Asianet Suvarna News Asianet Suvarna News

ಚಿಕಿತ್ಸೆ ಜೊತೆ ರೋಗಿಗಳಿಗೆ ಸಹಾನುಭೂತಿಯ ಆರೈಕೆಯೂ ಬೇಕು: ವೈದ್ಯರೊಬ್ಬರು ಹೇಳ್ತಾರೆ ಕೇಳಿ!

ತಸ್ಲೀನಾ…ವೈದ್ಯರಿಗೇ ಬೆರಗನ್ನು ಮೂಡಿಸಿದ ಹುಡುಗಿ. ಭರವಸೆ, ಧೈರ್ಯ, ಸ್ಥಿರತೆ, ಪ್ರೀತಿಗಳ ಸಂಗಮವಾಗಿದ್ದ ತಸ್ಲೀನಾ ಜೀವನದ ನಶ್ವರತೆಯನ್ನೂ ತಿಳಿಸಿಕೊಡುತ್ತಾಳೆ. ಇದು, ಡಾ.ಎಂ.ಆರ್. ರಾಜಗೋಪಾಲ್‌ ತಮ್ಮ ಅನುಭವಗಳನ್ನಾಧರಿಸಿದ ಕೃತಿಯಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಕಥಾನಕ. 
 

Palliative care is important whet treating patients in severe disease
Author
First Published Jan 2, 2023, 4:45 PM IST

ಕ್ಯಾನ್ಸರ್‌ ನಂತಹ ರೋಗದಲ್ಲಿ ಉಪಶಮನಕಾರಿ ಆರೈಕೆಗೆ ಭಾರೀ ಮಹತ್ವವಿದೆ. ಇದೊಂದೇ ಅಲ್ಲ, ಹಲವು ಕಾಯಿಲೆಗಳಿಗೆ ಉಪಶಮನ ಆರೈಕೆಯೇ ಮುಖ್ಯವಾಗುತ್ತದೆ. ಇದು ರೋಗಿಗಳನ್ನು ಮಾತ್ರವಲ್ಲ, ಅವರ ಕುಟುಂಬಕ್ಕೂ ಕೆಲವೊಮ್ಮೆ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆಯೇ ಪಾಲಿಯಮ್‌ ಇಂಡಿಯಾ ಸರ್ಕಾರೇತರ ಸಂಸ್ಥೆ. ಇದರ ರೂವಾರಿ ಡಾ. ಎಂ.ಆರ್.ರಾಜಗೋಪಾಲ್. ರೋಗಿಗಳಿಗೆ ಚಿಕಿತ್ಸೆ ಮಾತ್ರವಲ್ಲ, ಅವರನ್ನು ಸಹಾನುಭೂತಿಯಿಂದ ಕಾಣುವುದು ಎಷ್ಟು ಮುಖ್ಯವೆಂದು ಅರಿತವರು. ಇದಕ್ಕಾಗಿ, ಹಲವು ರೀತಿಯ ಕಾನೂನಾತ್ಮಕ ಬದಲಾವಣೆಗೂ ಕಾರಣರಾದವರು. ಕೆಲವು ಕಾಯಿಲೆಗಳಲ್ಲಿ ರೋಗಿಗಳು ಅನಗತ್ಯ ನೋವು ಅನುಭವಿಸುವುದನ್ನು ನೋಡಲಾಗದ ಇವರು ೨೦೧೪ರ ಮಾದಕ ದ್ರವ್ಯ ಕಾಯ್ದೆಯ ತಿದ್ದುಪಡಿಗೂ ಕಾರಣರಾದವರು. ಇವರಿಗೆ ದೇಶದ ಪ್ರತಿಷ್ಠಿತ ಗೌರವವಾದ ಪದ್ಮಶ್ರೀ ಸಂದಿದೆ. ವೈದ್ಯಕೀಯ ಜಗತ್ತಿನಲ್ಲಿ ಉಪಶಮನಕಾರಿ ಆರೈಕೆಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಮೂಲತಃ ಕೇರಳದ ತ್ರಿವೇಂಡ್ರಮ್‌ ಮೂಲದ ರಾಜಗೋಪಾಲ್‌, ಇತ್ತೀಚೆಗೆ ಕೃತಿಯೊಂದನ್ನು ಬರೆದಿದ್ದಾರೆ. “ವಾಕ್‌ ವಿತ್‌ ದ ವೇರಿ: ಲೈಫ್‌ ಚೇಂಜಿಂಗ್‌ ಲೆಸನ್ಸ್‌ ಇನ್‌ ಹೆಲ್ತ್‌ ಕೇರ್‌ʼ ಎನ್ನುವ ಕೃತಿಯಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಅನುಭವಿಸಿದ ವಿವಿಧ ಹೃದಯಸ್ಪರ್ಶಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.  

