ನಮ್ಮ ಪೂರ್ವಜರು ನಗಲು ಕಲಿತಿದ್ದೇ ಸೆಕ್ಸ್‌ಗಾಗಿ!

ಹೆಣ್ಣು ಅಥವಾ ಗಂಡನ್ನು ಆಕರ್ಷಿಸುವ ವಿಷಯಕ್ಕೆ ಬಂದರೆ ಪೂರ್ವಜರು ಈಗಿನವರಿಗಿಂತ ಬಹಳ ಮುಂದಿದ್ದರು ಎನಿಸುತ್ತದೆ. ತಾವು ಒಲಿಸಿಕೊಳ್ಳಬೇಕಾದವರಿಗೆ ಅದೇ ಕಾರಣಕ್ಕಾಗಿ ಸ್ಮೈಲ್ ಮಾಡಿ ಬಲೆ ಬೀಸುತ್ತಿದ್ದರು 600,000 ವರ್ಷಗಳ ಹಿಂದಿದ್ದ ನಿಯಾಂಡರ್‌ತಾಲ್ಸ್ ಹಾಗೂ ಡೆನಿಸೋವನ್ಸ್. 

Our ancestors learnt to smile so that they can have sex

ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಆದರೆ, ಲಕ್ಷ ಲಕ್ಷ ವರ್ಷಗಳ ಹಿಂದಿದ್ದ ನಮ್ಮ ಪೂರ್ವಜರು ಲೈಂಗಿಕ ಕಾರಣಕ್ಕಾಗಿ ಯಾರನ್ನಾದರೂ ಆಕರ್ಷಿಸುವ ವಿಷಯದಲ್ಲಿ ಈಗಿನವರಿಗಿಂತ ಹೆಚ್ಚು ಸ್ಮಾರ್ಟ್ ಆಗಿದ್ದರು. ಹೊಸ ಅಧ್ಯಯನವೊಂದರ ಪ್ರಕಾರ, ಸುಮಾರು 6 ಲಕ್ಷ ವರ್ಷಗಳ ಹಿಂದಿದ್ದ ನಿಯಾಂಡರ್‌ತಲ್‌ ಮನುಷ್ಯರು ನಗಲು ಹಾಗೂ ಇತರೆ ಭಾವನೆಗಳನ್ನು ಮುಖದಲ್ಲಿ ವ್ಯಕ್ತಪಡಿಸಲು ಕಲಿತದ್ದೇ ಕಡಿಮೆ ಆಕ್ರಮಣಶೀಲತೆ ಹೊಂದಿದ ವಿರುದ್ಧ ಲಿಂಗಿಯನ್ನು ಆಕರ್ಷಿಸುವ ಸಲುವಾಗಿಯಂತೆ!

ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ

ಜೀನ್ ರೂಪಾಂತರ ಕಾರಣ
ಮಿಲನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಸಂಶೋಧನೆಯಲ್ಲಿ ಈ ಆಸಕ್ತಿಕರ ವಿಷಯ ಬೆಳಕಿಗೆ ಬಂದಿದೆ. ಸಂಶೋಧಕರು ನಿಯಾಂಡರ್ತಲ್‌ರಿಂದ ಬಂದ ಅನುವಂಶಿಕ ಮಾದರಿಗಳನ್ನು ಪರೀಕ್ಷೆಗೆ ಹಚ್ಚಿದಾಗ ತಿಳಿದದ್ದೇನೆಂದರೆ, ಕಡಿಮೆ ಆಕ್ರಮಣಶೀಲರಾದ ಲೈಂಗಿಕ ಸಂಗಾತಿಯನ್ನು ಮೆಚ್ಚಿಸಲು ಇವರು ನಗುವುದು ಸೇರಿದಂತೆ ಇತರೆ ಮುಖಭಂಗಿಗಳನ್ನು ಆರಂಭಿಸಿದರಂತೆ. ಜೀನ್ ರೂಪಾಂತರ ಈ ಭಾವನಾತ್ಮಕ ಅಭಿವ್ಯಕ್ತಿಗೆ ಕಾರಣ ಎಂದು ಅಧ್ಯಯನ ತಿಳಿಸಿದೆ. ಅಬ್ಬಬ್ಬಾ! ಹಾಗಿದ್ದರೆ ಇಂದಿನ ಜನಸಂಖ್ಯಾ ಸ್ಫೋಟಕ್ಕೆ 600,000 ವರ್ಷಗಳ ಹಿಂದಿದ್ದ ಮಾನವರು ನಗುವುದು ಕಲಿತಿದ್ದೇ ಕಾರಣ ಎನ್ನಬಹುದು!

ಎಲ್ಲ ನಗುವಿನಿಂದ
ಈ ವರ್ತನೆಯು ಪ್ರಾಚೀನ ಮನುಷ್ಯರ ಸ್ವಯಂ ಪಳಗಿಸುವಿಕೆಗೆ ಕಾರಣವಾಯಿತು. ಅಂದರೆ, ಅವರು ಹೆಚ್ಚು ಹೆಚ್ಚು ಭಾವನಾಜೀವಿಗಳಾಗಲು, ನಾಗರಿಕರಾಗಲು ಈ ಜೀನ್ ರೂಪಾಂತರ ಸಹಾಯ ಮಾಡಿತು.
ಅಧ್ಯಯನಗಳಂತೆ, ಆಧುನಿಕ ಮನುಷ್ಯರು ತಮ್ಮ ಅಳಿವಿನಂಚಿನಲ್ಲಿದ್ದ ನಿಯಾಂಡರ್‌ತಲ್ ಹಾಗೂ ಡೆನಿಸೋವನ್ಸ್ ಸಂಬಂಧಿಗಳಿಂದ ಬೇರೆಯಾದ ಬಳಿಕ ತಮ್ಮನ್ನು ತಾವು ಹಲವು ರೀತಿಯಲ್ಲಿ ಪಳಗಿಸಿಕೊಂಡರು ಎಂಬ ವಿಷಯ 'ಸೈನ್ಸ್ ಅಡ್ವಾನ್ಸಸ್' ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.  

