Asianet Suvarna News Asianet Suvarna News

ಶಾಲೆಯಲ್ಲಿ ಮಕ್ಕಳು ಎಲ್ಲರ ಕಣ್ಮಣಿಯಾಗಿರಲು ಪಾಲಕರು ಕಾರಣ..!

ನೂಲಿನಂತೆ ಸೀರೆ,ತಾಯಿಯಂತೆ ಮಗಳು ಎಂಬ ಗಾದೆಯಿದೆ. ಪಾಲಕರ ಅನೇಕ ಸ್ವಭಾವಕ್ಕೆ ಮಕ್ಕಳು ಕನ್ನಡಿಯಾಗಿರುತ್ತಾರೆ. ಮಕ್ಕಳ ವರ್ತನೆ ಮೇಲೆ ಪಾಲಕರು ಹೆಚ್ಚು ಪ್ರಭಾವ ಬೀರುತ್ತಾರೆ. ಮಕ್ಕಳನ್ನ ನೋಡಿಯೇ ಪಾಲಕರು ಹೇಗಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ.

Parenting Style affects Child Popularity in school
Author
Bangalore, First Published Dec 17, 2021, 8:35 PM IST
  • Facebook
  • Twitter
  • Whatsapp

ನನ್ನ ಕನಸ(Dream)ನ್ನು ಮಕ್ಕಳು(Children) ಈಡೇರಿಸುತ್ತಾರೆ. ನಾನು ಮಾಡಲಾಗದ ಕೆಲಸ(Work)ವನ್ನು ಮಕ್ಕಳಿಂದ ಮಾಡಿಸುತ್ತೇನೆ ಅಂತಾ ಅನೇಕ ಪಾಲಕರು(Parents) ಹೇಳ್ತಾರೆ. ಆದ್ರೆ ಎಲ್ಲ ಮಕ್ಕಳಿಗೂ ಪಾಲಕರ ಆಸೆ ಪೂರೈಸಲು ಸಾಧ್ಯವಾಗುವುದಿಲ್ಲ. ಪಾಲಕರು ಬಯಸಿದ್ದಂತೆ ಮಕ್ಕಳಾಗುವುದಿಲ್ಲ. ಮಗ ಕೂಡ ನನ್ನ ದಾರಿಯನ್ನೇ ಹಿಡಿದ ಎನ್ನುವವರಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಮಕ್ಕಳ ಜೀವನದ ಮೇಲೆ ಪಾಲಕರ ಪ್ರಭಾವ.  ಮಕ್ಕಳು ಹೇಗೆ ವರ್ತಿಸುತ್ತಾರೆ, ಅವರು ತಮ್ಮ ಜೀವನದಲ್ಲಿ ಎಷ್ಟು ಯಶಸ್ವಿಯಾಗುತ್ತಾರೆ, ಇದು ಪೋಷಕರ ವರ್ತನೆ (Behavior) ಮತ್ತು ಪೋಷಕರ ಮನೋಭಾವವನ್ನು ಅವಲಂಬಿಸಿರುತ್ತದೆ.

ಮಕ್ಕಳು ಹೇಗೆ ಮಾತನಾಡುತ್ತಾರೆ? ಅವರು ಹೇಗೆ ನಡೆದುಕೊಳ್ಳುತ್ತಾರೆ? ಇತರರ ಮುಂದೆ ಅವರು ಹೇಗಿರುತ್ತಾರೆ? ದಯಾಳುವಾಗಿ ವರ್ತಿಸುತ್ತಾರಾ? ಬಹು ಬೇಗ ಕೋಪಗೊಳ್ಳುತ್ತಾರಾ?  ಮಕ್ಕಳ ಇಂತಹ ಅನೇಕ ಅಭ್ಯಾಸಗಳು ಅವರ ಹೆತ್ತವರ ಪಾಲನೆಯನ್ನು ಸೂಚಿಸುತ್ತದೆ. ಇದು ಬಹುತೇಕರಿಗೆ ಗೊತ್ತು. ಆದ್ರೆ ಈಗ ಈ ಪಟ್ಟಿಗೆ ಇನ್ನೊಂದು ವಿಷಯ ಸೇರ್ಪಡೆಯಾಗಿದೆ. ಅದು ಶಾಲೆಯಲ್ಲಿ ಮಗುವಿನ ಜನಪ್ರಿಯತೆ ಮತ್ತು ಭವಿಷ್ಯದಲ್ಲಿ ಮಗುವಿನ ಕೆಲಸ. ಹೌದು, ಶಾಲೆಯಲ್ಲಿ ಮಕ್ಕಳ ಜನಪ್ರಿಯತೆ ಮತ್ತು ಅವರು ಬೆಳೆದಂತೆ ಅವರ ಯಶಸ್ಸು ಕೂಡ ಪೋಷಕರ ಪೋಷಣೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೊಸ ಅಧ್ಯಯನ(Study)ವೊಂದು ಬಹಿರಂಗಪಡಿಸಿದೆ.