ದಿನದಿನವೂ ರೋಗಿಗಳು (Patients), ಅವರ ಕುಟುಂಬಸ್ಥರ ಜತೆ ಒಡನಾಡುವ ವೈದ್ಯರಿಗೆ (Docters) ಗಟ್ಟಿ ಎದೆ ಬೇಕು. ಹಾಗೆಂದು ಕೇವಲ ಗಟ್ಟಿಯಾಗಿದ್ದರಷ್ಟೇ ಸಾಲದು, ಮಾನವೀಯ, ಸಹಾನುಭೂತಿಯ (Empathy) ತುಡಿತವೂ ಇರಬೇಕು ಎನ್ನುತ್ತ ಅವರು ತಸ್ಲೀನಾ (Thasleena) ಎನ್ನುವ ಹುಡುಗಿಯ ಬಗ್ಗೆ ತಮ್ಮ ಅನುಭವವನ್ನು ಇಲ್ಲಿ ದಾಖಲಿಸಿದ್ದಾರೆ. ಇದು, ಹಲವು ವರ್ಷಗಳ ಹಿಂದಿನ ಅನುಭವ. 

New Year 2023: ಹೊಸ ವರ್ಷಕ್ಕಿರಲಿ ಉತ್ತಮ ಆರೋಗ್ಯದ ಹರ್ಷ

ಮಯೂರಿಯ ಸ್ಫೂರ್ತಿ
ತಸ್ಲೀನಾ… ಲವಲವಿಕೆಯ, ಚುರುಕಾದ, ಭರವಸೆಯುಳ್ಳ 11 ವರ್ಷದ ಹುಡುಗಿ. ಭರವಸೆಗೆ (Hope), ಪ್ರೀತಿಗೆ (Love) ಮತ್ತೊಂದು ಹೆಸರಂತೆ ಇದ್ದವಳು. ಆದರೆ, ವೈದ್ಯರಲ್ಲಿ ಸದಾ ನೋವಿನ ನೆನಪಾಗಿ ಕಾಡುವವಳು. ಕ್ಯಾನ್ಸರ್‌ (Cancer) ನಿಂದಾಗಿ ಆಕೆಯ ತೊಡೆಗಳು (Thigh) ವಿಪರೀತ ಊದಿಕೊಂಡಿದ್ದವು. ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ. ಅಂಥದ್ದರಲ್ಲೂ ಅವಳು ನೋವು (Pain) ಕಡಿಮೆ ಇರುವಾಗ ತನ್ನ ಪ್ರಶ್ನಾವಳಿಗಳ ಲೋಕದಲ್ಲಿ ವೈದ್ಯರನ್ನು ಮುಳುಗಿಸುತ್ತಿದ್ದಳು. ಪ್ರತಿಯೊಬ್ಬ ವೈದ್ಯರು, ದಾದಿಯರಲ್ಲೂ ಆಕೆ ಮಾಡುತ್ತಿದ್ದ ಪ್ರಶ್ನೆ ಎಂದರೆ, “ನನಗೇನು ಆಗಲಿದೆ?ʼ ಎಂದೇ ಆಗಿತ್ತು. ಕ್ಯಾನ್ಸರ್‌ ಹೆಚ್ಚಾದಾಗ ಆಕೆಯ ಕಾಲನ್ನು ತೆಗೆಯುವುದು ಅಗತ್ಯವಾಗಿತ್ತು. ವೈದ್ಯರಿಗೆ ಅದು ಎಷ್ಟು ಸಮಯದ ಕೆಲಸವೂ ಆಗಿರಲಿಲ್ಲ. ಆದರೆ, ಆಕೆಗೆ ವಿಷಯ ಗೊತ್ತು ಮಾಡಿಯೇ ತೆಗೆಯಬೇಕು ಎನ್ನುವುದು ವೈದ್ಯರ ನಿಲುವಾಗಿದ್ದರಿಂದ ಆಕೆಗೆ ವಿಷಯ ಹೇಳಿದರೆ ಒಪ್ಪಲೇ ಇಲ್ಲ. ಆಗ ವೈದ್ಯರ ಸಹಾಯಕ್ಕೆ ಒದಗಿದ್ದುದು “ಮಯೂರಿʼ (Mayuri) ಚಿತ್ರ. ನೃತ್ಯ ಕಲಾವಿದೆ ಸುಧಾ ಚಂದ್ರನ್‌ (Sudha Chandran) ಜೀವನಾಧಾರಿತ ಚಿತ್ರ ಸ್ಫೂರ್ತಿದಾಯಕವಾದುದು. ಒಂದು ಕಾಲನ್ನು ಕಳೆದುಕೊಂಡರೂ ನೃತ್ಯಗಾತಿಯಾಗಿ ಬೆಳೆಯ ಕತೆಯನ್ನು ಒಳಗೊಂಡ ಈ ಚಿತ್ರವನ್ನು ತಸ್ಲೀನಾಗೆ ತೋರಿಸಲಾಯಿತು. ಬಳಿಕ, ಒಂದೇ ದಿನದಲ್ಲಿ ಆಕೆ ತನ್ನ ಕಾಲು ತೆಗೆಯಲು ಒಪ್ಪಿಗೆ ನೀಡಿದ್ದಳು!

