Asianet Suvarna News Asianet Suvarna News

ಬಿಡದಂತೆ ಹಿಡಿವೆ ಈ ಕಾಲನ್ನು: ಮುದ್ದಾಡಲು ಬಂದ ಯುವಕನಿಗೆ ಚಿಂಪಾಂಜಿ ಏನ್‌ ಮಾಡ್ತು ನೋಡಿ

ಯುವಕನೋರ್ವ ಮೃಗಾಲಯದ ಒಳಗೆ ಇದ್ದ ಚಿಂಪಾಂಜಿಯನ್ನು ಮುದ್ದಾಡಲು ಬೋನಿನ ಸಮೀಪ ಹೋಗಿದ್ದು, ಈ ವೇಳೆ ಚಿಂಪಾಜಿ ಈತನ ಕಾಲನ್ನು ಬಿಡಿಸಿಕೊಳ್ಳಲಾಗದಷ್ಟು ಗಟ್ಟಿಯಾಗಿ ಹಿಡಿದುಕೊಂಡಿದೆ. 

Orangutan Tries To Pull Man Inside Cage in zoo at Indonesia akb
Author
Bangalore, First Published Jun 9, 2022, 2:31 PM IST

ಮೃಗಾಲಯಕ್ಕೆ ಬರುವವರು ಪ್ರಾಣಿಗಳನ್ನು ನೋಡಿ ಸೀದಾ ಹೋಗಬೇಕು. ಅವುಗಳಿಗೆ ಕಿರುಕುಳ ನೀಡುವುದಾಗಲಿ, ಅವುಗಳನ್ನು ಕೆಣಕುವುದಾಗಲಿ ಮಾಡುವಂತಿಲ್ಲ. ಮನುಷ್ಯರ ಕಿರಿ ಕಿರಿಯ ವರ್ತನೆಗಳನ್ನು ಪ್ರಾಣಿಗಳು ಸಹಿಸುವುದಿಲ್ಲ. ಹೀಗೆ ಪ್ರಾಣಿಗಳನ್ನು ಕೆಣಕಿ ಅಪಾಯಕ್ಕೀಡಾದ ಅನೇಕ ಉದಾಹರಣೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೂ ಕೆಲವರು ಬುದ್ದಿ ಕಲಿತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬ ಸಿಂಹವಿದ್ದ ಬೋನಿನೊಳಗೆ ಕೈ ಹಾಕಲು ಹೋಗಿ ಕೈ ಬೆರಳನ್ನೇ ಕಳೆದುಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈಗ ಅದೇ ರೀತಿ ಯುವಕನೋರ್ವ ಮೃಗಾಲಯದ ಒಳಗೆ ಇದ್ದ ಚಿಂಪಾಂಜಿಯನ್ನು ಮುದ್ದಾಡಲು ಬೋನಿನ ಸಮೀಪ ಹೋಗಿದ್ದು, ಈ ವೇಳೆ ಚಿಂಪಾಜಿ ಈತನ ಕಾಲನ್ನು ಬಿಡಿಸಿಕೊಳ್ಳಲಾಗದಷ್ಟು ಗಟ್ಟಿಯಾಗಿ ಹಿಡಿದುಕೊಂಡಿದೆ. ಮೊದಲಿಗೆ ಯುವಕ ಚಿಂಪಾಜಿಗೆ ಎರಡು ಕೈಗಳನ್ನು ಚಾಚಿ ತಬ್ಬಿಕೊಳ್ಳುವಂತೆ ದೂರದಿಂದ ಕೈ ನೀಡಿದ್ದಾನೆ. ಈ ವೇಳೆ ಚಿಂಪಾಂಜಿಗೆ ಏನನಿಸಿತೋ ಏನೋ ಕೈಗೆ ಸಿಕ್ಕ ಆತ ಧರಿಸಿದ ಟೀ ಶರ್ಟ್‌ನ್ನು ಗಟ್ಟಿಯಾಗಿ ಹಿಡಿದು ತನ್ನತ್ತ ಎಳೆದುಕೊಂಡಿದೆ. ಈ ವೇಳೆ ಯುವಕ ಹೆದರಿಕೊಂಡು ಚಿಂಪಾಜಿಯಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಆತನ ಕಾಲನ್ನು ಚಿಂಪಾಜಿ ಹಿಡಿದುಕೊಂಡಿದೆ. ಎಷ್ಟು ಗಟ್ಟಿಯಾಗಿ ಚಿಂಪಾಜಿ ಹಿಡಿದುಕೊಂಡಿತ್ತೆಂದರೆ ಏನು ಮಾಡಿದರೂ ಕೂಡ ಯುವಕನಿಗೆ ಚಿಂಪಾಜಿಯಿಂದ ಬಿಡಿಸಿಕೊಳ್ಳಲಾಗಿಲ್ಲ. 

