ನನ್ನ ಮತ್ತು ಸಾನಿಯಾ ಮಿರ್ಜಾ ಸಂಬಂಧಕ್ಕೆ ರಾಷ್ಟ್ರೀಯತೆಯ ಹಂಗಿಲ್ಲ. ಹಾಗೆಲ್ಲ ಪ್ರೀತಿ ಎಂಬುದು ಹೇಳಿ ಕೇಳಿ ಬರುವುದಲ್ಲ. ಅದು ಭಾರತ- ಪಾಕಿಸ್ತಾನ ಅಂತೆಲ್ಲ ಲೆಕ್ಕಿಸುವುದಿಲ್ಲ. ನಮ್ಮ ಮದುವೆಯಾಗುವ ಸಂದರ್ಭದಲ್ಲಿ ನಮ್ಮಿಬ್ಬರ ದೇಶಗಳ ನಡುವೆ ಸ್ವಲ್ಪ ಟೆನ್ಷನ್‌ ಇದ್ದದ್ದು ನಿಜ. ಆದರೆ ಅದರಿಂದ ನಮ್ಮ ಸಂಬಂಧಕ್ಕೆ ಏನೂ ತೊಂದರೆ ಆಗಲಿಲ್ಲ.

ಹಾಗಂತ ನಮ್ಮ ಹೈದರಾಬಾದ್‌ನ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾಳ ಪತಿ, ಪಾಕಿಸ್ತಾನದ ಕ್ರಿಕೆಟ್‌ ಆಟಗಾರ ಶೋಯಿಬ್‌ ಮಲಿಕ್‌ ಹೇಳಿದ್ದಾರೆ. ಪಾಕಿಸ್ತಾನದ ಟಿವಿಯೊಂದಕ್ಕೆ ಅವರು ನೀಡಿದ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಅವರು ನೀಡಿದ ಈ ಉತ್ತರಕ್ಕೆ ಭಾರತೀಯರೂ ಪಾಕಿಸ್ತಾನೀಯರೂ ಫಿದಾ ಆಗಿದ್ದಾರೆ. 

ಶೋಯಿಬ್‌ ಮಲಿಕ್‌ ಮತ್ತು ಸಾನಿಯಾ ಮಿರ್ಜಾ 2008ರಲ್ಲಿ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾಗುವುದಕ್ಕೂ ಮುನ್ನ ಹಲವು ವರ್ಷಗಳ ಪ್ರೀತಿ ಅವರದಾಗಿತ್ತು ಎಂದು ಹೇಳಲಾಗುತ್ತದೆ. ಸಾನಿಯಾಗೆ ಇದು ಮೊದಲ ಪ್ರೀತಿ ಹಾಗೂ ಮೊದಲ ಮದುವೆ. ಆದರೆ, ಶೋಯಿಬ್‌ಗೆ ಇದು ಎರಡನೇ ಮದುವೆ. ಈತನ ಮೊದಲ ಪತ್ನಿ ಆಯೇಶಾ ಸಿದ್ದಿಕಿ ಎಂಬವಳು, ಸಾನಿಯಾಳನ್ನು ಮದುವೆಯಾಗುವ ನಾಲ್ಕೇ ದಿನಗಳ ಮೊದಲು ಈತ ಆಯೇಶಾಗೆ ಡೈವೋರ್ಸ್‌ ನೀಡಿದ್ದ. ದಿಡೀರನೆ ಈತ ಡೈವೋರ್ಸ್‌ ನೀಡಿದ್ದು ಹಾಗೂ ತರಾತುರಿಯಲ್ಲಿ ಸಾನಿಯಾಳನ್ನು ಮದುವೆಯಾದದ್ದು ಎಲ್ಲರ ಕುತೂಹಲ ಕೆರಳಲು ಕಾರಣವಾಗಿತ್ತು.