ನಕ್ಕರೆ ಪ್ರಮೋಷನ್ ಗ್ಯಾರಂಟಿ!

ಏನಿದು ಬಿಎಝೆಡ್1ಬಿ?
ಈ ಬಗ್ಗೆ ಇಟಲಿಯ ಮಿಲನ್ ವಿಶ್ವವಿದ್ಯಾಲಯದ ಮಾಲಿಕ್ಯೂಲರ್ ಜೀವಶಾಸ್ತ್ರಜ್ಞ ಗಿಸೆಪ್ಪೆ ಟೆಸ್ಟಾ ಹಾಗೂ ಸಹೋದ್ಯೋಗಿಗಳು ವಿವರಿಸುವುದೇನೆಂದರೆ, ಬಿಎಝೆಡ್1ಬಿ ಎಂಬ ಜೀನ್ ನಮ್ಮ ದೇಹದಲ್ಲಿ ನರ ಕೋಶಗಳ ಮೇಲ್ಭಾಗದ ಚಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮನುಷ್ಯರಲ್ಲಿ ಈ ಜೀನ್‌ನ ಎರಡು ಕಾಪಿಗಳಿರುತ್ತವೆ. 
ಆದರೆ ವಿಲಿಯಮ್ಸ್- ಬ್ಯೂರೆನ್ ಸಿಂಡ್ರೋಮ್ ಇರುವವರಲ್ಲಿ ಮಾತ್ರ ಬಿಎಝೆಡ್1ಬಿಯ 1 ಕಾಪಿ ಮಿಸ್ ಆಗಿರುತ್ತದೆ. ಈ ಕಾಯಿಲೆ ಇರುವವರು ಅರಿವಿನ ದೌರ್ಬಲ್ಯದಿಂದ ಹಾಗೂ ಅತಿಯಾದ ಸ್ನೇಹಶೀಲ ವರ್ತನೆಯಿಂದ ಬಳಲುತ್ತಿರುತ್ತಾರೆ. ಅಂದರೆ ಈ ಜೀನ್ಸ್ ನಮ್ಮ ಅಭಿವ್ಯಕ್ತಿ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. 

ಈ ಅಧ್ಯಯನಕ್ಕಾಗಿ ಇಬ್ಬರು ನಿಯಾಂಡರ್‌ತಲ್ ಹಾಗೂ ಓರ್ವ ಡೆನಿಸೋವನ್ ದೇಹದಿಂದ ತೆಗೆದಿಟ್ಟುಕೊಂಡ ಹ್ಯೂಮನ್ ಸ್ಟೆಮ್ ಸೆಲ್ಸ್ ಬಳಸಿ ಜೆನೆಟಿಕ್ ಡೇಟಾ ಸಂಗ್ರಹಿಸಲಾಗಿತ್ತು. ಈ ಇಬ್ಬರೂ ಪ್ರಾಚೀನ ಮನುಷ್ಯರು ಸುಮಾರಿಗೆ ಒಂದೇ ಸಮಯದಲ್ಲಿ ಭೂಮಿಯ ಮೇಲೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲ, ಸಾಕ್ಷ್ಯಗಳ ಪ್ರಕಾರ, ಅವೆರಡು ಜನಾಂಗಗಳ ನಡುವೆ ಸಂಬಂಧವೂ ಏರ್ಪಟ್ಟಿತ್ತು. 

ಮನಸಾರೆ ನಕ್ಕುಬಿಡಿ

ನಾಯಿಯಲ್ಲೂ ಇರುತ್ತದೆ!
ಬಿಎಝೆಡ್1ಬಿ ಎಂಬ ಜೀನ್ ನಾಯಿಯಲ್ಲಿರುತ್ತದೆ ಆದರೆ ತೋಳದಲ್ಲಿರುವುದಿಲ್ಲ. ಇದೇ ಕಾರಣಕ್ಕೆ ನಾಯಿಯ ಕಣ್ಣುಗಳು ಭಾವನೆಗಳನ್ನು ವ್ಯಕ್ತಪಡಿಸುವಂತೆ ತೋಳ ವ್ಯಕ್ತಪಡಿಸಲಾರದು. ನಿಯಾಂಡರ್ತಲ್‌ ಜನಾಂಗದಲ್ಲಿ ಜೀನ್ ರೂಪಾಂತರದಿಂದಾಗಿ ಈ ಜೀನ್ ಕಂಡುಬಂದಿದ್ದು, ನಂತರ ಇದು ಇಂದಿನ ಆಧುನಿಕ ಬುದ್ದಿವಂತ ಹೋಮೋ ಸೆಪಿಯನ್ಸ್ ಮುಖದಲ್ಲಿ ಅತಿಯಾಗಿ ಭಾವಗಳನ್ನು ವ್ಯಕ್ತಪಡಿಸುವುದಕ್ಕೆ ಕಾರಣವಾಯಿತು. ಒಟ್ಟಿನಲ್ಲಿ ಭಾವಾಭಿವ್ಯಕ್ತಿ ಶುರುವಾಗಿದ್ದೇ ಲೈಂಗಿಕ ತೃಷೆಗಾಗಿ ಎಂದಾಯಿತು.

Our ancestors learnt to smile so that they can have sex

Latest Videos
Follow Us:
Download App:
  • android
  • ios