ಮಗನ ಗಾಯಕ್ಕೆ ಕೀಟದ ಔಷಧಿ ಹಚ್ಚಿದ ಚಿಂಪಾಂಜಿ ... 

ಅಲ್ಲದೇ ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಕೂಡ ಯುವಕನನ್ನ ಬೋನಿನಿಂದ ಈಚೆಗೆ ಇಳೆದು ಚಿಂಪಾಂಜಿಯಿಂದ ಬಿಡಿಸಲು ಯತ್ನಿಸಿದರು ಚಿಂಪಾಜಿ ಮಾತ್ರ ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಏನೇ ಮಾಡಿದರು ತನ್ನ ಹಿಡಿತವನ್ನು ಸಡಿಲಿಸಿಲ್ಲ. ಈ ಚಿಂಪಾಂಜಿಗಳು ಮುದ್ದಾಗಿ ಹಾಗೂ ನಿರುಪದ್ರವಿಗಳೆನಿಸಿದರು ಕೂಡ ಅವರು ಕೆಲವೊಮ್ಮೆ ಗೊರಿಲ್ಲಾಗಳಂತೆ ಅಪಾಯಕಾರಿಗಳು ಕೂಡ. ಕಿರಿಕಿರಿಗೆ ಒಳಗಾಗಿ ಸಿಟ್ಟು ಬಂದರೆ ಕಚ್ಚಿ ಗಾಯಗೊಳಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ. 

 

ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು,  14.2 ದಶಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ 233 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  75 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವೀಟ್‌ ಮಾಡಿದ್ದಾರೆ. 

ಸಿಂಹದ ಜೊತೆ ಚೆಲ್ಲಾಟ ಆಡಲು ಹೋಗಿ ಕೈ ಬೆರಳು ಕಳೆದುಕೊಂಡ ಯುವಕ

ದಾಳಿ ಮಾಡಿದ ಈ ಚಿಂಪಾಂಜಿಯನ್ನು ಟೀನಾ ಎಂದು ಗುರುತಿಸಲಾಗಿದೆ. ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಹಸನ್ ಅರಿಫಿನ್ ಎಂಬಾತನೇ ಚಿಂಪಾಜಿಯನ್ನು ತಬ್ಬಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವಕ. ಈ ವಿಡಿಯೋವನ್ನು ಮೃಗಾಲಯದ ಅಧಿಕಾರಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಯುವಕನೋರ್ವ ಸಿಂಹದ (Lion) ಜೊತೆ ಚೆಲ್ಲಾಟವಾಡಲು ಹೋಗಿ ತನ್ನ ಬೆರಳನ್ನೇ ಕಳೆದುಕೊಂಡ ಘಟನೆ ಜಮೈಕಾದ (Jamaica) ಮೃಗಾಲಯದಲ್ಲಿ (Zoo) ನಡೆದಿತ್ತು. ಯುವಕನೋರ್ವ ಮೃಗಾಲಯದಲ್ಲಿದ್ದ ಸಿಂಹದ ಜೊತೆ ಆಟವಾಡಲು ಹೋಗಿದ್ದಾನೆ. ಸಿಂಹ ಇದ್ದ ಗೂಡಿಗೆ ಅಳವಡಿಸಿದ ಕಬ್ಬಿಣದ ನೆಟ್‌ನ ಸೆರೆಯಲ್ಲಿ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ತಲೆ ಸವರಲು ಯತ್ನಿಸಿದ್ದಾನೆ. ಈತನ ಉಪಟಳದಿಂದ ಸಿಂಹ ವ್ಯಾಘ್ರಗೊಂಡಿದ್ದು, ಈತನ ಮೇಲೆ ಮುಗಿ ಬೀಳುವ ಯತ್ನ ಮಾಡಿದೆ. ಸಿಂಹ ಕೋಪಗೊಂಡಿದ್ದು ತಿಳಿದರು ಆತ ಮಾತ್ರ ತನ್ನ ಚೆಲ್ಲಾಟವಾಡುವುದನ್ನು ನಿಲ್ಲಿಸದೇ ಪದೇ ಪದೇ ಕಬ್ಬಿಣದ ನೆಟ್ಟೊಳಗೆ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ಯತ್ನಿಸಿದ್ದಾನೆ. ಪರಿಣಾಮ ಬೆರಳನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. 

Follow Us:
Download App:
  • android
  • ios