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಶೋಯಿಬ್‌ ಹಾಗೂ ಸಾನಿಯಾ ಇಬ್ಬರೂ ಪ್ರತ್ಯೇಕವಾಗಿದ್ದರು. ಶೋಯಿಬ್‌ ಪಾಕಿಸ್ತಾನದಲ್ಲಿದ್ದ. ಸಾನಿಯಾ ಹೈದರಾಬಾದ್‌ನಲ್ಲಿದ್ದಳು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬ್ಯಾನ್‌ ಆಗಿದ್ದುದರಿಂದ ಅವಳು ಅಲ್ಲಿಗೆ ಹೋಗಲಾಗದೆ, ಇವನು ಇಲ್ಲಿಗೆ ಬರಲಾಗದೆ ಬಾಕಿಯಾಗಿದ್ದರು. ಇದೀಗ ಶೋಯಿಬ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಅನುಮತಿ ನೀಡಿದೆ. 2018ರಲ್ಲಿ ಇಬ್ಬರಿಗೂ ಒಂದು ಮಗುವಾಗಿದೆ. ಗಂಡು ಮಗುವಿಗೆ ಇಝಾನ್‌ ಮಿರ್ಜಾ ಮಲಿಕ್‌ ಎಂದು ಹೆಸರಿಟ್ಟಿದ್ದಾರೆ. ತೆಲಂಗಾಣ ರಾಜ್ಯ ಈಕೆಯನ್ನು ರಾಜ್ಯದ ಬ್ರಾಂಡ್‌ ಅಂಬಾಸಿಡರ್‌ ಎಂದು ಗುರುತಿಸಿತ್ತು. ಆ ಸಂದರ್ಭದಲ್ಲಿ, ಈಕೆ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾದ್ದರಿಂದ, ಆ ಸ್ಥಾನವನ್ನು ಆಕೆಗೆ ಕೊಡಬಾರದು ಎಂದು ಒಂದು ವರ್ಗ ವಿವಾದ ಮಾಡಿತ್ತು. ಅತ್ತ ಶೋಯಿಬ್ ಮಲಿಕ್‌ ಕೂಡ, ಭಾರತೀಯಳನ್ನು ಮದುವೆಯಾದದ್ದಕ್ಕಾಗಿ ಪಾಕಿಸ್ತಾನದ ಕೆಲವು ವರ್ಗದ ಪ್ರಜೆಗಳಿಂದ ಟೀಕೆ ಎದುರಿಸಿದ್ದಾನೆ. ಪಾಕಿಸ್ತಾನದ ಕೆಲವು ಮತಾಂಧ ಮುಲ್ಲಾಗಳು, ಸಾನಿಯಾ ಮಿರ್ಜಾ ಡೀಸೆಂಟಾಗಿ ಬಟ್ಟೆ ತೊಡಬೇಕು, ಬುರ್ಖಾ ಹಾಕಿಕೊಳ್ಳಬೇಕು ಎಂದೆಲ್ಲ ಹೇಳಿದ್ದರು. ಆದರೆ ಸಾನಿಯಾ ಅದನ್ನು ಕ್ಯಾರೇ ಮಾಡಿರಲಿಲ್ಲ. ಇಬ್ಬರೂ ಅಂಥ ಚಿಲ್ಲರೆ ವಿವಾದಗಳಿಗೆಲ್ಲ ತಲೆ ಕೆಡಿಸಿಕೊಂಡೇ ಇಲ್ಲ. 

ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ! ...

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಮಾತ್ರ ಅವರಿಬ್ಬರ ದಾಂಪತ್ಯದ ಮಹತ್ವದ ಹಲವು ಕ್ಷಣಗಳು ಕಳೆದುಹೋಗಿವೆ. ಮೂರು ತಿಂಗಳಿನಿಂದ ಸಾನಿಯಾ ಹೈದರಾಬಾದ್‌ನಲ್ಲಿದ್ದಾಳೆ- ಶೋಯಿಬ್‌ ಪಾಕಿಸ್ತಾನದಲ್ಲಿದ್ದಾನೆ. ಹೈದರಾಬಾದ್‌ನ ಟೆನಿಸ್‌ ತರಬೇತಿ ಸೆಂಟರ್‌ನಲ್ಲಿ ಸಾನಿಯಾ ತರಬೇತಿ ನೀಡುತ್ತಿದ್ದಳು. ಹೀಗಾಗಿ ಅವರಿಬ್ಬರೂ ಬೇರೆಯಾಗಿದ್ದರು. ಈ ಮಧ್ಯೆ ಅವರು ಝೂಮ್‌ ಕಾಲ್‌, ಸ್ಕೈಪ್‌ ಎಂದು ಕಾಲಕ್ಷೇಪ ಮಾಡಿದ್ದಾರೆ. ಮ್ಉ ಇಝಾನ್‌ನ ಮುದ್ದು ಕ್ಷಣಗಳನ್ನು ಶೋಯಿಬ್‌ ಮಿಸ್‌ ಮಾಡಿಕೊಂಡಿದ್ದಾನೆ. ಸಾಧ್ಯವಾದಷ್ಟೂ ಬೇಗನೆ ಬಂದು ಸಾನಿಯಾ ಹಾಗೂ ಮಗುವನ್ನು ಕಾಣುವ ಆಸೆ ಶೋಯಿಬ್‌ನದು.

ಕ್ರಿಕೆಟರ್ ಅಥವಾ ಟೆನಿಸ್ ಪಟು? ಪುತ್ರನ ಕರಿಯರ್ ಕುತೂಹಲಕ್ಕೆ ಉತ್ತರ ನೀಡಿದ ಸಾನಿಯಾ ದೇಶ ದೇಶಗಳ ನಡುವಿನ ವ್ಯತ್ಯಾಸ ಹಾಗೂ ಭೇದ ಬೇಕಾಗಿರೋದು ರಾಜಕಾರಣಿಗಳಿಗೆ. ನಮಗಲ್ಲ. ಆಕೆ ಟೆನಿಸ್‌ ಪ್ಲೇಯರ್‌. ನಾನು ಕ್ರಿಕೆಟ್‌ ಆಟಗಾರ. ಈ ಎರಡಕ್ಕೂ ಧರ್ಮವೂ ಇಲ್ಲ, ರಾಷ್ಟ್ರೀಯತೆಯೂ ಇಲ್ಲ. ಈ ವಿಷಯವನ್ನು ಹಿಗ್ಗಿಸಿ ಪ್ರತ್ಯೇಕತೆಯನ್ನು ಬೆಳೆಸುವ ಯಾವುದೇ ಕ್ರಿಯೆಯನ್ನೂ ನಾನು ವಿರೋಧಿಸುತ್ತೇನೆ ಅಂತ ಶೋಯಿಬ್‌ ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಿಗರು ಅಹುದಹುದು ಎಂದಿದ್ದಾರೆ.

ಮಗನ ಎತ್ತಿಕೊಂಡು ಕೋರ್ಟ್‌ಗೆ ಇಳಿದ ಸಾನಿಯಾ; ತಾಯಿಗೆ ಸಲಾಂ ಹೇಳಿದ ಫ್ಯಾನ್ಸ್!