Winter Health: ಚಳಿಗಾಲ ನಿಜ, ಆದ್ರೆ ನಂಗ್ಯಾಕೆ ಎಲ್ರಿಗಿಂತ ಜಾಸ್ತಿ ಚಳಿಯಾಗುತ್ತೆ ?

ಚೀಪ್‌ ಗೆಸ್ಟ್!

ಕೆಲದಿನಗಳಲ್ಲಿ ಸ್ವಲ್ಪ ಚೇತರಿಸಿಕೊಂಡಂತಾದ ತಸ್ಲೀನಾ ಆಸ್ಪತ್ರೆಯ (Hospital) ಹಲವು ಕಾರ್ಯಕ್ರಮಗಳ ಚೀಫ್‌ ಗೆಸ್ಟ್‌ ಆಗಿದ್ದಳು. ರಿಬ್ಬನ್‌ ಕತ್ತರಿಸಿ ಹೊಸ ಬ್ಲಾಕ್‌ ಗಳನ್ನೂ ಸಹ ಆಕೆಯೇ ಉದ್ಘಾಟಿಸಿದ್ದಳು. ಈ ಹಂತದಲ್ಲಿ ಕೃತಕ (Artificial) ಕಾಲುಗಳ ಸಹಾಯದಿಂದ ಎದ್ದು ಓಡಾಡುವ ಭರವಸೆಯೂ ಅವಳಲ್ಲಿ ಹುಟ್ಟಿತ್ತು. ಆದರೆ, ವಿಧಿಯಾಟ ಬೇರೆಯದೇ ಆಗಿತ್ತು. ಕ್ಯಾನ್ಸರ್‌ ಆಕೆಯ ಶ್ವಾಸಕೋಶಗಳನ್ನೂ (Lungs) ತಿಂದುಹಾಕಿತ್ತು. ಕೆಲವೇ ದಿನಗಳಲ್ಲಿ ತಸ್ಲೀನಾ ಶಾಶ್ವತವಾಗಿ ಮರೆಯಾಗಿದ್ದಳು.

ವೈದ್ಯರ ಜೀವನದಲ್ಲಿ ಇಂಥವು ಎಷ್ಟೋ ಇರಬಹುದು. ಆದರೆ, ಕೆಲವು ಜನ ಮಾತ್ರ ಮಾನಸಪಟಲದಿಂದ ಮರೆಯಾಗುವುದಿಲ್ಲ. ಅಷ್ಟಕ್ಕೂ ಆಕೆ ಪುಟ್ಟ ಹುಡುಗಿ (Girl). ಅವಳು ಹಾಗೂ ಅವಳಂತಹ ರೋಗಿಗಳನ್ನು ಸಹಾನುಭೂತಿಯಿಂದ ಕಾಣುವುದು ಅಗತ್ಯ ಎನ್ನುವ ರಾಜ್‌ ಗೋಪಾಲ್‌ (Dr.M.R.Rajgopal) ಇಂತಹ ಹಲವು ಮುಖಗಳನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. 

Follow Us:
Download App:
  • android
  • ios