀಕೆಂಡ್‌ನಲ್ಲಿ Rapido ಡ್ರೈವರ್‌ ಆಗಿರೋ ಬೆಂಗಳೂರು ಟೆಕ್ಕಿ!

ಪ್ರತಿ 20 ನಿಮಿಷಕ್ಕೊಮ್ಮೆ ಬ್ರೇಕ್ ನೀಡಿ : ಅರ್ಧ ಗಂಟೆ ಇಲ್ಲ ಒಂದು ಗಂಟೆ ಒಂದೇ ಜಾಗದಲ್ಲಿ ಕುಳಿತು ಮಕ್ಕಳು ಓದೋದು ಅಸಾಧ್ಯ. ಅವರಿಗೆ ಇಷ್ಟು ಸಮಯ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಸುಮಾರು 20 ನಿಮಿಷಗಳ ಕಾಲ ಸಂಪೂರ್ಣ ಗಮನ ಇಟ್ಟು ಓದಲು ಹೇಳಿ. 20 ನಿಮಿಷದ ನಂತ್ರ ಸಣ್ಣ ಬ್ರೇಕ್ ನೀಡಿ. ಪ್ರತಿ 20 ನಿಮಿಷಕ್ಕೆ ಐದು ನಿಮಿಷದ ಬ್ರೇಕ್ ನೀಡ್ತಾ ಬನ್ನಿ. ಓದು ಅಂದ್ರೆ ಓಡುವ ಮಕ್ಕಳ ಬೇಸರವನ್ನು ಇದು ತಡೆಯುತ್ತೆ. ಮುಂದಿನ ಓದಿಗೆ ಇದು ಸಹಾಯ ಕೂಡ ಮಾಡುತ್ತೆ.

ಮಗುವಿಗೆ ಹೀಗೆ ಅರ್ಥ ಮಾಡ್ಸಿ : ಮಗುವಿಗೆ ಸಬ್ಜೆಕ್ಟ್ ಅರ್ಥ ಆಗ್ತಿಲ್ಲ ಎಂದಾಗ ಬಹುತೇಕ ಪಾಲಕರು ಮಾಡುವ ದೊಡ್ಡ ತಪ್ಪೆಂದ್ರೆ ಅವರ ಮೇಲೆ ಕೋಪಗೊಳ್ಳೋದು, ರೇಗೋದು. ಹೇಳಿದ ತಕ್ಷಣ ಮಕ್ಕಳು ಉತ್ತರ ನೀಡ್ಬೇಕು. ಒಂದ್ವೇಳೆ ನೀಡಿಲ್ಲ ಎಂದ ತಕ್ಷಣ ಪಾಲಕರು ಮಕ್ಕಳಿಗೆ ಏಟು ನೀಡ್ತಾರೆ. ಇದ್ರಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುವ ಬದಲು ಕಡಿಮೆ ಆಗುತ್ತೆ. ನೀವು ಬೈಯ್ಯುವ ಬದಲು ಅವರಿಗೆ ಅರ್ಥ ಆಗುವ ರೀತಿಯಲ್ಲಿ ವಿಷ್ಯವನ್ನು ವಿವರಿಸಿ. ಆಟವಾಡ್ತಾ ವಿಷ್ಯವನ್ನು ಹೇಳಿಕೊಡಿ. ಅವರಿಗೆ ಇಷ್ಟವಾಗುವ ಚಾಕೋಲೇಟ್, ಐಸ್ ಕ್ರೀಂ ಉದಾಹರಣೆ ತೆಗೆದುಕೊಂಡು ವಿವರಿಸಿ. ಆಗ ಕಲಿಕೆಯಲ್ಲಿ ಉತ್ಸಾಹ ಬರುತ್ತೆ. ಮಕ್ಕಳ ತಾವಾಗಿಯೇ ಓದಲು ಆಸಕ್ತಿ ತೋರ್ತಾರೆ.

Chanakya Niti: ತುಂಬಾ ನೇರತನ ಒಳ್ಳೇದಲ್ಲ! ಬದುಕಿಗೆ ಚಾಣಕ್ಯ ನೀತಿಯ 20 ಟಿಪ್ಸ್

ಇದು ತಿಳಿದಿರಲಿ : ಮೊದಲು ನಿಮ್ಮ ಮಕ್ಕಳನ್ನು ಸ್ಟಡಿ ಮಾಡಿ. ಯಾವ ವಿಧಾನದ ಮೂಲಕ ಅವರನ್ನು ಓದಿನಕಡೆ ಸೆಳೆಯಬಹುದು, ಅವರ ಆಸಕ್ತಿ ಏನು ಎಂಬುದನ್ನು ತಿಳಿದುಕೊಳ್ಳಿ.