ಮಗು ತುಂಟತನ ಪ್ರದರ್ಶಿಸುತ್ತಿದ್ದರೆ, ಇತರರಿಗೆ ತೊಂದರೆ ನೀಡುತ್ತಿದ್ದರೆ ಪೋಷಕರ ಪೋಷಣೆ ವಿಧಾನವೇ ಇದಕ್ಕೆ ಕಾರಣವೆಂದು ಸಂಶೋಧಕರು ಹೇಳಿದ್ದಾರೆ. 
ಉತ್ತರ ಕೆರೊಲಿನಾ(North Carolina )ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಮಿಚ್ ಪ್ರಿನ್ಸ್ಟಿನ್ ಪ್ರಕಾರ, ವ್ಯಕ್ತಿಯ ಜನಪ್ರಿಯತೆಯು ಜನಪ್ರಿಯ ಪದವನ್ನು ವ್ಯಕ್ತಿ ಹೇಗೆ ಅರ್ಥ ಮಾಡಿಕೊಂಡಿದ್ದಾನೆ ಎಂಬುದನ್ನು ಅವಲಂಭಿಸಿರುತ್ತದೆ. ವೈಯಕ್ತಿಕ (Personal) ಹಾಗೂ ವೃತ್ತಿಪರ (Professional )ಪ್ರಗತಿ ಆತ ತೆಗೆದುಕೊಂಡ ಜನಪ್ರಿಯ ಪದದ ಅರ್ಥವನ್ನು ಅವಲಂಭಿಸಿರುತ್ತದೆ.  

ಮಕ್ಕಳ ಮೇಲೆ ಪರಿಣಾಮ ಬೀರುವ ವಿಷ್ಯಗಳು : 
ನಿಮ್ಮ ದೃಷ್ಟಿಕೋನ : ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ಮಕ್ಕಳ ಮುಂದೆ ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಬಾರದು. ಮಕ್ಕಳು ನೀವು ಹೇಳಿದ  ವಿಷ್ಯವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ನಿಮ್ಮ ಮಾತಿನಿಂದ ಅವರು ಯಾವ ಸಂದೇಶ ಪಡೆಯುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ನಿಮ್ಮ ಮಾತು ನಿಮ್ಮ ಮಗುವಿನ ಮೇಲೆ ಸಕಾರಾತ್ಮಕ (Positive) ಪ್ರಭಾವ ಬೀರಬೇಕೇ ಹೊರತು ನಕಾರಾತ್ಮಕ (Negative) ಪರಿಣಾಮವನ್ನಲ್ಲ. ಮನೆಯಲ್ಲಿ ಪಾಲಕರಮಾತು,ನಡವಳಿಕೆಯನ್ನು ಮಕ್ಕಳು ಶಾಲೆಯಲ್ಲಿ ಅನುಕರಿಸುತ್ತಾರೆ. 

ಪಾಲಕರ  ಕೋಪ (Anger) : ಕೆಲ ಪಾಲಕರು ಮಾತು-ಮಾತಿಗೆ ಕೋಪಗೊಳ್ಳುತ್ತಾರೆ. ಮಕ್ಕಳ ಮುಂದೆಯೇ ಚೀರಾಡುತ್ತಾರೆ. ಕೆಟ್ಟ ಶಬ್ಧಗಳ ಪ್ರಯೋಗ ಮಾಡುತ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಗು ಕೂಡ ಪಾಲಕರ ದಾರಿ ಹಿಡಿಯುತ್ತದೆ. ಸಣ್ಣ ವಿಚಾರಕ್ಕೆ ಕಿರಿಕಿರಿ ಕೋಪ ವ್ಯಕ್ತಪಡಿಸುತ್ತದೆ. 

ಪೋಷಕರ ಜೀನ್ಸ್ : ಸಾರ್ವಜನಿಕ ಪ್ರದೇಶದಲ್ಲಿ ಎಷ್ಟು ಆಸಕ್ತಿ ಹೊಂದಿದ್ದೀರಿ?  ಇತರರೊಂದಿಗೆ ಹೇಗೆ ಮಾತನಾಡುತ್ತೀರಿ?   ಹೇಗೆ ವರ್ತಿಸುತ್ತೀರಿ ? ಇವೆಲ್ಲವೂ ನಿಮ್ಮ ಪೋಷಕರ ಜೀನ್ಸ್ ನಿಂದ ಬಂದಿರುತ್ತದೆ. ಇದು ನಿಮ್ಮ ಮಕ್ಕಳಿಗೆ ಬರುತ್ತದೆ. ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆ ಇದನ್ನು ಬದಲಾಯಿಸುವುದು ಕೂಡ ಕಷ್ಟ.

ಮಗುವಿನೊಂದಿಗೆ ನಿಮ್ಮ ಸಂಬಂಧ (Relation) :  ಮಗುವಿನೊಂದಿಗೆ  ಹೆತ್ತವರು ಹೊಂದಿರುವ ಸಂಬಂಧ ಅವರ ಜನಪ್ರಿಯತೆ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಪಾಲಕರು ಹತ್ತಿರವಾಗಿದ್ದರೆ,ಮಕ್ಕಳ ಜೊತೆ ಉತ್ತಮ ಸಂಬಂಧ ಹೊಂದಿದ್ದರೆ ಜನಪ್ರಿಯರಾಗುವ ಸಾಧ್ಯತೆಗಳು ಹೆಚ್ಚು. ಅಸುರಕ್ಷಿತ ಮಕ್ಕಳು ಮತ್ತು ದುರ್ಬಲ ಸಂಬಂಧ ಹೊಂದಿದ ಮಕ್ಕಳು ಭಾವನಾತ್ಮಕವಾಗಿ ಅವಲಂಬಿತರಾಗುತ್ತಾರೆ.  ಜನಪ್ರಿಯತೆ(Popularity) ವಿಷ್ಯದಲ್ಲೂ ಅವರು ಹಿಂದಿರುತ್ತಾರೆ.
 

Follow Us:
Download App:
  • android
  • ios